ಶಿವಮೊಗ್ಗ: ಮಹಾನಗರ ಪಾಲಿಕೆಯಲ್ಲಿ ಸಾರ್ವಜನಿಕರ ಪರದಾಟ.! ಪ್ರಯಾಗರಾಜ್ ನಲ್ಲಿ ಮಿಂದಾಟ..! ಸಾಗರದಲ್ಲಿ ಮೂಳೆಯ ಕಡಿದಾಟ..!
Ashwasurya/Shivamogga
ಅಶ್ವಸೂರ್ಯ/ಶಿವಮೊಗ್ಗ: ಅದೇನು ಗ್ರಹಚಾರವೋ ಕಮಿಷನರ್ ಕವಿತಾ ಯೋಗಪ್ಪನವರ್ ಮೇಡಂ ಬಂದ ಮೇಲಂತೂ ಯಾವುದು ನೆಟ್ಟಗಿಲ್ಲ.!ಸಾರ್ವಜನಿಕರು ಮಹಾನಗರ ಪಾಲಿಕೆಗೆ ಅಲೆದಲೆದು ಸುಸ್ತಾಗಿದ್ದಾರೆ ಹೊರತು ಆವರ ಯಾವುದೇ ಕೆಲಸವೂ ಆಗುವಂತೆ ಕಾಣುತ್ತಿಲ್ಲ.! ಇತ್ತೀಚೆಗಂತು ಹಣಕ್ಕಾಗಿ ಹಾತೋರೆಯುವ ಕೆಲವು ಅಧಿಕಾರಿಗಳಿಂದ ಸಂಪೂರ್ಣ ಮಹಾನಗರ ಪಾಲಿಕೆಯೆ ಗಬ್ಬೆದ್ದು ನಾರುತ್ತಿದೆ. ಅಕ್ರಮದ ಬೈಲಾಟ ಭರ್ಜರಿಯಾಗಿ ನೆಡೆಯುತ್ತಿದೆ.ಜವಾಬ್ದಾರಿ ಯುತ ಕಮಿಷನರ್ ಆವರ ಪಿಎ ಮತ್ತು ಕಮಿಷನರ್ ಬೆನ್ನಿಗೆ ನಿಂತು ಎಲ್ಲವನ್ನೂ ನಿಭಾಯಿಸುವ ಮಂಜುನಾಥನ ಮಹಿಮೆಯಿಂದ ಮಹಾನಗರ ಪಾಲಿಕೆ ಹಣದಾಹಿಗಳ ಕೊಂಪೆಯಾಗಿದೆ.ಈ ಮಹಾನಗರ ಪಾಲಿಕೆ ಯಾವ ಮಟ್ಟದಲ್ಲಿ ಎಕ್ಕ ಎದ್ದು ಹೋಗಿದೆ ಎಂದರೆ ಇಲ್ಲಿ ಕರ್ತವ್ಯ ನಿರ್ವಹಿಸುವವರಲ್ಲಿ ಕೆಲವರು ಬಂದೊತ್ತಿಗೆ ಕೆಲಸ ಹೊದತ್ತಿಗೆ ಮನೆ ಎಂಬಂತಾಗಿದೆ.! ಹೇಳುವವರು ಕೇಳುವವರಿಲ್ಲದೆ ಯಜಮಾನನಿಲ್ಲದ ಮನೆಯಂತಾಗಿದೆ ಶಿವಮೊಗ್ಗ ಮಹಾನಗರ ಪಾಲಿಕೆ.! ಅದರಲ್ಲೂ ಕಂದಾಯ ಇಲಾಖೆಯಲ್ಲಿ ಭರ್ಜರಿ ಬಾಡೂಟದ ಪರಿಷೆಯೆ ನೆಡೆಯುತ್ತಿದೆ.ಕಂದಾಯ ಇಲಾಖೆಯ ಯಾವುದೇ ಕೆಲಸ ಮಾಡಿಸುವುದಕ್ಕೂ ಹಣದ ಪಿಂಡಿಯ ಜೋತೆಗೆ ಹೋಗಬೇಕಿದೆ…ಅದರಲ್ಲೂ ಕಳೆದ ಮೂರ್ನಾಲ್ಕು ದಿನದಿಂದ ಒಂದಷ್ಟು ಮಂದಿ ಕಮಿಷನರ್ ಮತ್ತು ಮಂಜುನಾಥ್ ನೆತ್ರುತ್ವದಲ್ಲಿ ತಮ್ಮ ಕೆಲಸಕ್ಕೆ ತಾತ್ಕಾಲಿಕ ರಜೆ ಹಾಕಿ ಪ್ರಯಾಗರಾಜ್ ಮಹಾ ಕುಂಭಮೇಳಕ್ಕೆ ತೆರಳಿದ್ದಾರೆ.ಇನ್ನೂ ಮಂಗಳವಾರ ಕಂದಾಯ ಇಲಾಖೆಯಲ್ಲಿ ಬಾಡೂಟ ಮಾಡುತ್ತಿದ್ದ ಕೆಲವು ಅಧಿಕಾರಿಗಳು ನೌಕರರು ಸಾಗರದ ಕಡೆಯಿಂದ ಬೀಗರೂಟದ ಘಮಲು ಬಡಿಯುತ್ತಿದ್ದಂತೆ ಅಲ್ಲಿಗೆ ದೌಡಾಯಿಸಿದ್ದಾರೆ. ಅಲ್ಲಿಗೆ ಶಿವಮೊಗ್ಗ ಮಹಾನಗರ ಪಾಲಿಕೆಯಲ್ಲಿ ಸಾರ್ವಜನಿಕರ ಪರದಾಟ.! ಪ್ರಯಾಗರಾಜ್ ನಲ್ಲಿ ಮಿಂದಾಟ..! ಸಾಗರದಲ್ಲಿ ಮೂಳೆಯ ಕಡಿದಾಟ..!ಎಂಬತಾಗಿದೆ.
ಶಿವಮೊಗ್ಗ ಮಹಾನಗರ ಪಾಲಿಕೆಯ ಕಥೆ ಮುಗಿಯಿತೆ ಎನ್ನುವಂತಾಗಿದೆ.ಲಂಚದ ಕೊಂಪೆಯಾಗಿರುವ ಕಂದಾಯ ಇಲಾಖೆಯ ಮತ್ತು ಕಮಿಷನರ್ ಕಮಿಷನ್ ಪಟ್ಟಿ, ಕಮಿಷನರ್ ಬೆನ್ನಿಗೆ ನಿಂತಿರುವ ಮಂಜುನಾಥನ ಅಸಲಿ ವರಸೆಯ ಸಂಪೂರ್ಣ ವರದಿ ನಿಮ್ಮ ಮುಂದಿಡುವ ಪ್ರಯತ್ನದಲ್ಲಿ ಪತ್ರಿಕೆ ಒಂದಷ್ಟು ಮಾಹಿತಿಯನ್ನು ಕಲೆಹಾಕಿದ್ದು ಇನ್ನಷ್ಟು ಮಾಹಿತಿಯನ್ನು ಕಲೆಹಾಕಲು ಮುಂದಾಗಿದೆ “ಮಹಾನಗರ ಪಾಲಿಕೆಯಲ್ಲಿ ಮಂಜುನಾಥನ ಮಹಿಮೆ” ಸಂಪೂರ್ಣ ವರದಿ ನಿಮ್ಮ ಮುಂದು…ಬರಲಿದೆ