ಶಿವಮೊಗ್ಗ: ಮೆಗ್ಗಾನ್ ಆಸ್ಪತ್ರೆಯ ರೂಮ್ ನಂಬರ್ 21ರ ಕಣ್ಣಿನ ವಿಭಾಗದ ಕನ್ನಡಕಗಳು ಮಾರಾಟಕ್ಕಿವೆ.!
Ashwasurya/Shivamogga
ಅಶ್ವಸೂರ್ಯ/ಶಿವಮೊಗ್ಗ: ಒಂದು ಸರ್ಕಾರಿ ಆಸ್ಪತ್ರೆ ಎಂದರೆ ಬಡ ರೋಗಿಗಳಿಗೆ ಆರೋಗ್ಯ ರಕ್ಷಣೆ, ಗುಣಮಾಡುವ ಚಿಕಿತ್ಸೆ ಒದಗಿಸುವ ತಾಣವಾಗಿದೆ.ಇದಕ್ಕಾಗಿ ವಿಶೇಷ ವೈದ್ಯಕೀಯ ಸಿಬ್ಬಂದಿಯು ಮೇಲಿಂದ ಮೇಲೆ ರೋಗಿಗಳ ಸ್ಥಿತಿಗತಿಯನ್ನು ನಿಗಾವಹಿಸ ಬೇಕಾಗುತ್ತದೆ.ಬಡ ರೋಗಿಗಳಿಗಂತು ಇದೊಂದು ಜೀವ ರಕ್ಷಕ ದೇವಾಲಯವೆ ಹೌದು.ಎಲ್ಲಾ ಕಾಯಿಲೆಗಳಿಗೂ ಔಷಧೋಪಚಾರವನ್ನು ಒದಗಿಸುವ ತಾಣವಾಗಿದೆ ಎಂದರೆ ತಪ್ಪಾಗಲಾರದು. ಅ ದಿಕ್ಕಿನಲ್ಲಿ ಶಿವಮೊಗ್ಗದ ಮೆಗ್ಗಾನ್ ಬೋಧನ ಜಿಲ್ಲಾ ಆಸ್ಪತ್ರೆಯು ಒಂದು.ಆದರೆ ಇತ್ತೀಚಿನ ದಿನಗಳಲ್ಲಿ ಮೆಗ್ಗಾನ್ ಆಸ್ಪತ್ರೆ ಎನ್ನುವುದು ಬಡ ರೋಗಿಗಳನ್ನು ಸುಲಿಯುವ ಕೇಂದ್ರವಾಗಿದೆ.! ಈ ಆಸ್ಪತ್ರೆಯ ಅಷ್ಟೂ ವಿಭಾಗದಲ್ಲಿ ನೆಡೆಯುವ ಹಣದಾಹದ ವರದಿಯನ್ನು ಬರೆಯಲು ಕುಳಿತರೆ.ಮುಗಿಯದ ಕಥೆಯೆ ಹೌದು ( Never ending story) ಈ ಹಾದಿಯಲ್ಲಿ ಈಗ ನಾನು ಬರೆಯಲು ಹೊರಟಿರುವುದು “ಮೆಗ್ಗಾನ್ ಆಸ್ಪತ್ರೆಯ ರೂಮ್ ನಂಬರ್ 21” ರ ಅಸಲಿ ಕಥೆ.!!
ಜಿಲ್ಲಾ ಮೆಗ್ಗಾನ್ ಆಸ್ಪತ್ರೆಯ ರೂಮ್ ನಂಬರ್ 21 ಬಡ ಕಣ್ಣಿನ ರೋಗಿಗಳ ವಿಭಾಗ..!
ದೇಹದ ಸೂಕ್ಷ್ಮ ಅಂಗವಾದ ಕಣ್ಣಿನ ಬಗ್ಗೆ ಪ್ರತಿಯೊಬ್ಬರು ಎಚ್ಚರಿಕೆ ತೆಗೆದುಕೊಳ್ಳುವುದು ಅವಶ್ಯಕತೆಯಾಗಿದೆ.
ಮನುಷ್ಯನಿಗೆ ವಯಸ್ಸಾದಂತೆ ಕಣ್ಣಿನ ದೃಷ್ಟಿ ಕ್ಷೀಣಿಸುವುದು ಸಹಜ.ಇಂತಹ ಸಮಯದಲ್ಲಿ ಶಿವಮೊಗ್ಗ ನಗರದ ಬಡ ನಾಗರಿಕರು ಕಣ್ಣಿಗೆ ಯಾವುದೇ ರೀತಿಯಲ್ಲಿ ತೊಂದರೆ ಉಂಟಾದರು ತಕ್ಷಣ ಸ್ಥಳೀಯ ಸರ್ಕಾರಿ ಮೆಗ್ಗಾನ್ ಆಸ್ಪತ್ರೆಗೆ ಎಡತಾಗಿ ಆಸ್ಪತ್ರೆಯಲ್ಲಿರುವ ಕಣ್ಣಿನ ವೈದ್ಯರ ಬಳಿ ತಪಾಸಣೆ ಮಾಡಿಕೊಂಡು ಚಿಕಿತ್ಸೆ ಪಡೆದುಕೊಳ್ಳುವುದು ಸಹಜ. ಅಲ್ಲಿ ವೈದ್ಯರು ಎನಾದರು ದೃಷ್ಟಿ ದೋಷಿಗಳಿಗೆ ತಪಾಸಣೆಮಾಡಿ ಕನ್ನಡಕ ಬರೆದುಕೊಟ್ಟರೆ ಆತನ ಕಥೆ ಮುಗಿಯಿತೆ ಎಂದರ್ಥ.!
ದೃಷ್ಟಿ ದೋಷಿಗಳು ವೈದ್ಯರು ಕೊಟ್ಟ ಸ್ಲೀಪ್ ಹಿಡಿದು ಕಣ್ಣಿನ ವಿಭಾಗದ ರೂಮ್ ನಂಬರ್ 21 ಎಡತಾದರೆ ಅಲ್ಲಿ ಅಸಿನರಾಗಿರುವ ಹಣದ ಬೇಟೆಗೆ ನಿಂತಂತಹ ನೇತ್ರ ಅಧಿಕಾರಿಗಳಾದ ಸಂಜಯ್ ಮತ್ತು ಸಂತೋಷ್ ಹಾಗೂ ಬಾಬು ವಿಲ್ಸನ್ ಇವರುಗಳು. ನಿಮ್ಮ ಕೈಯಲ್ಲಿದ್ದ ಸ್ಲೀಪ್ ತೆಗೆದುಕೊಂಡು ,ಎನೊ ಇವರಪ್ಪನ ಮನೆಯಿಂದ ತೆಗೆದುಕೊಂಡು ಬಂದ ಹಣದಲ್ಲಿ ಕನ್ನಡಕದ ಆಂಗಡಿ ಇಟ್ಟವರಂತೆ ಅಡುವ ಹೈನಾತಿಗಳು. ಅ ಸ್ಲೀಪ್ ನಲ್ಲಿ ಡಾಕ್ಟರ್ ಬರೆದ ಪಾಯಿಂಟ್ ಗ್ಲಾಸ್ ಗಳಿಗೆ ಇವರೆ ಒಂದೊಂದಕ್ಕೊ ಇವರದೆ ದರ ನಿಗಧಿಮಾಡಿ. ಅಮಾಯಕ ಬಡ ಕಣ್ಣಿನ ರೋಗಿಗಳಿಂದ ಹಣ ಕೀಳಲು ಮುಂದಾಗುತ್ತಾರೆ. ಒಂದೊಂದು ಕನ್ನಡಕಕ್ಕೂ ಇವರೆ ಒಂದೊಂದು ದರ ನಿಗಧಿ ಮಾಡಿ ರೋಗಿಗಳನ್ನು ಸುಲಿಯುತ್ತಿದ್ದಾರೆ.ರೂಮ್ ನಂಬರ್ 21 ಕಣ್ಣಿನ ವಿಭಾಗದಲ್ಲಿ ಬಿಕರಿ ಯಾಗುತ್ತಿರು ಕನ್ನಡಕದ ಬೇಲೆ 600 ರಿಂದ 800 ಮತ್ತು 1000 ಹಾಗೂ 1200, 1600 ರೂಪಾಯಿಗಳಿಗೆ ಬಡವರ ಕೈ ಸೇರುತ್ತಿದೆ.ಈ ಮಟ್ಟದ ಹಣ ಪಡೆದು ಅಕ್ರಮವಾಗಿ ವ್ಯಾರಮಾಡಲು ಅವಕಾಶ ಕಲ್ಪಿಸಿಕೊಟ್ಟ ಅಧಿಕಾರಿ ಯಾರು.? ಈ ಅಕ್ರಮ ಕನ್ನಡಕದ ವ್ಯಾಪಾರದಿಂದ ಬಂದಂತ ಹಣದಲ್ಲಿ ಹಿರಿಯ ಅಧಿಕಾರಿಯ ಕೈ ಸೇರುವ ದಿನದ ಮತ್ತು ತಿಂಗಳ ಒಟ್ಟು ಹಣವೇಷ್ಟು.!? ದಿನ ನಿತ್ಯಾ ಸಾವಿರಾರು ರೂಪಾಯಿಗಳನ್ನು ಜೇಬಿಗಿಳಿಸುವ ಸಂಜಯ್ ಸಂತೋಷ್ ಮತ್ತು ಬಾಬು ಅವರ ಅಕ್ರಮ ಹಣದ ಗಳಿಕೆ ಎಷ್ಟು.? ಈ ಜಾಗದಲ್ಲಿ ಇವರುಗಳು ಬಂದು ವಕ್ಕರಿಸಿದಾಗಿನಿಂದ ಕಮಾಯಿಸಿದ ಒಂದು ಅಂದಾಜಿನ ಹಣವೇಷ್ಟು ಎಲ್ಲವನ್ನೂ ನಿಮ್ಮ ಮುಂದೆ ಮುಂದಿನ ವರದಿಯಲ್ಲಿ ತಿಳಿಸಿತ್ತೇನೆ.! ಇನ್ನೂ ಸರ್ಕಾರಿ ಮೆಗ್ಗಾನ್ ಆಸ್ಪತ್ರೆಯ ರೂಮ್ ನಂಬರ್ 21 ಇರಬೇಕಾದ ಕನ್ನಡಕಗಳು ನಗರದ ಕೆಲವು ಆಂಗಡಿಗಳಿಗೆ ಹೋಗಿದ್ದು ಹೇಗೆ.? ಯಾವ ಯಾವ ಆಂಗಡಿಗಳಿಗೆ ಮೆಗ್ಗಾನ್ ಆಸ್ಪತ್ರೆಯ ಕನ್ನಡಕಗಳು ಅಕ್ರಮವಾಗಿ ಬಿಕರಿಯಾಗುತ್ತಿದೆ. ಎಲ್ಲವನ್ನೂ ಸವಿವರವಾಗಿ ಮುಂದಿನ ವರದಿಯಲ್ಲಿ ತಿಳಿಸುತ್ತೇನೆ.! ಸಂಜಯ್, ಸಂತೋಷ್ ಮತ್ತು ಬಾಬು ಎನ್ನುವ ನೇತ್ರಾ ಅಧಿಕಾರಿಗಳ ಒಂದು ದಿನದ ಕಮಾಯಿ ಎಷ್ಟು.? ಇವರ ಬೆನ್ನಿಗೆ ನಿಂತ ಅ ಹಿರಿಯ ಅಧಿಕಾರಿಯಾರು.? ಎಲ್ಲವನ್ನೂ ನಿರೀಕ್ಷಿಸಿ ಮುಂದಿನ ವರದಿಯಲ್ಲಿ…. ಮೆಗ್ಗಾನ್ ಆಸ್ಪತ್ರೆ ರೂಮ್ ನಂಬರ್ 21 ಕಣ್ಣಿನ ವಿಭಾಗದ ಗೋಲ್ ಮಾಲ್ ನ ಕರ್ಮಕಾಂಡದ ವರದಿ…..