ಶಿವಮೊಗ್ಗ : ಇ.ಸಿ.ಓ ಮತ್ತು ಸಿ.ಆರ್.ಪಿ, ಬಿ.ಆರ್.ಪಿ ಶಿಕ್ಷಣ ಇಲಾಖೆ ಪರೀಕ್ಷೆಯಲ್ಲಿ ಆಕ್ರಮ ನೆಡೆಯುವ ಸಾಧ್ಯತೆ ಇದಿಯಾ.!?
ASHWASURYA/SHIVAMOGGA
news.ashwasurya.in
ಅಶ್ವಸೂರ್ಯ/ಶಿವಮೊಗ್ಗ : ಕರ್ನಾಟಕ ರಾಜ್ಯದಲ್ಲಿ ಗುಣಮಟ್ಟದ ಶಿಕ್ಷಣಕ್ಕಾಗಿ ಮಾನ್ಯ ಸಚಿವರು/ಅಧಿಕಾರಿಗಳು ಹೊಸ ಯೋಜನೆಗಳನ್ನು ಜಾರಿಗೆ ತಂದಿದ್ದು ವಿಧ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ನೀಡುವುದಕ್ಕೂ ಮತ್ತು ಸರ್ಕಾರಿ ಶಾಲೆಗಳನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯುವುದಕ್ಕೆ ಇದು ಸಾಕಷ್ಟು ಶಕ್ತಿ ತುಂಬಲಿರುವ ಕಾರಣಕ್ಕೆ ಇವುಗಳ ಅನುಷ್ಠಾನಕ್ಕೆ ಪ್ರತಿ ವರ್ಷ ಇ.ಸಿ.ಓ, ಸಿ.ಆರ್.ಪಿ, ಬಿ.ಆರ್.ಪಿ/ ಬಿ.ಆರ್.ಸಿ ಗಳನ್ನ ಪರೀಕ್ಷೆ ಮೂಲಕ ನೇಮಕ ಮಾಡುತ್ತಿರುವುದು ಹೆಮ್ಮೆಯ ವಿಷಯವೆ ಆಗಿದೆ. ಆದರೆ ಈ ಪರೀಕ್ಷೆ ಸ್ಪರ್ಧಾತ್ಮಕವಾಗಿ ಯಾವುದೇ ಲೋಪವಿಲ್ಲದೆ ನೆಡೆಯುತ್ತಿದೇಯಾ..? ಎನ್ನುವ ಪ್ರಶ್ನೆ ರಾಜ್ಯದ ಶಿಕ್ಷಕರ ವರ್ಗದಲ್ಲಿ ದೊಡ್ಡಮಟ್ಟದ ಚರ್ಚೆಯಾಗಿದೆ.?ಕಾರಣ ಡಯಟ್ ಕೇಂದ್ರದಲ್ಲಿ ಕೆಲವು ಅಧಿಕಾರಿಗಳು ಮತ್ತು ನೌಕರರು ಈ ಪರೀಕ್ಷೆಗಳಲ್ಲಿ ಅಕ್ರಮಕ್ಕೆ ದಾರಿಮಾಡಿಕೊಟ್ಟು ಯೋಗ್ಯತೆ ಇಲ್ಲದ ಕೆಲವರು ಅಕ್ರಮವಾಗಿ ಪಾಸ್ ಆಗಿ ಈ ಹುದ್ದೆಗಳನ್ನು ಆಲಂಕರಿಸುತ್ತಿರುವುದು. ಶಿಕ್ಷಣದ ವ್ಯವಸ್ಥೆಗೆ ದೊಡ್ಡಮಟ್ಟದಲ್ಲಿ ಹೊಡೆತ ನೀಡುತ್ತಿದೆ ಎನ್ನುವುದು ಅರಿಯಬೇಕಿದೆ.ಈ ಹಿಂದೆ ನೆಡೆದ ಇ.ಸಿ.ಓ, ಸಿ.ಆರ್.ಪಿ, ಬಿ.ಆರ್.ಪಿ/ ಬಿ.ಆರ್.ಸಿ ಪರೀಕ್ಷೆಯಲ್ಲಿ ಶಿವಮೊಗ್ಗ ಜಿಲ್ಲಾ ಡಯಟ್ ಕೇಂದ್ರಗಳಲ್ಲಿ
ಅಕ್ರಮ ನೆಡೆದು ಪರೀಕ್ಷೆಯಲ್ಲಿ ಅನ್ಯಮಾರ್ಗದಲ್ಲಿ ಉತ್ತೀರ್ಣರಾಗಿ ಜವಾಬ್ದಾರಿಯುತ ಹುದ್ದೆಯನ್ನು ಕೆಲವು ಯೋಗ್ಯತೆ ಇಲ್ಲದವರು ಆನುಭವಿಸಿದ್ದಾರೆ ಎನ್ನುವುದು ದೊಡ್ಡಮಟ್ಟದ ಚರ್ಚೆಯಾಗಿತ್ತು.ಈ ಸಾಲಿನಲ್ಲಿ ಶಿವಮೊಗ್ಗ ಡಯಟ್ ಕೇಂದ್ರದಲ್ಲಿ ಅಕ್ರಮವಾಗದಂತೆ ನೋಡಿಕೊಳ್ಳುವ ದೊಡ್ಡ ಜವಬ್ದಾರಿ ಶಿವಮೊಗ್ಗ ಜಿಲ್ಲಾ ಶಿಕ್ಷಣ ಅಧಿಕಾರಿಗಳ ಹೆಗಲ ಮೇಲಿದೆ.ಈ ವಿಷಯವಾಗಿ ಯಾವುದೇ ಅಕ್ರಮ ನೆಡೆಯದಂತೆ ಗೌರವಾನ್ವಿತ ಶಿಕ್ಷಣ ಸಚಿವರಾದ ಮಧು ಬಂಗಾರಪ್ಪನವರು ಪರೀಕ್ಷಾ ಮೇಲ್ವಿಚಾರಕರಿಗೆ ಸೂಚನೆ ನೀಡಬೇಕಿದೆ.

ಈ ಸಾಲಿನಲ್ಲಿ ಇದೇ ಭಾನುವಾರ (15/06/2025)ದಂದು ಜಿಲ್ಲಾ ಡಯಟ್ ಕೇಂದ್ರಗಳಲ್ಲಿ ಪರೀಕ್ಷೆ ನಡೆಯುತ್ತಿದ್ದು ಯಾವುದೇ ಅಕ್ರಮ ನೆಡೆಯದಂತೆ ಪರೀಕ್ಷಾ ಕೇಂದ್ರದಲ್ಲಿ ನಿಗಾ ವಹಿಸಬೇಕಿದೆ. ಆದರೆ ಕೆಲವು ಅಧಿಕಾರಿಗಳು ಮತ್ತು ಅಭ್ಯರ್ಥಿಗಳು ಸೇರಿಕೊಂಡು ಶಿವಮೊಗ್ಗದ ಡಯಟ್ ಕೇಂದ್ರದಲ್ಲಿ ಪರೀಕ್ಷೆ ಅಕ್ರಮ ನಡೆಸಿ ಅನರ್ಹ ಶಿಕ್ಷಕರು / ಅಭ್ಯರ್ಥಿಗಳಿಗೆ ಹೆಚ್ಚಿನ ಅಂಕ ಬರುವಂತೆ ಮತ್ತು ಅನರ್ಹರು ಆಯ್ಕೆಯಾಗಿ ಪ್ರತಿ ವರ್ಷ ಹಣ ಪಡೆದು ಅಕ್ರಮ ನಡೆಸುತ್ತಿದ್ದಾರೆಂದು ಶಿಕ್ಷಕರ ವರ್ಗದಲ್ಲಿ ದೊಡ್ಡಮಟ್ಟದ ಚರ್ಚೆಯಾಗಿದೆ… ಖಾಲಿ ಓ.ಎಮ್.ಆರ್ ಗೆ ಸರಿ ಉತ್ತರ ತುಂಬುವುದು ಪರೀಕ್ಷೆಯಲ್ಲಿ ತಮಗೆ ಬೇಕಾದವರಿಗೆ ಸರಿ ಉತ್ತರ ಹೇಳಿ ಕೊಡುವುದು ಈ ಹಿಂದೆ ನೆಡೆದಿದ್ದು ಮತ್ತೆ ಅದು ಮರುಕಳಿಸದಂತೆ ನೋಡಿಕೊಳ್ಳುವ ದೊಡ್ಡ ಜವಬ್ದಾರಿ ಪರೀಕ್ಷಾ ಮೇಲ್ವಿಚಾರಕರಿಗೆ ಇದ್ದು ಆದ್ದರಿಂದ ಈ ಬಾರಿ ಅರ್ಹತೆ ಇರುವವರು ಪ್ರಾಮಾಣಿಕವಾಗಿ ಪರೀಕ್ಷೆ ಬರೆದು ಪಾಸ್ ಆಗಲಿ ಈ ಬಾರಿಯು ಅಕ್ರಮ ನೆಡೆದದ್ದು ಕಂಡುಬಂದಲ್ಲಿ..ಪತ್ರಿಕೆಯು ಸೂಕ್ಷ್ಮವಾಗಿ ಗಮನಿಸುತ್ತಿದ್ದು.ಈ ಬಾರಿಯ ಪರೀಕ್ಷಾ ಸಮಯದ ವೇಳೆಯ ಸಿಸಿಟಿವಿಯ ಸಿಸಿಟಿವಿ ಫೂಟೇಜ್, ಉತ್ತರ ಪ್ರತಿಗಳ ನಕಲು ಪ್ರತಿಯನ್ನು
ಮತ್ತು ಕೇಲವು ವಿಷಯವನ್ನು ಮಾಹಿತಿ ಹಕ್ಕಿನಲ್ಲಿ ಪಡೆದು ಪರೀಕ್ಷೆಯಲ್ಲಿ ಅಕ್ರಮ ನೆಡೆದದ್ದೆ ಆದರೆ ಅದನ್ನು ಬಯಲುಮಾಡಿ
ತನಿಖೆ ಒಳ ಪಡಿಸಿ ತಪ್ಪಿತಸ್ತರ ವಿರುದ್ಧ ಕ್ರಮ ಕೈಗೊಳ್ಳುವ ವರೆಗೂ ಪತ್ರಿಕೆ ಹೋರಾಟ ಮಾಡಲಿದೆ. ಈ ಬಾರಿ ಯಾವುದೇ ಅಕ್ರಮ ನೆಡೆಯದಂತೆ ನೋಡಿಕೊಂಡು ಪರೀಕ್ಷಾ ಕೇಂದ್ರದಲ್ಲಿ ಯಾವುದೇ ಅಕ್ರಮ ಆಗದಂತೆ ನೋಡಿಕೊಂಡು ಸರಿಯಾ ಮಾರ್ಗದಲ್ಲಿ ನಡೆಯುವಂತೆ ಮಾಡಿ ಆರ್ಹತೆ ಇರುವವರು ಪಾಸ್ ಆಗಿ ಅಧಿಕಾರದ ಹುದ್ದೆ ಅಲಂಕರಿಸಿ ಶಿಕ್ಷಣ ಕ್ಷೇತ್ರದಲ್ಲಿ ಸರ್ಕಾರಿ ಶಾಲೆಗಳು ಎತ್ತರ ಮಟ್ಟಕ್ಕೆ ಬೆಳೆಯುಂತಾಗಲಿ.. ಇಲ್ಲವಾದರೆ ಮಾಹಿತಿ ಹಕ್ಕಿನಲ್ಲಿ ಸಿಸಿಟಿವಿ ಫೋಟೆಜ್ ಉತ್ತರ ಪ್ರತಿಗಳ ನಕಲು ಪ್ರತಿ ಪಡೆದು ಅಕ್ರಮ ಮಾಡಿದವರ ವಿರುದ್ಧ ಕಾನೂನು ಬದ್ಧವಾಗಿ ಹೋರಾಟ ಮಾಡಬೇಕಾಗುತ್ತದೆ. ಗುಣಮಟ್ಟದ ಶಿಕ್ಷಣಕ್ಕೆ ನಾವು ಕೈಜೋಡಿಸಿ ಕೆಲವು ಭ್ರಷ್ಟಾ ಅಧಿಕಾರಿಗಳು ಮತ್ತು ನೌಕರರನ್ನು ಮಟ್ಟಹಾಕುವ ವರೆಗೂ ನಮ್ಮ ಹೋರಾಟ ಮುಂದುವರೆಯುತ್ತದೆ.
ಈ ಬಾರಿ ಪರೀಕ್ಷಾ ಕೇಂದ್ರದಲ್ಲಿ ಯಾವುದೇ ಸಣ್ಣ ಅಕ್ರಮ ನೆಡೆಯದಂತೆ ಸೂಕ್ಷ್ಮವಾಗಿ ಗಮನಿಸುವ ದೊಡ್ಡ ಜವಬ್ದಾರಿ ಶಿವಮೊಗ್ಗ ಜಿಲ್ಲಾ ಪ್ರಾಮಾಣಿಕ ಡಿಡಿಪಿಐ EO ಮಂಜುನಾಥ್ ಅವರ ಮೇಲಿದೆ ನಮಗೂ ಅವರ ಮೇಲೆ ನಂಬಿಕೆ ಇದ್ದು ಈ ಬಾರಿಯ ಪರೀಕ್ಷೆಯಲ್ಲಿ ಯಾವುದೇ ಅಕ್ರಮ ನೆಡೆಯುವ ಸಾಧ್ಯತೆ ಇಲ್ಲ ಎನ್ನುವುದು ಕೇಲವರ ಅನಿಸಿಕೆಯಾಗಿದೆ..

ಆದರೂ ಶಿವಮೊಗ್ಗ ಡಯಟ್ ಕೇಂದ್ರದಲ್ಲಿ ಕೆಲವು ಬಲಿತ ಹೆಗ್ಗಣಗಳಿದ್ದು ಪ್ರಾಮಾಣಿಕ ಅಧಿಕಾರಿಗಳನ್ನು ಭ್ರಷ್ಟಾಚಾರಿಗಳನ್ನಾಗಿ ಮಾಡುವಂತಹ ಭ್ರಷ್ಟರಿದ್ದಾರೆ..ಈ ಎಲ್ಲವನ್ನೂ ಕಾದುನೋಡಿ ಮುಂದಿನ ಹೆಜ್ಜೆ ಇಡುವ ತಯಾರಿಯನ್ನು ನಮ್ಮ ಪತ್ರಿಕಾ ಬಳಗ ಮಾಡಿಕೊಂಡಿದೆ..
ವಿಷಯ:2024-25 ನೇ ಸಾಲಿಗೆ ಸರ್ಕಾರಿ ಪ್ರಾಥಮಿಕ/ಪ್ರೌಢಶಾಲಾ ಸಹಶಿಕ್ಷಕರು ಮತ್ತು ಮುಖ್ಯಶಿಕ್ಷಕರು/ತತ್ಸಮಾನ ವೃಂದದ ನಿರ್ದಿಷ್ಟಪಡಿಸಿದ ಹುದ್ದೆಗಳಿಗೆ ಲಿಖಿತ ಪರೀಕ್ಷೆಗಳನ್ನು ನಡೆಸುವ ಪರೀಕ್ಷಾ ಕೇಂದ್ರಗಳಲ್ಲಿ ಸಿಸಿ ಕ್ಯಾಮೆರಾ ಹಾಗೂ ಡಿ.ವಿ.ಆರ್ ಉಪಕರಣಗಳ ಅಳವಡಿಕೆಯ ದೃಢೀಕರಣ ಪತ್ರ ನೀಡಲಾಗಿದೆ.

ಶೈಕ್ಷಣಿಕ ಸಂಯೋಜಕರ ಪ್ರಮುಖ ಜವಾಬ್ದಾರಿಗಳು ಶೈಕ್ಷಣಿಕ ಕಾರ್ಯಕ್ರಮಗಳ ಮೇಲ್ವಿಚಾರಣೆ, ವಿದ್ಯಾರ್ಥಿಗಳನ್ನು ಬೆಂಬಲಿಸುವುದು, ಅಧ್ಯಾಪಕರು ಮತ್ತು ಸಿಬ್ಬಂದಿ ಚಟುವಟಿಕೆಗಳನ್ನು ಸಂಘಟಿಸುವುದು ಮತ್ತು ಸರ್ಕಾರಿ ಶಾಲೆಗಳನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯುವ ಆಡಳಿತಾತ್ಮಕ ಕಾರ್ಯಗಳನ್ನು ನಿರ್ವಹಿಸುವ ಬಹುಮುಖಿ ಪಾತ್ರವನ್ನು ಶೈಕ್ಷಣಿಕ ಸಂಯೋಜಕರು ಹೊಂದಿರುತ್ತಾರೆ,ಈ ಕಾರಣಕ್ಕೆ ಇಂತಹ ಹುದ್ದೆಗೆ ಸರಿಯಾದ ವ್ಯಕ್ತಿಯನ್ನು ಆಯ್ಕೆಮಾಡುವ ದೊಡ್ಡ ಜವಬ್ದಾರಿ ಶಿಕ್ಷಣ ಇಲಾಖೆಯ ಮೇಲಿದೆ…ಈ ಸಾಲಿನ ಪರೀಕ್ಷಾ ಕೇಂದ್ರದಲ್ಲಿ ಯಾವುದೇ ಅಕ್ರಮ ನೆಡೆಯದಂತೆ ನೋಡಿಕೊಂಡು ಪ್ರಾಮಾಣಿಕವಾಗಿ ಪರೀಕ್ಷೆ ಬರೆದು ಆಯ್ಕೆಯಾಗಲಿ ಎನ್ನುವುದು ನಮ್ಮ ಆಶಯವಾಗಿದೆ…


