ಝೀ ಕನ್ನಡ ಕಿರುತೆರೆ ವಾಹಿನಿಯ ಕಾಮಿಡಿ ಕಿಲಾಡಿಗಳು ಮೂಲಕ ಕರ್ನಾಟಕದ ಮನೆಮಾತಾಗಿದ್ದ ಹಾಸ್ಯ ಕಲಾವಿದ. ಕಾಮಿಡಿ ಕಿಲಾಡಿಗಳು ಕಾರ್ಯಕ್ರಮದ ಸೀಸನ್ 3ರ ವಿನ್ನರ್ ರಾಕೇಶ್ ಪೂಜಾರಿ ಸಾವಿಗೆ ಶರಣಾಗಿದ್ದಾರೆ. ನಿನ್ನೆಯತನಕವೂ ಆರೋಗ್ಯವಾಗಿದ್ದ ಕಲಾವಿದ ರಾಕೇಶ್ ಪುಜಾರಿ ಅವರಿಗೆ ಯಾವುದೇ ಅನಾರೋಗ್ಯವಿರಲಿಲ್ಲ ಮೆಹಂದಿ ಕಾರ್ಯಕ್ರಮದಲ್ಲಿ ಭಾಗವಹಿಸಿದ ನಂತರ ಆರೋಗ್ಯದಲ್ಲಿ ಏರುಪೇರಾಗಿ ಮಸಣ ಸೇರಿದ್ದು ಮಾತ್ರ ದುರಂತವೆ ಹೌದು.!

SHOCKING NEWS: ಜೀ ಕನ್ನಡ ಕಿರುತೆರೆಯ ಜನಪ್ರಿಯ ಶೋ ಕಾಮಿಡಿ ಕಿಲಾಡಿಗಳು ಸೀಸನ್ 3 ವಿನ್ನರ್ ರಾಕೇಶ್ ಪೂಜಾರಿ ಇನ್ನಿಲ್ಲ.!!
ASHWASURYA/SHIVAMOGGA
news.ashwasurya.in
ಅಶ್ವಸೂರ್ಯ/ಶಿವಮೊಗ್ಗ : ಕನ್ನಡ ಕಿರುತೆರೆ ಲೋಕಕ್ಕೆ ಸಿಡಿಲಬ್ಬರದ ಸುದ್ದಿಯೊಂದು ಸೂರ್ಯ ಉದಯದ ಮುನ್ನವೇ ಬಡಿದಪ್ಪಳಿಸಿದೆ.ಕನ್ನಡ ಕಿರುತೆರೆಯ ಝೀ ಕನ್ನಡ ವಾಹಿನಿಯ ಜನಪ್ರಿಯ ರಿಯಾಲಿಟಿ ಶೋ ಕಾಮಿಡಿ ಕಿಲಾಡಿಗಳು ಮೂಲಕ ಕರ್ನಾಟಕದ ಜನರ ಮನಮೆಚ್ಚಿದ ಮಗನಾಗಿ ಮನೆಮನೆಗೆ ತಲುಪಿದ್ದ, ಕಾಮಿಡಿ ಕಿಲಾಡಿ ಹಾಸ್ಯ ಕಾರ್ಯಕ್ರಮದ ಸೀಸನ್ 3ರ ವಿನ್ನರ್ ರಾಕೇಶ್ ಪೂಜಾರಿ ನಂಬಲು ಅಸಾಧ್ಯವೆಂಬಂತೆ ಸಾವಿನ ಮನೆ ಸೇರಿದ್ದಾರೆ.!!

ನಿನ್ನೆ ರಾತ್ರಿ ಊಟಮಾಡಿ ಮಲಗುವ ತನಕವು ಆರೋಗ್ಯವಾಗಿದ್ದ ರಾಕೇಶ್ ಮುಂಜಾನೆ ಹೊತ್ತಿಗೆ ಉಸಿರು ಚಲ್ಲಿದ್ದಾರೆ.!ಆರೋಗ್ಯವಾಗಿ ಗಟ್ಟಿಮುಟ್ಟಾಗಿದ್ದ ಕಾಮಿಡಿ ಕಲಾವಿದ ರಾಕೇಶ್ ಪೂಜಾರಿ ಅವರಿಗೆ ಯಾವುದೇ ಅನಾರೋಗ್ಯ ಇರಲಿಲ್ಲವಂತೆ.? ಅವರ ಆಪ್ತರು ನೀಡಿರುವ ಮಾಹಿತಿ ಪ್ರಕಾರ ನಿನ್ನೆ ಊರಲ್ಲಿ ನಡೆದ ಮದುವೆಯ ಮೆಹಂದಿ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿ ಅಲ್ಲಿ ಡ್ಯಾನ್ಸ್ ಕೂಡ ಮಾಡಿ ಎಲ್ಲರ ಜೊತೆ ಖುಷಿ ಖುಷಿಯಿಂದಲೆ ಮೆಹಂದಿ ಕಾರ್ಯವನ್ನು ಸಂಭ್ರಮಿಸಿದ್ದರು ಎಂದು ತಿಳಿದು ಬಂದಿದೆ. ರಾಕೇಶ್ ಅವರ ಸಾವಿನ ಸುದ್ದಿ ತಿಳಿದ ಕನ್ನಡ ಕಿರುತೆರೆ ಲೋಕ, ತುಳು ರಂಗಭೂಮಿ ಕಲಾವಿದರಿಗೂ ಆಘಾತವಾಗಿದೆ.

ಕಾಮಿಡಿ ಕಿಲಾಡಿ ಸೀಸನ್ “3”ರ ವಿನ್ನರ್ ರಾಕೇಶ್ ಪೂಜಾರಿ ಅವರ ನಿಧನದಿಂದ ಎಲ್ಲರಿಗೂ ಗರಬಡಿದಂತೆ ಆಗಿದ್ದು, ಅದೇ ಕಾರ್ಯಕ್ರಮದಲ್ಲಿ ಜಡ್ಜ್ ಆಗಿದ್ದ ನಟಿ ರಕ್ಷಿತಾ ಪ್ರೇಮ್ ಅವರು ಕೂಡ ‘ಮಿಸ್ ಯೂ ಮಗನೇ.. ನಾನು ಇನ್ಯಾವತ್ತೂ ನಿನ್ನ ಜೊತೆ ಮಾತನಾಡಲು ಆಗಲ್ಲ, ಕಾಮಿಡಿ ಕಿಲಾಡಿ ನನ್ನ ಹೃದಯಕ್ಕೆ ಹತ್ತಿರವಾದ ಕಾರ್ಯಕ್ರಮ. ನೀನು ಅದರಲ್ಲಿ ಒಂದು ಶಕ್ತಿ ಆಗಿದ್ದೆ. ನಿನ್ನಂತಹ ಅದ್ಭುತ ವ್ಯಕ್ತಿ ನಮ್ಮ ಹೃದಯಲ್ಲಿ ನೆಲೆಸಿರುತ್ತಾರೆ ಎಂದು ಪೋಸ್ಟ್ ಮಾಡಿದ್ದಾರೆ.

ಮೃತ ರಾಕೇಶ್ ಪೂಜಾರಿ ಅವರ ಆಪ್ತರೂ ಹೇಳುವ ಪ್ರಕಾರ, ರಾಕೇಶ್ ಪೂಜಾರಿ ಆರೋಗ್ಯವಾಗಿದ್ದರು. ನಿನ್ನೆ ಖಾಸಗಿ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡ ಬಳಿಕ ಅವರಿಗೆ ದಿಢೀರ್ ಬಿಪಿ ಲೋ ಆಗಿದೆ ಎಂದು ತಿಳಿದು ಬಂದಿದೆ. ತಕ್ಷಣ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಯಿತಾದರೂ ಅಲ್ಲಿ ಅವರು ಚಿಕಿತ್ಸೆಗೆ ಸ್ಪಂದಿಸದೆ ಸಾವಿನ ಮನೆ ಸೇರಿದ್ದಾರೆ.ಲೊ ಬಿಪಿಯಿಂದ ರಾಕೇಶ್ ಸಾವನಪ್ಪಿದ್ದಾರೆಂದು ವೈದ್ಯರು ಹೇಳಿದ್ದಾರೆಂದು ತಿಳಿದು ಬಂದಿದೆ.
ಜೀ ಕನ್ನಡ ವಾಹಿನಿಯ ಜನಪ್ರಿಯ ಹಾಸ್ಯ ಕಾರ್ಯಕ್ರಮ ‘ಕಾಮಿಡಿ ಕಿಲಾಡಿಗಳು ಸೀಸನ್ -3’ ರ ಗ್ರ್ಯಾಂಡ್ ಫಿನಾಲೆಯಲ್ಲಿ ವಿನ್ನರ್ ಆಗಿದ್ದ ಉಡುಪಿ ನಿವಾಸಿ ರಾಕೇಶ್ ಪೂಜಾರಿಗೆ ಟ್ರೋಫಿ ಮತ್ತು ಎಂಟು ಲಕ್ಷ ರೂಪಾಯಿ ನಗದು ಬಹುಮಾನವನ್ನು ಗೆದ್ದು ಬಿಗಿದ್ದರು. ರಾಕೇಶ್ ಪೂಜಾರಿ ಹೂಡೆ ನಿವಾಸಿಗಳಾದ ದಿನಕರ್ ಪೂಜಾರಿ ಮತ್ತು ಶಾಂಭವಿ ದಂಪತಿಗಳ ಪುತ್ರ. ರಾಕೇಶ್ ತಮ್ಮ ಶಾಲಾ ಶಿಕ್ಷಣವನ್ನು ಕೆಮ್ಮಣ್ಣು ಕಾರ್ಮೆಲ್ ಹೈಸ್ಕೂಲ್ ಮತ್ತು ಕಲ್ಯಾಣಪುರದ ಮಿಲಾಗ್ರಿಸ್ ಕಾಲೇಜಿನಲ್ಲಿ ಪೂರೈಸಿದ್ದರು.

ರಾಕೇಶ್ ತಮ್ಮ ವೃತ್ತಿ ಬದುಕನ್ನು ಮಂಗಳೂರಿನ ಖಾಸಗಿ ವಾಹಿನಿಯೊಂದರ ‘ಕಡ್ಲೆ ಬಜಿಲ್’ ತುಳು ಕಾರ್ಯಕ್ರಮದಲ್ಲಿ ನಟಿಸಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜನಪ್ರಿಯತೆ ಗಳಿಸಿದ್ದರು. ರಾಕೇಶ್ ಪೈಲ್ವಾನ್, ಇದು ಎಂತ ಲೋಕವಯ್ಯ ಕನ್ನಡ ಚಲನಚಿತ್ರದಲ್ಲಿ ಮತ್ತು ಪೆಟ್ಕಮ್ಮಿ, ಅಮ್ಮೆರ್ ಪೊಲೀಸ್, ಪಮ್ಮನ್ನೆ ದಿ ಗ್ರೇಟ್, ಉಮಿಲ್ ಮತ್ತು ಇಲ್ಲೊಕ್ಕೆಲ್ ತುಳುವಿನಲ್ಲಿ ನಾಟಕಗಳು, ಸ್ಕಿಟ್ಗಳು ಮತ್ತು ಚಲನಚಿತ್ರಗಳಲ್ಲಿಯೂ ನಟಿಸಿ ಜನಮನ ಗೆದ್ದಿದ್ದರು. ಅವರು ಬಲೆ ತೆಲಿಪಾಲೆ, ಮೇ 22, ಸ್ಟಾರ್, ತೂಯಿನಾಯೆ ಪೋಯೆ ಮುಂತಾದ ಕರಾವಳಿ ರಿಯಾಲಿಟಿ ಶೋಗಳಲ್ಲಿಯು ಭಾಗವಹಿಸಿದ್ದರಂತೆ.

ಕಾಮಿಡಿ ಕಿಲಾಡಿ ಸೀಸನ್ 3ರಲ್ಲಿ ಖ್ಯಾತ ಚಲನಚಿತ್ರ ನಿರ್ಮಾಪಕ ಯೋಗರಾಜ್ ಭಟ್, ನವರಸ ನಾಯಕ ನಟ ಜಗ್ಗೇಶ್ ಮತ್ತು ನಟಿ ರಕ್ಷಿತಾ ಪ್ರೇಮ್ ತೀರ್ಪುಗಾರರಾಗಿದ್ದರು, ಆನಂದ್ ಈ ಕಾರ್ಯಕ್ರಮದ ನಿರೂಪಕರಾಗಿ ನಡೆಸಿಕೊಟ್ಟಿದ್ದರು.
ಕನ್ನಡ ಕಿರುತೆರೆ ಮತ್ತು ಬೆಳ್ಳಿತೆರೆ ಹೆಸರಾಂತ ಜನಪ್ರಿಯ ಹಾಸ್ಯ ಕಲಾವಿದನನ್ನು ಕಳೆದುಕೊಂಡಿದ್ದು ಮಾತ್ರ ದುರಂತವೆ ಹೌದು.!


