

ಶಿವಮೊಗ್ಗ : ಅನವಟ್ಟಿಯ ಕೆಪಿಎಸ್ ( ಕರ್ನಾಟಕ ಪಬ್ಲಿಕ್ ಸ್ಕೂಲ್ ) ಸರ್ಕಾರಿ ಪ್ರೌಡಶಾಲೆಯ ಸರ್ವನಾಶಕ್ಕೊಬ್ಬ ಶನಿ ಮಹಾದೇವಪ್ಪ.!


news ashwasurya.in
ಅಶ್ವಸೂರ್ಯ/ಶಿವಮೊಗ್ಗ : ಸೊರಬ ತಾಲ್ಲೂಕಿನ ಪ್ರತಿಷ್ಠಿತ ಸರ್ಕಾರಿ ಪ್ರೌಢಶಾಲೆಗಳಲ್ಲೊಂದಾದ ಆನವಟ್ಟಿಯ ” ಕರ್ನಾಟಕ ಪಬ್ಲಿಕ್ ಸ್ಕೂಲ್ “( ಕೆಪಿಎಸ್ )ಸರ್ಕಾರಿ ಪ್ರೌಢಶಾಲೆಯಲ್ಲಿ ಉಪ ಪ್ರಾಂಶುಪಾಲನಿಂದಾಗಿ ವಿಧ್ಯಾರ್ಥಿಗಳು ಮತ್ತು ಪೋಷಕರ ವರ್ಗದವರಿಗೆ ನರ ನರ ನರಕವಾಗಿ ಪರಿಣಮಿಸಿದೆ. ಪ್ರೌಢಶಾಲೆಯ ಹಾಲಿ ಉಪ ಪ್ರಾಂಶುಪಾಲರ ಹಣ ವಸೂಲಿ ದಂಧೆ ನಿರ್ಭಯವಾಗಿ ನೆಡೆಯುತ್ತಿದ್ದು ಇತನ ಹಣದಾಹದಿಂದ ಸರ್ಕಾರಿ ಪ್ರೌಢಶಾಲೆಯೋ..ಖಾಸಗಿ ಪ್ರೌಢಶಾಲೆಯೋ ತಿಳಿಯದಾಗಿದೆ. ಇತನ ದನದಾಹ, ದರ್ಪ, ವಂಚನೆಗಳಿಂದ ಪ್ರೌಡಶಾಲೆಯಲ್ಲಿ ಓದುವ ವಿದ್ಯಾರ್ಥಿಗಳು,ಕೆಲವು ಶಿಕ್ಷಕರು, ಸಿಬ್ಬಂದಿಗಳು, ಇವನ ಆಜ್ಞೆಯನ್ನು ಮನಸ್ಸಿಲ್ಲದೆ ಪರಿಪಾಲಿಸುವಂತಾಗಿದೆ.! ಕೆಲವು ರಾಜಕಾರಣಿಗಳ ಹೆಸರು ಇವನ ಬಾಯಿಯಲ್ಲಿ ದುರ್ಬಳಕೆ ಆಗುತ್ತಿದೆ. ಇತನ ಹಣ ವಸೂಲಿ ದಂಧೆ ಕುಲ್ಲಮ್ ಕುಲ್ಲಾ ಆಗಿದ್ದರು ಪ್ರೌಢಶಾಲೆಯ SDMC ಆಡಳಿತ ಮಂಡಳಿ ಯಾಕೆ ಕೈಕಟ್ಟಿ ಕುಳಿತಿದೆ ಎನ್ನುವುದು ಯಕ್ಷ ಪ್ರಶ್ನೆಯಾಗಿದೆ.!?
ಅಸಲಿಗೆ ಕಳೆದ ನಾಲ್ಕು ವರ್ಷದ ಹಿಂದೆ ಅನವಟ್ಟಿಯ ಕೆಪಿಎಸ್ ಪ್ರೌಢಶಾಲೆಗೆ ಅದರದೇ ಆದ ಹೆಸರಿತ್ತು. ಸದರಿ ಪ್ರೌಡಶಾಲೆಯಲ್ಲಿ ಓದುವುದೇ ಒಂದು ಗ್ರೇಟ್ ಅನ್ನುವ ಭಾವನೆ ಸುತ್ತಮುತ್ತಲಿನ ವಿದ್ಯಾರ್ಥಿಗಳಲ್ಲಿತ್ತು. ಅನೇಕ ವಿಧ್ಯಾರ್ಥಿಗಳು ಈ ಪ್ರೌಢಶಾಲೆಯಲ್ಲಿ ಉತ್ತಮ ಶಿಕ್ಷಣ ಕಲಿತು ಉತ್ತಮ ಅಂಕಗಳಿಸಿ ಉನ್ನತ ಶಿಕ್ಷಣ ಪಡೆದು ಉನ್ನತ ಹುದ್ದೆ ಪಡೆದವರು ಆನೇಕರಿದ್ದಾರೆ. ಅ ಮಟ್ಟದಲ್ಲಿತ್ತು ಈ ಪ್ರೌಢಶಾಲೆ ಶಿಕ್ಷಣ ವ್ಯವಸ್ಥೆ. ಈಗಲೂ ಅ ಮಟ್ಟದ ಶಿಕ್ಷಣವನ್ನು ಧಾರೆ ಎರೆಯುವಂತ ಶಿಕ್ಷಕ ವೃಂದ ಈ ಪ್ರೌಢಶಾಲೆಯಲ್ಲಿದ್ದು ಉನ್ನತ ಮಟ್ಟದ ಶಿಕ್ಷಣಕ್ಕೆ ಮತ್ತು ಶಿಸ್ತಿಗೆ ಹೆಸರು ವಾಸಿಯಾಗಿರುವ ಇಂತಹ ಪ್ರೌಢಶಾಲೆಯಲ್ಲಿ ಇವತ್ತು ಒಬ್ಬ ಮಹಾದೇವಪ್ಪ ನೆಂಬ ಉಪ ಪ್ರಾಂಶುಪಾಲನಿಂದಾಗಿ ಪ್ರತಿಷ್ಠಿತ ಸರ್ಕಾರಿ ಪ್ರೌಢಶಾಲೆಗೆ ಕೆಟ್ಟ ಹೆಸರು ಸುತ್ತಿಕೊಂಡಿದೆ ಎಂದರೆ ಎಂತಹ ವಿಪರ್ಯಾಸ ನೋಡಿ..!

ಕಳೆದ ನಾಲ್ಕು ವರ್ಷಗಳ ಹಿಂದೆ ಕೀಚಕನಂತೆ ವಕ್ಕರಿಸಿದ ಮಹಾದೇವಪ್ಪ ಈ ನಾಲ್ಕು ವರ್ಷಗಳಲ್ಲಿ ಇಲ್ಲಿ ಉಣ್ಣದೇ ಉಳಿಸಿದ್ದು ಪ್ರಾಯಶಃ ಏನೂ ಇಲ್ಲ ಅನ್ನಿಸುತ್ತಿದೆ. ಮೂಲತಃ ಶಿರಾಳಕೊಪ್ಪ ಮೂಲದವರಾಗಿದ್ದು ಬೆಳಗ್ಗೆ ಶಿರಾಳಕೊಪ್ಪದಿಂದ ಆನವಟ್ಟಿಗೆ ಬಸ್ಸೇರಿ ಬಂದ ವ್ಯಕ್ತಿ ಯಾವ ಮೂಲದಿಂದ ಗೆಬರಲಿ ಎನ್ನುವ ನಿರೀಕ್ಷೆಯಲ್ಲೆ ಕುಳಿತಿರುತ್ತಾರೆ.!?
ಹಣದ ಹಸಿವಿರುವ ಮಹಾದೇವಪ್ಪನ ಅಷ್ಟು ಎತ್ತುವಳಿಯ ಅಸಲಿಯತ್ತು ಆನವಟ್ಟಿಯ ಊರಿಗೆ ಗೊತ್ತಿದ್ದು ಶಿಕ್ಷಣ ಸಚಿವರಾದ ಮಧು ಬಂಗಾರಪ್ಪನವರು ಯಾಕೆ ಇತನನ್ನು ಇನ್ನೂ ಅಲ್ಲೆ ಮುಕ್ಕಲು ಬಿಟ್ಟಿದ್ದಾರೊ ಅ ಭಗವಂತ ಬಲ್ಲ.? ಉಪ ಪ್ರಾಂಶುಪಾಲನ ಹುದ್ದೆ ಅಲಂಕರಿಸಿದ್ದೆ ತಡ
ಮಹಾದೇವಪ್ಪನ ಉರುವಣಿಗೆಗಳು ಮುಗಿಲು ಮುಟ್ಟಿದೆ.
ಹೀಗೆ ಉಪ ಪ್ರಾಂಶುಪಾಲನಾಗಿ ನಾಲ್ಕು ವರ್ಷದೊಳಗೆ ಆನವಟ್ಟಿಯ ಕೆಪಿಎಸ್ ಪ್ರೌಢಶಾಲೆಯಲ್ಲಿ ಈತನ ವಿಶ್ವರೂಪ ದರ್ಶನವಾಗ ತೊಡಗಿದ್ದು. ಕೈ ಇಟ್ಟಲ್ಲೆಲ್ಲಾ ಕಾಸು ಮಾಡುವ ಹಪಹಪಿಗೆ ಬಿದ್ದ ಮಹಾದೇವಪ್ಪ ಆನವಟ್ಟಿಯ ಕೆಪಿಎಸ್ ಸರ್ಕಾರಿ ಪ್ರೌಢಶಾಲೆಯ ನಿಯಮಗಳನ್ನೆಲ್ಲಾ ಗಾಳಿಗೆ ತೂರಿ ಶಾಲೆಯಲ್ಲಿ ಇವನದೆ ನಿಯಮಗಳನ್ನು ಜಾರಿಗೆತಂದು ಹಣ ಮಾಡಲು ನಿಂತು ಬಿಟ್ಟಿದ್ದಾನೆ.!
ನಾಲ್ಕು ವರ್ಷದ ಹಿಂದೆ ಈ ಪ್ರೌಢಶಾಲೆಗೆ ಆಗಮಿಸಿದವನು ಮೊದಮೊದಲು ಸಣ್ಣಪುಟ್ಟ ಹಣ ಮಾಡಲು ಮುಂದಾಗಿದ್ದನಂತೆ ಕೆಲವೇ ತಿಂಗಳಲ್ಲಿ ಕೆಪಿಎಸ್ ಪ್ರೌಢಶಾಲೆಯಲ್ಲಿ ಪಳಗಿದ ಮನುಷ್ಯನಾಗಿ ಬರಬರುತ್ತಾ ಈ ಸರ್ಕಾರಿ ಪ್ರೌಢಶಾಲೆಗೆ ಓದಲು ಬರುವ ಬಡಮಕ್ಕಳ ಪೋಷಕರ ಹತ್ತಿರ ಹಣ ಸುಲಿಯಲು ಮುಂದಾಗಿದ್ದಾನೆ.ಮಕ್ಕಳು ಕುಡಿಯುವ ಅಮೃತದಂತಹ ಹಾಲಿನಿಂದ ಹಿಡಿದು ಹಸಿವಿಗಾಗಿ ಹೊಟ್ಟೆ ತುಂಬಿಸಿಕೊಳ್ಳುವ ಊಟದ ಜೋತೆಗೆ ಶಾಲೆಯ ಸಮವಸ್ತ್ರ, ಶಾಲಾ ಶುಲ್ಕ, ಟಿಸಿ ನೀಡುವಿಕೆ ಜೋತೆಗೆ ಶಾಲೆಯ ಪ್ರವೇಶ ಶುಲ್ಕದಲ್ಲೂ ಹಣ ವಸೂಲಿಗೆ ನಿಂತು ಲಕ್ಷಾಂತರ ರೂಪಾಯಿ ದೋಚ ತೊಡಗಿದ್ದಾರೆ.? ಆನವಟ್ಟಿ ಕೆಪಿಎಸ್ ಪ್ರೌಡಶಾಲೆಯ ಮಕ್ಕಳ ಪೋಷಕರನ್ನು ಅದು ಇದು ಕಥೆ ಹೇಳಿ ಸುಲಿಯುತ್ತಿದ್ದಾನೆ.

ಆನವಟ್ಟಿಯ ” ಕರ್ನಾಟಕ ಪಬ್ಲಿಕ್ ಸ್ಕೂಲ್ “( ಕೆಪಿಎಸ್ )ನ ಪ್ರೌಢಶಾಲೆಯು ರಾಜ್ಯದ ಪ್ರತಿಷ್ಟಿತ ಶಾಲೆಯಲ್ಲಿ ಒಂದಾಗಿತ್ತು. ಈ ಶಾಲೆಯಲ್ಲಿ ಸುಮಾರು 1300 ರಿಂದ 1400 ರಕ್ಕೂ ಅಧಿಕ ಮಕ್ಕಳು ಓದುತ್ತಿದ್ದಾರೆ. ಕೆಪಿಎಸ್ ಶಾಲೆ ಈ ಹಿಂದಿನ ಬೋಧಕ ವರ್ಗಗಳ ಶ್ರಮದಿಂದ ಉನ್ನತ ಶಿಕ್ಷಣ ಪಡೆದ ವಿಧ್ಯಾರ್ಥಿಗಳು ಉನ್ನತ ಅಂಕಗಳಿಸಿ ರಾಜ್ಯದಲ್ಲಿ ಒಳ್ಳೆಯ ಹೆಸರು ಮಾಡಿದ್ದರೆ. ಸರ್ಕಾರಿ ಶಾಲೆಯಾಗಿದ್ದರು ಶಿಕ್ಷಕ ವೃಂದದ ಪರಿಶ್ರಮದಿಂದ ಖಾಸಾಗಿ ಶಾಲೆಗಿಂತ ಉನ್ನತ ಶಿಕ್ಷಣ ಈ ಶಾಲೆಯಲ್ಲಿ ಸಿಗುತ್ತಿತ್ತು. ಶಿವಮೊಗ್ಗ ಜಿಲ್ಲೆ ಗಡಿ ಭಾಗ ಅಂದರೆ ಹಾವೇರಿ ಗಡಿ ಭಾಗದಲ್ಲಿರುವುದರಿಂದ ಹಾವೇರಿ ಜಿಲ್ಲೆಯ ನೂರಾರು ವಿಧ್ಯಾರ್ಥಿಗಳು ಇಲ್ಲಿಗೆ ಬಂದು ಒದುತ್ತಿದ್ದಾರೆ. ಇಲ್ಲಿನ ಎಲ್ಲಾ ಸರ್ಕಾರಿ ಹಾಸ್ಟೆಲ್ ಗಳು ತುಂಬಿವೆ.ಆದರೆ ಇತ್ತೀಚೆಗೆ ಉತ್ತಮ ಶಿಕ್ಷಕರ ವೃಂದವಿದ್ದು ಸಾವಿರಾರು ವಿಧ್ಯಾರ್ಥಿಗಳು ಓದುತ್ತಿದ್ದರು ಶಾಲೆ ಸುಮಾರು ನಾಲ್ಕು ವರ್ಷದಿಂದ ಹಣ ಮಾಡುವ ಕೇಂದ್ರವಾಗಿ ಬದಲಾಗಿದೆ. ಪ್ರತಿ ವರ್ಷ ಸುಮಾರು 400 ರಿಂದ 450 ವಿದ್ಯಾರ್ಥಿಗಳು 8ನೇ ತರಗತಿಗೆ ಪ್ರವೇಶ ಪಡೆಯುತ್ತಿದ್ದಾರೆ.ಪ್ರತಿ ವಿಧ್ಯಾರ್ಥಿಗಳು ಇಲ್ಲಿ ಪ್ರವೇಶ ಪಡೆಯಲು ಒಬ್ಬ ವಿದ್ಯಾರ್ಥಿ ಸುಮಾರು ರೂ 800 ರಿಂದ 1000 ರೂಪಾಯಿ ಉಪ ಪ್ರಾಂಶುಪಾಲ ಮಹಾದೇವಪ್ಪನ ಕೈಗಿಡಬೇಕು.!? 8ನೇ ತರಗತಿಗೆ ಪ್ರವೇಶ ಪಡೆಯುವ ಪ್ರತಿ ವಿಧ್ಯಾರ್ಥಿಗೆ ಪ್ರವೇಶಾತಿ ಶುಲ್ಕಾ ಒಟ್ಟು 70 ( ಸರ್ಕಾರಿ ಪ್ರೌಢಶಾಲೆಗೆ ) ರೂಪಾಯಿ ಇದ್ದರೆ, 9-10ನೇ ತರಗತಿಗೆ ಪ್ರವೇಶ ಶುಲ್ಕ ಒಟ್ಟು 240 ರೂಪಾಯಿ, ಆದರೆ ಆನವಟ್ಟಿಯ ಕೆಪಿಎಸ್ ಪ್ರೌಢಶಾಲೆಯಲ್ಲಿ ಪ್ರವೇಶ ಶುಲ್ಕವನ್ನು 800 ರೂಪಾಯಿ ಇಂದ 1000 ರೂಪಾಯಿ ಹಣ ಕೊಡಲೆ ಬೇಕು.!( ಒಟ್ಟು 10 ಲಕ್ಷದಿಂದ 12 ಲಕ್ಷ ರೂಪಾಯಿ ) ಇನ್ನೂ ವರ್ಗಾವಣೆ ಪತ್ರ ( TC ) ತೆಗೆದುಕೊಂಡು ಹೋಗಲು 200 ರಿಂದ 400 ರೂಪಾಯಿ ಇದರಲ್ಲಿ ಶಾಲೆಯಲ್ಲಿ ಹಾಳದ ವಸ್ತುಗಳ ರೀಪೆರಿಗೆ 200 ರೂಪಾಯಿ.! ಇಷ್ಟು ಹಣ ಯಾಕೆ ಎಂದು ಪ್ರಶ್ನಿಸಿದರೆ ಮಹಾದೇವಪ್ಪರ ಬಾಯಲ್ಲಿ ಸಾಲು ಸಾಲು ಎತ್ತುವಳಿಯ ಲೀಸ್ಟ್ ಬಾಯಿಂದ ಬರುತ್ತದೆ. ಅತಿಥಿ ಶಿಕ್ಷಕರಿಗೆ ನಾವು ಸಂಬಳ ಕೊಡಬೇಕು,ಬ್ಯಾನರ್ ಮಾಡಿಸಬೇಕು ಮತ್ತೆ ಕಂಪ್ಯೂಟರ್ ಮತ್ತು ಶಾಲೆಯಲ್ಲಿ ಹಾಳದ ವಸ್ತುಗಳ ರೀಪೆರಿಯ ಖರ್ಚ್ ಇರೋತ್ತೆ.! ಎಂದು ಸೈಲೆಂಟಾಗಿ ಹೇಳ್ತಾರೆ.!ಪಾಪ ಈ ಸರ್ಕಾರಿ ಶಾಲೆಗೆ ಸರ್ಕಾರದಿಂದ ಒಂದು ರೂಪಾಯಿ ಬರೋಲ್ಲ ಅನ್ಸೋತ್ತೆ.? ಅತಿಥಿ ಶಿಕ್ಷಕರ ವಿಷಯದಲ್ಲೂ ಉಪ ಪ್ರಾಂಶುಪಾಲರ ಇನ್ನೊಂದು ಡೀಲ್ ನೆಡೆಯುತ್ತದೆ. ಈ ಶಾಲೆಗೆ ಸುಮಾರು 10 ರಿಂದ 12 ಶಿಕ್ಷಕರು ಸರ್ಕಾರದಿಂದಲೇ ಅತಿಥಿ ಶಿಕ್ಷಕರನ್ನಾಗಿ ನೇಮಿಸಿಕೊಳ್ಳಲಾಗಿದ್ದು ಇಲ್ಲೂ ಜಾಣ ಕುರುಡು ಆಟ ನೆಡೆಯುತ್ತಿದೆ.
ಸರ್ಕಾರದಿಂದ ಸಮವಸ್ತ್ರ ಬಂದರು ಸಹ ಸಮವಸ್ತ್ರದ ಹೇಸರು ಹೇಳಿ ಸುಮಾರು ರೂ 800 ವಸೂಲಿ ಮಾಡುತ್ತಿದ್ದಾರಂತೆ.!ಈ ವರ್ಷ ಸಮವಸ್ತ್ರದ ಹೋಲಿಗೆಗೂ ಸಹ ಸುಮಾರು ರೂ 350 ರೂಪಾಯಿ ವಸೂಲಿ ಮಾಡುತ್ತಿದ್ದಾರಂತೆ.! ಮಕ್ಕಳ ಶೂ..ಅಥವಾ ಚಪ್ಪಲಿಯಲ್ಲಿಯ ಕಥೆ ಬೇರೆಯದೆ ಇದೆ.?

ಇನ್ನೂ ಮಕ್ಕಳಿಗೆ ಕೋಡುವ ಹಾಲು ಸುಮಾರು 1200 ವಿದ್ಯಾರ್ಥಿಗಳಿಗೆ ಬಂದರೆ, ಸುಮಾರು 300 ರಿಂ 400 ವಿದ್ಯಾರ್ಥಿಗಳು ಮಾತ್ರ ಹಾಲು ಕುಡಿಯುತ್ತಿದ್ದಾರೆ.ಇಲ್ಲು ಕೂಡ ಮಹಾದೇವಪ್ಪ ನಾಲಿಗೆ ಹಾಕಿದ್ದಾನೆ ಹಾಲಿನ ಪುಡಿ ಹಾಗೂ ಸಕ್ಕರೆ ಜೋತೆಗೆ ಮಧ್ಯಾಹ್ನ ಊಟದಲ್ಲೂ ತಿಂಗಳಿಗೆ ಸಾವಿರಾರು ರೂಪಾಯಿ ಉಳಿಸಿಕೊಳ್ಳುವರೆನ್ನುವ ಅನುಮಾನವಿದೆ.? ಮಕ್ಕಳ ಭವಿಷ್ಯ ರೂಪಿಸಬೇಕಾದ ದೇವಾಲಯದಂತ ” ಕರ್ನಾಟಕ ಪಬ್ಲಿಕ್ ಸ್ಕೂಲ್ “ ನ ಪ್ರೌಢಶಾಲೆಯಲ್ಲಿ ಮಹಾದೇವಪ್ಪನಂತಹ ಹಣಬಾಕತನದ ದುಷ್ಟನಿದ್ದರೆ ಇನ್ನೂ ರಾಜ್ಯದಲ್ಲೇ ಪ್ರತಿಷ್ಠಿತ ಸರ್ಕಾರಿ ಪ್ರೌಡಶಾಲೆ ಎಂದು ಹೆಗ್ಗಳಿಕೆ ಗಳಿಸಿದ್ದ ಶಿಕ್ಷಣ ಸಚಿವರ ತವರು ಕ್ಷೇತ್ರ ಆನವಟ್ಟಿ ಈ ಶಾಲೆ ದುಸ್ಥಿತಿಯ ಹಾದಿ ಹಿಡಿಯಲಿದೆ.ಈ ಕೂಡಲೇ ಶಿಕ್ಷಣಕ್ಕೆ ಮೆರುಗು ನೀಡಿದ ಶಿಕ್ಷಣ ಸಚಿವರಾದ ಜೋತೆಗೆ ಶಿಕ್ಷಣ ವ್ಯವಸ್ಥೆಯ ಬಗ್ಗೆ ಸಾಕಷ್ಟು ಕನಸುಗಳಿರುವ ಮಧು ಬಂಗಾರಪ್ಪನವರು ತಮ್ಮ ಕ್ಷೇತ್ರದ ಪ್ರತಿಷ್ಠಿತ ಶಾಲೆಯಲ್ಲಿ ನೆಡೆಯುತ್ತಿರುವ ಅಕ್ರಮಕ್ಕೆ ನಾಂದಿ ಹಾಡಬೇಕಿದೆ. ಶಾಲೆಯ SDMC ಕಮಿಟಿ ಜೋತೆಗೆ ಶಿವಮೊಗ್ಗ ಜಿಲ್ಲಾ ಶಿಕ್ಷಣ ಅಧಿಕಾರಿಗಳು ಈತನನ್ನು ಈ ಕೂಡಲೇ ಬೇರೆಡೆಗೆ ವರ್ಗಾಯಿಸಿ ಪ್ರಾಮಾಣಿಕ ಪ್ರಾಂಶುಪಾಲರನ್ನು ತಂದು ಕೂರಿಸಿದರಷ್ಟೆ ಮತ್ತೆ ಅನವಟ್ಟಿಯ ಪ್ರತಿಷ್ಠಿತ ಕೆಪಿಎಸ್ ಪ್ರೌಢಶಾಲೆಯ ಗತವೈಭವ ಮರುಕಳಿಸಲಿದೆ…. ಇದು ಉಪ ಪ್ರಾಂಶುಪಾಲ ಮಹಾದೇವಪ್ಪನ ಹಣದಾಹದ ಭಾಗ -1, ಭಾಗ – 2 ರ ಕಥೆ ಜೋರಾಗಿಯೆ ಇದೆ…? ನಿರೀಕ್ಷಿಸಿ ನಿಮ್ಮ news.ashwasurya.in ವೆಬ್ ಪೋರ್ಟಲ್ ನಲ್ಲಿ…
8ನೇ ತರಗತಿ ಮತ್ತು 9-10ನೇ ತರಗತಿಯ ಶುಲ್ಕದ ವಿವರ :

ಪ್ರೌಢ ಶಾಲಾ ವಿಭಾಗ: 8ನೇ ತರಗತಿ ಒಟ್ಟು 70 ರೂ., 9-10ನೇ ತರಗತಿ ಒಟ್ಟು 220 ರೂ.ಗಳು. ಇವುಗಳಲ್ಲಿ ದಾಖಲಾತಿ ಶುಲ್ಕ 8ನೇ ತರಗತಿ 0, 9-10ನೇ ತರಗತಿ 10 ರೂ.ಗಳು. ಕ್ರೀಡಾ ಶುಲ್ಕ 8ನೇ ತಗರತಿ 0, 9-10ನೇ ತರಗತಿ 25 ರೂ.ಗಳು. ರೀಡಿಂಗ್ ಶುಲ್ಕ 8ನೇ ತರಗತಿ, 9-10ನೇ ತರಗತಿ 20 ರೂ.ಗಳು., ಪ್ರಯೋಗಾಲಯ ಶುಲ್ಕ 8ನೇ ತರಗತಿ 0, 9-10 20 ರೂ.ಗಳು.
ದೃಕ್ ಶ್ರವಣ ಶುಲ್ಕ (ಎ. ವಿ. ಇ) 8ನೇ ತರಗತಿ 0, 9-10ನೇ ತರಗತಿ 10 ರೂ., ಡ್ರಾಯಿಂಗ್/ ವೃತ್ತಿ ಶಿಕ್ಷಣ ಶುಲ್ಕ 8ನೇ ತರಗತಿ 0, 9-10ನೇ ತರಗತಿ 25 ರೂ., ವೈದ್ಯಕೀಯ ಶುಲ್ಕ 8ನೇ ತರಗತಿ 0, 9-10ನೇ ತರಗತಿ 5 ರೂ.ಗಳು. ಶಾಲಾ ಸ್ವಚ್ಛತಾ ಶುಲ್ಕ 8ನೇ ತರಗತಿ 0, 9-10 15 ರೂ.ಗಳು.
ವಿದ್ಯಾರ್ಥಿ ಕ್ರೀಡಾ ನಿಧಿ 8ನೇ ತರಗತಿ 20 ರೂ., 9-10ನೇ ತರಗತಿ 20 ರೂ.ಗಳು. ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ನಿಧಿ 8ನೇ ತರಗತಿ 15, 9-10 15 ರೂ. ಗಳು. ಶಿಕ್ಷಕರ ಕಲ್ಯಾಣ ನಿಧಿ 8ನೇ ತರಗತಿ 15 ರೂ., 9-10 15 ರೂ.ಗಳು. ಶಿಕ್ಷಕರ ದಿನಾಚರಣೆಯ ಬಾವುಟ 8ನೇ ತರಗತಿ 10 ರೂ., 9-10 10 ರೂ.ಗಳು. ಶಾಲಾಭಿವೃದ್ಧಿ ಶುಲ್ಕ 8ನೇ ತರಗತಿ 0, 9-10 20 ರೂ.ಗಳು. ರೆಡ್ ಕ್ರಾಸ್ ಸದಸ್ಯತ್ವ/ ಚಟುವಟಿಕೆ ಶುಲ್ಕ 8ನೇ ತರಗತಿ 10, 9-10 10 ರೂ.ಗಳು.

ಪತ್ರಿಕೆ ಬಳಿ ಈತನ ಹಣ ವಸೂಲಾತಿಯ ದಾಖಲೆಗಳಿದ್ದು. ತನ್ನ ಬಾಯರೆ ಹೇಳಿದ ಹಣ ವಸೂಲಾತಿಯ ಬಗ್ಗೆ ಮಾತನಾಡಿದ ಅಡೀಯೊ ಕೂಡಾ ಇದೆ. ಸ್ಥಳೀಯರಿಂದ ಒಂದಷ್ಟು ದೂರುಗಳು ನಮ್ಮ ಪತ್ರಿಕಾ ಕಛೇರಿಗೆ ಬಂದಿದ್ದು ಇತನ ವಿರುದ್ಧ ಇನ್ನಷ್ಟೂ ಮಾಹಿತಿಯನ್ನು ಕಲೆಹಾಕಿ ಲೋಕಾಯುಕ್ತರಿಗೆ ದೂರು ಕೊಡಲು ಮುಂದಾಗಿದೆ.ಸರ್ಕಾರಿ ಶಾಲೆಯಲ್ಲಿ ಓದುವ ಬಡ ಮಕ್ಕಳ ಪೋಷಕರನ್ನು ಹಣದ ಹೆಸರಿನಲ್ಲಿ ಸುಲಿಯುವ ಜಿಲ್ಲೆಯ ಯಾವುದೇ ಶಾಲೆಯಾಗಿರಲಿ ಅಂತಹ ಶಾಲೆಯ ವಿರುದ್ಧ ಪತ್ರಿಕೆ ಹೋರಾಡಲು ಮುಂದಾಗಿದೆ. ಭ್ರಷ್ಟಾಚಾರವನ್ನು ಬಯಲು ಮಾಡಲಿದೆ…..


