Headlines

ಶಿವಮೊಗ್ಗ: ಬಕ್ರೀದ್ ಹಬ್ಬದ ಹಿನ್ನೆಲೆಯಲ್ಲಿ ಸರ್ವ ಧರ್ಮದ ಮುಖಂಡರ ಜೊತೆ ಶಾಂತಿ ಸಭೆ.

  1. ಶಿವಮೊಗ್ಗವು ಅಭಿವೃದ್ಧಿ ಪಥದಲ್ಲಿ ಸಾಗುತ್ತಿರುವ ನಗರವಾಗಿದ್ದು, ಶಾಂತಿ ಸುವ್ಯವಸ್ಥೆ ಇದ್ದಲ್ಲಿ ಮಾತ್ರ ಜಿಲ್ಲೆಗೆ ಒಳ್ಳೆಯ ಹೆಸರು ಬಂದು, ಸರ್ವತೋಮುಖ ಅಭಿವೃದ್ಧಿಯನ್ನು ಸಾಧಿಸಲು ಸಾಧ್ಯವಾಗುತ್ತದೆ, ಆದ್ದರಿಂದ ಈ ಹಿನ್ನೆಲೆಯಲ್ಲಿ ಪ್ರತಿವರ್ಷದಂತೆ ಈ ವರ್ಷವೂ ಸಹಾ ಬಕ್ರೀದ್ ಹಬ್ಬದ ಹಿನ್ನೆಲೆಯಲ್ಲಿ ಎಲ್ಲಾ ಸಮುದಾಯದ ಮುಖಂಡರುಗಳುಗಳನ್ನೊಳಗೊಂಡ ಸಭೆಯನ್ನು ಹಮ್ಮಿಕೊಂಡಿರುತ್ತದೆ.

2) ಈ ಹಿಂದಿನ ವರ್ಷಗಳಲ್ಲಿ ಶಾಂತ ರೀತಿಯಲ್ಲಿ ಹಬ್ಬವನ್ನು ಆಚರಿಸಿದ್ದು, ಈ ವರ್ಷವೂ ಸಹಾ ಯಾವುದೇ ಅಡೆತಡೆ ಇಲ್ಲದೇ ಹಬ್ಬವನ್ನು ಆಚರಿಸೋಣ, ಎರಡು ಸಮುದಾಯಗಳ ನಡುವೆ ಬಿರುಕನ್ನು ಉಂಟು ಮಾಡಲು ಕೆಲವು ಜನ ಕಿಡಿಗೇಡಿಗಳು ಪ್ರಯತ್ನಿಸುತ್ತಾರೆ, ಆದರೆ ಆ ರೀತಿಯ ಮಾತುಗಳಿಗೆ ಕಿವಿಗೊಡದೇ ಸಹಬಾಳ್ವೆಯಿಂದ ಹಬ್ಬ ಆಚರಿಸುವುದು ಮುಖ್ಯವಿರುತ್ತದೆ.

3) ಭಾರತ ದೇಶದ ಪ್ರಜೆಗಳಾದ ನಾವೆಲ್ಲರೂ ಒಂದೇ ಎಂಬ ಭಾವದಿಂ ಮುಂದೆ ಸಾಗೋಣ, ಈ ರೀತಿಯಾಗಿ ಮಾತ್ರ ನಾವು ಸುಭದ್ರ ದೇಶ ನಿರ್ಮಾಣ ಮಾಡಲು ಸಾಧ್ಯ ವಿದೆಯೇ ಹೊರತು ಒಬ್ಬರನ್ನು ಒಬ್ಬರು ದೂಷಿಸುವ ಮೂಲಕ ಏನನ್ನೂ ಸಾಧಿಸಲು ಸಾಧ್ಯವಿರುವುದಿಲ್ಲ.

4) ಶಿವಮೊಗ್ಗ ಜಿಲ್ಲಾ ಪೊಲೀಸ್ ಇಲಾಖೆಯು ಸಮಾಜದಲ್ಲಿನ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಮುಂದೆ ಸಾಗುತ್ತಿದ್ದು, ಬಕ್ರೀದ್ ಹಬ್ಬದ ಸಂಬಂಧ ಎಲ್ಲಾ ರೀತಿಯ ಮುಂಜಾಗ್ರತಾಕ್ರಮಗಳನ್ನು ತೆಗೆದುಕೊಂಡು ಸೂಕ್ತ ಬಂದೋಬಸ್ತ್ ಮಾಡಿಕೊಂಡಿರುತ್ತಾರೆ.

5) ಎಲ್ಲರೂ ಸೇರಿ ಹಬ್ಬ ಆಚರಿಸುವ ಮೂಲಕ ಭಾವೈಖ್ಯತೆಯನ್ನು ಮೆರೆಯೋಣ, ಹಬ್ಬವು ಶಾಂತ ರೀತಿಯಲ್ಲಿ ನಡೆಯಲಿ ಎಂದು ಹಾಷಿಸುತ್ತೇವೆ. ಯುವಜನತೆಯು ಸಾಮಾಜಿಕ ಜಾಲತಾಣದಲ್ಲಿ ಯಾವುದೇ ವಿಷಯಗಳ ಸತ್ಯಾಸತ್ಯತೆಗಳ ಬಗ್ಗೆ ತಿಳಿದುಕೊಳ್ಳದೇ ಪೋಸ್ಟ್ ಗಳನ್ನು ಹಾಕುವುದು ಶೇರ್ ಮಾಡುವುದು ಹಾಗೂ ತಕ್ಷಣಕ್ಕೆ ಭಾವೋದ್ವೇಗಕ್ಕೆ ಒಳಗಾಗಿ ಕಾನೂನು ಕೈಗೆ ತೆಗೆದುಕೊಳ್ಳುವುದು ಕಂಡುಬರುತ್ತಿದ್ದು, ಸಮಾಜದ ಹಿರಿಯರು ತಮ್ಮ ತಮ್ಮ ಉವಜನತೆಗೆ ತಿಳಿ ಹೇಳಿ, ಏನೇ ಇದ್ದರೂ ಸಂಬಂಧಪಟ್ಟ ಇಲಾಖೆಯ ಗಮನಕ್ಕೆ ತನ್ನಿ ಈ ಮೂಲಕ ಸತ್ಯಾಸತ್ಯತೆಯನ್ನು ತಿಳಿದು ಕ್ರಮ ಕೈಗೊಳ್ಳಲಾಗುತ್ತದೆ.

6) ಎಲ್ಲಾ ಸಮಯ ಮತ್ತು ಸಂದರ್ಭದಲ್ಲಿಯೂ ಸಹಾ ಪೊಲೀಸ್ ಇಲಾಖೆಯು ಸಿದ್ದರಿದ್ದು, ಜಿಲ್ಲಾಡಳಿತ ಹಾಗೂ ಜಿಲ್ಲಾ ಪೊಲೀಸ್ ನಿಮ್ಮೋಂದಿಗೆ ಇರಲಿದೆ.

1) ಪ್ರತೀ ಕ್ಷೇತ್ರದಲ್ಲಿಯೂ ಶಿವಮೊಗ್ಗದ ಸಾಧಕರನ್ನು ಕಾಣಸಿಗುತ್ತದೆ, ಈ ಜಿಲ್ಲೆಯಲ್ಲಿ ಕರ್ತವ್ಯ ನಿರ್ವಹಿಸುವುದು ತುಂಬಾ ಹೆಮ್ಮೆಯ ವಿಷಯವಾಗಿರುತ್ತದೆ. ಪ್ರತೀ ಹಬ್ಬಕ್ಕೂ ಅದರದೇ ಆದ ವಿಶೇಷತೆಗಳಿರುತ್ತವೆ ಹಾಗೇಯೇ ಮುಖ್ಯವಾಗಿ ಶಿವಮೊಗ್ಗದಲ್ಲಿ ಪ್ರತೀ ಹಬ್ಬವನ್ನು ತುಂಬಾ ವಿಶೇಷವಾಗಿ ಆಚರಿಸಲಾಗುತ್ತದೆ.

2) ಹಬ್ಬಗಳನ್ನು ವಿಜೃಂಭಣೆಯಿಂದ ಆಚರಿಸುವ ನಿಟ್ಟಿನಲ್ಲಿ ಎಲ್ಲಾ ಸಮುದಾಯದವರ ಸಹಕಾರ ಇದ್ದೇ ಇರುತ್ತದೆ. ಎಲ್ಲೋ ಕೆಲವು ಕಡೆಗಳಲ್ಲಿ ಆದ ಸಮಸ್ಯೆಗಳನ್ನು ಹೊರತು ಪಡಿಸಿದರೆ ಶಿವಮೊಗ್ಗ ಜಿಲ್ಲೆಯಲ್ಲಿ ಶಾಂತ ರೀತಿಯಲ್ಲಿ ಹಬ್ಬಗಳು ನಡೆದುಕೊಂಡು ಬಂದಿರುತ್ತವೆ. ಯಾವುದೇ ಸಮಸ್ಯೆಗೆ ಸೂಕ್ತ ಪರಿಹಾರ ಕಂಡು ಕೊಂಡು ಶಾಂತಿ ಸುವ್ಯವಸ್ಥೆಯನ್ನು ಕಾಪಾಡಿಕೊಂಡು ಬರಲಾಗಿದೆ.

3) ಸಮಾಜಘಾತುಕ ವ್ಯಕ್ತಿಗಳು / ಕಿಡಿಗೇಡಿಗಳು / ಹಬ್ಬಕ್ಕೆ ತೊಂದರೆ ನೀಡುವವರ ವಿರುದ್ಧ ಕ್ರಮ ಕೈಗೊಳ್ಳಲು ಸೂಕ್ತ ಪೊಲೀಸ್ ಬಂದೋಬಸ್ತ್ ಮಾಡಲಾಗಿರುತ್ತದೆ. ಸಾರ್ವಜನಿಕ ಹಿತಾಸಕ್ತಿಯ ದೃಷ್ಠಿಯಿಂದ ಕೈಗೊಳ್ಳಬೇಕಾದ ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿರುತ್ತದೆ. ಅದರ ಜೊತೆಗೆ ಯಾವುದೇ ಹಬ್ಬಗಳ / ಆಚರಣೆಗಳ ಯಶಸ್ಸಿನಲ್ಲಿ ಸಾರ್ವಜನಿಕರ ಪಾತ್ರ / ಸಹಕಾರ / ಪಾಲ್ಗೊಳ್ಳುವಿಕೆಯು ಪ್ರಮುಖ ಪಾತ್ರವಹಿಸುತ್ತದೆ. ಪ್ರತಿ ವರ್ಷದಂತೆ ಈ ವರ್ಷವೂ ಸಹಾ ಪೊಲೀಸ್ ಇಲಾಖೆಗೆ ಸಹಕಾರ ನೀಡಿ.

4) ಬಕ್ರೀದ್ ಹಬ್ಬವನ್ನು ತ್ಯಾಗ ಹಾಗೂ ಬಲಿದಾನದ ಪ್ರತೀಕವಾಗಿ ಆಚರಸಿಲಾಗುತ್ತದೆ. ಆದ್ದರಿಂದ ಶಾಂತ ರೀತಿಯಲ್ಲಿ ಹಬ್ಬ ಆಚರಿಸೋಣ. ಯಾವುದೋ ಕಿಡಿಗೇಡಿಗಳ ಮಾತಿಗೆ / ಪ್ರಚೋದನೆಗೆ ಒಳಗಾಗ ಬೇಡಿ, ಯಾವುದೇ ಸಮಸ್ಯೆಗಳಿದ್ದರೆ ಪೊಲೀಸ್ ಇಲಾಖೆಯ ಗಮನಕ್ಕೆ ತಂದು ಸಮಸ್ಯೆಗೆ ಪರಿಹಾರ ಕಂಡು ಕೊಳ್ಳಿ.

5) ಜಿಲ್ಲಾ ಪೊಲೀಸ್ ಇಲಾಖೆಯಿಂದ ಸಾಮಾಜಿಕ ಜಾಲತಾಣದ ಮೇಲೆ ಸೂಕ್ತ ನಿಗಾವಹಿಸಲಾಗಿದ್ದು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಲಾಗುವ / ವೈರಲ್ ಆಗುವ ಪೋಸ್ಟ್ ಗಳನ್ನು ಪರಿಶೀಲಿಸಲಾಗುತ್ತದೆ. ಒಂದು ವೇಳೆ ಆಕ್ಷೇಪಾರ್ಹ / ಶಾಂತಿ ಕದಡುವಂತಹ ವಿಚಾರಗಳು ಕಂಡಬಂದಲ್ಲಿ ಅಂತಹವರ ವಿರುದ್ಧ ಪ್ರಕರಣ ದಾಖಲಿಸಿ, ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ.

6) ಯಾವುದೇ ವಿಚಾರಗಳಿಗೆ ಪ್ರತಿಕ್ರಿಯೆ ನೀಡುವ / ಪ್ರತಿಕ್ರಿಯಿಸುವ ಮುನ್ನ ಒಂದು ಬಾರ ಯೋಚಿಸಿ ನೋಡಿ, ಮುಖ್ಯವಾಗಿ ಮುಖಂಡರುಗಳು ಈ ಬಗ್ಗೆ ಹೆಚ್ಚಿನ ಗಮನ ನೀಡಿ, ನಿಮ್ಮ ಗಮನಕ್ಕೆ ಯಾವುದೇ ವಿಚಾರಗಳು / ಸಮಸ್ಯೆಗಳು ಆಗುವುದು ಕಂಡು ಬಂದಾಗ ಸಂಬಂಧಪಟ್ಟ ಇಲಾಖೆಗಳ ಗಮನಕ್ಕೆ ತಂದು ಎಲ್ಲರ ಸಹಕಾರ ಮತ್ತು ಸಹಯೋಗದಿಂದ ಸಮಸ್ಯೆಗಳನ್ನು ಪರಿಹರಿಸಿಕೊಂಡು ಸರಿಪಡಿಸೋಣ.

7) ಪೊಲೀಸ್ ಇಲಾಖೆ, ಜಿಲ್ಲಾಡಳಿತ ಹಾಗೂ ನಗರ ಸಭೆ ಮತ್ತು ಸಂಬಂಧಪಟ್ಟ ಎಲ್ಲಾ ಇಲಾಖೆಗಳು ಕಳೆದ 15 ದಿನಗಳಿಂದ ಹಬ್ಬಕ್ಕೆ ಅಗತ್ಯ ತಯಾರಿಗಳನ್ನು ಮಾಡಿಕೊಂಡಿದ್ದು, ಸುರಕ್ಷತೆ, ಶುಚಿ, ಸ್ವಚ್ಚತೆ ಮತ್ತು ಶಾಮತಿ ಕಾಪಾಡಲು ಅಗತ್ಯವಿರುವ ಎಲ್ಲಾ ಕ್ರಮ ಕೈಗೊಳ್ಳುತ್ತೇವೆ. ನಮ್ಮೊಂದಿಗೆ ಕೈ ಜೋಡಿಸಿ ಶಾಮತ ರೀತಿಯಲ್ಲಿ ವ್ಯವಸ್ಥಿತವಾಗಿ ಹಬ್ಬ ಆಚರಿಸಿ.

8) ಎಲ್ಲಾ ಇಲಾಖೆಯ ಅಧಿಕಾರಿಗಳು ಹಬ್ಬದ ಯಶಸ್ಸಿನ ನಿಟ್ಟಿನಲ್ಲಿ ಶ್ರಮವಹಿಸಿದ್ದು, ಎಲ್ಲಾ ಇಲಾಖೆಯ ಅಧಿಕಾರಿಗಳು ಸಭೆ ನಡೆಸಿ, ಯಾವುದೇ ಸಮಸ್ಯೆಯಾಗದಂತೆ ಕ್ರಮ ಕೈಗೊಳ್ಳುತ್ತೇವೆ. ಯಾವುದೇ ರೀತಿಯ ಸಮಸ್ಯೆಗೆ 24 ×7 ರಲ್ಲಿ ಸಹಕಾರ ನೀಡಲು ಸಿದ್ದರಿರುತ್ತೇವೆ.

ಎಲ್ಲರೂ ಸೇರಿ ವಿಜೃಂಭಣೆ ಮತ್ತು ಶಾಂತ ರೀತಿಯಲ್ಲಿ ಹಬ್ಬ ಆಚರಿಸೋಣವೆಂದು ಹೇಳಿ ಎಲ್ಲರಿಗೂ ಶುಭ ಕೋರಿದರು.
ಈ ಸಂದರ್ಭದಲ್ಲಿ ಅನಿಲ್ ಕುಮಾರ್ ಭೂಮರಡ್ಡಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕರು-01 ಮತ್ತು ಎ. ಜಿ. ಕಾರಿಯಪ್ಪ, ಹೆಚ್ಚುವರಿ ಪೊಲೀಸ್ ಅಧೀಕ್ಷಕರು-02 ಶಿವಮೊಗ್ಗ ಜಿಲ್ಲೆ ಹಾಗೂ ಜಿಲ್ಲೆಯ ಎಲ್ಲಾ ಪೊಲೀಸ್ ಉಪಾಧೀಕ್ಷಕರು ಮತ್ತು ಶಿವಮೊಗ್ಗ ನಗರದ ಪೊಲೀಸ್ ಅಧಿಕಾರಿಗಳು, ಮಾಧ್ಯಮ ಮಿತ್ರರು ಹಾಗೂ ಎಲ್ಲಾ ಸಮುದಾಯದ ಮುಖಂಡರುಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

Optimized by Optimole
error: Content is protected !!