ತೀರ್ಥಹಳ್ಳಿ ಪಟ್ಟಣ ಪಂಚಾಯತ್ ಅಧ್ಯಕ್ಷ ರಹಮತ್ ಉಲ್ಲಾ ಅಸಾದಿ ಅವರಿಂದ 38 ಕೋಟಿ 10ಲಕ್ಷದ 49 ಸಾವಿರ ರೂಪಾಯಿ ಮೌಲ್ಯದ 25-26ನೇ ಸಾಲಿನ ಭರ್ಜರಿ ಬಜೆಟ್ ಮಂಡನೆ.
ಅಶ್ವಸೂರ್ಯ/ಶಿವಮೊಗ್ಗ: ತೀರ್ಥಹಳ್ಳಿಯ ಪಟ್ಟಣ ಪಂಚಾಯತಿಯ 2025-26 ನೇ ಸಾಲಿನ ಬಜೆಟ್ ಮಂಡನೆಯನ್ನು ಪಟ್ಟಣ ಪಂಚಾಯತ್ನ ಅಧ್ಯಕ್ಷರಾದ ರಹಮತ್ ಉಲ್ಲಾ ಅಸಾದಿ ಅವರು 38 ಕೋಟಿ 10 ಲಕ್ಷದ 49 ಸಾವಿರದ ಎಂಟುನೂರು ರೂ ವೆಚ್ಚದ ಜನಸ್ನೇಹಿ ಬಜೆಟ್ ಮಂಡಿಸಿದರು.ಹಾಲಿ ಅಧ್ಯಕ್ಷರಾಗಿರುವ ಅಸಾದಿ ಅವರ ಎರಡನೇ ಬಜೆಟ್ ಮಂಡನೆಯಾಗಿದೆ. ಈ ಬಾರಿಯ ಬಜೆಟ್ ಮಂಡನೆಯಲ್ಲಿ ವಿಷೇಶವಾಗಿ ಮಹಿಳೆಯರು, ಪೌರಕಾರ್ಮಿಕರು, ತೀರ್ಥಹಳ್ಳಿ ನಾಗರೀಕರ ಜೊತೆಗೆ ಪ್ರಮುಖವಾಗಿ ಯುವಕರ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಮಾಡಿದ ಬಜೆಟ್ ಮಂಡನೆ ಆಗಿದೆ. ತೀರ್ಥಹಳ್ಳಿ ಪಟ್ಟಣ ಪಂಚಾಯತಿ ಕಚೇರಿಯೂ ಸಾರ್ವಜನಿಕ ಸೇವೆಯಲ್ಲಿ ನಿರಂತರವಾಗಿ ತೊಡಗಿಸಿಕೊಂಡಿದ್ದು ಕಚೇರಿಯಲ್ಲಿ ನೀಡಲಾಗುವ ಎಲ್ಲಾ ಸರ್ಕಾರಿ ಕೆಲಸಗಳನ್ನು ಸುಗಮ ವಾಗಿಸಲು ಮತ್ತು ಪಾರದರ್ಶಕವಾಗಿಸಲು ಇ ಆಫೀಸ್ ವ್ಯವಸ್ಥೆ ಅನುಷ್ಠಾನಗೊಳಿಸಲಾಗಿರುತ್ತದೆ ಎಂದು ಹರ್ಷ ವ್ಯಕ್ತಪಡಿಸಿದರು. ಸಾರ್ವಜನಿಕರ ಕೆಲಸ ಕಾರ್ಯಗಳು ಅತ್ಯಂತ ಪ್ರಾಮಾಣಿಕವಾಗಿ ಮತ್ತು ಪಾರದರ್ಶಕವಾಗಿ ನಿಗದಿತ ಸಮಯದೊಳಗೆ ನಿರ್ವಹಿಸಲು ಸಹಾಯಕವಾಗುತ್ತದೆ ಎಂದು ರಹಮತ್ ಉಲ್ಲಾ ಅಸಾದಿ ಹೇಳಿದರು.
ಈ ಬಾರಿ ಅಸಾದಿ ಬಜೆಟ್ ನಲ್ಲಿ ಯಾವುದಕ್ಕೆ ಹಣ ಮೀಸಲಿಡಲಾಗಿದೆ.?
- ಪಟ್ಟಣ ಪಂಚಾಯತಿ ನೀರು ಸರಬರಾಜು ಕೇಂದ್ರದ ಮುಂಭಾಗ ರಾಷ್ಟ್ರ ಧ್ವಜ ನಿರ್ಮಾಣಕ್ಕಾಗಿ 10 ಲಕ್ಷ ರೂ ಮಿಸಲಿಡಲಾಗಿದೆ.
- ವಿದ್ಯುತ್ / ತಾಲೂಕಿನ ನಾಗರೀಕರ ಅನುಕೂಲಕ್ಕಾಗಿ ವಿದ್ಯುತ್ / ಗ್ಯಾಸ್ ಚಿತಾಗಾರ ನಿರ್ಮಾಣಕ್ಕಾಗಿ 1 ಕೋಟಿ 50 ಲಕ್ಷ ರೂ ಮಿಸಲಿಡಲಾಗಿದೆ.
.• ಪಟ್ಟಣ ಪಂಚಾಯತಿ ನೀರು ಸರಬರಾಜು ಕೇಂದ್ರದ ಮುಂಭಾಗ ರಾಷ್ಟ್ರ ಧ್ವಜ ನಿರ್ಮಾಣಕ್ಕಾಗಿ 10 ಲಕ್ಷ ರೂ
• ವಿದ್ಯುತ್ / ಗ್ಯಾಸ್ ಚಿತಾಗಾರ ನಿರ್ಮಾಣ ತಾಲೂಕಿನ ನಾಗರೀಕರ ಅನುಕೂಲಕ್ಕಾಗಿ ವಿದ್ಯುತ್ / ಗ್ಯಾಸ್ ಚಿತಾಗಾರ ನಿರ್ಮಾಣಕ್ಕಾಗಿ 1 ಕೋಟಿ 50 ಲಕ್ಷ ರೂ
- ಹಿಂದೂ ರುದ್ರಭೂಮಿ, ಖಬರಸ್ಥಾನ, ಕ್ರಿಶ್ಚಿಯನ್ ಸ್ಮಶಾನಗಳಿಗೆ ಹೈಮಾಸ್ಟ್ ಬೀದಿ ದೀಪ ಅಳವಡಿಕೆಗಾಗಿ 7 ಕೋಟಿ 50 ಲಕ್ಷ ರೂ ಮೀಸಲು.
- ವ್ಯಾಯಾಮ ಶಾಲೆಯ ಪರಿಕರಣಗಳ ಖರೀದಿಗಾಗಿ 15 ಲಕ್ಷ ರೂ.ಮಿಸಲು
- ತೀರ್ಥಹಳ್ಳಿಗೆ ಬಂದು ಹೋಗುವ ಪ್ರವಾಸಿಗರ ಅನುಕೂಲಕ್ಕಾಗಿ ಮುಖ್ಯ ಬಸ್ ನಿಲ್ದಾಣದ ವಾಣಿಜ್ಯ ಸಂಕೀರ್ಣದಲ್ಲಿ ವಸತಿ ಗೃಹ ನಿರ್ಮಾಣಕ್ಕಾಗಿ 1 ಕೋಟಿ ರೂ.ಮೀಸಲು
- ನೂತನ ವ್ಯಾಯಾಮ ಶಾಲೆ ನಿರ್ಮಾಣ ಸೊಪ್ಪುಗುಡ್ಡೆಯ
- ಗೋಪಾಲಗೌಡ ರಂಗಮಂದಿರದ ಮುಂಭಾಗದ ಕಟ್ಟಡದಲ್ಲಿ ಈಗಾಗಲೇ ವ್ಯಾಯಾಮ ಶಾಲೆಗೆ ಸ್ಥಳ ನಿಗದಿ ಮಾಡಲಾಗಿದ್ದು 21 ಲಕ್ಷ ಕಾಮಗಾರಿ ಪ್ರಗತಿಯಲ್ಲಿದ್ದು ಉಳಿದಂತೆ 25 ಲಕ್ಷ ರೂಪಾಯಿ ಮಿಸಲಿಡಲಾಗಿದೆ.
- ಬೆಟ್ಟಮಕ್ಕಿಯ ಅಂಬೇಡ್ಕರ್ ಭವನ ಶಿಥಿಲಗೊಂಡಿದ್ದು ಅದರ ನವೀಕರಣದ ಕಾಮಗಾರಿ ಹಾಗೂ ಇತರ ಕಾಮಗಾರಿಗೆ 15 ಲಕ್ಷ ರೂ ಮೀಸಲು.
- ತೀರ್ಥಹಳ್ಳಿ ನಾಗರಿಕರ ಮನೋರಂಜನೆ ಹಾಗೂ ಸಾರ್ವಜನಿಕ ಕಾರ್ಯಕ್ರಮ ನಡೆಸಲು ಕುವೆಂಪು ಅವರ ಜನ್ಮದಿನೋತ್ಸವದ ಸವಿನೆನಪಿಗಾಗಿ ಪಟ್ಟಣ ಪಂಚಾಯತಿ ಕಚೇರಿ ಪಕ್ಕದ ಮೈದಾನದಲ್ಲಿ 80 ಲಕ್ಷ ರೂ ವೆಚ್ಚದಲ್ಲಿ ಬಯಲು ರಂಗಮಂದಿರ ನಿರ್ಮಾಣ
- ಈ ಸಾಲಿನಲ್ಲಿ ಕ್ರೀಡೆಗೆ ಪ್ರಾಶಸ್ತ್ರ ನೀಡುವ ಸಲುವಾಗಿ ಸೊಪ್ಪುಗುಡ್ಡೆಯಲ್ಲಿರುವ ವಾಲಿಬಾಲ್ ಕೋರ್ಟ್ ಅನ್ನು ಉನ್ನತ ಮಟ್ಟದಲ್ಲಿ ಆಧುನಿಕಗೊಳಿಸಿ ಕ್ರೀಡಾಂಗಣಕ್ಕೆ ಹೊನಲು ಬೆಳಕಿನ ವ್ಯವಸ್ಥೆಗಾಗಿ 8 ಲಕ್ಷ ರೂಪಾಯಿ ಮೀಸಲಿಡಲಾಗಿದೆ.
- ರಾಮಮಂಟಪಕ್ಕೆ ಸಂಪರ್ಕ ರಸ್ತೆ ನಿರ್ಮಾಣ ಪವಿತ್ರ ರಾಮಕೊಂಡಕ್ಕೆ ಧಾರ್ಮಿಕ ಸಂದರ್ಭದಲ್ಲಿ ಸುರಕ್ಷಿತವಾಗಿ ಭಕ್ತಾದಿಗಳು ಓಡಾಡಲು ಅನುಕೂಲವಾಗುವಂತೆ ಯಾಂಪ್ ನಿರ್ಮಾಣಕ್ಕೆ 10 ಲಕ್ಷ ರೂಪಾಯಿ ಮೀಸಲಿಡಲಾಗಿದೆ.
- ಪ್ರತಿನಿತ್ಯ ತೀರ್ಥಹಳ್ಳಿ
ಪಟ್ಟಣದ ಸ್ವಚ್ಚತೆಗಾಗಿ ಬಿಸಿಲು ಮಳೆಯನ್ನು ಲೆಕ್ಕಿಸದೆ ಪ್ರತಿನಿತ್ಯ ಶ್ರಮಿಸುವ ಪೌರಕಾರ್ಮಿಕರಿಗೆ ವಿಶೇಷ ಮನ್ನಣೆ ನೀಡುವ ದೃಷ್ಟಿಯಲ್ಲಿ ಅವರಿಗೆ ಅಪರೂಪವಾದ ವಿಮಾನ ಸಂಚಾರಕ್ಕೆ ತೀರ್ಮಾನಿಸಿದ್ದು 10 ಲಕ್ಷ ರೂ.ಮೀಸಲಿಡಲಾಗಿದೆ. - ಪಟ್ಟಣದ ಕೇಂದ್ರ ಬಿಂದುವಾದ ಶಾಂತವೇರಿ ಗೋಪಾಲಗೌಡ ರಂಗಮಂದಿರದ ಅಭಿವೃದ್ಧಿ ಕಾಮಗಾರಿಗೆ ಮತ್ತು ರಂಗಮಂದಿರದಲ್ಲಿ ಸಿ.ಸಿ ಕ್ಯಾಮರ ಅಳವಡಿಕೆಗೆ ಮತ್ತು ಹೈಟೆಕ್ ಧ್ವನಿವರ್ಧಕ ವ್ಯವಸ್ಥೆಗಾಗಿ 30 ಲಕ್ಷ ರೂಪಾಯಿ ಮೀಸಲಿಡಲಾಗಿದೆ.
- ತುಂಗೆಯ ಸುಂದರಾದ ತಟದಲ್ಲಿ ಪ್ರವಾಸಿಗರು ಮತ್ತು ವಾಯುವಿಹಾರಕ್ಕಾಗಿ ಹೋಗುವ ಸ್ಥಳಿಯರಿಗಾಗಿ ತುಂಗಾನದಿ ತೀರದಲ್ಲಿ 20 ಬೆಂಚ್ ಗಳನ್ನು ಅಳವಡಿಸಲು 10 ಲಕ್ಷ ರೂಪಾಯಿ ಮೀಸಲಿಡಲಾಗಿದೆ.
- ಪಂಚಾಯಿತಿ ಕಛೇರಿಗೆ ಸಂಬಂಧಿಸಿದ ಮಾಹಿತಿಗಳನ್ನು ಸಾರ್ವಜನಿಕರಿಗೆ ತಲುಪಿಸುವ ದೃಷ್ಟಿಯಿಂದ ಮತ್ತು ಪಟ್ಟಣ ಪಂಚಾಯಿತಿ ಆದಾಯ ಹೆಚ್ಚಿಸುವ ಉದ್ದೇಶದಿಂದ ಪಟ್ಟಣ ಪಂಚಾಯಿತಿಗೆ ಸಂಭಂದಿಸಿದ ಸ್ಥಳವಾದ ಮುಖ್ಯ ಬಸ್ ನಿಲ್ದಾಣದಲ್ಲಿನದ ಕಟ್ಟಡಗಳ ಮೇಲೆ ಜಾಹಿರಾತು ಫಲಕಗಳನ್ನು ಅಳವಡಿಸಲು 15 ಲಕ್ಷ ರೂ.ರೂಪಾಯಿ ಮೀಸಲಿಡಲಾಗಿದೆ.
- ಪಟ್ಟಣದ ಬಡ ಕುಟುಂಬದ ಅನೇಕ ಯುವಕ, ಯುವತಿಯರ ಸ್ವಯಂ ಉದ್ಯೋಗ ಕಲ್ಪಿಸುವ ಉದ್ದೇಶದಿಂದ ಮೋಟಾರ್ ವಾಹನಗಳಿಗೆ ಚಾಲನೆ ಮತ್ತು ಪರವಾನಿಗೆ ಹಾಗೂ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಆಸಕ್ತ ಯುವಕ ಯುವತಿಯರಿಗೆ ತರಬೇತಿ ಮತ್ತು ಪರವಾನಿಗೆ ನೀಡಲು 10 ಲಕ್ಷ ರೂಪಾಯಿ.
• ತೀರ್ಥಹಳ್ಳಿಯ ನಗರದ ನಾಗರೀಕರ ರಕ್ಷಣೆಯ ಹಿನ್ನಲೆಯಲ್ಲಿ ಪಟ್ಟಣದಲ್ಲಿ ಕ್ರೈಮ್ ಪ್ರಕರಣಗಳನ್ನು ಮಟ್ಡಹಾಕುವ ನಿಟ್ಟಿನಲ್ಲಿ ಪಟ್ಟಣದ ಪ್ರಮುಖ ಸ್ಥಳಗಳಲ್ಲಿ ಸಿಸಿ ಟಿವಿ ಕಣ್ಗಾವಲು ಇರಿಸಲು ಸಿ.ಸಿ ಕ್ಯಾಮರಗಳನ್ನು ಅಳವಡಿಸಲು 6 ಲಕ್ಷ ರೂಪಾಯಿ ಮೀಸಲಿಡಲಾಗಿದೆ.
- ಪಂಚಾಯಿತಿಯಲ್ಲಿ ಕ್ಲಿನಿಕ್‌ನ್ನು ಸ್ಥಾಪಿಸಿ ಪಟ್ಟಣದ ನಾಗರೀಕರ ಆರೋಗ್ಯವನ್ನು ಗಮನದಲ್ಲಿರಿಸಿಕೊಂಡು
ರಾಜ್ಯದ ಹೆಸರಾಂತ
ತಜ್ಞ ವೈದ್ಯರುಗಳಿಂದ ತಪಾಸಣೆಯನ್ನು ನಡೆಸುವ ಉದ್ದೇಶದಿಂದ ಪಟ್ಟಣ ಪಂಚಾಯಿತಿ ಕ್ಲಿನಿಕ್ ಸ್ಥಾಪಿಸಲು 5 ಲಕ್ಷ ರೂಪಾಯಿ ಮೀಸಲಿಡಲಾಗಿದೆ. - ಪಟ್ಟಣ ಪಂಚಾಯತಿ ವ್ಯಾಪ್ತಿಯ ಮಹಿಳೆಯರಿಗೆ ಗುಡಿಕೈಗಾರಿಕೆಯಲ್ಲಿ ತರಬೇತಿ ನೀಡಿ ಅವರ ಅದಾಯವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಕೌಶಲ್ಯಾಭಿವೃದ್ಧಿ ತರಬೇತಿ ಹಮ್ಮಿಕೊಳ್ಳಲು 10 ಲಕ್ಷ ರೂಪಾಯಿ ಇರಿಸಲಾಗಿದೆ.
- ಛತ್ರಕೇರಿಯ ಚಕ್ರತೀರ್ಥದಿಂದ ಹೊಳೆ ದಂಡೆಯ ಮೂಲಕ ಅಯ್ಯಪ್ಪ ಸ್ವಾಮಿ ದೇಗುಲಕ್ಕೆ ಹೋಗಲು ಪರ್ಯಾಯ ರಸ್ತೆ ನಿರ್ಮಾಣಕ್ಕೆ 15 ಲಕ್ಷ ರೂಪಾಯಿ.
- ದಸರ ಉತ್ಸವ ಹಾಗೂ ಬನ್ನಿ ವಿತರಣೆ ಮಾಡುವ ಕುಶಾವತಿ ಉದ್ಯಾನವನದಲ್ಲಿರುವ ವಿಜಯಮಂಟಪದ ನವೀಕರಣಕ್ಕಾಗಿ 10 ಲಕ್ಷ ರೂಪಾಯಿ ಮೀಸಲಿಡಲಾಗಿದೆ.
- ತೀರ್ಥಹಳ್ಳಿ ತಾಲ್ಲೂಕಿನ ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಮಕ್ಕಳ ಉನ್ನತ ವ್ಯಾಸಂಗ ಹಾಗೂ ಉದ್ಯೋಗಗಳ ಕನಸುಗೊಳಿಸುವ ಉದ್ದೇಶದಿಂದ ಐ.ಎ.ಎಸ್, ಐ.ಪಿ.ಎಸ್ ಹಾಗೂ ಕೆ.ಎ.ಎಸ್ ತರಬೇತಿ ಪಡೆಯಲು ಅನುಕೂಲವಾಗುವಂತೆ ರಾಜ್ಯದ ಹೆಸರಾಂತ ತರಬೇತುದಾರರಿಂದ ತರಬೇತಿ ಕೇಂದ್ರ ಸ್ಥಾಪನೆಗೆ 10 ಲಕ್ಷ ರೂಪಾಯಿ ಮೀಸಲಿಡಲಾಗಿದೆ.
ತೀರ್ಥಹಳ್ಳಿ ಪಟ್ಟಣ ಪಂಚಾಯತಿ ವ್ಯಾಪ್ತಿಯಲ್ಲಿ ಅನೇಕ ಕುಟುಂಬಗಳು ನಿವೇಶನ ರಹಿತರಿದ್ದು,ಅಂತರವನ್ನು ಗುರುತಿಸಿ ವಸತಿ ಕಲ್ಪಿಸುವ ದೃಷ್ಟಿಯಿಂದ 3 ಕೋಟಿ 50 ಲಕ್ಷ ರೂಪಾಯಿಯನ್ನು ಮೀಸಲಿಡಲಾಗಿದೆ.
- ಒಟ್ಟಿನಲ್ಲಿ ಈ ಬಾರಿಯ ಬಜೆಟ್ ದೊಡ್ಡ ಮೊತ್ತದ್ದಾಗಿದ್ದು ಜೋತೆಗೆ ಜನಸ್ನೇಹಿ ಬಜೆಟ್ ಆಗಿದೆ.ಅದರೆ ಇವುಗಳೆಲ್ಲ ಕಾರ್ಯರೂಪಕ್ಕೆ ಬರಬಹುದಾ.?ಇವುಗಳಲ್ಲಿ ಯಾವುದು ಜನರ ಅನುಕೂಲಕ್ಕೆ ಪ್ರಮುಖವಾಗಿದೆ ಎಂದು ನೋಡಬೇಕಿದೆ, ಕಳೆದ ಬಾರಿಯ ಬಜೆಟ್ ನಲ್ಲಿ ಮಂಡನೆಯಾಗಿದ್ದ ಯಾವೆಲ್ಲಾ ಕೆಲಸ ಕಾರ್ಯಗಳು ಜನರಿಗೆ ಅನುಕೂಲವಾಗಿದೆ ಎಂಬುದನ್ನು ಇಲ್ಲಿ ಯೊಚಿಸಬೇಕಿದೆ .