Headlines

ಟ್ರೋಲ್ ಆಯ್ತು ಯೂಟ್ಯೂಬರ್ ಸಮೀರ್ ವಿರುದ್ಧ ದಾಖಲಾದ FIR, ತರಾತುರಿಯ FIR ಶಂಕೆ.! FIR ನಲ್ಲಿ ಅಕ್ಷರ ತಪ್ಪುಗಳದ್ದೇ ಕಾರುಬಾರು.!

ಟ್ರೋಲ್ ಆಯ್ತು ಯೂಟ್ಯೂಬರ್ ಸಮೀರ್ ವಿರುದ್ಧ ದಾಖಲಾದ FIR, ತರಾತುರಿಯ FIR ಶಂಕೆ.! FIR ನಲ್ಲಿ ಅಕ್ಷರ ತಪ್ಪುಗಳದ್ದೇ ಕಾರುಬಾರು.!

ಅಶ್ವಸೂರ್ಯ/ಬೆಂಗಳೂರು : ಬಳ್ಳಾರಿಯ ಕೌಲ್ ಬಝಾರ್ ಪೊಲೀಸ್ ಠಾಣೆಯ ಪೊಲೀಸರು ದೂತ ಯೂಟ್ಯೂಬ್ ಚಾನೆಲ್ ನ ಸಮೀರ್ ವಿರುದ್ಧ ದಾಖಲಿಸಿರುವ ಎಫ್ ಐ ಆರ್ ಪ್ರತಿಯಲ್ಲಿ ಅಕ್ಷರ ತಪ್ಪುಗಳಿಙದಲೆ ತುಂಬಿದ್ದು, ವ್ಯಾಪಕ ಟ್ರೋಲ್ ಗೆ ತುತ್ತಾಗಿದೆ.
ಬಳ್ಳಾರಿಯ ಕೌಲಜಾರ್ ಪೊಲೀಸ್ ಠಾಣೆಯ ಪೊಲೀಸ್ ಸಬ್ ಇನ್ಸ್ಪೆಕ್ಟರ್ ನಿಂಗಪ್ಪನವರು ನೀಡಿದ ಸ್ವಯಂಪ್ರೇರಿತ ದೂರಿನನ್ವಯ ಯೂಟ್ಯೂಬರ್ ಸಮೀರ್ ವಿರುದ್ಧ ಎಫ್ ಐ ಆರ್ ದಾಖಲಾಗಿದೆ.
ಎಫ್ ಐ ಆರ್ ಪ್ರತಿಯಲ್ಲಿನ ದೂರಿನ ಸಾರಾಂಶದಲ್ಲಿ ಧರ್ಮಾಧಿಕಾರಿಗೆ ‘ಧರ್ಮ ಧಾರಿಕಾರಿ’, ಕರ್ನಾಟಕಕ್ಕೆ ಕನರ್ ನಾಟಕ, ಚಾನಲ್ ಅನ್ನು ಚಾಲನ್ನ ಎಂದು, ದಾಖಲು ಗೆ ಧಾಖಲು ಎಂದು, ಯೂಟ್ಯೂಬ್ ಗೆ ಯೂಟೂಬ್ ಎಂದು ಎಫ್ ಐ ಆರ್ ನಲ್ಲಿ ಉಲ್ಲೇಖಿಸಲಾಗಿದೆ. ಅಲ್ಲದೇ ಕೆಲವೆಡೆ ಬಳಸಿರುವ ಪದದ ಅರ್ಥವನ್ನು ನಿಘಂಟು ಹಿಡಿದು ಅರ್ಥ ಹುಡುಕಬೇಕಾದ ಪರಿಸ್ಥಿತಿಯಿದೆ ಎಂದು ಹಲವರು ತಮಾಷೆ ಮಾಡಿದ್ದಾರೆ.

ಎಫ್ ಐ ಆರ್ ನ ಪೂರ್ಣ ಪಾಠ ಯಥಾವತ್ ಹೀಗಿದೆ,
ದಿನಾಂಕ: 05-03-2025 ರಂದು ಮದ್ಯಾಹ್ನ 1-00 ಗಂಟೆಗೆ ಶ್ರೀ. ಎಂ.ನಿಂಗಪ್ಪ, ಪೊಲೀಸ್ ಸಬ್ ಇನ್ಸ್ ಪೆಕ್ಟರ್, (ತನಿಖೆ), ಕೌಲಜಾರ್ ಪೊಲೀಸ್ ಠಾಣೆ, ಬಳ್ಳಾರಿರವರು ದೂರು ನೀಡಿದ್ದು ಸಾರಾಂಶ: ಈಗ್ಗೆ ಕೆಲವು ದಿನಗಳಿಂದ Dhootha: Sameer Md Dhootha ಯೂಟೂಬ್ ಚಾನಲ್ ನಲ್ಲಿ www.youtube.com/@Dhoothasameermd ಊರಿಗೆ ದೊಡ್ಡವರೇ ಕೊಲೆ ಮಾಡಿವರಾ ಎನ್ನುವ ಶೀರ್ಷಿಕೆ ಅಡಿಯಲ್ಲಿ ಒಂದು ವೀಡಿಯೋವನ್ನು ಅಪ್ ಲೋಡ್ ಮಾಡಿದ್ದು ಅದರಲ್ಲಿ ಕರ್ನಾಟಕ ರಾಜ್ಯದ ಧರ್ಮಸ್ಥಳ ಧರ್ಮಾದಿಕಾರಿಗಳು ಮತ್ತು ಅವರ ಕುಟುಂಬವನ್ನು ಪರೋಕ್ಷವಾಗಿ ಉಲ್ಲೇಖಿಸಿ ಇರುತ್ತದೆಂದು ಮಾಹಿತಿ ಬಂದ ಮೇರೆಗೆ ಈ ದಿನ ದಿನಾಂಕ: 05-03-2025 ರಂದು ಬೆಳಿಗ್ಗೆ 11-30 ಗಂಟೆಗೆ ನಾನು ಯೂಟೂಬ್ ಚಾನಲ್ ಅನ್ನು ಪರಿಶೀಲಿಸಿ ನೋಡಲಾಗಿ ಈ ವೀಡಿಯೋವನ್ನು ಯೂಟೂಬ್ ನಲ್ಲಿ ದಿನಾಂಕ: 27-02-2025 ರಂದು Dhootha: Sameer Md Dhootha ಚಾಲನ್ನ ಸಮೀರ್ ಎಂ.ಡಿ ರವರು ಅಪ್ಲೋಡ್ ಮಾಡಿದ್ದು ಕಂಡು ಬರುತ್ತದೆ. ಇದರಲ್ಲಿ ಕರ್ನಾಟಕ ರಾಜ್ಯ ವಿಶ್ವ ವಿಖ್ಯಾತ ಧಾರ್ಮಿಕ ಸ್ಥಳವಾದ ಧರ್ಮಸ್ಥಳದ ಧರ್ಮಾಧಿಕಾರಿಗಳು ಮತ್ತು ಅವರ ಕಟುಂಬದವರ ವಿರುದ್ಧ ಪರೋಕ್ಷವಾಗಿ ಆರೋಪಗಳನ್ನು ಮಾಡಿದ್ದು ಸೌಜನ್ನು ಕೇಸು, ನಾರಾಯಣ ಮತ್ತು ಯಮುನಾ ಕೇಸ್, ವೇದವಲ್ಲಿ, ಕೇಸು, ಬ್ಯಾಂಕ್ ಮ್ಯಾನೇಜರ್ ಕೇಸು, ಪದ್ಮಲತಾ ಕೇಸು, ರವಿ ಪೂಜಾರಿ ಕೇಸುಗಳನ್ನು ಉಲ್ಲೇಖಿಸಿ ಮೇಲ್ಕಂಡ ಕೇಸುಗಳಲ್ಲಿ ನೇರವಾಗಿ ಧರ್ಮಸ್ಥಳದ ದರ್ಮಾಧಿಕಾರಿಗಳು ಮತ್ತು ಅವರ ಕುಟುಂಬದ ಸದಸ್ಯರು ಭಾಗಿಯಾಗಿರುತ್ತಾರೆಂದು ಆರೋಪಿಸಿದ್ದು ಕಂಡು ಬರುತ್ತದೆ, ಕನರ್‌ಾಟಕ ರಾಜ್ಯದ ಧರ್ಮಸ್ಥಳವು ವಿಶ್ವದಲ್ಲಿ ಪ್ರಸಿದ್ದ ಧಾರ್ಮಿಕ ಸ್ಥಳವಾಗಿದ್ದು ಈ ಧಾರ್ಮಿಕ ಸ್ಥಳಕ್ಕೆ ಮತ್ತು ಅದರ ಧರ್ಮಾಧಿಕಾರಿಗಳ ಮೇಲೆ ಸಾರ್ವಜನಿಕರು ಧಾರ್ಮಿಕ ಭಾವನೆ ಹೊಂದಿ ಪೂಜ್ಯ ಭಾವನೆ ಹೊಂದಿರುತ್ತಾರೆ. ಈ ಮೇಲ್ಕಂಡ ಯೂಟೂಬ್ ಚಾನಲ್ಲಿಂದ ಹೊರಡಿಸಿದ ವೀಡಿಯೋದಿಂದ ಧರ್ಮಸ್ಥಳ ಮತ್ತು ದರ್ಮಸ್ಥಳದ ಧರ್ಮಾಧಿಕಾರಿಗಳ ಮೇಲೆ ಧಾರ್ಮಿಕ ಭಾವನೆ ಹೊಂದಿದ ಸಾರ್ವಜನಿಕರ ಧಾರ್ಮಿಕ ಭಾವನೆಗೆ ದಕ್ಕೆಯುಂಟು ಮಾಡುವಂತೆ ಇರುತ್ತದೆ, ಆದ್ದರಿಂದ ಮೇಲ್ಕಂಡ ಯೂಟೂಬ್ ಚಾನಲ್ ಮತ್ತು ಅದಕ್ಕೆ ಸಂಬಂದಪಟ್ಟವರ ವಿರುದ್ಧ ಕಲಂ. 299 ಬಿ.ಎನ್.ಎಸ್-2023 ಅಡಿಯಲಿ ಪ್ರಕರಣದ ಧಾಖಲು ಮಾಡಲು ಕೋರುತ್ತೇನೆಂದು ಇದ್ದ ಮೇರೆಗೆ ಠಾಣೆ ಗುನ್ನೆ ಸಂಖ್ಯೆ: 51/2025 ರಲ್ಲಿ.. ನಮೂದಿಸಿಕೊಂಡಿರುತ್ತೇನೆ

Leave a Reply

Your email address will not be published. Required fields are marked *

Optimized by Optimole
error: Content is protected !!