Headlines

ಸೈಬರ್ ವಂಚಕನ ಖಾತೆಯಲ್ಲಿತ್ತು ಬರೋಬ್ಬರಿ 99,65 ಕೋಟಿ ರೂಪಾಯಿ ವ್ಯವಹಾರ..!?

ಅಶ್ವಸೂರ್ಯ/ರಾಜಸ್ಥಾನ : ದೇಶಾದ್ಯಂತ ಸೈಬರ್ ವಂಚಕರ ಹಾವಳಿ ಹಗಲು ರಾತ್ರಿ ಎನ್ನದೆ ಎಗ್ಗಿಲ್ಲದೆ ಸಾಗಿದೆ.ಸೈಬರ್ ವಂಚನೆಯ ಮೂಲಕ ಕೆಲವರು ದೊಡ್ಡ ಮೊತ್ತದ ಹಣ ವಸೂಲಿ ಮಾಡುತ್ತಿದ್ದಾರೆ ಎಂಬ ರಹಸ್ಯ ಮಾಹಿತಿ ಶ್ರೀ ಗಂಗಾನಗರ ಪೊಲೀಸರಿಗೆ ಸಿಕ್ಕಿತ್ತು.! ಈ ಮಾಹಿತಿಯ ಆಧಾರದ ಮೇಲೆ, ಪೊಲೀಸರು ಕಾರ್ಯಚರಣೆಗೆ ಇಳಿದಿದ್ದರು. ಬಿಕಾನೇರ್‌ನ ನಪಸರ್ ಪೊಲೀಸ್ ಠಾಣೆ ಪ್ರದೇಶದ ಖಾರ್ಡಾ ಗ್ರಾಮದ ಮೇಲೆ ದಾಳಿ ಮಾಡಿ ಪೊಲೀಸರ ತಂಡ ಸೈಬರ್ ಖದೀಮ ಕೃಷ್ಣ ಶರ್ಮಾ ಎಂಬಾತನನ್ನು ಬಂಧಿಸಿದ್ದಾರೆ.

ವಂಚಕನ ಬ್ಯಾಂಕ್ ಖಾತೆಯನ್ನು ಪೊಲೀಸರು ಪರಿಶೀಲಿಸಿದಾಗ ಓಮ್ಮೆ ಪೊಲೀಸರೆ ಗಾಬರಿಯಾಗಿದ್ದಾರೆ.ಆತನ ಖಾತೆಯಲ್ಲಿ ಬರೋಬ್ಬರಿ 99.65 ಕೋಟಿ ರೂಪಾಯಿ ವ್ಯವಹಾರ ನೆಡೆದಿದೆ..ಎನ್ನುವ ಮಾಹಿತಿ ಪೊಲೀಸರಿಗೆ ಸಿಕ್ಕಿತ್ತು.!
ಕೃಷ್ಣ ಶರ್ಮಾ ಬ್ಯಾಂಕ್ ಖಾತೆಯಲ್ಲಿ 99.65 ಕೋಟಿ ರೂಪಾಯಿಗಳ ವಹಿವಾಟಿನ ದಾಖಲೆ ಇದೆ ಎಂದು ತನಿಖೆಯಿಂದ ತಿಳಿದುಬಂದಿದೆ, ಇದು ವಿವಿಧ ಸೈಬರ್ ವಂಚನೆ ಘಟನೆಗಳಿಗೆ ಸಂಬಂಧಿಸಿದ್ದಾಗಿದೆ. ಕರ್ನಾಟಕ, ಮಹಾರಾಷ್ಟ್ರ, ಉತ್ತರ ಪ್ರದೇಶ, ತಮಿಳುನಾಡು, ಗುಜರಾತ್ ಮತ್ತು ಪಶ್ಚಿಮ ಬಂಗಾಳದಂತಹ ರಾಜ್ಯಗಳಲ್ಲಿ ಈ ದಂಧೆ ಸಕ್ರಿಯವಾಗಿದ್ದು, ಅಲ್ಲಿ ಸಾವಿರಾರು ಜನರು ಈ ವಂಚಕರ ವಂಚನೆಗೆ ಬಲಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಈತನನ್ನು ಬಂಧಿಸಿದ ಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ, ಈ ಸೈಬರ್ ವಂಚನೆ ದಂಧೆಯು ನಕಲಿ ಹೂಡಿಕೆ ಯೋಜನೆಗಳು, ಕ್ರಿಪ್ಟೋಕರೆನ್ಸಿ ವ್ಯಾಪಾರ ಮತ್ತು ಸುಳ್ಳು ಅದೃಷ್ಟ ಡ್ರಾಗಳ ಹೆಸರಿನಲ್ಲಿ ಜನರನ್ನು ಆಕರ್ಷಿಸುತ್ತಿತ್ತು. ಆರೋಪಿಗಳು ವಾಟ್ಸಾಪ್ ಕರೆಗಳು, ಸಾಮಾಜಿಕ ಮಾಧ್ಯಮ ಮತ್ತು ನಕಲಿ ವೆಬ್‌ಸೈಟ್‌ಗಳ ಮೂಲಕ ಜನರನ್ನು ಬಲೆಗೆ ಬೀಳಿಸುತ್ತಿದ್ದರು. ಕೆಲವು ಸಂದರ್ಭಗಳಲ್ಲಿ, ಅವರು ಬ್ಯಾಂಕ್ ಅಧಿಕಾರಿಗಳು ಅಥವಾ ಕಾನೂನು ಜಾರಿ ಸಂಸ್ಥೆಯ ಉದ್ಯೋಗಿಗಳಂತೆ ನಟಿಸಿ ಜನರನ್ನು ಹೆದರಿಸಿ ಅವರ ಬ್ಯಾಂಕ್ ಖಾತೆಗಳಿಂದ ಹಣವನ್ನು ವರ್ಗಾಯಿಸುತ್ತಿದ್ದರು. ಈ ದಂಧೆಯು ನಿರ್ದಿಷ್ಟವಾಗಿ ಸುಲಭ ಗಳಿಕೆ ಮತ್ತು ಹೆಚ್ಚಿನ ಆದಾಯಕ್ಕಾಗಿ ಹಪಾಹಪಿಸುವ ಜನರನ್ನು ಗುರಿಯಾಗಿಸಿಕೊಳ್ಳುತ್ತಿದ್ದರು.

ಸೈಬರ್ ವಂಚಕರ ವಿರುದ್ಧ ಪೊಲೀಸರ “ಸೈಬರ್ ಶೀಲ್ಡ್ ಹೆಸರಿನ ಬಿಗ್ ಆಪರೇಷನ್”

ಶ್ರೀ ಗಂಗಾನಗರ ಪೊಲೀಸರು “ಸೈಬರ್ ಶೀಲ್ಡ್” ಎಂಬ ಆಪರೇಷನ್ ನಡೆಸಿ ಈ ಪ್ರಕರಣದಲ್ಲಿ ದೂರು ದಾಖಲಿಸಿಕೊಂಡು ಕ್ರಮ ಕೈಗೊಂಡಿದ್ದಾರೆ. ಈ ಪ್ರಕರಣಲ್ಲಿ ಪೊಲೀಸರು 75 ಕ್ಕೂ ಹೆಚ್ಚು ಬ್ಯಾಂಕ್ ಖಾತೆಗಳನ್ನು ಗುರುತಿಸಿದ್ದಾರೆ, ಇವುಗಳಲ್ಲಿ 51.81 ಕೋಟಿ ರೂ. ಮೌಲ್ಯದ ನಕಲಿ ವಹಿವಾಟುಗಳ ದಾಖಲೆ ಇದೆ. ಕರ್ನಾಟಕ, ಕೇರಳ ಮತ್ತು ಮಹಾರಾಷ್ಟ್ರ ಸೇರಿದಂತೆ 20 ಕ್ಕೂ ಹೆಚ್ಚು ರಾಜ್ಯಗಳಿಂದ ಈ ಖಾತೆಗಳಿಗೆ ಸಂಬಂಧಿಸಿದ ದೂರುಗಳು ಬಂದಿವೆ.

ಈ ಅಕ್ರಮ ಸೈಬರ್ ವಂಚನೆಯಲ್ಲಿ ಖಾಸಗಿ ಬ್ಯಾಂಕ್ ಸಿಬ್ಬಂದಿಯ ಕೈವಾಡ ಶಂಕೆ.?

ಈ ದಂಧೆಯನ್ನು ನಡೆಸಲು ಬಳಸಲಾಗಿದ್ದ ಹಲವಾರು ಎಲೆಕ್ಟ್ರಾನಿಕ್ ಸಾಧನಗಳು, ಮೊಬೈಲ್ ಫೋನ್‌ಗಳು ಮತ್ತು ಸಿಮ್ ಕಾರ್ಡ್‌ಗಳನ್ನು ಸಹ ಪೊಲೀಸರು ವಶಪಡಿಸಿಕೊಂಡಿದ್ದಾರೆಸರಿಯಾದ ಪರಿಶೀಲನೆ ಇಲ್ಲದೆ ನಕಲಿ ಖಾತೆಗಳಿಗೆ ಎಟಿಎಂ ಮತ್ತು ಪಾಸ್‌ಬುಕ್ ಕಿಟ್‌ಗಳನ್ನು ನೀಡುವಲ್ಲಿ ಭಾಗಿಯಾಗಿರುವ ಕೆಲವು ಖಾಸಗಿ ಬ್ಯಾಂಕ್‌ಗಳ ನೌಕರರ ಪಾತ್ರವೂ ಅನುಮಾನಾಸ್ಪದವಾಗಿದೆ ಎಂದು ಎಸ್‌ಪಿ ಗೌರವ್ ಯಾದವ್ ಹೇಳಿದ್ದಾರೆ. ಈ ನೌಕರರ ವಿರುದ್ಧವೂ ತನಿಖೆ ಆರಂಭಿಸಲಾಗಿದ್ದು ತನಿಖೆಯಿಂದ ಇನ್ನಷ್ಟೂ ಮಾಹಿತಿ ಲಭ್ಯವಾಗಲಿದೆ.

Leave a Reply

Your email address will not be published. Required fields are marked *

Optimized by Optimole
error: Content is protected !!