ಹೊಸಮನೆ ಬಡಾವಣೆಯ ನಾಗರೀಕರ ಅನುಕೂಲಕ್ಕಾಗಿ ಪೊಲೀಸ್ ಚೌಕಿ ನಿರ್ಮಿಸಲು – ಮಹಾನಗರ ಪಾಲಿಕೆ ವಿಪಕ್ಷ ನಾಯಕಿ ರೇಖಾ ರಂಗನಾಥ್ ಅವರು ಇಂದು ಶಿವಮೊಗ್ಗ ಜಿಲ್ಲಾ ಪೋಲಿಸ್ ಅಧೀಕ್ಷಕರಿಗೆ ಮನವಿ ಸಲ್ಲಿಸಿದ್ದಾರೆ.

ಶಿವಮೊಗ್ಗ: ಹೊಸಮನೆ ಬಡಾವಣೆಯ ನಾಗರೀಕರ ಅನುಕೂಲಕ್ಕಾಗಿ ಪೊಲೀಸ್ ಚೌಕಿ ನಿರ್ಮಿಸಲು – ಮಹಾನಗರ ಪಾಲಿಕೆ ವಿಪಕ್ಷ ನಾಯಕಿ ರೇಖಾ ರಂಗನಾಥ್ ಅವರು ಇಂದು ಶಿವಮೊಗ್ಗ ಜಿಲ್ಲಾ ಪೋಲಿಸ್ ಅಧೀಕ್ಷಕರಿಗೆ ಮನವಿ ಸಲ್ಲಿಸಿದ್ದಾರೆ.

ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ಶಿವಮೊಗ್ಗ ನಗರದ ಹೊಸಮನೆ ಬಡಾವಣೆ ಹಾಗೂ ಶರಾವತಿ ನಗರದ ನಾಗರೀಕರ ಹಲವು ದಿನಗಳ ಬೇಡಿಕೆಯಾದ ಪೊಲೀಸ್ ಚೌಕಿ ನಿರ್ಮಾಣ ಮಾಡಲು ಅಹವಾಲುಗಳು ಬಂದಿದ್ದು, ಅದರಂತೆ ಈ ಎರಡು ಬಡಾವಣೆಯಲ್ಲಿ ಸುಮಾರು 26 ಸಾವಿರ ಜನಸಂಖ್ಯೆ ಇದೆ
ಈ ಭಾಗದಲ್ಲಿ ಮಧ್ಯಮ ವರ್ಗದವರು , ಬಡವರು, ಕೂಲಿ ಕಾರ್ಮಿಕರು, ಸಂಘಟಿತ ವಲಯದ ಜನರು ಅತಿ ಹೆಚ್ಚು ಸಂಖ್ಯೆಯಲ್ಲಿ ವಾಸಿಸುತ್ತಿದ್ದಾರೆ, ಜನರಿಗೆ ಅನುಕೂಲವಾಗಲು ಈ ಎರಡು ಬಡಾವಣೆಗಳ ಮಧ್ಯಭಾಗದಲ್ಲಿ ಅಂದರೆ ಚಾನಲ್ ಏರಿಯ ಮೇಲ್ಭಾಗದಲ್ಲಿ ಸಾಗರ ರಸ್ತೆಯಿಂದ 100 ಅಡಿ ರಸ್ತೆ ರಾಜೇಂದ್ರ ನಗರದ ವರೆಗೆ ಹಾದು ಹೋಗುವ ಸರ್ವಿಸ್ ರಸ್ತೆಯಲ್ಲಿ ನಾಗಪ್ಪ ದೇವಸ್ಥಾನ ಹಾಗೂ ಮಲೆ ಮಾದೇಶ್ವರ ದೇವಸ್ಥಾನದ ಸಮೀಪದಲ್ಲಿ ಸರ್ಕಾರಿ ಜಾಗವಿದ್ದು. ಈ ಜಾಗದಲ್ಲಿ ಪೊಲೀಸ್ ಚೌಕಿ ನಿರ್ಮಾಣ ಮಾಡುವುದರಿಂದ. ಈ ಭಾಗದ ಎರಡು ಬಡಾವಣೆಯ ನಾಗರೀಕರಿಗೆ ತುರ್ತು ದೂರು ದುಮ್ಮನಗಳಿಗೆ ಸ್ಪಂದಿಸಲು ತುಂಬಾ ಅನುಕೂಲಕರವಾಗಿರುತ್ತದೆ. ಈಗಾಗಲೇ ಎರಡು ಬಡಾವಣೆಗಳಲ್ಲಿ ಸ್ಮಾರ್ಟ್ ಸಿಟಿ ಕಾಮಗಾರಿಗಳು ಸಂಪೂರ್ಣಗೊಂಡಿದ್ದು ರಸ್ತೆಗಳಲ್ಲಿ ಅನೇಕ ಯುವಕರು ಬೈಕ್ ಗಳನ್ನು ಅತಿ ವೇಗವಾಗಿ ಓಡಿಸುವ ಮೂಲಕ ಸಾರ್ವಜನಿಕರಿಗೆ ಮತ್ತು ಸಣ್ಣ ಮಕ್ಕಳಿಗೆ ತೊಂದರೆ ಆಗುತ್ತಿದೆ ಜೊತೆಗೆ ಕೆಲವು ಮಾದಕ ವ್ಯಸನಿಗಳು ನಾಗರೀಕರಿಗೆ ಕಿರಿಕಿರಿ ಉಂಟು ಮಾಡುತ್ತಿದ್ದು ತಕ್ಷಣವೇ ನಾಗರೀಕರ ರಕ್ಷಣೆಗೆ ಅನುಕೂಲವಾಗಲು ಈ ಭಾಗದ ಕಾನೂನು ಸುವ್ಯವಸ್ಥೆ ಕಾಪಾಡಲು ಪೊಲೀಸ್ ಚೌಕಿ ನಿರ್ಮಾಣ ಮಾಡುವುದು ಅತಿ ಅವಶ್ಯಕವಾಗಿದ್ದು.
ತಾವುಗಳು ಒಮ್ಮೆ ಬಡಾವಣೆಗೆ ಭೇಟಿ ನೀಡಿ ಸ್ಥಳವನ್ನು ಪರಿಶೀಲಿಸಿ ಈ ಭಾಗದ ಜನರ ಹಲವು ದಿನಗಳ ಬೇಡಿಕೆ ಯಾದ ಪೊಲೀಸ್ ಚೌಕಿ ನಿರ್ಮಿಸಬೇಕೆಂದು ಇಂದು
ಮಹಾನಗರ ಪಾಲಿಕೆ ವಿಪಕ್ಷ ನಾಯಕಿ ರೇಖಾ ರಂಗನಾಥ್ ಅವರು ಶಿವಮೊಗ್ಗ ಜಿಲ್ಲಾ ಪೋಲಿಸ್ ಅಧೀಕ್ಷಕರಾದ ಶ್ರೀಯುತ ಜಿ ಕೆ ಮಿಥುನ್ ಕುಮಾರ್ ಅವರನ್ನು ‌ಬೇಟಿಯಾಗಿ
ಮನವಿ ಸಲ್ಲಿಸಿದ್ದಾರೆ

Leave a Reply

Your email address will not be published. Required fields are marked *

Optimized by Optimole
error: Content is protected !!