ಸುರತ್ಕಲ್: ರಾಜ್ಯಮಟ್ಟದ ಲೆಜೆಂಡ್ಸ್ ಕ್ರಿಕೆಟ್ ಲೀಗ್ SEASON-04 ಪಂದ್ಯಾವಳಿ,ಹಿರಿಯರ ಕ್ರಿಕೆಟ್ ಹಬ್ಬ.
ashwasurya/Shivamogga
ಅಶ್ವಸೂರ್ಯ/ಶಿವಮೊಗ್ಗ : ಮಂಗಳೂರು ಸಮೀಪದ ಸುರತ್ಕಲ್ ನಲ್ಲಿ “ಸುರತ್ಕಲ್ ಸ್ಪೋರ್ಟ್ಸ್ ಆಂಡ್ ಕಲ್ಪರಲ್ ಕ್ಲಬ್ (ರಿ)” ಇವರ ಆಶ್ರಯದಲ್ಲಿ ರಾಜ್ಯ ಮಟ್ಟದ 45 ವರ್ಷ ಮೇಲ್ಪಟ್ಟ ರಾಜ್ಯ ಕಂಡ ಹೆಸರಾಂತ ತಂಡಗಳು ಹಾಗೂ ಆಟಗಾರರು ಭಾಗವಹಿಸಲಿರುವ ಓವರ್ ಆರ್ಮ್ ಹಿರಿಯರ ಕ್ರಿಕೆಟ್ ಸೀಸನ್ 4ರ ಪಂದ್ಯಾಕೂಟ ಎಪ್ರಿಲ್ 5 ಮತ್ತು 6 ರಂದು ಸುರತ್ಕಲ್ ಗೋವಿಂದ ದಾಸ್ ಕಾಲೇಜು ಕ್ರೀಡಾಂಗಣದಲ್ಲಿ ಅದ್ದೂರಿಯಾಗಿ ನಡೆಯಲಿದೆ.
ಈ ಪಂದ್ಯಾಕೂಟದಲ್ಲಿ 80 ಮತ್ತು 90 ರ ಸಾಲಿನ ಹೆಸರಾಂತ ರಾಜ್ಯ ಕಂಡ ತಂಡಗಳಾದ ಶಿವಮೊಗ್ಗದ ಭಾರತ್ ಕ್ರಿಕೆಟರ್ಸ್ ಜೊತೆಗೆ ಬೆಂಗಳೂರು, ಮೈಸೂರು, ಅರಸೀಕೆರೆ ಹಾಗೂ ದ.ಕ ಜಿಲ್ಲೆ, ಉಡುಪಿ ಜಿಲ್ಲೆಯ ಪ್ರತಿಷ್ಠಿತ ತಂಡಗಳು ಭಾಗವಹಿಸಲಿದೆ. ಈ ಪಂದ್ಯಾವಳಿಯು ಅದ್ದೂರಿಯಾಗಿ ನೆಡೆಯಲಿದ್ದು ಕ್ರೀಡಾ ಪ್ರೇಮಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಈ ಪಂದ್ಯಾವಳಿಯನ್ನು ಯಶಸ್ವಿಗೊಳಿಸಿಕೊಡಬೇಕಾಗಿ ಆಯೋಜಕರು ಕೋರಿದ್ದಾರೆ.
ಈ ಪಂದ್ಯಾವಳಿಯಲ್ಲಿ ವಿಜೇತ ತಂಡಕ್ಕೆ ಆಕರ್ಷಕ ಟ್ರೋಫಿಯೊಂದಿಗೆ 1,00004 ಲಕ್ಷ ರೂಪಾಯಿ ನಗದು ಹಾಗೂ ದ್ವಿತೀಯ ಸ್ಥಾನ ಗಳಿಸಿದ ತಂಡಕ್ಕೆ ಆಕರ್ಷಕ ಟ್ರೋಫಿಯೊಂದಿಗೆ 50,004 ನಗದು ಬಹುಮಾನ ಇನ್ನುಳಿದಂತೆ ಮೂರು ಮತ್ತು ನಾಲ್ಕನೇ ಸ್ಥಾನ ಪಡೆದ ತಂಡಕ್ಕೆ ಆಕರ್ಷಕ ಟ್ರೋಫಿಯೊಂದಿಗೆ ನಗದು ಬಹುಮಾನವನ್ನು ನೀಡಲಾಗುವುದು ಮತ್ತು ವೈಯಕ್ತಿಕ ಪ್ರಶಸ್ತಿಗಳನ್ನು ನೀಡಲಾಗುವುದು.
ಈ ಪಂದ್ಯಾವಳಿಯ ಸಮಾರೋಪ ಸಮಾರಂಭವು ಎಪ್ರಿಲ್ 6 ರಂದು ಸಂಜೆ 6 ಗಂಟೆಗೆ ಗೋವಿಂದದಾಸ ಕ್ರೀಡಾಂಗಣದಲ್ಲಿ ಅದ್ದೂರಿಯಾಗಿ ನಡೆಯಲಿದೆ. ಸಂಜೆ 6.ಗಂಟೆಯಿಂದ ಸಭಾ ಕಾರ್ಯಕ್ರಮ, ಸನ್ಮಾನ ಸಮಾರಂಭದ ಬಳಿಕ ಬಹುಮಾನ ವಿತರಣೆ ಕಾರ್ಯಕ್ರಮ ನೆಡೆಯಲಿದ್ದು ಪ್ರತಿಯೊಂದು ಪಂದ್ಯಕ್ಕೂ ಕ್ರೀಡಾ ಅಭಿಮಾನಿಗಳು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಈ ನಮ್ಮ ಹಿರಿಯರ ಕ್ರಿಕೆಟ್ ಹಬ್ಬವನ್ನು ಯಶಸ್ವಿ ಗೊಳಿಸಬೇಕೆಂದು ಸುರತ್ಕಲ್ ಸ್ಪೋರ್ಟ್ಸ್ ಮತ್ತು ಕಲ್ಬರಲ್ ಕ್ಲಬ್ ವಿನಂತಿಸಿದೆ.
ಈ ಕಾರ್ಯಕ್ರಮದಲ್ಲಿ ಕ್ರಿಕೆಟ್ ಪ್ರೇಮಿಗಳ ಜೋತೆಗೆ ಸಾರ್ವಜನಿಕರು ಬಂದು ಪ್ರೋತ್ಸಾಹಿಸಿ ನಮ್ಮ ಈ ನಾಲ್ಕನೆ ವರ್ಷದ ಹಿರಿಯರ ಕ್ರಿಕೆಟ್ ಪಂದ್ಯಾವಳಿಯ ಜೊತೆಗೆ ಪಂದ್ಯ ಕೂಟದ ಅಂತಿಮ ಹಂತದ ಬಹುಮಾನ ವಿತರಣ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿಕೊಡಬೇಕಾಗಿ ತಮ್ಮಲ್ಲಿ ಈ ಪಂದ್ಯಾಕೂಟದ ಆಯೋಜಕರಾದ “ಸುರತ್ಕಲ್ ಸ್ಪೋರ್ಟ್ಸ್ ಮತ್ತು ಕಲ್ಚರಲ್ ಕ್ಲಬ್”ನವರು ಮತ್ತೊಮ್ಮೆ ವಿನಂತಿಸಿಕೊಂಡಿದ್ದಾರೆ.
ಬನ್ನಿ ಪ್ರೋತ್ಸಾಹಿಸಿ ಈ ಹಿರಿಯರ ಕ್ರಿಕೆಟ್ ಪಂದ್ಯಾವಳಿಯ ಯಶಸ್ಸಿಗೆ ಕೈ ಜೋಡಿಸಿ…