ಭರ್ಜರಿ ಬೇಟೆ ಆಡಿದ ಚಿಕ್ಕಬಳ್ಳಾಪುರ ಪೊಲೀಸರು. ಗಾಂಜಾ ಸಾಗಿಸುತ್ತಿದ್ದ ತಂದೆ, ಮಗಳು, ಮೊಮ್ಮಗ ಸೇರಿ ಐವರು ಅರೆಸ್ಟ್.!
ashwasurya/shivamogga
ಅಶ್ವಸೂರ್ಯ/ಚಿಕ್ಕಬಳ್ಳಾಪುರ: ಆಂಧ್ರಪ್ರದೇಶದಿಂದ ಕರ್ನಾಟಕಕ್ಕೆ ಅಕ್ರಮವಾಗಿ ಗಾಂಜಾ ಸಾಗಾಟ ಮಾಡುತ್ತಿದ್ದ ತಂದೆ ಮಗಳು ಹಾಗೂ ಮೊಮ್ಮಗ ಸೇರಿ ಐವರನ್ನು ಬಂಧಸಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ನಗರದ ಕುರಟಹಳ್ಳಿ ಕ್ರಾಸ್ ಬಳಿ ನಡೆದಿದೆ.
ಮಂಗಳವಾರ ತಡರಾತ್ರಿ ಚಿಕ್ಕಬಳ್ಳಾಪುರ ಸೆನ್ ಪೊಲೀಸರ ತಂಡ ಮಾಹಿತಿ ಆಧಾರದ ಮೇಲೆ ಕಾರ್ಯಾಚರಣೆ ಇಳಿದಿದ್ರು ಅ ಸಂಧರ್ಭದಲ್ಲಿ ಮಹಿಂದ್ರಾ XUV-500 ಕಾರಿನಲ್ಲಿ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಬರೋಬ್ಬರಿ 17.50 ಲಕ್ಷ ರೂಪಾಯಿ ಮೌಲ್ಯದ 35 ಕೆಜಿ ಗಾಂಜಾವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
XUV-500 ಕಾರಿನಲ್ಲಿದ್ದ ಬಾಗೇಪಲ್ಲಿಯ ಗರಿಗರೆಡ್ಡಿಪಾಳ್ಯದ ನಿವಾಸಿಗಳಾದ ತಾಯಿ ದೇವಮ್ಮ ಹಾಗೂ ಮಗ ಆಂಜಿ ಹಾಗೂ ಪಲ್ಲಿಕುಂಟೆ ನಿವಾಸಿ ಮಾರಪ್ಪ ಸೇರಿದಂತೆ ವೆಂಕಟರಮಣ ಹಾಗೂ ಆದಿನಾರಾಯಣನನ್ನು ಬಂಧಿಸಲಾಗಿದೆ.
ಕೃತ್ಯಕ್ಕೆ ಬಳಿಸಿದ ಮಹೀಂದ್ರಾ ಕಾರನ್ನು ಸಹ ವಶಕ್ಕೆ ಪಡೆಯಲಾಗಿದೆ. ಚಿಕ್ಕಬಳ್ಳಾಪುರ ಜಿಲ್ಲಾ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಆರೋಪಿಗಳನ್ನು ತನಿಖೆಗೆ ಒಳಪಡಿಸಲಾಗಿದೆ.