
ಉಳ್ಳಾಲ: ಡೆತ್ ನೋಟ್ ಬರೆದಿಟ್ಟು ನೇಣಿನಾ ಕುಣಿಕೆಗೆ ಕೊರಳೊಡ್ಡಿದ ವಿದ್ಯಾರ್ಥಿನಿ.!
ಆಕೆಯ ಮನೆಯ ಕಪಾಟಿನ ಮೇಲೆ ಈ ಬರೆದಿದ್ದಳು ಆಕೆ ಅದೆಷ್ಟು ನೊಂದಿರಬೇಕು…
I don’t like this generation. So, I decided to commit suicide.
news.ashwasurya.in
ಅಶ್ವಸೂರ್ಯ/ಉಳ್ಳಾಲ: ದ್ವಿತೀಯ ವರ್ಷದ ಬಿಎ ಸೈಕಾಲಜಿ ವಿದ್ಯಾರ್ಥಿನಿಯೊಬ್ಬಳು ನೇಣಿಗೆ ಶರಣಾಗಿದ್ದಾಳೆ.ಈ ಪ್ರಕರಣ ಉಳ್ಳಾಲ ಸಮೀಪದ ತಲಪಾಡಿಯಲ್ಲಿ ನಡೆದಿದೆ. 19 ವರ್ಷದ ಶ್ರೇಯಾ ಆತ್ಮಹತ್ಯೆಗೆ ಶರಣಾದ ಯುವತಿ.!
ಶ್ರೇಯಾ ಓದಿನ ಒತ್ತಡ ಹಾಗೂ ತಲೆನೋವಿನಿಂದ ಬಳಲುತ್ತಿದ್ದಳು ಎಂದು ತಿಳಿದುಬಂದಿದೆ. ಶ್ರೇಯಾ ಬರೆದಿರುವ ಡೆತ್ ನೋಟ್ ಸಿಕ್ಕಿದ್ದು, ಅದರಲ್ಲಿ ಆಕೆಯನ್ನು ಕಪ್ಪೆಂದು ಅವಮಾನಿಸುತ್ತಿದ್ದ ಬಗ್ಗೆ ಬರೆದಿದ್ದಾಳೆ. ಅಲ್ಲದೇ, ಮೇ ತಿಂಗಳಿನಲ್ಲಿ ಶ್ರೇಯಾ ಬರೆದಿರುವ ಡೆತ್ ನೋಟೊಂದು ಸಿಕ್ಕಿದೆ. ನನ್ನನ್ನು ಯಾರೂ ಪ್ರೀತಿಸುವುದಿಲ್ಲ. ನಾನು ಬದುಕಬಾರದು, ಮನೆಯವರಿಗೆ ಕಷ್ಟವಾಗುತ್ತದೆ ಎಂದು ಬರೆದಿದ್ದಾಳೆ ಎಂದು ತಿಳಿದುಬಂದಿದೆ.
ಮನೆಯ ಕಪಾಟಿನ ಮೇಲೆ , ಐ ಡೋಂಟ್ ಲೈಕ್ ದಿಸ್ ಜನರೇಷನ್. ಸೋ, ಐ ಡಿಸೈಡೆಡ್ ಟು ಸೂಸೈಡ್.ಈ ಹುಡುಗಿ ಹಿಯಾಳಿಸುವವರಿಂದ ಇನ್ನೇಷ್ಟು ಹೊಂದಿರಬೇಕು ಪಾಪ. ಇನ್ನೂ ಶ್ರೇಯಾ, ಫಸ್ಟ್ ಸೆಮ್ ನಲ್ಲಿ ಎರಡು ಸಬ್ಜೆಕ್ಟ್ ನಲ್ಲಿ ಫೇಲಾಗಿದ್ದಳಂತೆ. ಮೌನಿಯಾಗಿದ್ದ ಶ್ರೇಯಾ ಯಾರೊಂದಿಗೂ ಹೆಚ್ಚಾಗಿ ಬೆರೆಯುತ್ತಿರಲಿಲ್ಲವೆಂದು ಆಕೆಯ ಕುಟುಂಬ ಮೂಲಗಳು ತಿಳಿಸಿವೆ.
ಈಗಾಗಲೇ ಪೋಸ್ಟ್ ಮಾರ್ಟಂ ನಡೆಸಲಾಗಿದ್ದು, ಹೊಟ್ಟೆಯಲ್ಲಿ ಗೆಡ್ಡೆ ಪತ್ತೆಯಾಗಿದೆ ಎಂದು ತಿಳಿದುಬಂದಿದೆ. ಈ ಬಗ್ಗೆ ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


