ಶಿವಮೊಗ್ಗ ಮಹಾನಗರ ಪಾಲಿಕೆಯಲ್ಲಿ ಕೂಳುಬಾಕರ ದಂಡು.!? ಕಮಿಷನರ್ ಕಥೆ ಏನು.? ಅರ್ ಮಂಜುನಾಥನ ಮಹಿಮೆ ಏನು.?
ASHWASURYA/SHIVAMOGGA
news.ashwasurya.in
ಅಶ್ವಸೂರ್ಯ/ಶಿವಮೊಗ್ಗ: ಇನ್ನೂ ಶಿವಮೊಗ್ಗವಾಗಲಿ ಶಿವಮೊಗ್ಗ ಮಹಾನಗರ ಪಾಲಿಕೆಯಾಗಲಿ ಉದ್ಧಾರವಾಗಲಾರದು ಎಂಬ ಕಟು ಸತ್ಯ ನಿಕ್ಕಿಯಾಗಿದೆ. ಶಿವಮೊಗ್ಗ ಮಹಾನಗರ ಪಾಲಿಕೆ ಸ್ಮಾರ್ಟ್ ಸಿಟಿ ಎನ್ನುವುದು ಹೆಸರಿಗಷ್ಟೆ ಎನ್ನುವಂತಾಗಿದೆ.!ಸ್ಮಾರ್ಟ್ ಸಿಟಿ ಅದ ನಂತರದಲ್ಲಿ ಶಿವಮೊಗ್ಗ ನಗರ ಉದ್ದಾರವಾಗಬಹುದೆನ್ನುವ ನಂಬಿಕೆ ಸಾರ್ವಜನಿಕರಲ್ಲಿತ್ತು ಅದು ಇಂದಿಗೆ ನೆಗೆದು ಬಿದ್ದು ಹೋಗಿದೆ.ಮಹಾನಗರ ಪಾಲಿಕೆಯಲ್ಲಿ ಕೂಳುಬಾಕರ ದಂಡು ನೋಡಿದರೆ ಉದ್ದಾರವಾಗಬಹುದು ಎನ್ನುವ ಸಣ್ಣ ಬರವಸೆಯು ಇಲ್ಲದಂತಾಗಿದೆ.ಆದರೆ ಅದೀಗ ಶುದ್ಧ ಸುಳ್ಳು ಎನ್ನುವುದು ಯತಾ ಪ್ರಕಾರ ಖಚಿತವಾಗತೊಡಗಿದೆ. ಮಹಾನಗರ ಪಾಲಿಕೆಯ ಎಲ್ಲಾ 35 ವಾರ್ಡಿನ ಜನ ಹಾಹಾಕಾರವೆದ್ದಿದ್ದಾರೆ. ಸರಿಯಾಗಿ ಕುಡಿಯಲು ನೀರಿಲ್ಲ. ಗಟಾರದ ಗಲಿಜು ರಸ್ತೆಯ ಮೇಲೆ ಹರಿದು ಕೊಚ್ಚಿಕೊಂಡು ಹೋಗುತ್ತಿದೆ.ರಸ್ತೆ ಅಗಲಿ ಕರಣದ ಹೆಸರಿನಲ್ಲಿ ನಗರದ ರಸ್ತೆಗಳಿಗೆ ಅಘೋಚರ ರೋಗ ಹಿಡಿದಿದೆ. ಹಂದಿಗಳು ಮನುಷ್ಯರ ಸಂಖೆಗಳಿಗಿಂತಲು ಹೆಚ್ಚು ಸಂಖ್ಯೆಯಲ್ಲಿ ಸಂತಾನ ಬೆಳಸಿಕೊಂಡು ರೋಡು ರೋಡುಗಳಲ್ಲಿ Ramp Walk ಮಾಡುತ್ತಿವೆ.! ಪ್ರಾಯಶಃ ಭಯಾನಕ ಹಂದಿಜ್ವರವೇನಾದರೂ ಕರ್ನಾಟಕದಲ್ಲಿ ಕಾಣಿಸಿಕೊಂಡರೆ ಅದು ಶಿವಮೊಗ್ಗದಿಂದಲೇ ಬೇರೆ ಊರಿಗೆ ರವಾನೆಯಾಗುವ ಸಾಧ್ಯತೆ ಕೂಡಾ ಇದೆ. ಹೀಗೆ ಗಬ್ಬೆದ್ದು ಹೋಗಿರುವ ನಗರದ ವ್ಯವಸ್ಥೆಯನ್ನು ಸರಿ ಪಡಿಸಿ ಮೂಲಭೂತ ಸೌಕರ್ಯ ಕಲ್ಪಿಸ ಬೇಕಾದ ಮಹಾನಗರ ಪಾಲಿಕೆಯ ಕಮಿಷನರ್ ಮತ್ತು ಅಧಿಕಾರಿಗಳ ವರ್ಗ ನುಂಗುಬಾಕರ ದಂಡಿನಂತೆ ಗೋಚರಿಸುತ್ತಿದ್ದಾರೆ.!? ಈ ಮಹಾನಗರ ಪಾಲಿಕೆಯಲ್ಲಿ ಅಧಿಕಾರಿಗಳು. ಯಾರು…?ಕಮಿಷನರ್ ಯಾರು.? ಕಮಿಷನರ್ ಪಿಎ ಯಾರು..?ಮತ್ತು ಧಗಾಕೋರ ದಲ್ಲಾಳಿಗಳು ಯಾರು..?? ಎನ್ನುವುದು ಸುಲಭಕ್ಕೆ ತಿಳಿಯುವುದಿಲ್ಲ ಎಲ್ಲವೂ ಆಯೋಮಯವಾಗಿದೆ..? ಕೆಲವರನ್ನು ಬಿಟ್ಟಿ ಎಲ್ಲರೂ ಇಲ್ಲಿ ಸರಿಸಮಾನರು, ಒಂದಷ್ಟು ಕಾಸು ದಕ್ಕಿದಷ್ಟು ಸುಖವನ್ನು ಹಂಚಿಕೊಂಡು ತಿನ್ನುವವರೆ ..!! ಮಹಾನಗರ ಪಾಲಿಕೆಯ ಕಮಿಷನರ್ ಕವಿತಾ ಯೋಗಪ್ಪನವರ್ ಮತ್ತು ಅಪ್ತಾ ಸಹಾಯಕನಂತೆ ಗೋಚರಿಸುವ ಆರ್ ಮಂಜುನಾಥ್ ಮತ್ತು ಮತ್ತವರ ಕೈಕೆಳಗಿನ ಕೆಲವು ಅಧಿಕಾರಿಗಳು ಹಾಗೂ ಪಾಲಿಕೆಯ ಕಂದಾಯ ಇಲಾಖೆಯಲ್ಲಿರುವ ಕೆಲವು ಖದೀಮರು ಪಾಲಿಕೆಯ ಬೇರೆ ಬೇರೆ ವಿಭಾಗದ ಒಂದಷ್ಟು ಅಧಿಕಾರಿಗಳು ಮಹಾನಗರ ಪಾಲಿಕೆಯ ಗಟಾರದಲ್ಲಿ ಕುಳಿತು ಭಕ್ಷಣೆ ಮಾಡುತ್ತಿದ್ದಾರೆ. ಭ್ರಷ್ಟಚಾರ, ಅಸಡ್ಡೆ, ಅಟ್ಟಹಾಸ, ಒಳಜಗಳಗಳು ಮಹಾನಗರ ಪಾಲಿಕೆಯ ಅಡ್ಡೆಯಲ್ಲಿ ಹೊಗೆಯಾಡತೊಡಗಿದೆ.! ಕಳೆದ ಎರಡು ವರ್ಷವಾಯ್ತು ಮಹಾನಗರ ಪಾಲಿಕೆಗೆ ಚುನಾವಣೆ ನೆಡೆಯದೆ ಇರುವುದು ಒಂದು ರೀತಿಯ ದುರಂತವಾಗಿದೆ.! ಮಹಾನಗರ ಪಾಲಿಕೆಯ ಭ್ರಷ್ಟಾಚಾರವನ್ನು ಪ್ರಶ್ನೆ ಮಾಡುವವರಿಲ್ಲದೆ ಮನಬಂದಷ್ಟು ಮುಕ್ಕುವ ಕೈಯಾಲಿಯನ್ನು ಇಲ್ಲಿಯ ಕಂದಾಯ ಇಲಾಖೆ ಮತ್ತು ಇನ್ನೂಳಿದ ಕೇಲವು ವಿಭಾಗದ ಅಧಿಕಾರಿಗಳು ಮುಕ್ಕುವುದರಲ್ಲೆ ತಲ್ಲಿನರಾಗಿದ್ದಾರೆ.!
ಇನ್ನೂ ಆರ್ ಮಂಜುನಾಥನ ಬಗ್ಗೆ ಇಲ್ಲಿ ಹೇಳಿದರೆ ಪ್ರಯೋಜನ ವಿಲ್ಲ ಆತನಿಗೆ ಅಂತಲೆ ಭಾಗ-1 2 3 ಹೀಗೆ ಸರಣಿ ವರದಿಗಳನ್ನು ಬರೆಯುವುದಿದೆ ಅವನು ತಿಂದುಂಡು ಹಿಕ್ಕೆ ಹಾಕಿರುವುದು ಮಹಾನಗರ ಪಾಲಿಕೆಯಲ್ಲೆ ಗಬ್ಬುನಾರುತ್ತಿದೆ.! ಹಾಗೂ ಮಹಾನಗರ ಪಾಲಿಕೆಯ ಕಮಿಷನರ್ ಕಮಿಷನ್ ಕಥೆ ದೊಡ್ಡದಿದೆ.!? ಎಲ್ಲವನ್ನೂ ಬಾಚಿ ಬರಗಿ ಕೊಡುವ ಮಂಜುನಾಥನಿಂದ ಮಲೆನಾಡ ತವರು ನಗರಿಯ ಮಹಾನಗರ ಪಾಲಿಕೆ ಇಲ್ಲಿಗೆ ಬರುವ ಕಮಿಷನರ್ ಗಳ ದೊಡ್ಡ ಅಮದನಿಯ ಕೇಂದ್ರವಾಗಿದೆ.! ಇವರು ಯಾವ ಯಾವ ಮೂಲದಿಂದ ಗೆಬರುತ್ತಿದ್ದಾರೆ.ಇವರಿಗೆ ಮಧ್ಯವರ್ತಿಯಾಗಿ ಮಂಜುನಾಥನ ಕಥೆ ಏನು.? ಎಲ್ಲವನ್ನೂ ಮುಂದಿನ ವರದಿಯಲ್ಲಿ ತಿಳಿಸುವೆ. ಕೆಲವು ಅಧಿಕಾರಿಗಳು ಒಬ್ಬರಿಗೊಬ್ಬರು ಮೀರಿಸುವಂತೆ ಲೂಟಿಯ ಸ್ಪರ್ಧೆ ನಡೆಸುತ್ತಿದ್ದಾರೆ. ನಕಲಿ ಬಿಲ್ಲು.? ನಕಲಿ ಟೆಂಡರ್.? ನಕಲಿ ಖಾತೆ.? ನಗರದ ಪಾಲಾನುಭವಿ ನಾಗರಿಕರಿಗೆ ತಲುಪಬೇಕಾದ ಹತ್ತು ಹಲವು ಯೋಜನೆಯ ಹಣ ಕಣ್ಣಿಗೆ ಕಾಣದಂತೆ ಮಾಯವಾತಗುತ್ತಿದೆಯಾ.? ಮತ್ತು ಪಾಲಿಕೆಯ ಜಾಗವನ್ನು ಹಣದಾಸೆಗೆ ಕೆಲವು ಖದೀಮರಿಗೆ ಖಾತೆ ಮಾಡಿರುವುದು ಮತ್ತು ನಗರದಲ್ಲಿ ನಡೆದಿರುವ ಯಾವುದೇ ಕಾಮಗಾರಿಯಾಗಿರಲಿ ಸಂಪೂರ್ಣ ಕಳಪೆ ಮಟ್ಟದಾಗಿದೆ. ಒಟ್ಟಿನಲ್ಲಿ ಅಕ್ರಮಗಳ ಅಡ್ಡೆಯಾಗಿರುವ ಮಹಾನಗರ ಪಾಲಿಕೆಗೆ ಕಮಿಷನರ್ ಕವಿತಾ ಯೋಗಪ್ಪನವರ್ ಚಕ್ರಾಧಿಪತ್ಯದ ಚುಕ್ಕಾಣಿ ಹಿಡಿದರೆ,ಆರ್ ಮಂಜುನಾಥ್ ಮಂತ್ರಿ ಸ್ಥಾನವನ್ನು ಅಲಂಕರಸಿ ದಿನದ 10 ಗಂಟೆಗಳು ಕೂಡ ತನ್ನದಲ್ಲದ ಸ್ಥಾನದಲ್ಲಿ ಕುಳಿತು ಭರ್ಜರಿ ಭೋಜನಕ್ಕೆ ಮುಂದಾಗಿದ್ದಾನೆ.! ಈ ಹಿಂದೆಕೂಡ.ಇದೆ ರೀತಿ ಲಂಚದ ಹಾದಿಯಲ್ಲಿ ಹಣದ ಪಿಂಡಿಗೆ ಕೈಹಾಕಿದ ಸಂಧರ್ಭದಲ್ಲಿ ಲೋಕಾಯುಕ್ತರು ಎಡತಾಗಿ ಸರಿಯಾದ ಗುನ್ನ ಇಟ್ಟಿದ್ದರು.! ಅ ನಂತರ ಚಿಕ್ಕಮಗಳೂರಿನಲ್ಲಿ ಒಂದಷ್ಟು ವರ್ಷ ಕೆಲಸ ಮಾಡಿ ಬಂದದ್ದು ಮರಳಿ ಗೂಡಿಗೆ ಲೋಕಾಯುಕ್ತರ ಗುನ್ನ ತಿಂದರು ತನಗೆನು ಆಗೆ ಇಲ್ಲ ಎನ್ನುವಂತೆ ಮತ್ತದೆ ಖಯಾಲಿಗೆ ಮುಂದಾಗಿರುವ ಇತನ ಸವಿವರವಾದ ವರದಿ ಮುಂದಿನ ಸಂಚಿಕೆಯಲ್ಲಿ ಬರೆಯಲಿದ್ದೇನೆ.?
ಆರ್ ಮಂಜುನಾಥ್
ಶಿವಮೊಗ್ಗ ಮಹಾನಗರ ಪಾಲಿಕೆಯಲ್ಲಿ ಒಂದಷ್ಟು ಮಂದಿಯನ್ನು ಬಿಟ್ಟರೆ ಇನ್ನೂಳಿದ ಕೂಳುಬಾಕರ ಪಡೆ ಒಟ್ಟಿಗೆ ಸೇರಿ ಇಷ್ಟರಲ್ಲಿಯೇ ಸಂಪೂರ್ಣ ಮಹಾನಗರ ಪಾಲಿಕೆಯನ್ನು ಜಬಡಿ ಹಾಕುವುದರಲ್ಲಿ ಯಾವುದೇ ಅನುಮಾನ ಬೇಡ.!? ಇದು ಆಶ್ಚರ್ಯವು ಅಲ್ಲ. ಆ ಮಟ್ಟಕ್ಕೆ ಶಿವಮೊಗ್ಗ ಮಹಾನಗರ ಪಾಲಿಕೆಯಲ್ಲಿ ಹಣದಾಹಿಗಳ ಜಾತ್ರೆ ಸೇರಿದೆ.!
ಇಲ್ಲಿ ಯಾವ ಕಾಮಗಾರಿಯೂ ಪರಿಪೂರ್ಣ ಆಗುವುದಿಲ್ಲ. ಕಾಮಗಾರಿ ಆದರೂ ಸಂಪೂರ್ಣ ಕಳಪೆ ಮಟ್ಟದ್ದಾಗಿರುತ್ತದೆ. ಯಾವ ಯೋಜನೆಯೂ ಸಫಲವಾಗುವುದಿಲ್ಲ. ಬಂದ ಬಂದ ಯೋಜನೆಗಳೆಲ್ಲ ಕಾರ್ಯ ರೂಪಕ್ಕೆ ಬರುವ ಮೊದಲೆ ಮೀಸಲಿಟ್ಟ ಹಣ ರಣಹದ್ದುಗಳ ಪಂಕ್ತಿಯೂಟಕ್ಕೆ ಬಿಕರಿಯಾಗುತ್ತಲೇ ಇದೆ. ಶಿವಮೊಗ್ಗ ನಗರವೇ ದೊಡ್ಡದೊಂದು
ತಿಪ್ಪೆಗುಂಡಿಯಾಗಿದೆ.
ದಾಖಲೆ ತೆರೆದು ನೋಡಿದರೆ ಕಾಮಗಾರಿ ನಡೆದಿದೆ ಎಂದು ಗೋಚರಿಸಿದರೂ ಕಾಮಗಾರಿ ನಡೆದ ಸ್ಥಳವನ್ನು ಪರಿಶೀಲನೆ ಮಾಡಿದರೆ ನೀವೇ ದಂಗಾಗಿ ಹೋಗಬಹುದು. ಎಲ್ಲೋ ಒಂದೆರೆಡು ಕಡೆ ತ್ಯಾಪೆ ಹಾಕಿ ಇಲ್ಲ ಕಳಪೆ ಕಾಮಗಾರಿ ಮಾಡಿ ಉಳಿದಂತೆ ಸಂಬಂಧ ಪಟ್ಟ ಅಧಿಕಾರಿಗಳು ಕೆಲವು ಗುತ್ತಿಗೆದಾರರು ದುಂಡಾಗಾಗುತ್ತಿದ್ದಾರೆ.ಕಮಿಷನರ್ ಕವಿತಾ ಯೋಗಪ್ಪನವರ್ ಅವರ ಕಣ್ಣಿನ ನೆರಕ್ಕೆ ಎಲ್ಲವು ನೆಡೆಯುತ್ತಿದೆ. ಹಾಗೂ ಕಾಮಗಾರಿ ನೆಡೆಯುವ ಸ್ಥಳಕ್ಕೆ ಶವ ಸಂಸ್ಕಾರಕ್ಕೆ ಬಂಧಂತೆ ಬಂದು ಹೋಗುವ ಕೆಲವು ಅಧಿಕಾರಿಗಳು ಸೇರಿಕೊಂಡು ಮಹಾನಗರ ಪಾಲಿಕೆಯ ಒಂದೆ ಗೂಡಿನ ಹಕ್ಕಿಗಳಂತೆ ತಮ್ಮ ಶಕ್ತಿಯನುಸಾರ ನುಂಗಿ ಹಿಕ್ಕೆ ಹಾಕುತ್ತಿದ್ದಾರೆ.
ಒಂದು ಸಂತೋಷದ ವಿಷಯವೆಂದರೆ ಇಲ್ಲಿ ಕಂದಾಯ, ಆರೋಗ್ಯ,ಕಾಮಗಾರಿ ಇನ್ನಿತರ ವಿಭಾಗ ಎನ್ನುವುದನ್ನು ಮರೆತು ಬೇಧ ಭಾವವಿಲ್ಲದೆ ನಾವೇಲ್ಲ ಒಂದೇ ಸೂರಿನ ಮಕ್ಕಳು ಎಂದು ತಮ್ಮ ಶಕ್ತಿಯನುಸಾರ ದೋಚುತ್ತಿದ್ದಾರೆ. ಬೆರಳೆಣಿಕೆಯ ಕೆಲವರನ್ನು ಬಿಟ್ಟರೆ ಉಳಿದವರೆಲ್ಲಾ ರೇಸಿಗೆ ಬಿದ್ದವರಂತೆ ಗಟಾರದ ಗುಂಡಿಗಳಲ್ಲೂ ಭ್ರಷ್ಟಚಾರದ ಕೈ ಚಾಚಿದ್ದಾರೆ. ಅದರಲ್ಲೂ ಕಳೆದ ಎರಡು ವರ್ಷದ ಈಚೇಗೆ ಮಹಾನಗರ ಪಾಲಿಕೆಯನ್ನ ಹಸಿರು ಹುಲ್ಲುಗಾವಲ್ಲನ್ನಾಗಿ ಮಾಡಿಕೊಂಡಿದ್ದಾರೆ.! ಪೂರ ಪಾಲಿಕೆಯ ತುಂಬಾ ಭ್ರಷ್ಟಚಾರ ಪರ್ವ ಆಚರಿಸಿದ ಕೆಲವರಂತೂ ಕೋಟಿಗೆ ತೂಗುತ್ತಿದ್ದಾರೆ. ಇಲ್ಲಿ ಕಮಿಷನರ್ ಆಗಿ ಬರುವವರಲ್ಲಿ ಕೆಲವರಂತು ಮಾಡದ ಅನಾಚಾರಗಳಿಲ್ಲ. ಮೂತಿ ತುರುಕಿ ಕಾಸಿನ ರುಚಿ ನೋಡದ ಯಾವ ತಿಪ್ಪೆಗುಂಡಿಗಳು ನಗರದಲ್ಲಿ ಉಳಿದಿಲ್ಲ. ಅ ಮಟ್ಟಕ್ಕೆ ಕಂಡ ಕಂಡಲ್ಲಿ ಹಣ ನುಂಗಲು ಮುಂದಾಗಿದ್ದಾರೆ..!
ಅ ಮಟ್ಟದ ಭ್ರಷ್ಟಾಚಾರದ ಕೊಂಪೆ ಆಗಿರುವ ಶಿವಮೊಗ್ಗ ಮಹಾನಗರ ಪಾಲಿಕೆಯು ಇನ್ನೂ ಉದ್ಧಾರವಾದಂತೆ.! ಮುಂದಿನ ವರದಿಯಲ್ಲಿ ಕಮಿಷನರ್ ನೆರಳಿನಂತೆ ಪಾಲಿಕೆಯಲ್ಲಿ ಸರ್ವಾಧಿಕಾರಿಯಂತೆ ಗೋಚರಿಸುವ ಮತ್ತು ಅವನು ತಿಂದುಂಡು ಹಣದಾಸೆಗೆ ಮಾಡಿದ ಪಾಲಿಕೆಯ ನಿವೇಶನಗಳೆಷ್ಟು..? ಈ ಹಿಂದೆ ಲೋಕಾಯುಕ್ತರ ಖೆಡ್ಡಕ್ಕೆ ಬಿಳಲು ಕಾರಣವೇನು…? ನಿರೀಕ್ಷಿಸಿ ಇನ್ನೂ ಕಂದಾಯ ಇಲಾಖೆಯಲ್ಲು ಮಂಜುನಾಥನ ಮಹಿಮೆ ಅಪಾರ.? ಇಲ್ಲಿರುವ ಭ್ರಷ್ಟ ಆರ್ಐ ಗಳ ಕರ್ಮಕಾಂಡದ ವರದಿ ನಿಮ್ಮ ಮುಂದೆ… ಬರಲಿದೆ..