ಮುಂಬಯಿಯ ಗಗನಸಖಿ ರೂಪಾಲ್ ಓಗ್ರೆ ಕೊಲೆ ಪ್ರಕರಣ: ಜೈಲಿನಲ್ಲೇ ಆತ್ಮಹತ್ಯೆಗೆ ಶರಣಾದ ಕೊಲೆ ಆರೋಪಿ!!!

ಗಗನಸಖಿ ಹತ್ಯೆ ಪ್ರಕರಣ: ಜೈಲಿನಲ್ಲೇ ಆತ್ಮಹತ್ಯೆಗೆ ಶರಣಾದ ಆರೋಪಿ!!!

ಕಳೆದ ಒಂದು ವಾರದ ಹಿಂದೆ ಮುಂಬಯಿಯಲ್ಲಿ ಗಗನಸಖಿ ತರಬೇತಿ ಪಡೆಯುತ್ತಿದ್ದ ರೂಪಾಲ್ ಓಗ್ರೆ ಹತ್ಯೆ ಪ್ರಕರಣದ ಆರೋಪಿ ಮುಂಬೈನ ಜೈಲಿನಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ.
ಆರೋಪಿ ವಿಕ್ರಮ್ ಅತ್ವಾಲ್ ತನ್ನ ಪ್ಯಾಂಟ್ ನಿಂದಲೇ ಜೈಲಿನೊಳಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಪೊಲೀಸ್ ಮೂಲಗಳು ತಿಳಿಸಿವೆ.
ಛತ್ತೀಸ್‌ಗಢ ಮೂಲದ ರೂಪಲ್ ಓಗ್ರೆ ಸೆಪ್ಟೆಂಬರ್ ಮೂರರಂದು ಉಪನಗರ ಅಂಧೇರಿಯ ಮರೋಲ್ ಪ್ರದೇಶದಲ್ಲಿ ತನ್ನ ಅಕ್ಕನವರು ವಾಸವಾಗಿದ್ದ ಬಾಡಿಗೆ ಫ್ಲಾಟ್‌ನಲ್ಲಿ ಕೊಲೆಯಾಗಿ ಹೋಗಿದ್ದರು ಈಕೆಯ ಶವ ಕುತ್ತಿಗೆ ಸೀಳಿದ ರೀತಿಯಲ್ಲಿ ರಕ್ತದ ಮಡುವಿನಲ್ಲಿ ಬಿದ್ದಿದ್ದರು.
ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರ ತಂಡ ಅದೇ ಫ್ಲಾಟ್ ನಲ್ಲಿ ಕೆಲಸ ಮಾಡುತ್ತಿದ್ದ ವಿಕ್ರಮ್ ಅತ್ವಾಲ್ ನನ್ನ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ ವೇಳೆ ತಾನೆ ಹತ್ಯೆ ಮಾಡಿರುವುದಾಗಿ ಒಪ್ಪಿಕೊಂಡಿದ್ದ ಅದರಂತೆ ಆತನನ್ನು ನ್ಯಾಯಲಕ್ಕೆ ಹಾಜರು ಪಡಿಸಿ ಹೆಚ್ಚಿನ ತನಿಖೆಗಾಗಿ ಸೆಪ್ಟೆಂಬರ್ 8ರ ವರೆಗೆ ಪೋಲಿಸರು ತಮ್ಮ ವಶಕ್ಕೆ ಪಡೆದಿದ್ದರು.ಆರೋಪಿಯನ್ನು ಅಂಧೇರಿ ಪೊಲೀಸ್ ಠಾಣೆಯ ಲಾಕಪ್ ನಲ್ಲಿ ಇರಿಸಲಾಗಿತ್ತು. ಶುಕ್ರವಾರ ಅಂಧೇರಿ ಪೊಲೀಸ್ ಠಾಣೆಯ ಲಾಕಪ್ ನಲ್ಲಿ ತನ್ನ ಪ್ಯಾಂಟ್ ನಿಂದಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೋಲಿಸ್ ಮೂಲಗಳು ತಿಳಿಸಿವೆ.

ಮುಂಬೈನ ಮರೋಲ್ ಫ್ಲಾಟ್‌ನಲ್ಲಿ ಭಾನುವಾರ ಗಗನಸಖಿ ರೂಪಲ್ ಓಗ್ರೆಯನ್ನು ಕೊಂದ 40 ವರ್ಷದ ಆರೋಪಿ ಹೌಸ್‌ಕೀಪಿಂಗ್ ಸಿಬ್ಬಂದಿ ವಿಕ್ರಮ್ ಅತ್ವಾಲ್, ಅಂಧೇರಿಯಲ್ಲಿ ಪೊಲೀಸ್ ಲಾಕಪ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ!! ಎಂದು ಹಿರಿಯ ಐಪಿಎಸ್ ಅಧಿಕಾರಿಯೊಬ್ಬರು ಮಾಧ್ಯಮದ ಮಂದಿಗೆ ತಿಳಿಸಿದ್ದಾರೆ.
ಆತನ ಪೊಲೀಸ್ ಕಸ್ಟಡಿಯನ್ನು ವಿಸ್ತರಿಸುವಂತೆ ಕೋರಿ ಪೊವಾಯಿ ಪೊಲೀಸರು ಶುಕ್ರವಾರ ನ್ಯಾಯಾಲಯದ ಮುಂದೆ ಹಾಜರುಪಡಿಸಬೇಕಿತ್ತು.
ನ್ಯಾಯಲಯದ ಮುಂದೆ ಹೋಗುವ ಮೊದಲೇ ತನ್ನ ಕೈಯಾರೆ ಉಸಿರುನಿಲ್ಲುಸಿಕೊಂಡ ಆರೋಪಿ ಸಾವಿನ ಮನೆ ಸೇರಿದ್ದಾನೆ!

ಅತ್ವಾಲ್ ಪೊವಾಯಿ ತುಂಗಾ ಗ್ರಾಮದ ನಿವಾಸಿಯಾಗಿದ್ದು, ಪತ್ನಿ ಮತ್ತು ಇಬ್ಬರು ಪುತ್ರಿಯರೊಂದಿಗೆ ವಾಸಿಸುತ್ತಿದ್ದ. ಮೂಲತಃ ಪಂಜಾಬ್‌ನವರಾದ ಅವನು ಕಳೆದ ಹನ್ನೆರಡು ವರ್ಷಗಳಿಂದ ಹಿಂದೆ ಮುಂಬೈಗೆ ಬಂದಿದ್ದ ಮತ್ತು ಕಳೆದ ಏಳು ತಿಂಗಳಿನಿಂದ ಮರೋಲ್ ಮೂಲದ ಎನ್‌ಜಿ ಕೋಆಪರೇಟಿವ್ ಹೌಸಿಂಗ್ ಸೊಸೈಟಿಯ ಹೌಸ್‌ಕೀಪಿಂಗ್ ವಿಭಾಗದಲ್ಲಿ ಸ್ವಚ್ಛತಾ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದ. ಅವನ ಪತ್ನಿಯೂ ಸ್ವಚ್ಛತಾ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದರು.
ಗುರುವಾರ ರಾತ್ರಿ ಅತ್ವಾಲ್‌ನ ಮಾನಸಿಕ ಸ್ಥಿತಿಯನ್ನು ಖಚಿತಪಡಿಸಿಕೊಳ್ಳಲು ಅಂಧೇರಿಯ ಲಾಕ್‌ಅಪ್‌ನಲ್ಲಿ ಅವನೊಂದಿಗೆ ಇದ್ದ ಇತರ ಆರೋಪಿಗಳ ಹೇಳಿಕೆಯನ್ನು ಪೊಲೀಸರು ಈಗ ದಾಖಲಿಸಿಕೊಳ್ಳಲಿದ್ದಾರೆ. ಈ ಕೃತ್ಯ ಮಾಡುವ ಮೊದಲು ಅವನು ಹೆಂಡತಿಗೆ ಏನಾದರೂ ಹೇಳಿದ್ದಾನೆಯೇ ಎಂದು ತಿಳಿಯಲು ಪೊಲೀಸರು ಅವನ ಹೆಂಡತಿಯ ಹೇಳಿಕೆಯನ್ನು ಸಹ ದಾಖಲಿಸಿಕೊಳ್ಳುತ್ತಾರೆ.
ಅಧಿಕಾರಿಗಳ ಪ್ರಕಾರ, ಭಾನುವಾರ ಬೆಳಿಗ್ಗೆ 11 ಗಂಟೆಗೆ, ಅತ್ವಾಲ್ ಶೌಚಾಲಯವನ್ನು ಸ್ವಚ್ಛಗೊಳಿಸುವ ನೆಪದಲ್ಲಿ ರೂಪಲ್ ಅವರ ಫ್ಲ್ಯಾಟ್‌ಗೆ ಪ್ರವೇಶಿಸಿದ್ದಾನೆ ನಂತರ ಆಕೆ ಒಬ್ಬಳೇ ಇದ್ದುದರಿಂದ ಆಕೆಯ ಕೋಣೆಗೆ ನುಗ್ಗಿ ಬಲತ್ಕಾರವಾಗಿ ಅತ್ಯಚಾರಕ್ಕೆ ಯತ್ನಿಸಿದ್ದಾನೆ ಜೊತೆಗೆ ಚಾಕುವಿನಿಂದ ಬೆದರಿಸಿ ರೂಪಾಲ್ ಮೇಲೆ ಬಲವಂತಪಡಿಸಿದ್ದಾನೆ. ಆದರೆ, ಆಕೆ ಪ್ರಬಲ ಪ್ರತಿರೋಧ ಒಡ್ಡಿದಳೆ. ಅತ್ವಾಲ್ ನ ಕೈಗಳಿಗೆ ಗಾಯಗಳಾಗಿವೆ, ಇನ್ನೂ ನನ್ನಿಂದ ಸಾಧ್ಯವಿಲ್ಲ ಎಂದು ತಿಳಿದವನು ತನ್ನ ಕೃತ್ಯ ಬಯಲಾಗಬಹುದೆಂದು ತಿಳಿದು ಅವಳ ಕುತ್ತಿಗೆಯನ್ನು ಸಿಳುವಲ್ಲಿ ಯಶಸ್ವಿಯಾಗಿದ್ದಾನೆ. ದಿಢೀರ್ ದಾಳಿಗೆ ತತ್ತರಿಸಿಹೊದ ರೂಪಾಲ್ ಸ್ನಾನಗೃಹದಲ್ಲೆ ರಕ್ತದ ಮಡುವಿನಲ್ಲಿ ಬಿದ್ದಿದ್ದಾಳೆ. ನಂತರ ನೆಲದ ಮೇಲಿದ್ದ ರಕ್ತವನ್ನು ಸ್ವಚ್ಛಗೊಳಿಸಿ ಸ್ಥಳದಿಂದ ಪರಾರಿಯಾಗಿದ್ದಾನೆ ಆರೋಪಿ ಎನ್ನಲಾಗಿದೆ. ನಂತರ, ಅವನು ತನ್ನ ಬಟ್ಟೆಗಳನ್ನು ತೊಳೆದವನು ಅಲ್ಲಿಂದ ಮನೆಗೆ ಹೋಗಿದ್ದಾನೆ ಹೆಂಡತಿ ಹೇಗೆ ಗಾಯಗಳಾಗಿವೆ ಎಂದು ಕೇಳಿದಾಗ ಅವಳಿಗೆ ಸುಳ್ಳು ಹೇಳಿದ್ದಾನೆ ಎಂದು ವರದಿಯಾಗಿದೆ. ಆರೋಪಿ ಅದ ಗಾಯಗಳಿಗೆ ಚಿಕಿತ್ಸೆ ಪಡೆಯಲು ವೈದ್ಯರನ್ನು ಭೇಟಿ ಮಾಡಿದ್ದಾನೆ.
ಸೋಮವಾರ ಬಂಧನದ ನಂತರ ಪೊಲೀಸರು ಮಂಗಳವಾರ ನ್ಯಾಯಾಲಯಕ್ಕೆ ಹಾಜರುಪಡಿಸಿದರು. ಅಂಧೇರಿ ನ್ಯಾಯಾಲಯ ಅವರನ್ನು ಸೆಪ್ಟೆಂಬರ್ 8ರವರೆಗೆ ಪೊಲೀಸ್ ಕಸ್ಟಡಿಗೆ ಒಪ್ಪಿಸಿತ್ತು.
ಆತ ಎಲ್ಲೋ ಎಸೆದಿದ್ದ ಆಯುಧ ಮತ್ತು ಆತ ಧರಿಸಿದ್ದ ಬಟ್ಟೆಗಳನ್ನು ವಶಪಡಿಸಿಕೊಳ್ಳಲು ಪೊವೈ ಪೊಲೀಸ್ ಅಧಿಕಾರಿಗಳು ಆತನ ಕಸ್ಟಡಿಯನ್ನು ಪಡೆದುಕೊಂಡಿದ್ದರು. ಆತನ ಬಟ್ಟೆಗಳು ಪ್ರಮುಖ ಸಾಕ್ಷಿಯಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಅತ್ವಾಲ್ ಅವರು ಐಪಿಸಿ ಸೆಕ್ಷನ್ 302 (ಕೊಲೆ) ಅಡಿಯಲ್ಲಿ ಆರೋಪ ಎದುರಿಸುತ್ತಿದ್ದ.
ಅಮಾಯಕ ಯುವತಿಯೊಬ್ಬಳನ್ನು ಹತ್ಯೆಮಾಡಿದ ಪಾಪಕ್ಕೆ ತನಗೆ ತಾನೆ ಸರಿಯಾದ ಶಿಕ್ಷೆಯನ್ನು ಕೊಟ್ಟುಕೊಂಡು ಸುಡುಗಾಡು ಸೇರಿದ್ದಾನೆ. ಮೃತ ಯುವತಿ ರೂಪಾಲ್ ಓಗ್ರೆಯ ಆತ್ಮಕ್ಕೂ ಆರೋಪಿಯ ಸಾವಿನ ಸುದ್ದಿ ಕೇಳಿ ಶಾಂತಿದೊರೆತಿರ ಬಹುದು.

ಸುಧೀರ್ ವಿಧಾತ, ಶಿವಮೊಗ್ಗ

Leave a Reply

Your email address will not be published. Required fields are marked *

Optimized by Optimole
error: Content is protected !!