Headlines

ವಿಜಯಪುರ: ಭೀಮಾ ತೀರದ ಹಂತಕ ನಟೋರಿಯಸ್ ರೌಡಿಶೀಟರ್ ಬಾಗಪ್ಪ ಹರಿಜನ್‌ ಭೀಕರ ಹತ್ಯೆ.!

ಹಲವು ಸಮಯದಿಂದ ರಿವೆಂಜ್ ಬಿದ್ದಿದ್ದ ಹಂತಕರ ತಂಡ ಈ ಬಾರಿ ಯೋಜಿತ ರೀತಿಯಲ್ಲಿ ಸ್ಕೆಚ್ ಹಾಕಿದ್ದರು.ತಮ್ಮ ಸ್ಕೆಚ್ ನಂತೆ ಮಾರಕಾಸ್ತ್ರದಿಂದ ದಾಳಿ ನಡೆಸಿ ಬಾಗಪ್ಪನನ್ನು ಕೊಂದು ಮುಗಿಸಿದ್ದಾರೆ.
ಭೀಮಾ ತೀರದ ಕುಖ್ಯಾತ ಹಂತಕ ಚಂದಪ್ಪ ಹರಿಜನ್ ಅಳಿಯ ಪ್ರಮುಖ ಸಹಚರ ಬಾಗಪ್ಪ ಹರಿಜನನನ್ನು ಹತ್ಯೆ ಮಾಡಲಾಗಿದೆ. ಮಂಗಳವಾರ ರಾತ್ರಿ 8-50 ರ ಸುಮಾರಿನಲ್ಲಿ ವಿಜಯಪುರದ ಮದಿನಾ ನಗರದಲ್ಲಿರುವ ರೇಡಿಯೋ ಕೇಂದ್ರದ ಸಮೀಪವಿರುವ ರೌಡಿಶೀಟರ್ ಬಾಗಪ್ಪನ ಮನೆಬಾಗಿಲ್ಲೆ ಮಾರಕಾಸ್ತ್ರಗಳಿಂದ ಮುಖ, ತಲೆ ಸೇರಿದಂತೆ ದೇಹದ ವಿವಿಧ ಕಡೆಗಳಲ್ಲಿ ಲಾಂಗು ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಲಾಗಿದೆ.
ಈ ಹಿಂದೆ ಕೋರ್ಟ್ ಆವರಣದಲ್ಲಿಯೇ ಬಾಗಪ್ಪ ಹರಿಜನ್ ಮೇಲೆ ಗುಂಡಿನ ನೆಡೆದಿತ್ತು ಆಗ ಬಾಗಪ್ಪ ಬಚಾವ್ ಆಗಿದ್ದ. ಆದರೆ ಈ ಬಾರಿ ಹಂತಕರು ಯೋಜಿತ ರೀತಿಯಲ್ಲಿ ದಾಳಿ ನಡೆಸಿ ಬಾಗಪ್ಪನನ್ನು ಕೊಂದು ಹಾಕಿದ್ದಾರೆ.ಕುಖ್ಯಾತ ಹಂತಕ ರೌಡಿಶೀಟರ್ ಒಬ್ಬನ ಅಂತ್ಯವಾಗಿದೆ ಭೀಮಾ ತೀರದಲ್ಲಿ ನೆತ್ತರ ಕೋಡಿ ಹರಿದು ಭೀಮಾ ಮಲಿನನಾಗಿದ್ದರು ಪಾತಕಲೋಕದಲ್ಲಿ ಮೆರೆದು ನೆತ್ತರ ಕಲೆ ಅಂಟಿಸಿ ಕೊಂಡವನೊಬ್ಬನ ಅಂತ್ಯವಾಗಿದೆ. ಬಾಗಪ್ಪನನ್ನು ಹತ್ಯೆ ಮಾಡಿದ ಹಂತಕರು ಬಾಗಪ್ಪ ಉಸಿರು ಚಲ್ಲಿದ್ದಾನೆ ಎನ್ನುವುದನ್ನು ಅರಿತು ಸ್ಥಳದಿಂದ ಎಸ್ಕೇಪ್ ಆಗಿದ್ದಾರೆ.ಘಟನ ಸ್ಥಳಕ್ಕೆ ಆಗಮಿಸಿದ ಪೊಲೀಸ್ ಅಧಿಕಾರಿಗಳು ಸ್ಥಳ ಪರಿಶೀಲನೆ ಮಾಡಿ ಹಂತಕರನ್ನು ಹೆಡೆಮುರಿಕಟ್ಟಲು ಮುಂದಾಗಿದ್ದಾರೆ.

Leave a Reply

Your email address will not be published. Required fields are marked *

Optimized by Optimole
error: Content is protected !!