ಯುಪಿಎಸ್‌ಸಿ ಪರೀಕ್ಷೆ : ಶಿವಮೊಗ್ಗದ ಮೇಘನಾಗೆ 425ನೇ ರ್‍ಯಾಂಕ್
ASHWASURYA/SHIVAMOGGA
news.ashwasurya.in
ಕನ್ನಡ ಸಾಹಿತ್ಯ ವಿಷಯವನ್ನು ಐಚ್ಛಿಕವಾಗಿ ತೆಗೆದುಕೊಂಡಿದ್ದ ಮೇಘನಾ ಐದನೇ ಬಾರಿಯ ಪ್ರಯತ್ನದಲ್ಲಿ ಯಶಸ್ಸು ಸಾಧಿಸಿದ್ದಾರೆ.
ಅಶ್ವಸೂರ್ಯ/ಶಿವಮೊಗ್ಗ: ಯುಪಿಎಸ್‌ಸಿ ಪರೀಕ್ಷೆಯಲ್ಲಿ ಕನ್ನಡ ಸಾಹಿತ್ಯ ವಿಷಯವನ್ನು ಐಚ್ಛಿಕವಾಗಿ ತೆಗೆದುಕೊಂಡಿದ್ದ ನಗರದ ಬಿ.ಎಂ. ಮೇಘನಾ ಅವರು 425ನೇ ರ್‍ಯಾಂಕ್ ಗಳಿಸಿದ್ದಾರೆ.

ಐದನೇ ಪ್ರಯತ್ನಕ್ಕೆ ಫಲ ಸಿಕ್ಕಿದೆ. ಕನ್ನಡ ಸಾಹಿತ್ಯ ವಿಷಯವನ್ನು ಐಚ್ಛಿಕ ವಿಷಯವಾಗಿ ತೆಗೆದುಕೊಂಡಿದ್ದೆ. ಪ್ರತಿದಿನ ಕನಿಷ್ಠ ಒಂದು ಗಂಟೆ ಓದುತ್ತಿದ್ದೆ. ಪ್ರತಿ ಬಾರಿಯೂ ನಿರಾಶೆ ಆಗುತ್ತಿತ್ತು. ತುಸು ಕಷ್ಟವಾದರೂ ಕನ್ನಡದಲ್ಲೇ ತೇರ್ಗಡೆಯಾಗಬೇಕೆಂದು ನಿರ್ಧರಿಸಿದ್ದೆ. ಸಾಮಾನ್ಯ ವಿಷಯವನ್ನು ಒತ್ತು ಕೊಟ್ಟು ಓದಿದ್ದರಿಂದ ಕನ್ನಡ ಸಾಹಿತ್ಯ ತಿಳಿದುಕೊಳ್ಳಲು ಸಹಕಾರಿಯಾಯಿತು. ನನ್ನ ಹಾದಿ ತುಂಬಾ ಕಠಿನವಾಗಿತ್ತು. ಈಗ ಸಂತೋಷ ಆಗುತ್ತಿದೆ. ಶಾಲಾ ದಿನದಿಂದಲೂ ಚೆನ್ನಾಗಿ ಓದುತ್ತಿದ್ದೆ. ಯುಪಿಎಸ್ಸಿಯಲ್ಲಿ ಕೆಲವು ಸೋತ ಬಳಿಕ ಆತ್ಮವಿಶ್ವಾಸವೇ ಕುಂದು ಹೋಗಿತ್ತು. ಆ ಸಂದರ್ಭದಲ್ಲಿ ಭಗವದ್ಗೀತೆ ಧ್ಯಾನ ಮಾಡುತ್ತಿದ್ದೆ. ನನ್ನ ಶ್ರಮಕ್ಕೆ ಇವತ್ತು ಪ್ರತಿಫಲ ಸಿಕ್ಕಿದೆ. ದೇವರ ಅಶೀರ್ವಾದ ಕೂಡ ಇದೆ ಎಂದು ಮೇಘನಾ ಪ್ರತಿಕ್ರಿಯಿಸಿದ್ದಾರೆ. ಇವರು ಹಿರಿಯ ವಕೀಲ ಮೋಹನ್ ಕುಮಾರ್ ಬಿ.ಜಿ. ಹಾಗೂ ನಿವೃತ್ತ ಪ್ರಾಧ್ಯಾಪಕಿ ಡಾ| ಎ.ಎಸ್.ವತ್ಸಲಾ ಅವರ ಪುತ್ರಿ


