Headlines

ಆನೇಕಲ್‌ : ಹೆಂಡತಿಯ ತಲೆ ಕಡಿದು ಪೊಲೀಸ್‌ ಠಾಣೆಗೆ ತಂದ ಗಂಡ.!

ಅಶ್ವಸೂರ್ಯ/ಬೆಂಗಳೂರು : ಬೆಂಗಳೂರು ಹೊರವಲಯದ ಆನೇಕಲ್​ ನಲ್ಲಿ ಪೊಲೀಸರೇ ಬೆಚ್ಚಿಬೀಳುವಂತಹ ಹತ್ಯೆಯೊಂದು ನಡೆದು ಹೋಗಿದೆ.! ತನ್ನ ಪತ್ನಿಯ ಕತ್ತು ಕತ್ತರಿಸಿದ ಗಂಡ ಆಕೆಯ ರುಂಡವನ್ನು ಕೈಯಲ್ಲಿ ಹಿಡಿದುಕೊಂಡು ಪೊಲೀಸ್​ ಠಾಣೆಗೆ ಬಂದು ಶರಣಾಗಿದ್ದಾನೆ.

ಆನೇಕಲ್ ತಾಲೂಕಿನ ಹೀಲಲಿಗೆ ಗ್ರಾಮದಲ್ಲಿ ಈ ಪ್ರಕರಣ ನಡೆದಿದೆ. ಹೆನ್ನಾಗರ ನಿವಾಸಿ 28 ವರ್ಷದ ಶಂಕರ್ ಎಂಬಾತ ಪತ್ನಿಯ ರುಂಡ ಕಡಿದು ಬೈಕ್​ನಲ್ಲೇ ಹಿಡಿದುಕೊಂಡು ಸೂರ್ಯನಗರ ಠಾಣೆಗೆ ಬಂದಿದ್ದಾನೆ. ಹೆಬ್ಬಗೋಡಿ ನಿವಾಸಿ ಮಾನಸ (26) ಮೃತ ಮಹಿಳೆ ಎಂದು ಗೊತ್ತಾಗಿದೆ. ಹತ್ಯೆಗೆ ಆಕೆಯ ಅಕ್ರಮ ಸಂಬಂಧವೇ ಕಾರಣ ಎನ್ನಲಾಗುತ್ತಿದೆ.

ಶಂಕರ್ ಹಾಗೂ ಮಾನಸ ಇಬ್ಬರೂ ಪ್ರೀತಿಸಿ 5 ವರ್ಷಗಳ ಹಿಂದೆ ಮದುವೆಯಾಗಿದ್ದರು. ಈ ದಂಪತಿ ತಿಂಗಳ ಹಿಂದಷ್ಟೇ ಹೀಲಲಿಗೆ ಗ್ರಾಮದಲ್ಲಿ ಬಾಡಿಗೆ ಮನೆಗೆ ಮಾಡಿದ್ದರು. ಇದೇ ತಿಂಗಳು 3ನೇ ತಾರೀಕು ರಾತ್ರಿ ಕೆಲಸ ನಿಮಿತ್ತ ತೆರಳಿದ್ದ ಶಂಕರ್, ಪತ್ನಿಗೆ ಬೆಳಗ್ಗೆ ಬರುವುದಾಗಿ ಹೇಳಿ ಹೋಗಿದ್ದ. ಆದರೆ ತಡರಾತ್ರಿಯೇ ಮನೆಗೆ ಬಂದಿದ್ದಾನೆ. ಈ ವೇಳೆ ಹೆಂಡತಿಯ ಕಳ್ಳಾಟ ಬಯಲಾಗಿದೆ.
ಈ ವೇಳೆ ಪತ್ನಿ ತನ್ನ ಪ್ರಿಯಕರನ ಜೊತೆ ಚಕ್ಕಂದವಾಡುತ್ತಿದ್ದುದು ಆತನಿಗೆ ಕಂಡುಬಂದಿದೆ. ಮಹಿಳೆ ರೆಡ್ ಹ್ಯಾಂಡ್ ಆಗಿ ಪ್ರಿಯಕರನ ಜೊತೆ ಸಿಕ್ಕಿಬಿದ್ದಿದ್ದಾಳೆ. ಇದನ್ನು ಕಂಡು ಆಕ್ರೋಶಗೊಂಡ ಶಂಕರ್​ ಇಬ್ಬರ ಮೇಲೂ ಹಲ್ಲೆ ನಡೆಸಿದ್ದಾನೆ. ಪತ್ನಿಯ ಸಹವಾಸ ಬೇಡ ಎಂದು ಆಕೆಯನ್ನು ಪ್ರಿಯಕರನ ಜೊತೆಯೇ ಕಳುಹಿಸಿದ್ದಾನೆ. ಆದರೆ ಪತ್ನಿ ಮಾನಸ ಮಾತ್ರ ಪದೇ ಪದೆ ಮನೆಗೆ ಬಂದು ಗಂಡ ಶಂಕರ್​ಗೆ ಹಿಂಸೆ ನೀಡುತ್ತಿದ್ದಳು.
ನಿನ್ನೆ ರಾತ್ರಿ ಸಹ ಮನೆಗೆ ಬಂದು ಗಲಾಟೆ ಮಾಡಿದ್ದಾಳೆ. ಇದರಿಂದ ಕೋಪಗೊಂಡ ಶಂಕರ್ ಆಕೆಯ ತಲೆ ಕಡಿದು ಪೊಲೀಸ್‌​ ಠಾಣೆಗೆ ತಂದಿದ್ದಾನೆ. ದೂರು ದಾಖಲಾಗಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Leave a Reply

Your email address will not be published. Required fields are marked *

Optimized by Optimole
error: Content is protected !!