ಕಾಂಗ್ರೆಸ್ ಪಕ್ಷದ ಹಿರಿಯ ನಯಕ, ವಿಧಾನ ಪರಿಷತ್ ಸದಸ್ಯ ಬಿ ಕೆ ಹರಿಪ್ರಸಾದ್
ಸಿಎಂ ಸಿದ್ದ ರಾಮಯ್ಯ ನವರ ವಿರುದ್ಧ ಬಿ ಕೆ ಹರಿಪ್ರಸಾದ್ ಪರೋಕ್ಷವಾಗಿ ವಾಗ್ದಾಳಿ!
ಬೆಂಗಳೂರು : ಹಿಂದುಳಿದ ವರ್ಗದವರು ಒಟ್ಟಾಗಿ ಮತ ಹಾಕಿದವರ ವಿರುದ್ಧ ಅಧಿಕಾರ ಅನುಭವಿಸುವವರು ಬೇರೆ ಯಾರೋ ಆಗಿರುತ್ತಾರೆ. ಕಡಿಮೆ ಜನಸಂಖ್ಯೆ ಇರುವ ಸಮುದಾಯಗಳು ನಿರಂತರವಾಗಿ ಅವಕಾಶ ವಂಚನೆಗೊಳಗಾಗುತ್ತಿವೆ ಎಂದು ವಿಧಾನ ಪರಿಷತ್ ಸದಸ್ಯರು ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರಾದ ಬಿ.ಕೆ.ಹರಿಪ್ರಸಾದ್ ವಾಗ್ದಾಳಿ ನಡೆಸಿದ್ದಾರೆ. ಬೆಂಗಳೂರಿನಲ್ಲಿ ಶನಿವಾರ ನಡೆದ ಈಡಿಗ ಹಾಗೂ ಅದರ ಉಪಪಂಗಡಗಳ ಸಮುದಾಯಗಳ ಸಮಾವೇಶದ ಪೂರ್ವಭಾವಿ ಸಮುದಾಯದ ಸಭೆಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ಮಾಡಿದರು.
.
ಬೆಂಗಳೂರಿನಲ್ಲಿ ಸೆಪ್ಟೆಂಬರ್ 9ರ ಶನಿವಾರ ನಡೆದ ಈಡಿಗ ಹಾಗೂ ಅದರ ಉಪಪಂಗಡಗಳ ಸಮುದಾಯಗಳ ಸಮಾವೇಶದ ಪೂರ್ವಭಾವಿ ಸಮುದಾಯದ ಸಭೆಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ಮಾಡಿದರು.
ತಮ್ಮ ಸಮುದಾಯದ ಕಾಗೋಡು ತಿಮ್ಮಪ್ಪ, ಬಂಗಾರಪ್ಪ ಯಾರೂ ಎಂದಿಗೂ ಜಾತಿ ರಾಜಕಾರಣ ಮಾಡಿರಲಿಲ್ಲ. ಹಿಂದಿನ ಮುಖ್ಯಮಂತ್ರಿಗಳೂ ಕೂಡ ಜಾತಿ ರಾಜಕಾರಣ ಮಾಡಿರಲಿಲ್ಲ. ಪಂಚೆ ಹಾಕಿಕೊಂಡು, ವಾಚ್ ಕಟ್ಟಿಕೊಂಡು, ಒಳಗೆ ಖಾಕಿ ಚಡ್ಡಿ ಹಾಕಿಕೊಂಡು ಸಮಾಜವಾದಿ ಎಂದು ಹೇಳಿದರೆ ಆಗುವುದಿಲ್ಲ. ಕಾಗೋಡು ತಿಮ್ಮಪ್ಪ ಸಮಾಜವಾದಿ ಆಗಿರಲಿಲ್ಲ. ಈಗಲೂ ಅವರಿಗೆ ಕಾರಿಲ್ಲ ಎಂದು ಹೇಳಿದರು.
ನಾನು ಕಾಂಗ್ರೆಸ್‍ನಲ್ಲಿ ವಿದ್ಯಾರ್ಥಿ ದೆಸೆಯಿಂದಲೂ ಇದ್ದೇನೆ. ಹಲವು ಸರ್ಕಾರಗಳ ರಚನೆಗೆ ಪಾತ್ರ ವಹಿಸಿದ್ದೇನೆ. ಚುನಾವಣೆಯಲ್ಲಿ ಸ್ಪರ್ಧೆ ಮಾಡಲು ನನಗೆ ಯಾವುದೇ ಭಯವಿಲ್ಲ. ಸೈಟು ಕಳ್ಳತನ ಮಾಡಿ ಮಾರಾಟ ಮಾಡುವವನು ನನ್ನ ಬಗ್ಗೆ ಮಾತನಾಡುತ್ತಾನೆ. ನಾನು ಎಂದಿಗೂ ಸ್ವಾಭಿಮಾನ ಬಿಟ್ಟು ಸಹನೆ ಕಳೆದುಕೊಂಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಾನು ಅಧಿಕಾರಕ್ಕಾಗಿ ಯಾರ ಬಳಿಯೂ ಭಿಕ್ಷೆ ಬೇಡುವವನಲ್ಲ. ಸ್ವಾಭಿಮಾನ ಬಿಟ್ಟು ಬದುಕುವುದು ಇಲ್ಲ. ಶಿಕ್ಷಣ ಮಾಫಿಯಾ ನಡೆಸಿದವರು ಹೆಂಡ, ಸಾರಾಯಿ ಮಾರುವವರ ಬಗ್ಗೆ ಮಾತನಾಡುತ್ತಾರೆ. ಹೆಂಡ, ಸಾರಾಯಿ ಮಾರುವವರು ಎಂದಿಗೂ ಸರ್ಕಾರಕ್ಕೆ ಮೋಸ ಮಾಡಿಲ್ಲ. 36,000 ಕೋಟಿ ರೂ. ತೆರಿಗೆ ಕಟ್ಟುತ್ತಿದ್ದಾರೆ ಎಂದು ಗುಡುಗಿದ್ದಾರೆ.
ದೇವರಾಜು ಅರಸುರವರ ಕಾರಿನಲ್ಲಿ ಕುಳಿತರೆ ನೀವು ದೇವರಾಜು ಅರಸು ಆಗುವುದಿಲ್ಲ. ಅವರ ಚಿಂತನೆಗಳನ್ನು ಅನುಷ್ಠಾನಕ್ಕೆ ತರಬೇಕು. ಅವರ ಮನಸ್ಥತಿ ನಿಮ್ಮಲ್ಲು ಬರಬೇಕು ಈ ಹಿಂದೆ ಕಾಂಗ್ರೆಸ್ಸಿನ ಸಭೆಯಲ್ಲಿ ತಾವು ಅರಸು ಮೊಮ್ಮಗ ಸೂರಜ್ ಹೆಗಡೆಯನ್ನು ವಿಧಾನಪರಿಷತ್ ಸದಸ್ಯರನ್ನಾಗಿ ಮಾಡುವಂತೆ ಸಲಹೆ ನೀಡಿದ್ದೆ. ಆದರೆ ಸಿಎಂ ಮಾಡಲಿಲ್ಲ ಎಂದು ಹರಿಪ್ರಸಾದ್ ಸಿದ್ದರಾಮಯ್ಯ ವಿರುದ್ಧ ಪರೋಕ್ಷ ಅಸಮಾಧಾನ ವ್ಯಕ್ತಪಡಿಸಿದರು. ಹಿರಿಯ ಅನುಭವಿ ರಾಜಕಾರಣಿ
ಪರಮೇಶ್ವರ್ ಅವರನ್ನು ಉಪಮುಖ್ಯಮಂತ್ರಿ ಮಾಡದೇ ಇರುವುದು ಒಪ್ಪುವಂತ ವಿಚಾರ ಅಲ್ಲ. ಇದು ತಲೆ ತಗ್ಗಿಸುವ ವಿಷಯ. ರಾಜ್ಯದಲ್ಲಿ ಅತೀ ಹೆಚ್ಚು ಕಾಲ ಪರಮೇಶ್ವರ್ ಪಕ್ಷದ ಅಧ್ಯಕ್ಷರಾಗಿ ಕೆಲಸ ಮಾಡಿದಂತವರು ಮುಖ್ಯಮಂತ್ರಿಯಾಗುವ ಎಲ್ಲಾ ಅರ್ಹತೆ ಕೂಡ ಅವರಿಗಿತ್ತು. ಅವರಿಗೆ ಉಪಮುಖ್ಯಮಂತ್ರಿ ಸ್ಥಾನಕ್ಕೆ ಹಿಂಬಡ್ತಿ ನೀಡಲಾಯಿತು. ಮತ್ತೆ ಅವಕಾಶ ಸಿಕ್ಕಾಗ ಮುಖ್ಯಮಂತ್ರಿ ಮಾಡಲಿಲ್ಲ ಕೊನೆಗೆ ಉಪ ಮುಖ್ಯಮಂತ್ರಿಯನ್ನು ಮಾಡಲಿಲ್ಲ. ಸತೀಶ್ ಜಾರಕಿಹೊಳಿ ಸದ್ಯದ ಕಾಂಗ್ರೆಸ್ ಪಕ್ಷದ ಬಲಿಷ್ಠ ನಾಯಕರು ಅವರನ್ನು ಇದೇ ರೀತಿ ಕಡೆಗಣಿಸಲಾಯಿತು. ಅಲ್ಪಸಂಖ್ಯಾತರನ್ನು ಮುಖ್ಯಮಂತ್ರಿಯನ್ನಾಗಿ ಮಾಡದಿರುವುದು ಸರಿಯಲ್ಲ ಎಂದರು.
ನನ್ನನ್ನು ಮಂತ್ರಿ ಮಾಡದೇ ಇರುವುದಕ್ಕೆ ಮುಖ್ಯಮಂತ್ರಿಯವರಿಗೆ ಧನ್ಯವಾದ ಸಲ್ಲಿಸುತ್ತೇನೆ. ಒಂದು ವೇಳೆ ಸಚಿವನಾಗಿದ್ದರೆ ನಿಮ್ಮನ್ನೆಲ್ಲಾ ಭೇಟಿ ಮಾಡಲು ಆಗುತ್ತಿರಲಿಲ್ಲ. ಮುಂದಿನ ದಿನಗಳಲ್ಲೂ ನಾನು ಸಚಿವನಾಗುತ್ತೇನೆ ಎಂದು ಯಾರೂ ಭಾವಿಸಿಕೊಳ್ಳಬೇಡಿ. ಮತ ಹಾಕಲು, ಹಣ ನೀಡಲು ನೀವು ಬೇಕು. ಅಧಿಕಾರ ಅನುಭವಿಸಲು ನೀವು ಬೇಕು ಎಂಬಂತಾಗಿದೆ ಎಂದು ಮನಸ್ಸೊ ಇಚ್ಚೆ ವಾಗ್ದಾಳಿ ಮಾಡಿದರು.
ಬಿಲ್ಲವ, ಈಡಿಗ ಸಮುದಾಯದವರು ದೇಶದ ವಿವಿಧ ರಾಜ್ಯಗಳಲ್ಲಿ ಜನಸಂಖ್ಯೆ ಹೊಂದಿದಂತಹ ಸಮುದಾಯ. ಈ ಸಮುದಾಯಕ್ಕೆ ಅಧಿಕಾರ ನೀಡದೇ ವಂಚಿಸಿರುವುದು ಸರಿಯಲ್ಲ. ಈ ರೀತಿಯಾಗಿ ದುರಹಂಕಾರದಿಂದ ಅಧಿಕಾರ ಮಾಡಿದವರು ಸಾಕಷ್ಟು ಮಂದಿ ನಾಯಕರು ಸೋತು ಮನೆ ಸೇರಿದ್ದಾರೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯವರು, ದಲಿತರು, ಅಲ್ಪಸಂಖ್ಯಾತರನ್ನು ಕಡೆಗಣಿಸಿದ್ದರು. ಅದಕ್ಕೆ ಪಾಠ ಕಲಿತಿದ್ದಾರೆ ಎಂದರು.
ಒಟ್ಟಿನಲ್ಲಿ ಬೆಂಗಳೂರು ಆರಮನೆ ಮೈದಾನದಲ್ಲಿ ನೆಡದ ಈಡಿಗ ಹಾಗೂ ಅದರ ಉಪಪಂಗಡಗಳ ಸಮುದಾಯಗಳ ಸಮಾವೇಸದ ಪೋರ್ವಭಾವಿ ಸಭೆಯಲ್ಲಿ ಬಿ ಕೆ ಹರಿ ಪ್ರಸಾದ್ ಸಿ ಎಂ ಸಿದ್ಧ ರಾಮಯ್ಯ ನವರ ವಿರುದ್ಧ ಸಿಡಿಗುಂಡಿನಂತೆ ಭಾಷಣದಲ್ಲೆ ವಾಗ್ದಾಳಿಮಾಡಿ ತಮ್ಮ ಸಮುದಾಯಕ್ಕೆ ಅದ ಅನ್ಯಾಯವನ್ನು ಹೊರ ಹಾಕಿದ್ದಾರೆ ಬಿ ಕೆ ಹರಿ ಪ್ರಸಾದ್
ಬೆಂಗಳೂರಿನಲ್ಲಿ ಸೆಪ್ಟೆಂಬರ್ 9ರಂದು ನೆಡೆದ ಈಡಿಗ ಹಾಗೂ ಅದರ ಉಪಪಂಗಡಗಳ ಸಮುದಾಯಗಳ ಸಮಾವೇಶದ ಪೂರ್ವಭಾವಿ ಸಮುದಾಯದ ಸಭೆಯಲ್ಲಿ ಸೇರಿದ ಜನಸ್ತೋಮ
ಸುಧೀರ್ ವಿಧಾತ , ಶಿವಮೊಗ್ಗ