ಬೆಂಗಳೂರು: ಐಪಿಎಲ್ ಟಿಕೆಟ್ ಅಕ್ರಮ ಮಾರಾಟ ದಂಧೆ, ಪೊಲೀಸರೇ ಕಾಳಸಂತೆಕೋರರ.!?
ASHWASURYA/SHIVAMOGGA

news.ashwasurya.in
ಅಶ್ವಸೂರ್ಯ/ಬೆಂಗಳೂರು: ಬೆಂಗಳೂರಿನಲ್ಲಿ ಐಪಿಎಲ್ ಬ್ಲಾಕ್ ಟಿಕೆಟ್ ಮಾರಾಟ ದಂಧೆಯಲ್ಲಿ ಪೊಲೀಸ್ ಕಾನ್ಸ್ಟೇಬಲ್ಗಳು ಭಾಗಿಯಾಗಿರುವುದು ಬೆಳಕಿಗೆ ಬಂದಿದೆ. ಟಿಕೆಟ್ ಮಾರಾಟ ಮಾಡುವಾಗಲೆ ಇಬ್ಬರು ಕಾನ್ಸ್ಟೇಬಲ್ಗಳು ಸಿಕ್ಕಿಬಿದ್ದಿದ್ದು ಪವಿತ್ರ ಖಾಕೀಗೆ ಕಲೆ ಅಂಟಿಸಿದ್ದಾರೆ ಖದೀಮರು.!ಈ ಅಕ್ರಮ ಟಿಕೆಟ್ ಮಾರಾಟ ದಂಧೆಯಲ್ಲಿ ಹಿರಿಯ ಅಧಿಕಾರಿಗಳು ಭಾಗಿಯಾಗಿರುವ ಶಂಕೆ ಕೂಡ ವ್ಯಕ್ತವಾಗಿದೆ.!
ಕಳೆದ ಮೇ 17 ರಂದು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್ ಸಿಬಿ ಹಾಗೂ ಕೆ.ಕೆ.ಆರ್.ಪಂದ್ಯ ನಿಗದಿಯಾಗಿತ್ತು. ಈ ಪಂದ್ಯಾವಳಿಯ ಟಿಕೆಟ್ಗಾಗಿ ಸಾಕಷ್ಟು ಬೇಡಿಕೆ ಕೂಡ ಇತ್ತು. ಇದನ್ನೆ ಆಸ್ತ್ರಮಾಡಿಕೊಂಡ ಇಬ್ಬರು ಖದೀಮ ಪೊಲೀಸರು ಸುಮಾರು 61 ಟಿಕೆಟ್ಗಳನ್ನು ಕಾಳಸಂತೆಯಲ್ಲಿ ಮಾರಾಟ ಮಾಡಲು ಬಂದಾಗಲೇ ಕರ್ತವ್ಯದಲ್ಲಿದ್ದ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದಾರೆ. ಕೆಎಸ್ಸಿಎ ಅಥವಾ ಡಿಎನ್ಎ ಮೂಲಕ ಹಿರಿಯ ಅಧಿಕಾರಿಗಳು ಟಿಕೆಟ್ ಪಡೆದು ತಮ್ಮ ಅಧಿಕಾರದಲ್ಲಿದ್ದ ಅಮಾಯಕ ಇಬ್ಬರು ಪೊಲೀಸ್ ಪೆದೆಗಳ ಮೂಲಕ ಕಾಳಸಂತೆಯಲ್ಲಿ ಟಿಕೆಟ್ ಮಾರಾಟ ಮಾಡಿಸಿದ್ದಾರೆ ಎನ್ನುವುದು ಬಲವಾಗಿ ಕೇಳಿಬರುತ್ತಿದೆ.ಪ್ರತಿ ಐಪಿಎಲ್ ಪಂದ್ಯಾವಳಿಯಲ್ಲು 150 ಟಿಕೆಟ್ ಪಡೆದು ಬ್ಲಾಕ್ ನಲ್ಲಿ ಮಾರಾಟ ಮಾಡಿಸಲಾಗುತ್ತಿತ್ತು ಎನ್ನುವುದು ತಿಳಿದು ಬಂದಿದೆ.

ಪ್ರತಿ ಪಂದ್ಯಾವಳಿಯ 1200 ರೂಪಾಯಿ ಮುಖ ಬೆಲೆಯ ಟಿಕೆಟ್ ಅನ್ನು 5 ಸಾವಿರಕ್ಕೆ ಹಾಗೂ 2200 ರೂಪಾಯಿ ಮುಖ ಬೆಲೆಯ ಟಿಕೆಟ್ ಅನ್ನು 8 ಸಾವಿರಕ್ಕೆ ಮಾರಾಟವಾಗಿದೆ. ಒಂದೊಂದು ಮ್ಯಾಚ್ ನಿಂದ ಸುಮಾರು 80 ಲಕ್ಷದಿಂದ 1 ಕೋಟಿವರೆಗೆ ಪೊಲೀಸ್ ಸಿಬ್ಬಂದಿ ಹಣ ಮಾಡಿರೋ ಬಗ್ಗೆ ಮಾಹಿತಿ ಸಿಕ್ಕಿದೆ.
ಹಿರಿಯ ಅಧಿಕಾರಿಗಳೇ ಆರೋಪಿ ಪೊಲೀಸರಾದ ವೆಂಕಟಗಿರಿ ಗೌಡ ಹಾಗೂ ರವಿಚಂದ್ರಗೆ ಟಿಕೆಟ್ ನೀಡಿದ್ದಾರೆ. ಈ ಟಿಕೆಟ್ ಪಡೆದು ಸುರೇಶ್ ಮೂಲಕ ವಿಜಯನಗರ ಬಳಿ ಟಿಕೆಟ್ ಮಾರಾಟಕ್ಕೆ ಬಂದಿದ್ದ ಸುರೇಶ್ ,ಶಂಕರ್ ಹಾಗೂ ರವಿಚಂದ್ರ. ಮಪ್ತಿಯಲ್ಲಿದ್ದ ಗೋವಿಂದರಾಜನಗರ ಪೊಲೀಸರಿಗೆ ಸಾರ್ ನಿಮಗೆ ಟಿಕೆಟ್ ಬೇಕಾ ಎಂದು ಕೇಳಿದ್ದರು. ಟಿಕೆಟ್ ಖರೀದಿ ಮಾಡಿದ ಪೊಲೀಸರು ಮತ್ತಷ್ಟು ಟಿಕೆಟ್ ತರಿಸುವಂತೆ ಆರೋಪಿಗಳಿಗೆ ಹೇಳಿದ್ದಾರೆ.

ಯಾವಾಗ ಹೆಚ್ಚಿನ ಟಿಕೆಟ್ ತರಿಸಿದಾಗ ರೆಡ್ ಹ್ಯಾಂಡ್ ಆಗಿ ಹಿಡಿದುಕೊಂಡು ಗೋವಿಂದರಾಜನಗರ ಠಾಣೆಗೆ ಕರೆದುಕೊಂಡು ಹೋಗಿದ್ದಾರೆ. ಬಳಿಕ ಗೋವಿಂದರಾಜನಗರ ಪೊಲೀಸ್ ಠಾಣೆಯಲ್ಲಿ ಎಫ್ ಐಆರ್ ದಾಖಲಿಸಿ ಆರೋಪಿ ಗಳಾದ ಶಂಕರ್ ,ಸುರೇಶ್ನನ್ನು ವಿಚಾರಣೆ ಮಾಡಿದಾಗ ಪೊಲೀಸರು ಅಸಲಿ ಸತ್ಯ ತಿಳಿದುಬಂದಿದೆ. ವಿಚಾರಣೆಯ ವೇಳೆ ಸುರೇಶ್ ಪೊಲೀಸ್ ಪೆದೆಗಳಾದ ವೆಂಕಟಗಿರಿಗೌಡ ಹಾಗೂ ರವಿಚಂದ್ರ ಅವರು ನಮಗೆ ಟಿಕೆಟ್ ಕೊಟ್ಟು ಹೆಚ್ಚಿನ ಬೆಲೆಗೆ ಮಾರಾಟ ಮಾಡಿಸುತ್ತಿದ್ದಾರೆ ಎಂದು ಬಾಯಿಬಿಟ್ಟಿದ್ದಾರೆ. ಆಗ ಇಬ್ಬರು ಪೊಲೀಸ್ ಪೆದೆಗಳ ಬಗ್ಗೆ ಮಾಹಿತಿ ಕಲೆ ಹಾಕಿ ,ವಿಚಾರಣೆಗೆ ಹಾಜರಾಗಲ್ಲೂ ನೊಟೀಸ್ ಜಾರಿ ಮಾಡಿದ್ದಾರೆ.
ಗೋವಿಂದರಾಜನಗರ ಪೊಲೀಸರಿಗೆ ತನಿಖೆ ವೇಳೆ ಮಹತ್ವದ ಅಂಶ ಪತ್ತೆಯಾಗಿದ್ದು ಆರೋಪಿಗಳು ಟಿಕೆಟ್ ಮಾರಾಟ ಮಾಡಲು ಪ್ರತ್ಯೇಕ ವಾಟ್ಸಪ್ ಗ್ರೂಪ್ ಕೂಡ ರಚಿಸಿದ್ದರಂತೆ. ಕಳ್ಳ ವ್ಯವಹಾರದ ಬಗ್ಗೆ ವಾಟ್ಸಪ್ ಗ್ರೂಪ್ ನಲ್ಲಿ ಮತ್ತಷ್ಟು ಮಾಹಿತಿ ಪತ್ತೆಯಾಗಿದೆ. ದುಬಾರಿ ಬೆಲೆಗೆ ಟಿಕೆಟ್ ಮಾರಾಟ ಮಾಡಿ ಅಕ್ರಮವಾಗಿ ಹಣ ಸಂಪಾದನೆ ಮಾಡೋ ಮಾರ್ಗ ಹಿಡಿದಿದ್ದರು.
ಸದ್ಯ ಪವಿತ್ರ ಪೊಲೀಸ್ ಇಲಾಖೆ ಮರ್ಯಾದೆ ತೆಗೆದ ಇಬ್ಬರು ಪೊಲೀಸ್ ಪರದೆಗಳ ಅಮಾನತ್ತಿಗೆ ಪಶ್ಚಿಮ ವಿಭಾಗ ಡಿಸಿಪಿ ಶಿಫಾರಸ್ಸು ಮಾಡಿದ್ದಾರೆ. ಇದರ ಹಿಂದೆ ಹಿರಿಯ ಅಧಿಕಾರಿಗಳು ಭಾಗಿಯಾಗಿರುವ ಶಂಕೆ ಕೂಡ ಇದ್ದು ,ತನಿಖೆ ಮುಂದುವರೆದಿದೆ. ಗೋವಿಂದರಾಜನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅದೇನೇ ಇರಲಿ ತಮ್ಮ ಅಧಿಕಾರದ ದರ್ಪದಿಂದ ಹಣದ ದುರಾಸೆಗೆ ತಮ್ಮ ಕೈಕೆಳಗಿನ ಅಮಾಯಕ ಪೊಲೀಸರನ್ನು ಬಳಸಿಕೊಂಡು ಬಲಿಪಶು ಮಾಡಿರುವ ಅಧಿಕಾರಿಗಳನ್ನು ಮೊದಲು ಮಟ್ಟಹಾಕಿ. ಅಕ್ರಮ ದಂಧೆಕೋರರನ್ನು ಮಟ್ಟಹಾಕಬೇಕಾದ ಅಧಿಕಾರಿಗಳೆ ಅಕ್ರಮ ದಂಧೆಗೆ ಇಳಿದರೆ ಸಾಮಾನ್ಯ ನಾಗರಿಕರ ಕಥೆ ಏನು.! ಜೊತೆಗೆ ರಾಜ್ಯದಲ್ಲಿ ಪವಿತ್ರ ಖಾಕೀತೊಟ್ಟು ದಕ್ಷತೆಯಿಂದ ಕರ್ತವ್ಯ ನಿರ್ವಹಿಸುತ್ತಿರುವ ಪೋಲಿಸ್ ಇಲಾಖೆ ಇಂತಹ ಬೆರಳೆಣಿಕೆಯ ನೀಚರಿಂದ ತಲೆ ತಗ್ಗಿಸುವಂತಾಗಿದ್ದು ಮಾತ್ರ ದುರಂತವೆ ಹೌದು.


