ಶಿವಮೊಗ್ಗ: ಮೆಗ್ಗಾನ್ ಆಸ್ಪತ್ರೆಯ ರೂಮ್ ನಂಬರ್ 21ರ ಕನ್ನಡಕಗಳು ಮಾರಾಟಕ್ಕಿವೆ.! ಕನ್ನಡಕಗಳು ಬಿಕರಿಯಾಗಿದ್ದು ಯಾವ ಆಂಗಡಿಗೆ.?ಸರ್ಕಾರದ ಅನ್ನತಿಂದು ಸಗಣಿ ತಿನ್ನುವ ಕೆಲಸಮಾಡಿದ ನಿಚರು ಯಾರು.?
Ashwasurya/Shivamogga
ಅಶ್ವಸೂರ್ಯ/ಶಿವಮೊಗ್ಗ: ಒಂದು ಸರ್ಕಾರಿ ಆಸ್ಪತ್ರೆ ಎಂದರೆ ಬಡ ರೋಗಿಗಳಿಗೆ ಆರೋಗ್ಯದ ರಕ್ಷಣೆಯ ಜೊತೆಗೆ ಗುಣಮಟ್ಟದ ಚಿಕಿತ್ಸೆ ನೀಡುವ ಕೇಂದ್ರವಾಗಿದೆ .ಇದಕ್ಕಾಗಿ ವಿಶೇಷ ವೈದ್ಯಕೀಯ ಸಿಬ್ಬಂದಿಯು ಮೇಲಿಂದ ಮೇಲೆ ರೋಗಿಗಳ ಸ್ಥಿತಿಗತಿಯನ್ನು ನಿಗಾವಹಿಸ ಬೇಕಾಗುತ್ತದೆ.ಬಡ ರೋಗಿಗಳಿಗಂತು ಇದೊಂದು ಜೀವ ರಕ್ಷಕ ದೇವಾಲಯವೆ ಹೌದು.ಎಲ್ಲಾ ಕಾಯಿಲೆಗಳಿಗೂ ಔಷಧೋಪಚಾರವನ್ನು ಒದಗಿಸುವ ಜೀವಂತ ದೆವರು ಇರುವ ಗರ್ಭಗುಡಿ ಎಂದರೆ ತಪ್ಪಾಗಲಾರದು.! ಅ ದಿಕ್ಕಿನಲ್ಲಿ ಶಿವಮೊಗ್ಗದ ಮೆಗ್ಗಾನ್ ಬೋಧನ ಜಿಲ್ಲಾ ಆಸ್ಪತ್ರೆಯು ಒಂದು.ಆದರೆ ಇತ್ತೀಚಿನ ದಿನಗಳಲ್ಲಿ ಮೆಗ್ಗಾನ್ ಆಸ್ಪತ್ರೆ ಎನ್ನುವುದು ಬಡ ರೋಗಿಗಳನ್ನು ಸುಲಿಯುವ ಕೇಂದ್ರವಾಗಿದೆ.! ಈ ಆಸ್ಪತ್ರೆಯ ಅಷ್ಟೂ ವಿಭಾಗದಲ್ಲಿ ನೆಡೆಯುವ ಹಣದಾಹದ ವರದಿಯನ್ನು ಬರೆಯಲು ಕುಳಿತರೆ.ಮುಗಿಯದ ಕಥೆಯೆ ಹೌದು ( Never ending story) ಈ ಹಾದಿಯಲ್ಲಿ ಈಗ ನಾನು ಬರೆಯಲು ಹೊರಟಿರುವುದು ಮೆಗ್ಗಾನ್ ಆಸ್ಪತ್ರೆಯ ರೂಮ್ ನಂಬರ್ 21 ರ ಅಸಲಿ ಕಥೆ.!!
ಜಿಲ್ಲಾ ಮೆಗ್ಗಾನ್ ಆಸ್ಪತ್ರೆಯ ರೂಮ್ ನಂಬರ್ 21 ಇದು ಕಣ್ಣಿನ ರೋಗಿಗಳ ವಿಭಾಗ..! ದೇಹದ ಸೂಕ್ಷ್ಮ ಅಂಗವಾದ ಕಣ್ಣಿನ ಬಗ್ಗೆ ಪ್ರತಿಯೊಬ್ಬರು ಎಚ್ಚರಿಕೆ ತೆಗೆದುಕೊಳ್ಳುವ ಅವಶ್ಯಕತೆ ಇದೆ. ಮನುಷ್ಯನಿಗೆ ವಯಸ್ಸಾದಂತೆ ಕಣ್ಣಿನ ದೃಷ್ಟಿ ಕ್ಷೀಣಿಸುವುದು ಸಹಜ.ಇಂತಹ ಸಮಯದಲ್ಲಿ ಶಿವಮೊಗ್ಗ ನಗರದ ಬಡ ನಾಗರಿಕರು ಕಣ್ಣಿಗೆ ಯಾವುದೇ ರೀತಿಯಲ್ಲಿ ತೊಂದರೆ ಉಂಟಾದರು ತಕ್ಷಣ ಸ್ಥಳೀಯ ಸರ್ಕಾರಿ ಮೆಗ್ಗಾನ್ ಆಸ್ಪತ್ರೆಗೆ ಎಡತಾಗಿ ಆಸ್ಪತ್ರೆಯಲ್ಲಿರುವ ಕಣ್ಣಿನ ವೈದ್ಯರ ಬಳಿ ತಪಾಸಣೆ ಮಾಡಿಕೊಂಡು ಚಿಕಿತ್ಸೆ ಪಡೆದುಕೊಳ್ಳುವುದು ಸಹಜ. ಅಲ್ಲಿ ವೈದ್ಯರು ಎನಾದರು ದೃಷ್ಟಿ ದೋಷಿಗಳಿಗೆ ತಪಾಸಣೆಮಾಡಿ ಕನ್ನಡಕ ಬರೆದುಕೊಟ್ಟರೆ ಆತನ ಕಥೆ ಮುಗಿಯಿತು ಎಂದರ್ಥ.!
ದೃಷ್ಟಿ ದೋಷಿಗಳು ವೈದ್ಯರು ಕೊಟ್ಟ ಸ್ಲೀಪ್ ಹಿಡಿದು ಕಣ್ಣಿನ ವಿಭಾಗದ ರೂಮ್ ನಂಬರ್ 21ಕ್ಕೆ ಎಡತಾದರೆ ಅಲ್ಲಿ ಅಸಿನರಾಗಿರುವ ಹಣದ ಬೇಟೆಗೆ ನಿಂತಂತಹ ನೇತ್ರ ಅಧಿಕಾರಿಗಳಾದ ಸಂಜಯ್ ಮತ್ತು ಸಂತೋಷ್ ಹಾಗೂ ಬಾಬು ಇವರುಗಳು. ನಿಮ್ಮ ಕೈಯಲ್ಲಿದ್ದ ಸ್ಲೀಪ್ ತೆಗೆದುಕೊಂಡು ಏನು ಇವರಪ್ಪನ ಮನೆಯಿಂದ ತೆಗೆದುಕೊಂಡು ಬಂದ ಹಣದಲ್ಲಿ ಕನ್ನಡಕದ ಆಂಗಡಿ ತೆರೆದಿರುವವರಂತೆ ಅಡುವ ಆಟ ನಿವು ಒಮ್ಮೆ ಭೇಟಿಕೊಟ್ಟಾಗಲೆ ನಿಮ್ಮ ಅರಿವಿಗೆ ಬರುವು.! ಅ ಸ್ಲೀಪ್ ನಲ್ಲಿ ಡಾಕ್ಟರ್ ಬರೆದ ಪಾಯಿಂಟ್ ಗ್ಲಾಸ್ ಗಳಿಗೆ ಇವರೆ ಒಂದೊಂದಕ್ಕೊ ಇವರದೆ ದರ ನಿಗಧಿಮಾಡಿ. ಅಮಾಯಕ ಬಡ ಕಣ್ಣಿನ ರೋಗಿಗಳಿಂದ ಹಣ ಕೀಳಲು ಮುಂದಾಗುತ್ತಾರೆ. ಒಂದೊಂದು ಕನ್ನಡಕಕ್ಕೂ ಇವರೆ ಒಂದೊಂದು ದರ ನಿಗಧಿ ಮಾಡಿ ರೋಗಿಗಳನ್ನು ಸುಲಿಯುತ್ತಿದ್ದಾರೆ.ರೂಮ್ ನಂಬರ್ 21 ಕಣ್ಣಿನ ವಿಭಾಗದಲ್ಲಿ ಬಿಕರಿ ಯಾಗುತ್ತಿರು ಕನ್ನಡಕದ ಬೇಲೆ 600 ರಿಂದ 800 ಮತ್ತು 1000 ಹಾಗೂ 1200, 1600 ರೂಪಾಯಿಗಳಿಗೆ ಬಡವರ ಕೈ ಸೇರುತ್ತಿದೆ.ಬಡ ನೆತ್ರರೋಗಿಗಳಿಂದ ಹಣ ಪಡೆದು ಅಕ್ರಮವಾಗಿ ಹಣ ಸಂಪಾದಿಸಲು ಅವಕಾಶ ಕಲ್ಪಿಸಿಕೊಟ್ಟ ಅಧಿಕಾರಿ ಯಾರು.? ಈ ಅಕ್ರಮ ಕನ್ನಡಕದ ವ್ಯಾಪಾರದಿಂದ ಬಂದಂತ ಹಣದಲ್ಲಿ ಹಿರಿಯ ಅಧಿಕಾರಿಯ ಕೈ ಸೇರುವ ದಿನದ ಮತ್ತು ತಿಂಗಳ ಒಟ್ಟು ಹಣವೇಷ್ಟು.!?ದಿನ ನಿತ್ಯಾ ಸಾವಿರಾರು ರೂಪಾಯಿಗಳನ್ನು ಜೇಬಿಗಿಳಿಸುವ ಸಂಜಯ್ ಸಂತೋಷ್ ಮತ್ತು ಬಾಬು ಅವರ ಅಕ್ರಮ ಹಣದ ಗಳಿಕೆ ಎಷ್ಟು.? ಈ ಜಾಗದಲ್ಲಿ ಇವರುಗಳು ಬಂದು ವಕ್ಕರಿಸಿದಾಗಿನಿಂದ ಕಮಾಯಿಸಿದ ಒಂದು ಅಂದಾಜಿನ ಹಣವೇಷ್ಟು ಎಲ್ಲವನ್ನೂ ಪತ್ರಿಕೆ ಕಲೆಹಾಕುತ್ತಿದೆ.! ಇನ್ನೂ ಸರ್ಕಾರಿ ಮೆಗ್ಗಾನ್ ಆಸ್ಪತ್ರೆಯ ರೂಮ್ ನಂಬರ್ 21 ಇರಬೇಕಾದ ಕನ್ನಡಕಗಳು ನಗರದ ದುರ್ಗಿಗುಡಿಯ ಕೆಲವು ಕನ್ನಡಕದ ಆಂಗಡಿಗಳಲ್ಲಿ ರಾರಾಜಿಸುತ್ತಿವೆ.!?ರೂಮ್ ನಂಬರ್ 21ರಲ್ಲಿ ಇರಬೇಕಾದ ಕನ್ನಡಗಳು ಅಲ್ಲಿಂದ ದುರ್ಗಿಗುಡಿಯ ಕನ್ನಡಕದ ದುಖಾನು ಸೇರಿದ್ದು ಹೇಗೆ.?ಇದನ್ನು ಮೆಗ್ಗಾನ್ ಆಸ್ಪತ್ರೆಯಲ್ಲಿ ಯಾರಿಗೂ ಅರಿವಿಗೆ ಬಾರದ ರೀತಿ ತೆಗೆದುಕೊಂಡು ಹೋದ ಖದೀಮರು ಯಾರು.? ಈ ಎಲ್ಲಾ ಬೆಳವಣಿಗೆ ಅಧಿಕಾರಿಗಳ ಗಮನದಲ್ಲಿಲ್ಲವೆ.?ಅಥವಾ ಅವರಿಗೂ ಈ ಹಡಬೆ ಹಣದಲ್ಲಿ ಪಾಲಿದೇಯಾ.!? ಯಾವ ಯಾವ ಆಂಗಡಿಗಳಿಗೆ ಮೆಗ್ಗಾನ್ ಆಸ್ಪತ್ರೆಯ ಕನ್ನಡಕಗಳು ಅಕ್ರಮವಾಗಿ ಬಿಕರಿಯಾಗುತ್ತಿವೆ ಎಂದರೆ ನೀವು ಒಮ್ಮೆ ಬೇರಗಾಗುತ್ತಿರಿ.! ಇವರೇನು ಸರ್ಕಾರಿ ನೌಕರರ ಅಥಾವ ಸರ್ಕಾರಕ್ಕೆ ವಂಚಿಸುವ ಖದೀಮರ. ಎಲ್ಲವನ್ನೂ ಸವಿವರವಾಗಿ ತಿಳಿಸುತ್ತೇನೆ. ಸಂಜಯ್, ಸಂತೋಷ್ ಮತ್ತು ಬಾಬು ಈ ಖದೀಮರ ವಿರುದ್ಧ ಲೋಕಾಯುಕ್ತರಿಗೆ ದೂರು ದಾಖಲಿಸುವ ಆಗತ್ಯವಿದೆ.ಪ್ರತಿವರ್ಷ ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಗೆ ಒಂದು ಅಂದಾಜಿನ ಪ್ರಕಾರ ಎಷ್ಟು ಕನ್ನಡಕಗಳನ್ನು ಖರೀದಿಸಿ ತರುತ್ತಾರೆ .? ಅದು ಯಾವ ಅಂಗಡಿಯಿಂದ ಖರೀದಿಸುತ್ತಾರೆ.? ಎಷ್ಟು ವಿಧದ ಕನ್ನಡಕಗಳು ಖರೀದಿಸಲಾಗುತ್ತದೆ.?ಕಣ್ಣಿನ ವಿಭಾಗದ ರೂಮ್ ನಂ 21 ಹೊದ ನಂತರದಲ್ಲಿ ಸ್ಟಾಕ್ ಮೈಂಟೆನ್ ಮಾಡುವವರು ಯಾರು.? ಪ್ರತಿ ಕನ್ನಡಕವನ್ನು ಕೊಡುವಾಗ ಯಾವ ರೀತಿಯಲ್ಲಿ ದಾಖಲಿಸುತ್ತಾರೆ.?ಮೆಗ್ಗಾನ್ ಆಸ್ಪತ್ರೆಗೆ ವರ್ಷಕ್ಕೆ ಕನ್ನಡಕ್ಕಾಗಿ ಎಷ್ಟು ಹಣ ವಿನಿಯೋಗ ಮಾಡುತ್ತದೆ.? ಎನ್ನುವುದಕ್ಕಾಗಿ ದೂರು ದಾಖಲಿಸಿ ಕದ್ದ ಖದೀಮರಿಗೆ ಸರಿಯಾದ ಶಿಕ್ಷೆ ಆಗುವ ಹಾದಿಯಲ್ಲಿ ಪತ್ರಿಕೆ ಮುಂದಾಗಲಿದೆ. ಈ ಕೊಠಡಿಯಲ್ಲಿ ಜಾಂಡಾ ಹೂಡಿರುವ ನೇತ್ರಾ ಅಧಿಕಾರಿಗಳ ಒಂದು ದಿನದ ಕಮಾಯಿ ಎಷ್ಟು.? ಇವರ ಬೆನ್ನಿಗೆ ಯಾವ ಯಾವ ಅಧಿಕಾರಿಗಳು ಇದ್ದಾರೆ.? ಎಲ್ಲವನ್ನೂ ತಿಳಿಸುತ್ತೇವೆ. ಮೆಗ್ಗಾನ್ ಆಸ್ಪತ್ರೆ ರೂಮ್ ನಂಬರ್ 21ರ ಕಣ್ಣಿನ ವಿಭಾಗದ ಗೋಲ್ ಮಾಲ್ ಕನ್ನಡಕಗಳು.!ದುರ್ಗಿಗುಡಿಯ ಯಾವ ಯಾವ ಕನ್ನಡಕದ ದುಖಾನಿನಲ್ಲಿವೆ.? ಕೆಲವೊಂದು ಸಾಕ್ಷಿ ಸಮೇತ ನಿಮ್ಮ ಮುಂದೆ ಬರಲಿದ್ದೇನೆ.ಸರ್ಕಾರಿ ಹಣ ತಿಂದು ಸರ್ಕಾರಿ ಬೋಕ್ಕಸವನ್ನೆ ಕನ್ನಹಾಕುತ್ತಿರುವ ಖದೀಮರಿಗೆ ಇಲ್ಲಿ ಶಿಕ್ಷೆಯಾಗಬೇಕಿದೆ…