Headlines

ತೀರ್ಥಹಳ್ಳಿ : ಪೆಟ್ರೋಲ್ ಬಂಕ್ ತೋರಿಸಿ 17 ಜನರಿಗೆ ಪಂಗನಾಮ ಹಾಕಿದ್ಲಾ ವಂಚಕಿ ಆಂಟಿ ಆರತಿ ವಿಶಾಲ್.!

ಅಶ್ವಸೂರ್ಯ/ಶಿವಮೊಗ್ಗ: ಆರತಿ ವಿಶಾಲ್ ತನ್ನ ಪೆಟ್ರೋಲ್ ಬಂಕ್‌ ಅನ್ನೆ ಬಂಡವಾಳ ಮಾಡಿಕೊಂಡು ಅದನ್ನು ಅವರಿವರಿಗೆ ತೋರಿಸಿ, ಭೂಮಿಪೂಜೆಯಿಂದ ಆರಂಭಗೊಂಡ ಇವಳ ಎತ್ತುವಳಿ ಪೆಟ್ರೋಲ್ ಬಂಕ್ ಉದ್ಘಾಟನೆಯ ವರೆಗೂ ಲಕ್ಷ ಲಕ್ಷ ಹಣ ಪಡೆದು, ಆನಂತರ ಹಣವು ನೀಡದೆ, ಪೆಟ್ರೋಲ್ ಬಂಕ್ ನಲ್ಲಿ ಪಾಲುದಾರಿಕೆ ಕೂಡ ನೀಡದೆ ವಂಚಿಸಿದ ಮಹಿಳೆ ಆರತಿ ವಿಶಾಲ್ ವಿರುದ್ದ ಇದೀಗ ವಂಚನೆ ಆರೋಪ ಕೇಳಿಬಂದಿದೆ.

ಆರತಿ ವಿಶಾಲ್ ಮೂಲತಃ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಮುಡುಬ ಗ್ರಾಮದವರಾಗಿದ್ದು, ಗೋಮತಿ ಪೆಂಟ್ರೋಲ್ ಬಂಕ್ ಮಾಲೀಕರಾಗಿದ್ದು, ಪೆಟ್ರೋಲ್ ಬಂಕ್‌ ನೋಡಿಯೇ ಆಕೆಯ ನಗು ಮೊಗಕೆ ಲಕ್ಷ ಲಕ್ಷ ಹಣಕೊಟ್ಟವರು
ಹಣ ಕಳೆದುಕೊಂಡು ಸತತ ಎರಡು ವರ್ಷಗಳಿಂದ ಕೊಟ್ಟ ಹಣ ವಾಪಸ್ ಪಡೆಯಲು ಪ್ರಯತ್ನಮಾಡಿ ಬೇಸತ್ತು ಕೆಲವರು ನ್ಯಾಯಾಲಯದ ಮೆಟ್ಟಿಲೇರಿದ್ದಾರೆ ಕಳೆದ ಎರಡು ವರ್ಷಗಳಿಂದ ತೀರ್ಥಹಳ್ಳಿ, ಶಿವಮೊಗ್ಗ ನಗರದ ಸುಮಾರು 17 ಮಂದಿ ವಂಚನೆಗೆ ಒಳಗಾಗಿದ್ದಾರೆ ಎನ್ನಲಾಗುತ್ತಿದ್ದು. ಬಂಕ್ ಮಾಲೀಕಿ ಆರತಿ ಅವರ ಮೇಲೆ ಆರೋಪ ಕೇಳಿಬಂದಿದೆ.!?

ಈಕೆ ಎಲ್ಲರ ಬಳಿಯು ಬ್ಯಾಂಕ್ ಖಾತೆಯ ಮೂಲಕವೇ ಹಣ ಪಡೆದಿದ್ದಾರೆ ಎನ್ನಲಾಗಿದ್ದು, ಅದಕ್ಕೆ ಪ್ರತಿಯಾಗಿ ಚೆಕ್ ಹಾಗೂ ಮತ್ತಿತರ ಅಗತ್ಯ ದಾಖಲೆಗಳನ್ನು ನೀಡಿದ್ದಾರಂತೆ.? ಆದರೆ ಹಣ ಮರಳಿ ಕೇಳಿದವರಿಗೆ ವಾಪಸ್ ಕೋಡದೆ ಹಣ ಕೊಟ್ಡವರಿಗೆ ಆವಾಜ್ ಹಾಕಿದ್ದಾರೆ ಎನ್ನುವ ಆರೋಪ ಕೂಡ ಇವರ ಮೇಲಿದೆ.? ಪ್ರಕರಣ ನ್ಯಾಯಲಯದಲ್ಲಿದ್ದು ಇನ್ನಷ್ಟು ಮಾಹಿತಿ ಲಭ್ಯವಾಗಬೇಕಿದೆ.

Leave a Reply

Your email address will not be published. Required fields are marked *

Optimized by Optimole
error: Content is protected !!