Headlines

ಬೆಂಗಳೂರು | ರಿಯಲ್ ಎಸ್ಟೇಟ್ ಉದ್ಯಮಿ ಹತ್ಯೆ ಪ್ರಕರಣ,ಬ್ಲಾಕ್‌ಮೇಲ್‌ಗೆ ಹೆದರಿ ಹೆಣ್ಣು ಕೊಟ್ಟ ಅತ್ತೆಯೆ ರಿವೆಂಜ್‌ಗೆ ಬಿದ್ದು ಅಳಿಯನಿಗೆ ಚಟ್ಟ ಕಟ್ಟಿದಳಾ.!?

ಅಶ್ವಸೂರ್ಯ/ಬೆಂಗಳೂರು: ಬ್ಲ್ಯಾಕ್‌ಮೇಲ್‌ ಮಾಡಿ ಯುವತಿಯನ್ನ ವಿವಾಹವಾಗಿದ್ದ ಉದ್ಯಮಿ ಬೆಂಗಳೂರು: ಹೆಸರಘಟ್ಟ ಬಳಿ ಬಿಜಿಎಸ್ ಲೇಔಟ್ ಬಳಿ ನಡೆದ ರಿಯಲ್ ಎಸ್ಟೇಟ್ ಉದ್ಯಮಿ ಜೊಲೆ ಪ್ರಕರಣಕ್ಕೆ ಸಂಭಂದಿಸಿದಙತೆ ದೊಡ್ಡ ಸುಳಿವು ಸಿಕ್ಕಿದೆ. ಹೆಣ್ಣು ಕೊಟ್ಟ ಅತ್ತೆಯೇ ತನ್ನ ಅಳಿಯನನ್ನು ಕೊಲೆಮಾಡುದ ವಿಚಾರ ಪೊಲೀಸರ ತನಿಖೆಯಿಂದ ಬಯಲಾಗಿದೆ. ಮಾಗಡಿ ಶಾಸಕ ಬಾಲಕೃಷ್ಣ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ಲೋಕನಾಥ್ ಸಿಂಗ್ ಮಾ.22ರಂದು ಕೊಲೆಯಾಗಿ ಹೋಗಿದ್ದ.!ಈ ಪ್ರಕರಣ ಮೇಲ್ನೋಟಕ್ಕೆ ಹಳೇ ವೈಷಮ್ಯದ ಹಿನ್ನಲೆಯಲ್ಲಿ ಅಥವಾ ನಟೋರಿಯಸ್ ರೌಡಿಗಳಿಂದ ಕೊಲೆಯಾಗಿರಬಹುದು ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದರು. ಆದರೆ ತನಿಖೆ ಕೈಗೊಂಡ ಪೊಲೀಸರಿಗೆ ಅಚ್ಚರಿ ಕಾದಿತ್ತು.! ಸ್ವಂತ ಅತ್ತೆಯೇ ಮಗಳ ಗಂಡನನ್ನು (ಅಳಿಯನನ್ನು ) ಕೊಲೆ ಮಾಡಿರುವುದು ಬೆಳಕಿಗೆಬಂದಿದೆ. 

ಕಳೆದ ಡಿಸೆಂಬರ್‌ನಲ್ಲಿ ರಿಯಲ್ ಎಸ್ಟೆಟ್ ಉದ್ಯಮಿಯೊಬ್ಬರ ಮಗಳಿಗೆ ಬ್ಲಾಕ್‌ಮೇಲ್ ಮಾಡಿ ಲೋಕನಾಥ್ ಮದುವೆ ಮಾಡಿಕೊಂಡಿದ್ದನಂತೆ. ಮಗಳ ಭವಿಷ್ಯ, ಹಾಗೂ ಕುಟುಂಬದ ಮರ್ಯಾದೆಗೆ ಅಂಜಿ ಯುವತಿಯ ತಂದೆ-ತಾಯಿ ಮಗಳನ್ನು ಮದುವೆ ಮಾಡಿಕೊಟ್ಟಿರಿತ್ತಾರೆ. ಇದರಿಂದ ನೊಂದ ತಂದೆ, ತಾಯಿ ಇವನಿಗೆ ಒಂದು ಗತಿ ಕಾಣಿಸಬೇಕು ಎಂದು ಮೂಹರ್ತ ಫಿಕ್ಸ್ ಮಾಡಿ ಸ್ಕೆಚ್ ಹಾಕಿದ್ದರು.
ಅಳಿಯ, ಮಗಳ ಜೊತೆ ಬಿಜಿಎಸ್ ಲೇಔಟ್‌ಗೆ ಮಾರ್ಚ್ 22ರಂದು ಯುವತಿಯ ತಾಯಿ ಬಂದಿದ್ದಾರೆ. ಲೋಕನಾಥ್ ಸಿಂಗ್‌ಗೆ ಸೇರಿದ ಜಾಗಕ್ಕೆ ಬಂದು ಪಾರ್ಟಿ ಮಾಡಿದ್ದರು. ನಿರ್ಮಾಣ ಹಂತದ ಕಟ್ಟಡದಲ್ಲಿ ಗಂಡ-ಹೆಂಡತಿ ಪಾರ್ಟಿ ಮಾಡಿದ್ದಾರೆ. ಈ ವೇಳೆ ಜೊತೆಯಲ್ಲಿದ್ದ ಗನ್ ಮ್ಯಾನ್‌ಗೆ ಏನನ್ನೋ ತರಲು ಹೇಳಿ ಕಳುಹಿಸಿದ್ದಾರೆ. ಚೆನ್ನಾಗಿ ಎಣ್ಣೆ ಹೊಡೆದು ಟೈಟ್ ಆಗಿದ್ದ ಅಳಿಯ ಲೋಕನಾಥ್ ಸಿಂಗ್‌ಗೆ ಅತ್ತೆ ಊಟದಲ್ಲಿ ನಿದ್ದೆ ಮಾತ್ರೆ ಹಾಕಿದ್ದರು.

ಯಾವಾಗ ಅಳಿಯ ನಿದ್ರೆಗೆ ಜಾರಿದ್ನೋ ಆಗ ಹರಿತವಾದ ಆಯುಧದಿಂದ ಅತ್ತೆ ಅಳಿಯನ ಕುತ್ತಿಗೆ ಕುಯ್ದಿದ್ದಾರೆ. ಮೊದಲೆ ನಿದ್ರೆ ಮಾತ್ರೆಯಿಂದ ನಿತ್ರಾಣಾರಾಗಿದ್ದ ಲೋಕನಾಥ್ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.ಸಿನಿಮಾ ಶೈಲಿಯಲ್ಲಿ ತನ್ನ ಮಗಳಿಗಾದ ಅನ್ಯಾಯಕ್ಕೆ ರಿವೆಂಜ್ ಬಿದ್ದು ಬ್ಲಾಕ್‌ಮೇಲ್ ಹೆದರಿ ಮಗಳನ್ನು ಒಲ್ಲದ ಮನಸ್ಸಿನಿಂದ ಮದುವೆ ಮಾಡಿಕೊಟ್ಟಿದ್ದ ಅಳಿಯನನ್ನು ಕೊಂದು ಮುಗಿಸಿದ್ದಾರೆ. ಸೋಲದೇವನಹಳ್ಳಿ ಪೊಲೀಸರು ಅಮ್ಮ- ಮಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

Leave a Reply

Your email address will not be published. Required fields are marked *

Optimized by Optimole
error: Content is protected !!