ಮಡಿಕೇರಿ:ದಾಖಲೆ ಇಲ್ಲದ ಗೋಲ್ ಮಾಲ್ ‘ಸ್ಕೀಂ ದಂಧೆ ನೆಡೆಸುತ್ತಿದ್ದವರು ಪೊಲೀಸ್ ವಶಕ್ಕೆ.
Ashwasurya/Shivamogga
ಅಶ್ವಸೂರ್ಯ/ಮಡಿಕೇರಿ: ಮಡಿಕೇರಿ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ರಾಣಿಪೇಟೆಯಲ್ಲಿ ಯಾವುದೇ ಅನುಮತಿ ಇಲ್ಲದೆ SV SMART VISION ಹೆಸರಿನಲ್ಲಿ ಸ್ಕೀಂ ನಡೆಸುತ್ತಿದ್ದ ಐವರು ಗೋಲ್ ಮಾಲ್ ದಂಧೆಕೋರರ ವಿರುದ್ಧ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡ ಮಡಿಕೇರಿ ನಗರ ಪೊಲೀಸರು ಐವರನ್ನು ವಶಕ್ಕೆ ಪಡೆದು ಕ್ರಮ ಕೈಗೊಂಡಿದ್ದಾರೆ.
ಮಂಗಳೂರು ಸಮೀಪದ ಸುರತ್ಕಲ್ ಮಹಮ್ಮದ್ ಅಶ್ರಫ್ (37), ಮೊಹಮ್ಮದ್ ಅಕ್ರಮ್ (34) ಹಾಗೂ ಉಕ್ಕುಡ ಕುಂಬಳಕೇರಿಯ ಕಿಶೋರ್ ಹೆಚ್ ಎನ್ (41) ಮಡಿಕೇರಿ ಮಲ್ಲಿಕಾರ್ಜುನ ನಗರದ ಸುಲೈಮಾನ್ ಎಂ ವೈ (37), ತ್ಯಾಗರಾಜ ಕಾಲೋನಿಯ ನಿವಾಸಿಗಳಾದ ಅಬ್ದುಲ್ ಗಫೂರ್ (34), ಬಂಧಿತ ಆರೋಪಿಗಳಾಗಿದ್ದಾರೆ.
ಫೆಬ್ರವರಿ 15 ರಂದು ಐದು ಮಂದಿ ಆರೋಪಿಗಳನ್ನು ದಸ್ತಗಿರಿ ಮಾಡಿ ಪೊಲೀಸರು ಘನ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ ರಾಮರಾಜನ್ ತಿಳಿಸಿದ್ದಾರೆ.
ಮಡಿಕೇರಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ರಾಣಿಪೇಟೆಯಲ್ಲಿ ದಿನಾಂಕ 30-01-2025 ರಿಂದ SV SMART VISION ಎಂಬ ಸ್ಕೀಂನಲ್ಲಿ ಬಂಧಿತ ಐವರು ಹಣವನ್ನು ಸಂಗ್ರಹಿಸುತ್ತಿದ್ದು, ಸದರಿ ಸ್ಕೀಮ್ ನಲ್ಲಿ ಈಗಾಗಲೇ 1100 ಕ್ಕೂ ಹೆಚ್ಚು ಜನರನ್ನು ಸದಸ್ಯರನ್ನಾಗಿ ಮಾಡಿಕೊಂಡಿದ್ದಾರೆ.
ಸದರಿ ಸ್ಕೀಮ್ ಗೆ ಸೇರಲು ಪ್ರತಿಯೊಬ್ಬರೂ ಪ್ರತಿ ತಿಂಗಳು ರೂ. 1,000 ರಂತೆ 24 ಕಂತುಗಳನ್ನು ಗ್ರಾಹಕರು ಕಟ್ಟಬೇಕಾಗಿರುತ್ತದೆ. ಪ್ರತಿ ತಿಂಗಳ 30 ನೇ ತಾರೀಕಿನಂದು ಸಂಜೆ 05 ಘಂಟೆಗೆ ರಾಣಿಪೇಟೆಯಲ್ಲಿರುವ ಗೆಜ್ಜೆ ಸಂಗಪ್ಪ ಕಲ್ಯಾಣ ಮಂಟಪದಲ್ಲಿ ಲಕ್ಕಿ ಡ್ರಾ ಮಾಡಿ ಫಲಿತಾಂಶವನ್ನು ವಾಟ್ಸ್ ಆಪ್ ಗ್ರೂಪ್ ಮೂಲಕ ತಿಳಿಸಿ ಬಹುಮಾನವನ್ನು 50-60 ದಿನಗಳಲ್ಲಿ ಗ್ರಾಹಕರಿಗೆ ನೀಡಲಾಗುವುದು ಎಂದು ದಂಧೆಕೋರರು ಹೇಳಿದ್ದು 20 ತಿಂಗಳ ಲಕ್ಕಿ ಡ್ರಾನಲ್ಲಿ ಒಟ್ಟು 96 ಜನರಿಗೆ ವಿವಿಧ ರೀತಿಯ ಬಹುಮಾನವನ್ನು ನೀಡುವುದಾಗಿ ತಿಳಿಸಿರುತ್ತಾರೆ.
ಮೊದಲನೇ ತಿಂಗಳ ಬಹುಮಾನವಾಗಿ ಒಬ್ಬರಿಗೆ ಥಾರ್ ಜೀಪ್ ಹಾಗೂ 8 ಜನರಿಗೆ ಬೈಕ್ ನೀಡಬೇಕಾಗಿದ್ದು, ಥಾರ್ ಜೀಪ್ ಬದಲಾಗಿ ರೂ.7.60.000 ಮತ್ತು 07 ಜನರಿಗೆ ರೂ. 43,000 ಗಳ ಚೆಕ್ ಅನ್ನು ನೀಡಿದ್ದಾರೆ. SV SMART VISION ರವರು ಯಾವುದೇ ಅಧಿಕೃತ ದಾಖಲಾತಿಗಳನ್ನು ಹೊಂದದೆ, ವಂಚನೆ ಮಾಡುವ ಉದ್ದೇಶದಿಂದ ಗ್ರಾಹಕರಿಂದ ಹಣವನ್ನು ಸಂಗ್ರಹಿಸುತ್ತಿದ್ದ ಹಿನ್ನೆಲೆಯಲ್ಲಿ ಈ ಸ್ಕೀಮ್ ನ ಐವರು ಪ್ರತಿನಿಧಿಗಳ ಮೇಲೆ ಪ್ರಕರಣ ದಾಖಲಿಸಲಾಗಿರುತ್ತದೆ.
ಸದರಿ ಪ್ರಕರಣದ ತನಿಖೆಯನ್ನು ಸೂರಜ್ ಪಿ.ಎ. ಡಿಎಪಿ, ಮಡಿಕೇರಿ ಉಪವಿಭಾಗ, ರಾಜು.ಪಿ.ಕೆ. ಮಡಿಕೇರಿ ನಗರ ವೃತ್ತ, ಶ್ರೀಧರ.ಸಿ.ವಿ, ಪಿಎಸ್ಐ ಮತ್ತು ರಾಧ, ಪಿಎಸ್ಐ ಮಡಿಕೇರಿ ನಗರ ಪೊಲೀಸ್ ಠಾಣೆ ಹಾಗೂ ಠಾಣೆಯ ಅಪರಾಧ ಪತ್ತೆ ಸಿಬ್ಬಂದಿಗಳು ನಿರ್ವಹಿಸಿದ್ದಾರೆ.ಹಣ ಕಟ್ಟಿದವರ ಕಥೆ ಎನು ಎನ್ನುವುದು ಇನ್ನಷ್ಟೆ ತಿಳಿಯ ಬೇಕಿದೆ.