ವಿಧ್ಯಾರ್ಥಿ ಬದುಕಿನಲ್ಲೆ ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದ ಉಡುಪಿಯ ಶಿರ್ವ ಮೂಲದ ವಿದ್ಯಾರ್ಥಿನಿ ಚಿಕಿತ್ಸೆ ಫಲಕಾರಿಯಾಗದೆ ಬೆಂಗಳೂರಿನ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾಳೆ.
ಕ್ಯಾನ್ಸರ್ ಕಾಯಿಲೆಗೆ ಬಲಿಯಾದ ರಿಯಾನ್ನಾ
ಉಡುಪಿ : ರಿಯಾನ್ನಾ ಜೀನ್ ಡಿ’ಸೋಜಾ (20) ಕ್ಯಾನ್ಸರ್ ಮಾರಿಗೆ ಬಲಿಯಾದ ವಿದ್ಯಾರ್ಥಿನಿ. ತನ್ನ ಕಾಲೇಜಿನಲ್ಲಿ
ಪ್ರತಿಭಾನ್ವಿತ ವಿದ್ಯಾರ್ಥಿನಿಯಾಗಿದ್ದ ರಿಯಾನ್ನಾ ಕಳೆದ ವರ್ಷ ಕ್ಯಾನ್ಸರ್ ಕಾಯಿಲೆಗೆ ತುತ್ತಾಗಿದ್ದು ಮಣಿಪಾಲ್ ಮತ್ತು ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆಯುತ್ತಿದ್ದರು. ಆದರೆ ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವಾಗಲೆ ಸಾವಿನ ಮನೆ ಸೇರಿದ್ದಾರೆ.ಇನ್ನೂ ಸಾಕಷ್ಟು ವರ್ಷ ಬಾಳಿ ಬದುಕಬೇಕಾಗಿದ್ದ ಪ್ರತಿಭಾವಂತ ಕಾಲೇಜು ವಿಧ್ಯಾರ್ಥಿನಿ ರಿಯಾನ್ನ ಮೃತಪಟ್ಟಿದ್ದು ಮಾತ್ರ ದುರಂತವೆ ಹೌದು.ರಿಯಾನ್ನಾ ವಿದ್ಯಾಭ್ಯಾಸದೊಂದಿಗೆ ಪಠ್ಯೇತರ ಚಟುವಟಿಕೆಗಳಲ್ಲಿ ಕೂಡ ಮಂಚೂಣಿಯಲ್ಲಿದ್ದಂತ ಹುಡುಗಿ ಅತ್ಯುತ್ತಮ ನೃತ್ಯಪಟುವಾಗಿದ್ದರು ಕಳೆದ ಒಂದು ವರ್ಷದಿಂದ ಕ್ಯಾನ್ಸರ್ ಮಹಾಮಾರಿ ಈಕೆಯನ್ನು ಅವರಿಸಿತ್ತು ಚಿಕಿತ್ಸೆ ಪಡೆಯುತ್ತಿದ್ದರು.ಮತ್ತೊಮ್ಮೆ ವಿಧಿ ಆಟದ ಮುಂದೆ ಎಲ್ಲರೂ ತಲೆಬಾಗಲೆ ಬೇಕು ಎನ್ನುವುದು ಮತ್ತೊಮ್ಮೆ ಸಾಬೀತಾಗಿದೆ.
ಅದರೆ ಮುದ್ದಾದ ಮಗಳನ್ನು ಕಳೆದುಕೊಂಡ ಮನೆಯವರ ದುಃಖ ಹೇಳ ತೀರದಾಗಿದೆ. ಮತ್ತು ರಿಯಾನ್ನಾಳ ಕಾಲೇಜಿನ ಗೆಳತಿಯರ ಮತ್ತು ಬೋಧಕರ ವರ್ಗ ಕಂಬನಿ ಮಿಡಿದಿದ್ದಾರೆ
ಮಲಗಿದಲ್ಲೆ ಮೃತಪಟ್ಟ 23 ವರ್ಷದ ಯುವತಿ ಮಿತ್ರ ಶೆಟ್ಟಿ! ವಿಧಿ ನಿನೇಷ್ಟು ಕ್ರೂರಿ. ಸಂತೋಷವಾಗಿದ್ದ ಮನೆಯಲ್ಲಿ ಸೂತಕದ ಛಾಯೆ.
ಮೃತ ಯುವತಿ ಮಿತ್ರ ಶೆಟ್ಟಿ
ಬಂಟ್ವಾಳ : ಯುವತಿಯೋರ್ವಳು ಮಲಗಿದ್ದಲ್ಲೇ ಮೃತಪಟ್ಟ ಘಟನೆ ಬಂಟ್ವಾಳ ತಾಲೂಕಿನ ವಗ್ಗ ಸಮೀಪದ ಮದ್ವ ಗ್ರಾಮಾದಲ್ಲಿ ಕಳೆದ ಮಂಗಳವಾರ ರಾತ್ರಿ ನಡೆದಿರುವ ಬಗ್ಗೆ ವರದಿಯಾಗಿದೆ.
ಕಾವಳಮೂಡುರು ಗ್ರಾಮದ ಪುಳಿಮಜಲು ನಿವಾಸಿ ರಾಜು ಅವರ ಪುತ್ರಿ ಮಿತ್ರ ಶೆಟ್ಟಿ (23) ಮಲಗಿದಲ್ಲೆ ಉಸಿರುಚಲ್ಲಿದ ಯುವತಿ. ಎಂದಿನಂತೆ ಕೆಲಸದಿಂದ ಮನೆಗೆ ಬಂದ ಮಿತ್ರ ಶೆಟ್ಟಿ ತನ್ನ ದಿನನಿತ್ಯದ ಮನೆಯ ಕೆಲಸವನ್ನು ಮುಗಿಸಿಕೊಂಡು ರಾತ್ರಿ ಊಟ ಮಾಡಿ ಮಲಗಿದ್ದಾಳೆ.ಆದರೆ ಬೆಳಗ್ಗೆ ಮನೆಯವರೆಲ್ಲರೂ ಎದ್ದರು ಮಗಳು ಎಳದೆ ಇರುವುದನ್ನು ಗಮನಿಸಿದ ತಾಯಿ ಮಗಳನ್ನು ಎಳಿಸಲು ಮುಂದಾಗಿದ್ದಾರೆ ಎಷ್ಟೇ ಎಳಿಸಿದರು ಕರೆದರು ಸ್ಫಂದಿಸದ ಮಿತ್ರ ಶೆಟ್ಟಿ ಅವರನ್ನು ಮನೆಯವರು ಕೂಡಲೇ ಸ್ಥಳೀಯ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ ಆದರೆ ಇವಳನ್ನು ಪರೀಕ್ಷಿಸಿದ ವೈದ್ಯರು ಹುಡುಗಿ ಮೃತಪಟ್ಟಿದ್ದಾಳೆ ಎಂದು ಹೇಳಿದ್ದಾರೆ. ಸಾವಿಗೆ ಸ್ಪಷ್ಟವಾದ ಕಾರಣ ತಿಳಿದು ಬಂದಿಲ್ಲ.
ಈಕೆಯ ತಂದೆ ಮತ್ತು ಸಹೋದರ ಇಬ್ಬರೂ ಬೆಂಗಳೂರಿನಲ್ಲಿ ಕೆಲಸದಲ್ಲಿರುವ ಕಾರಣ ಮಿತ್ರ ಶೆಟ್ಟಿ ಮತ್ತು ಈಕೆಯ ತಾಯಿ ಉಡುಪಿ ಜಿಲ್ಲೆಯ ಕಾವಳಪಡೂರು ಗ್ರಾಮದ ಮದ್ವ ಕಂಬಲಡ್ಡದ ದೊಡ್ಡಮ್ಮನ ಮನೆಯಲ್ಲಿ ವಾಸವಾಗಿದ್ದರು. ಎಂದಿನಂತೆ ರಾತ್ರಿ ಊಟ ಮಾಡಿ ಅಮ್ಮನ ಜೋತೆಗೆ ಒಟ್ಟಿಗೆ ಮಲಗಿದ್ದಾಳೆ. ಬೆಳಿಗ್ಗೆ ಎದ್ದು ಅಮ್ಮ ನೋಡುವ ಹೊತ್ತಿಗೆ ನಿದ್ರೆಯಲ್ಲೆ ಉಸಿರು ನಿಂತಿದೆ.
ಕೂಡಲೇ ಆಸ್ಪತ್ರೆಗೆ ಕರೆದೊಯ್ದರು ಬದುಕಿಸಲು ಸಾಧ್ಯವಾಗಿಲ್ಲ ಮಿತ್ರ ಶೆಟ್ಟಿ ಮನೆಯಲ್ಲಿ ಮಲಗಿದ ಸ್ಥಳದಲ್ಲೇ ಇಹಲೋಕ ತ್ಯಜಿಸಿದ್ದಾರೆ. ಬಳಿಕ ಮೃತದೇಹವನ್ನು ದೇರಳಕಟ್ಟೆ ಖಾಸಗಿ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗಾಗಿ ಕೊಂಡೊಯ್ಯಲಾಗಿದೆ. ಆರಂಭದಲ್ಲಿ ಹೃದಯಾಘಾತದಿಂದ ಸಾವನ್ನಪ್ಪಿರಬಹುದು ಎಂದು ಹೇಳಲಾಗುತ್ತಿದ್ದರು ಬ್ರೈನ್ ಎಮರೇಜ್ ನಿಂದಲೂ ಸಾವು ಆಗಿರಬಹುದು ಎಂಬ ಸಂಶಯ ವ್ಯಕ್ತವಾಗಿದೆ, ಮೃತ ಮಿತ್ರ ಶೆಟ್ಟಿ ಅವರ ಮರಣೋತ್ತರ ಪರೀಕ್ಷೆಯ ವರದಿಯು ವೈದ್ಯರ ಕೈ ಸೇರಿದ ಬಳಿಕವೆ ಕಿರಿ ವಯಸ್ಸಿನಲ್ಲೇ ಸಾವಿಗೆ ಶರಣಾದ ಮಿತ್ರ ಶೆಟ್ಟಿ ಸಾವಿಗೆ ಸ್ಪಷ್ಟ ಕಾರಣ ಸಿಗಬಹುದು. ಬಂಟ್ವಾಳ ಗ್ರಾಮಾಂತರ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಿತ್ರ ಶೆಟ್ಟಿ ಮನೆಯ ಜವಾಬ್ದಾರಿ ಇರುವಂತಹ ಯುವತಿ ಅಮ್ಮನ ಮುದ್ದಿನ ಮಗಳು ಬಿ.ಸಿ.ರೋಡಿನ ವಕೀಲರೊಬ್ಬರ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದಳು. ತಾನಾಯಿತು ತನ್ನ ಕೇಲಸವಾಯಿತು ಎನ್ನುವಂತೆ ಬದುಕು ನಿಭಾಯಿಸುತ್ತಿದ್ದಂತ ಹುಡುಗಿ ಆತ್ಯಂತ ಸೌಮ್ಯ ಕ್ರಿಯಾಶೀಲ ಯುವತಿಯಾಗಿದ್ದ ಮಿತ್ರ ಶೆಟ್ಟಿ ಸಾಮಾಜಿಕವಾಗಿಯೂ ಗುರುತಿಸಿಕೊಂಡಿದ್ದಂತವರು
ಅದೇನೊ ಇತ್ತೀಚೆಗೆ ಯುವ ಸಮೂಹ ದಿಢೀರ್ ಸಾವಿಗೆ ಶರಣಾಗುತ್ತಿದ್ದಾರೆ. ಸಾವಿನ ಕಾರಣಗಳು ಸತ್ತವರ ಮನೆಯವರನ್ನೆ ದಂಗುಬಡಿಸಿವೆ
ಸುಧೀರ್ ವಿಧಾತ, ಶಿವಮೊಗ್ಗ