Horrible Murder:ಹರ್ಯಾಣ ಕಾಂಗ್ರೆಸ್ ಕಾರ್ಯಕರ್ತೆ ಮರ್ಡರ್ ಕೇಸ್; ಸೂಟ್‌ಕೇಸ್‌ನಲ್ಲಿ ಶವ ಸಾಗಿಸುತ್ತಿರುವ ಆರೋಪಿಯ ವಿಡಿಯೊ ವೈರಲ್.!
ಅಶ್ವಸೂರ್ಯ/ ಚಂಡೀಗಢ: ಹರ್ಯಾಣದ ಕಾಂಗ್ರೆಸ್ ಕಾರ್ಯಕರ್ತೆ ಹಿಮಾನಿ ನರ್ವಾಲ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ವಿಚಾರಣೆ ವೇಳೆಯಲ್ಲಿ ಆರೋಪಿ ತಾನೇ ಕೊಲೆ ಮಾಡಿರುವುದಾಗಿ ಹೇಳಿದ್ದಾನೆ. ಇದೀಗ ಪೊಲೀಸರಿಗೆ ಮತ್ತೊಂದು ಮಹತ್ವದ ಸಾಕ್ಷಿ ದೊರೆತಿದ್ದು, ಹಿಮಾನಿಯನ್ನು ಕೊಂದು ಹಂತಕ ಸೂಟ್ಕೇಸ್‌ನಲ್ಲಿ ಆಕೆ ಶವ ತೆಗೆದುಕೊಂಡು ಹೋಗುತ್ತಿರುವ ದೃಶ್ಯ ಪೊಲೀಸರಿಗೆ ಲಭ್ಯವಾಗಿದೆ. ಆರೋಪಿ ಹಿಮಾನಿ ನರ್ವಾಲ್ ಜೊತೆ ಸಂಬಂಧ ಹೊಂದಿದ್ದಾಗಿ ಬಾಯಿಬಿಟ್ಟಿದ್ದಾನೆ.! ಹಿಮಾನಿ ಹಣಕ್ಕಾಗಿ ನನ್ನನ್ನು ಆಗಾಗ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದಳು.ನನ್ನಿಂದ ಲಕ್ಷಗಟ್ಟಲೆ ಹಣ ಸುಲಿಗೆ ಮಾಡಿದ್ದಳು.ನನಗೂ ಹಣಕೊಟ್ಟು ಹೈರಾಣನಾಗಿದ್ದೆ.! ಇದರಿಂದ ಬೇಸತ್ತು ಆಕೆಯನ್ನು ಕೊಲೆ ಮಾಡುವ ನಿರ್ಧಾರಕ್ಕೆ ಬಂದೆ ಎಂದು ಆರೋಪಿ ಪೊಲೀಸರ ಎದುರು ಹೇಳಿಕೆ ನೀಡಿದ್ದಾನೆ.
ಶನಿವಾರ ರೋಹ್ಟಕ್‌ನ ಬಸ್ ನಿಲ್ದಾಣದ ಬಳಿ ಮಹಿಳೆಯ ಶವ ಪತ್ತೆಯಾಗಿದ್ದು, ಹಂತಕ ಮೊಬೈಲ್ ಫೋನ್ ಚಾರ್ಜಿಂಗ್ ಬಳ್ಳಿಯಿಂದ ಆಕೆಯನ್ನು ಕೊಲೆ ಮಾಡಿ, ಶವವನ್ನು ಸೂಟ್‌ಕೇಸ್‌ನಲ್ಲಿ ತುಂಬಿಸಿ ಎಸೆದಿದ್ದಾನೆ. ಎಂದು ಪೊಲೀಸರು ಸ್ಥಳ ಮಹಜರುಮಾಡಿ ಒಂದಷ್ಟು ಮಾಹಿತಿ ಕಲೆಹಾಕಿದ್ದರು.!? ಸ್ಥಳೀಯ ಸಿಸಿಟಿಯ ದೃಶ್ಯಾವಳಿಯಲ್ಲಿ ಆರೋಪಿಯು ಮಹಿಳೆಯ ಮನೆಯ ಸಮೀಪವಿರುವ ಬೀದಿಯಲ್ಲಿ ಸೂಟ್‌ಕೇಸ್‌ನೊಂದಿಗೆ ನಡೆದುಕೊಂಡು ಹೋಗುತ್ತಿರುವುದು ಕಂಡು ಬಂದಿದೆ.!
Rohtak, Haryana: CCTV footage emerges in the Himani murder case, showing the accused carrying the body in a suitcase pic.twitter.com/ItenFSbevt
— IANS (@ians_india) March 3, 2025 https://pic.twitter.com/ItenFSbevt
ಪೊಲೀಸರು ಹೇಳಿದ್ದೆನು.?
ಕಾಂಗ್ರೆಸ್ ಕಾರ್ಯಕರ್ತೆ ಹತ್ಯೆ ಪ್ರಕರಣಕ್ಕೆ ಸಂಭಂದಿಸಿದಂತೆ ಜಜ್ಜರ್‌ನಲ್ಲಿ ಮೊಬೈಲ್ ಅಂಗಡಿ ನಡೆಸುತ್ತಿರುವ ಆರೋಪಿ ಸಚಿನ್ ಎಂಬಾತನನ್ನು ಬಂಧಿಸಲಾಗಿದೆ. ಆರೋಪಿ ಮತ್ತು ಮೃತ ವ್ಯಕ್ತಿ ಸಾಮಾಜಿಕ ಮಾಧ್ಯಮಗಳ ಮೂಲಕ ಪರಿಚಯವಾಗಿದ್ದರು ಮತ್ತು ಅವನು ಆಕೆಯ ಮನೆಗೆ ಆಗಾಗ ಹೋಗಿ ಬರುತ್ತಿದ್ದನು. ಆಕೆ ವಿಜಯ್ ನಗರ ರೋಹ್ಟಕ್‌ನ ಮನೆಯಲ್ಲಿ ಒಬ್ಬಂಟಿಯಾಗಿ ವಾಸಿಸುತ್ತಿದ್ದಳು ಎಂದು ಮೂಲಗಳು ತಿಳಿಸಿವೆ. ಫೆ. 27ರಂದು ಆತ ಆಕೆಯ ಮನೆಗೆ ಹೋಗಿದ್ದಾನೆ. ಬಳಿಕ ಅವರು ಯಾವುದೋ ವಿಷಯಕ್ಕೆ ಜಗಳವಾಡಿದ್ದಾರೆ. ನಂತರ ಮೊಬೈಲ್ ಚಾರ್ಜರ್‌ನ ಕೇಬಲ್ ಸಹಾಯದಿಂದ ಆಕೆಯನ್ನು ಸಚಿನ್ ಉಸಿರು ಗಟ್ಟಿಸಿ ಹತ್ಯೆಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಕೊಲೆ ಮಾಡಿದ ನಂತರ ಆರೋಪಿ ಹಿಮಾನಿ ನರ್ವಾಲ್ ಅವರ ಆಭರಣಗಳು, ಫೋನ್ ಮತ್ತು ಲ್ಯಾಪ್‌ಟಾಪ್ ಅನ್ನು ದೋಚಿದ್ದಾನೆ. ಆಕೆಯ ಶವವನ್ನು ಸೂಟ್‌ಕೇಸ್‌ನಲ್ಲಿ ಪ್ಯಾಕ್ ಮಾಡಿ ಸಂಪ್ಲಾ ಬಸ್ ನಿಲ್ದಾಣದ ಬಳಿಯ ಪೊದೆಯಲ್ಲಿ ಎಸೆದಿದ್ದಾನೆ ಎಂದು ಅವರು ತಿಳಿಸಿದ್ದಾರೆ. ದೋಚಿರುವ ಆಕೆಯ ಆಭರಣಗಳು, ಫೋನ್ ಮತ್ತು ಲ್ಯಾಪ್‌ಟಾಪ್ ಅನ್ನು ಜಜ್ಜರ್‌ನಲ್ಲಿರುವ ತನ್ನ ಮೊಬೈಲ್ ಅಂಗಡಿಗೆ ತೆಗೆದುಕೊಂಡು ಹೋಗಿದ್ದಾನೆ ಎಂದು ತಿಳಿದು ಬಂದಿದೆ.