Headlines

ಸಾಗರ ರಸ್ತೆಯ ಬ್ಲೂಮೂನ್ ಬಾರ್ ಬಳಿ ಇಬ್ಬರು ಯುವಕರ ಮೇಲೆ ಮಾರಣಾಂತಿಕ ಹಲ್ಲೆ.!ಆಟೋದಲ್ಲಿ ಬಂದು ಹಲ್ಲೆ ಮಾಡಿದ ಹಂತಕರು ಎಸ್ಕೇಪ್.!!

ಸಾಗರ ರಸ್ತೆಯ ಬ್ಲೂಮೂನ್ ಬಾರ್ ಬಳಿ ಇಬ್ಬರು ಯುವಕರ ಮೇಲೆ ಮಾರಣಾಂತಿಕ ಹಲ್ಲೆ.!ಆಟೋದಲ್ಲಿ ಬಂದು ಹಲ್ಲೆ ಮಾಡಿದ ಹಂತಕರು ಎಸ್ಕೇಪ್.!!

ಅಶ್ವಸೂರ್ಯ/ಶಿವಮೊಗ್ಗ: ಯಾಕೊ ಸಾಗರ ರಸ್ತೆಯ ಗ್ರಹಚಾರವೆ ನೆಟ್ಟಗಿಲ್ಲ.! ಸಾಗರ ರಸ್ತೆಯ ರಕ್ತದ ದಾಹ ಇನ್ನೂ ತಿರಿಲ್ಲ ಇದೆ ರಸ್ತೆಯಲ್ಲಿ ರೌಡಿಶೀಟರ್ ಸ್ಫಾಟ್ ನಾಗ, ಮತ್ತು ಲವ ಕುಶ ಸಹೋದರ ಹೆಣ ಬಿದ್ದಿತ್ತು ಮತ್ತು ಹಂದಿ ಅಣ್ಣಿಯ ಸಹಚರನೆಂದು ತ್ಯಾವರೆಕೊಪ್ಪದ ಬಳಿ ಆಟೋ ಚಾಲಕ ಮಂಜುನಾಥನ ಹೆಣ ಬಿದ್ದಿತ್ತು.ಈಗ ಮಂಜುನಾಥ್ ಮತ್ತು ಹರೀಶ ಎನ್ನುವ ಇಬ್ಬರು ಯುವಕರ ಮೇಲೆ ಮಾರಣಾಂತಿಕ ಹಲ್ಲೆಯಾಗಿದೆ.!ಸಾಗರ ರಸ್ತೆಯ ಬ್ಲೂಮೂನ್ ಬಾರಿನ ನೆಲ ಮಳಿಗೆಯಲ್ಲಿರುವ ವೈನ್ ಶಾಪ್ ನಲ್ಲಿ ಈ ಇಬ್ಬರು ಯುವಕರು ಕಂಟಪೂರ್ತಿ ಕುಡಿದು ಹೊರಬಂದಿದ್ದಾರೆ ಈ ಇಬ್ಬರು ಯುವಕರು ವೈನ್ ಶಾಪ್ ನಲ್ಲಿ ಕುಡಿಯುತ್ತಿರುವ ಮಾಹಿತಿ ಇದ್ದ ಇಬ್ಬರು ಹಂತಕರು ಅಟೋದಲ್ಲಿ ಅ ಸ್ಥಳಕ್ಕೆ ಬಂದಿದ್ದಾರೆ.

ಇಬ್ಬರು ಯುವಕರು ಇನ್ನೇನು ಕುಡಿದು ವೈನ್ ಶಾಪ್ ನಿಂದ ಹೊರಬರುತ್ತಿದ್ದಂತೆ ಆಟೋದಲ್ಲಿದ್ದ ಹಂತಕನೊಬ್ಬ ತಕ್ಷಣವೇ ಇಳಿದು ಏಕಾಏಕಿ ನಶೆಯ ಮತ್ತಿನಲ್ಲಿದ್ದ ಇಬ್ಬರು ಯುವಕರ ಮೇಲೆ ಕಬ್ಬಿಣದ ರಾಡಿನಿಂದ ಬಲವಾಗಿ ಹೊಡೆದಿದ್ದಾನೆ.ಬಂದ ಇಬ್ಬರು ಹಂತಕರಲ್ಲಿ ಒಬ್ಬನು ಮಾತ್ರ ಹಲ್ಲೆಗೆ ಮುಂದಾಗಿದ್ದು ಇನ್ನೊಬ್ಬನು ಹಲ್ಲೆ ಮಾಡದಂತೆ ತಪ್ಪಿಸುವ ಪ್ರಯತ್ನ ಮಾಡಿದ್ದಾನೆ.ಆದರೆ ಇದು ಯಾವುದನ್ನು ಲೆಕ್ಕಿಸದ ಹಂತಕನೊಬ್ಬ ಇತನ ಏಟಿಗೆ ನೆಲ್ಲಕ್ಕೆ ಉರುಳಿ ರಕ್ತದ ಮಡುವಿನಲ್ಲಿ ಬಿದ್ದಿದ್ದ ಹರೀಶನ ಮೇಲೆ ಮತ್ತೆ ಮತ್ತೆ ಆತನ ಮೇಲೆ ಹಲ್ಲೆ ಮಾಡಿದ್ದಾನೆ.ಮಾರಣಾಂತಿಕ ಹಲ್ಲೆ ಮಾಡಿದ ಹಂತಕರು ಸ್ಥಳದಿಂದ ಎಸ್ಕೇಪ್ ಆಗಿದ್ದಾರೆ.ಘಟನಾ ಸ್ಥಳದಲ್ಲಿದ್ದ ಸಾರ್ವಜನಿಕರು ಕೂಡಲೇ ಆಂಬುಲೆನ್ಸ್ ಕಾಲ್ ಮಾಡಿ ಹಲ್ಲೆಗೆ ಒಳಗಾದ ಯುವಕರನ್ನು ಆಸ್ಪತ್ರೆಗೆ ರವಾನಿಸಿದ್ದಾರೆ. ಹರೀಶನ ಸ್ಥಿತಿ ಗಂಭೀರವಾಗಿದ್ದು ಆತನನ್ನು ಮಾಕ್ಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ.ಇನ್ನೊಬ್ಬ ಹಲ್ಲೆಗೊಳಗಾದ ಮಂಜುನಾಥನನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದ್ದು ಪ್ರಾಣಾಪಯದಿಂದ ಪಾರಗಿದ್ದಾನೆ. ಸ್ಥಳಕ್ಕೆ ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳು ಮತ್ತು ತುಂಗಾನಗರ ಪೋಲಿಸರ ತಂಡ ದೌಡಾಯಿಸಿದ್ದು ಸ್ಥಳ ಪರಿಶೀಲನೆ ನೆಡೆಸಿ ಹಂತಕರ ಹೆಡೆಮುರಿ ಕಟ್ಟಲು ಮುಂದಾಗಿದ್ದಾರೆ. ಘಟನಾ ಸ್ಥಳದಲ್ಲಿ ಸಾಕಷ್ಟು ಸಿಸಿಟಿವಿ ಗಳಿದ್ದು ಘಟನೆಗೆ ಸಂಭಂದಿಸಿದ ಮಾಹಿತಿ ಪೊಲೀಸರಿಗೆ ಲಭ್ಯವಾಗಿದೆ.

ಹಲ್ಲೆಗೆ ಕಾರಣ.?
ಹಲ್ಲೆಗೆ ಒಳಗಾದ ಒಬ್ಬ ಯುವಕ ಹಲ್ಲೆಮಾಡಿದ ಯುವಕನ ತಂದೆಗೆ ಬೈದು ಹೊಡೆದಿದ್ದನೆಂಬ ಕಾರಣಕ್ಕೆ ಈ ಕೃತ್ಯ ನೆಡೆದಿರುವ ಶಂಕೆ ಇದ್ದು ಪೊಲೀಸರ ತನಿಖೆಯಿಂದ ಇನ್ನಷ್ಟೇ ಮಾಹಿತಿ ಲಭ್ಯವಾಗಬೇಕಿದೆ.

Leave a Reply

Your email address will not be published. Required fields are marked *

Optimized by Optimole
error: Content is protected !!