ಭಲೇಗೆ ಬಿದ್ದ ಬಾರಿಗಾತ್ರದ ಬಂಗುಡೆ ಮೀನು
ಕಾರವಾರ: ಆಶ್ಚರ್ಯ ಎನಿಸಿದರು ಸತ್ಯ ಬಲೆಗೆ ಬಿದ್ದ ಬೃಹತ್ ಗಾತ್ರದ ಬಂಗುಡೆ ಮೀನು..!!, 19 ಇಂಚು ಉದ್ದ 4.5 ಇಂಚು ಅಗಲ..!
ಕಾರವಾರ: ಉತ್ತರ ಕನ್ನಡದ ಕಡಲಾ ಕಿನಾರೆಯಲ್ಲಿ ಇದು ವರೆಗೂ ಭಲೇಗೆ ಬಿಳದಂತಹ ಬೃಹತ್ ಗಾತ್ರದ ಬಂಗುಡೆ ಮೀನೊಂದು ಕಾರವಾರದ ಅರಬ್ಬಿ ಸಮುದ್ರದಲ್ಲಿ ಬೈತಖೋಲ್ ಮೀನುಗಾರರ ಬಲೆಗೆ ಬಿದ್ದಿದ್ದು ಅಚ್ಚರಿ ಮೂಡಿಸಿದೆ.
ಈ ಮೀನು ಬೀಡು ಬಲೆ ಮೀನುಗಾರಿಕೆಗೆ ತೆರಳಿದ್ದ ಆನಂದ ಹರಿಕಂತ್ರ ಅವರ ಬಲೆಗೆ ಸಿಕ್ಕಿದ್ದು ಈ ಬಾರಿ ಗಾತ್ರದ ಬಂಗುಡೆ ಮಿನನ್ನು ನವೀನ್ ಹರಿಕಂತ್ರ ಖರೀದಿಸಿದ್ದಾರೆ, ವಿಶೇಷವಾಗಿ ಕಂಡಿರುವ ಬಂಗುಡೆ ಮಿನನ್ನು ಮೀನುಗಾರರ ಸಂಘದ ಜಿಲ್ಲಾ ಅಧ್ಯಕ್ಷ ವಿನಾಯಕ ಹರಿಕಂತ್ರ ಅವರಿಗೆ ನೀಡಿದ್ದಾರೆ.
ಈ ಮೀನು ಸುಮಾರು 19 ಇಂಚು ಉದ್ದ ಮತ್ತು 4.5 ಇಂಚು ಅಗಲ ಇದೆ. ಇಷ್ಟು ದೊಡ್ಡ ಗಾತ್ರದ ಬಂಗುಡೆ ಮಿನು ಕರ್ನಾಟಕದ ಕರಾವಳಿಯಲ್ಲಿ ಇದು ವರೆಗೂ ಪತ್ತೆಯಾಗಿರುವ ಮಾಹಿತಿ ಇಲ್ಲ ಎಂದು ಕರ್ನಾಟಕ ವಿಶ್ವ ವಿದ್ಯಾನಿಲಯದ ಕಡಲವಿಜ್ಞಾನ ವಿಭಾಗ ತಿಳಿಸಿದೆ.
ಭಲೇಗೆ ಬಿದ್ದ ಈ ದೊಡ್ಡ ಗಾತ್ರದ ಬಂಗುಡೆ ಮಿನನ್ನು ಸಾರ್ವಜನಿಕರ ವೀಕ್ಷಣೆಗಾಗಿ ಕಾರವಾರದ ಕಡಲವಿಜ್ಞಾನ ಕೇಂದ್ರದಲ್ಲಿ ಪ್ರದರ್ಶನಕ್ಕೆ ಇಡಲಾಗುವುದು ಎಂದು ವಿನಾಯಕ್ ಅವರು ತಿಳಿಸಿದ್ದಾರೆ.
ಸುಧೀರ್ ವಿಧಾತ, ಶಿವಮೊಗ್ಗ