ಚಿತ್ರದುರ್ಗ : ಅಪಘಾತದ ವೇಳೆ ದೊಡ್ಡ ದುರಂತದಿಂದ ಪವಾಡ ಸದೃಶ್ಯ ಪ್ರವಾಸ ಹೊರಟಿದ್ದ 43 ಶಾಲಾ ವಿಧ್ಯಾರ್ಥಿಗಳು ಪಾರು.!
news.ashwasurya.in
ಅಶ್ವಸೂರ್ಯ/ಚಿತ್ರದುರ್ಗ : ಬೆಂಗಳೂರಿನ ಟಿ.ದಾಸರಹಳ್ಳಿಯ ಶಾಲೆಯೊಂದರ ಮಕ್ಕಳು ಬಸ್ನಲ್ಲಿ ದಾಂಡೇಲಿಗೆ ಪ್ರವಾಸ ಹೊರಟಿದ್ದರು. ಹಿರಿಯೂರು ಬಳಿ ಕಂಟೈನರ್ ಲಾಡಿ ಡಿಕ್ಕಿಯಾದ ವೇಳೆ ಸೀಬರ್ಡ್ ಸ್ಲೀಪರ್ ಬಸ್, ಹಿಂದೆ ಬರುತ್ತಿದ್ದ ಶಾಲಾ ಮಕ್ಕಳಿದ್ದ ಬಸ್ಗೆ ಜೋರಾಗಿ ಬಡಿದಿದೆ. ಇದರಿಂದ ಬಸ್ ಮುಂಭಾಗ ಸಂಪೂರ್ಣ ಜಖಂಗೊಂಡಿದ್ದು,ಚಾಲಕನ ಸಮಯ ಪ್ರಜ್ಞೆ ಯಿಂದ ಎಲ್ಲಾ ಮಕ್ಕಳು ಸುರಕ್ಷಿತವಾಗಿದ್ದಾರೆ. ರಾಷ್ಟ್ರೀಯ ಹೆದ್ದಾರಿ-48ರಲ್ಲಿ ಅಪಘಾತಕ್ಕೀಡಾದ ಸೀಬರ್ಡ್ ಬಸ್ ಹಿಂದೆಯೇ ಶಾಲಾ ಬಸ್ ಹೋಗುತ್ತಿತ್ತು ಕಂಟೇನರ್ ಸೀಬರ್ಡ್ ಬಸ್ಗೆ ಡಿಕ್ಕಿ ಹೊಡೆದಾಗ, ಅದು ಶಾಲಾ ಬಸ್ ಮುಂಭಾಗಕ್ಕೆ ಬಡಿದಿದೆ. ಈ ವೇಳೆ ಚಾಲಕ ಕಂದಕಕ್ಕೆ ಇಳಿಸಿ ಎಡಕ್ಕಿದ್ದ ಸರ್ವೀಸ್ ರಸ್ತೆಗೆ ಬಸ್ ತಿರುಗಿಸಿದ್ದಾರೆ. ಇದರಿಂದ ಅದೇ ಸ್ಥಳದಲ್ಲಿ ಮತ್ತೊಂದು ಭಾರಿ ಅನಾಹುತ ತಪ್ಪಿದೆ.
ಬೆಂಗಳೂರಿನ ಟಿ.ದಾಸರಹಳ್ಳಿಯ ಶಾಲೆಯೊಂದರ ಮಕ್ಕಳು ಬಸ್ನಲ್ಲಿ ದಾಂಡೇಲಿಗೆ ಪ್ರವಾಸ ಹೊರಟಿದ್ದರು. ಶಾಲಾ ಬಸ್ ಚಾಲಕನ ಸಮಯಪ್ರಜ್ಞೆಯಿಂದ ಮಕ್ಕಳ ಪ್ರಾಣ ಉಳಿಯಿತು. ಅಪಘಾತದಲ್ಲಿ ಶಾಲಾ ಬಸ್ ಮುಂಭಾಗ ಜಖಂಗೊಂಡಿದೆ.

ಇನ್ನು ಬಸ್ ನಿಲ್ಲಿಸಿದ ತಕ್ಷಣ ಇಳಿದ ಶಾಲಾ ಬಸ್ ಚಾಲಕ, ಸೀಬರ್ಡ್ ಬಸ್ ಬಳಿ ಹೋಗಿ ಕೆಲ ಪ್ರಯಾಣಿಕರನ್ನು ರಕ್ಷಿಸಿದ್ದಾರೆ.
ಶಾಲಾ ಬಸ್ ಚಾಲಕನಿಗೆ ಸಣ್ಣ, ಪುಟ್ಟ ಗಾಯಗಳಾಗಿವೆ. ಬೇರೆ ಬಸ್ ವ್ಯವಸ್ಥೆ ಮಾಡಿಕೊಂಡು ಮಕ್ಕಳು ಪ್ರವಾಸ ಮುಂದುವರಿಸಿದರು ಎಂದು ತಿಳಿದುಬಂದಿದೆ. ಈ ದುರಂತವನ್ನು ಕಣ್ಣಾರೆ ಕಂಡ ಶಾಲಾ ಮಕ್ಕಳಿದ್ದ ಬಸ್ನ ಚಾಲಕ ಪ್ರತ್ಯಕ್ಷ ಸಾಕ್ಷಿಯಾಗಿದ್ದಾರೆ. ಅವರಿಂದ ಹೇಳಿಕೆ ಕೂಡ ಪಡೆದಿದ್ದೇವೆ ಎಂದು ಪೂರ್ವ ವಲಯ ಐಜಿಪಿ ರವಿಕಾಂತೇಗೌಡ ಮಾಹಿತಿ ನೀಡಿದ್ದಾರೆ.


