Headlines

ಕೇರಳ:ಅಮ್ಮ ,ಅಜ್ಜಿ,,ಸಹೋದರ, ಚಿಕ್ಕಪ್ಪ, ಚಿಕ್ಕಮ್ಮ ಗೆಳತಿ ಸೇರಿ ಆರು ಮಂದಿಯನ್ನು ಕೊಂದು ಪೊಲೀಸರಿಗೆ ಶರಣಾದ ಯುವಕ..!!

ಅಶ್ವಸೂರ್ಯ/ ತಿರುವನಂತಪುರಂ: ತನ್ನ ತಾಯಿ ಸೇರಿದಂತೆ ಆರು ಮಂದಿಯನ್ನು ಹತ್ಯೆಗೈದಿದ್ದೇನೆ ಎಂದು ಯುವಕನೊಬ್ಬ ವೆಂಜಾರಮೂಡು ಠಾಣೆ ಪೊಲೀಸರಿಗೆ ಶರಣಾಗಿರುವ ಭಯಾನಕ ಘಟನೆಯೊಂದು ಕೇರಳ ರಾಜ್ಯದ ತಿರುವನಂತಪುರಂ ನಡೆದಿದೆ. ಆದರೆ, ಈ ಸಾವುಗಳು ಹಾಗೂ ಈ ಕೃತ್ಯದ ಹಿಂದಿನ ಉದ್ದೇಶವನ್ನು ಪೊಲೀಸರಿನ್ನೂ ದೃಢಪಡಿಸಬೇಕಿದೆ ಸ್ಥಳೀಯ ಮನೋರಮಾ ಸುದ್ದಿ ವಾಹಿನಿ (Manorama News) ವರದಿ ಮಾಡಿದೆ. ಈವರೆಗೆ ಆರು ಮಂದಿಯು ಮೃತಪಟ್ಟಿರುವುದು ದೃಢಪಟ್ಟಿದೆ ಎಂದೂ ವರದಿಯಲ್ಲಿ ಹೇಳಲಾಗಿದೆ.
ಆರೋಪಿಯನ್ನು ಪೆರುಮಳದ ನಿವಾಸಿ ಅಫಾನ್ (23) ಎಂದು ಗುರುತಿಸಲಾಗಿದೆ. ನಾನು ನನ್ನ ತಾಯಿ,ಅಜ್ಜಿ, ಸಹೋದರ, ಚಿಕ್ಕಪ್ಪ,ಚಿಕ್ಕಮ್ಮ, ಗೆಳತಿಯನ್ನು ಮೂರು ವಿವಿಧ ನಿವಾಸಗಳಲ್ಲಿ ಹತ್ಯೆಗೈದಿದ್ದೇನೆ ಎಂದು ಆತ ಹೇಳಿಕೊಂಡಿದ್ದಾನೆ.

ಮೊದಲಿಗೆ ಆತ ಸೋಮವಾರ ಮುಂಜಾನೆ ಸಂಜೆ ಸುಮಾರು 5.30ರ ವೇಳೆಗೆ ಪಂಗೋಡೆಯಲ್ಲಿ ವಾಸಿಸುತ್ತಿದ್ದ ತನ್ನ ಅಜ್ಜಿ ಸಲ್ಮಾ ಬೀವಿ (88) ಅನ್ನು ಆಕೆಯ ನಿವಾಸದಲ್ಲಿ ಕೊಚ್ಚಿ ಹತ್ಯೆಗೈದಿದ್ದಾನೆ. ನಂತರ ಅಲ್ಲಿಂದ ಹೋಗಿ ಎಸ್.ಎನ್. ಪುರಂನಲ್ಲಿ ವಾಸಿಸುತ್ತಿದ್ದ ನನ್ನ ಚಿಕ್ಕಪ್ಪನ ನಿವಾಸಕ್ಕೆ ತೆರಳಿ ನನ್ನ ಚಿಕ್ಕಪ್ಪ ಲತೀಫ್ ಹಾಗೂ ಚಿಕ್ಕಮ್ಮ ಶಹೀದಾರನ್ನು ಕೊಚ್ಚಿ ಕೊಂದಿದ್ದಾನೆ. ಕೊನೆಗೆ ಪೆರುಮಳದಲ್ಲಿರುವ ನನ್ನ ನಿವಾಸಕ್ಕೆ ವಾಪಸಾಗಿ ಅಲ್ಲಿ 9ನೇ ತರಗತಿ ಓದುತ್ತಿರುವ ನನ್ನ ಕಿರಿಯ ಸಹೋದರ ಅಫ್ಸಾನ್ (14), ಹಾಗೂ ನನ್ನ ತಾಯಿ ಶೆಮಿ ಹಾಗೂ ಗೆಳತಿ ಫರ್ಸಾನಾ ಮೇಲೆ ದಾಳಿ ನಡೆಸಿದ್ದಾನೆ ಎಂದು ಹೇಳಿಕೊಂಡಿದ್ದಾನೆ..!! ಗಂಭೀರವಾಗಿ ಗಾಯಗೊಂಡಿದ್ದ ಈ ಆರು ಮಂದಿಯ ಪೈಕಿ, ಐದು ಮಂದಿ ಸ್ಥಳದಲ್ಲೆ ಮೃತಪಟ್ಟಿದ್ದು,ತೀವ್ರ ಹಲ್ಲೆಗೆ ಒಳಗಾಗಿರುವ ಆತನ ತಾಯಿ ಸಾವು ಬದುಕಿನೊಡನೆ ಹೋರಾಡಿ ಆಸ್ಪತ್ರೆಯ ಹಾಸಿಗೆಯ ಮೇಲೆ ಕೋನೆ ಉಸಿರೇಳೆದಿದ್ದಾರೆ.ಆರೋಪಿ ಅಫ್ಸಾನ್ ಈ ಅಪರಾಧ ಕೃತ್ಯವನ್ನು ಕೇವಲ ಎರಡು ಗಂಟೆಗಳೊಳಗೆ ನಡೆಸಿದ್ದಾನೆ ಎಂದು ವರದಿಯಾಗಿದೆ.

ಅಫ್ಸಾನ್ ಪೊಲೀಸ್ ಠಾಣೆಗೆ ತೆರಳುವುದಕ್ಕೂ ಮುನ್ನ ವಿಷ ಸೇವಿಸಿದ್ದ ಎಂದು ಹೇಳಲಾಗಿದೆ. ವಿಚಾರಣೆಯ ಸಂದರ್ಭದಲ್ಲಿ ಆತನ ಆರೋಗ್ಯ ಸ್ಥಿತಿ ಕ್ಷೀಣಿಸುತ್ತಿದ್ದಂತೆಯೆ, ಪೊಲೀಸರು ಆತನನ್ನು ತಿರುವನಂತಪುರಂನ ಸರಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಸಾಗಿಸಿದ್ದಾರೆ.
ಅಫ್ಸಾನ್ ಇತ್ತೀಚೆಗಷ್ಟೆ ತನ್ನ ಮನೆಗೆ ತನ್ನ ಗೆಳತಿಯನ್ನು ಕರೆ ತಂದಿದ್ದ. ಆತ ಯುಎಇಯಲ್ಲಿ ತನ್ನ ತಂದೆಯ ಪೀಠೋಪಕರಣ ವ್ಯವಹಾರದಲ್ಲಿ ನೆರವು ನೀಡುತ್ತಿದ್ದ. ಆದರೆ, ಆತನ ತಂದೆ ಹಣಕಾಸು ಬಿಕ್ಕಟ್ಟಿಗೆ ತುತ್ತಾಗಿದ್ದರಿಂದ, ಆತ ಮನೆಗೆ ಮರಳಿದ್ದ ಎಂದು ಪಂಚಾಯತಿ ಸದಸ್ಯ ಶಾಜಿ ತಿಳಿಸಿದ್ದಾರೆ.
ಅಫ್ಸಾನ್ ತನ್ನ ಅಜ್ಜಿಯ ಒಡವೆಗಳಿಗಾಗಿ ಅಮ್ಮನ ಬಳಿ ಕೇಳಿದ್ದನಂತೆ ಎಂದು ಹೇಳಲಾಗಿದೆ. ನನ್ನ ಸಂಬಂಧಿಕರು ನನಗೆ ಹಣಕಾಸು ನೆರವು ನೀಡಲು ನಿರಾಕರಿಸಿದ್ದರಿಂದ, ನಾನು ಅವರನ್ನೆಲ್ಲ ಸಾಮೂಹಿಕ ಹತ್ಯೆಗೈದೆ ಎಂದು ಪೊಲೀಸರಿಗೆ ನೀಡಿರುವ ಹೇಳಿಕೆಯಲ್ಲಿ ಅಫ್ಸಾನ್ ತಪ್ಪೊಪ್ಪಿಕೊಂಡಿದ್ದಾನೆ.

Leave a Reply

Your email address will not be published. Required fields are marked *

Optimized by Optimole
error: Content is protected !!