ಸ್ಯಾಂಡಲ್ವುಡ್ ನ ಹೆಸರಾಂತ ನಟಿ ಜಯಮಾಲಾ ಅವರ ಮಗಳ ಮದುವೆಯ ಹಳದಿ ಸಂಭ್ರಮ – ಮೆರಗು ಹೆಚ್ಚಿಸಿದ ಸ್ಯಾಂಡಲ್ವುಡ್ ಸ್ಟಾರ್ಸ್.
ಅಶ್ವಸೂರ್ಯ/ಶಿವಮೊಗ್ಗ: ಸ್ಯಾಂಡಲ್ವುಡ್ನಲ್ಲಿ ಸರಣಿ ಮದುವೆಗಳ ಸಂಭ್ರಮ. ಖ್ಯಾತ ನಟ ಡಾಲಿ ಧನಂಜಯ್ ಸಪ್ತಪದಿ ತುಳಿಯಲು ಅಣಿಯಾಗಿದ್ದರೆ. ಇನ್ನೊಂದು ಕಡೆ ಜಯಮಾಲಾ ಪುತ್ರಿ ಹೊಸ ಬಾಳಿಗೆ ಕಾಲಿಡಲು ಕ್ಷಣ ಗಣನೆ ಆರಂಭವಾಗಿದೆ. ಸೌಂದರ್ಯ ಜಯಮಾಲಾರ ಹಳದಿ ಸಂಭ್ರಮದಲ್ಲಿ ಕನ್ನಡ ಚಿತ್ರರಂಗದ ನಟಿಯರು ಹಳದಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಸಡಗರ ಸಂಭ್ರಮದಲ್ಲಿ ಹಳದಿಮಯ ಮಾಡಿ ಮಿಂಚಿದ್ದಾರೆ.
ನಟಿಯ ಹಳದಿ ಶಾಸ್ತ್ರ ಸುಂದರ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಭರ್ಜರಿ ಸದ್ದು ಮಾಡುತ್ತಿದೆ. ಜಯಮಾಲಾ ಪುತ್ರಿ ಸೌಂದರ್ಯ ಅವರ ಮೆಹೆಂದಿ ಹಾಗೂ ಹಳದಿ ಶಾಸ್ತ್ರ ಫೆಬ್ರವರಿ 5 ರಂದು ನಗರದ ಲಲಿತ್ ಅಶೋಕ್ ಹೋಟೆಲ್ನಲ್ಲಿ ಅದ್ಧೂರಿಯಾಗಿ ನಡೆದಿದೆ. ವಧು ಸೌಂದರ್ಯ ಹಳದಿ ಬಣ್ಣದ ಉಡುಗೆಯಲ್ಲಿ ಕಂಗೊಳಿಸಿದ್ದಾರೆ.
ಈ ಸಂಭ್ರಮದಲ್ಲಿ ಕನ್ನಡ ಚಿತ್ರರಂಗದ ಹೆಸರಾಂತ ಹಿರಿಯ ನಟಿಯರಾದ ಗಿರಿಜಾ ಲೋಕೇಶ್, ಹರ್ಷಿಕಾ, ಅನು ಪ್ರಭಾಕರ್, ಪ್ರಿಯಾಂಕಾ ಉಪೇಂದ್ರ, ಭಾರತಿ ವಿಷ್ಣುವರ್ಧನ್, ಹೇಮಾ ಚೌಧರಿ, ಸುಧಾ ನರಸಿಂಹರಾಜು,
ಶ್ರುತಿ, ಮಾಳವಿಕಾ ಅವಿನಾಶ್, ಸುಧಾರಾಣಿ, ಉಮಾಶ್ರೀ, ಪ್ರಮೀಳಾ ಜೋಷಾಯ್, ಮುಂತಾದ ಹಿರಿಯ ನಟಿಯರು ಭಾಗವಹಿಸಿ ಮದುವೆ ಕಾರ್ಯಕ್ರಮದಲ್ಲಿ ಸಂಭ್ರಮಿಸಿದ್ದಾರೆ. ಎಲ್ಲರೂ ಹಳದಿ ಬಣ್ಣದ ಉಡುಗೆಯಲ್ಲಿ ಮಿಂಚಿದ್ದಾರೆ. ಹಿರಿಯ ನಟಿಯರು ಜಯಮಾಲಾ ಜೊತೆ ಸಖತ್ ಆಗಿ ಹಾಡಿಗೆ ಹೆಜ್ಜೆಹಾಕಿ ಡ್ಯಾನ್ಸ್ ಮಾಡಿದ್ದಾರೆ.
ಇನ್ನೂ ನಟಿ ಜಯಮಾಲ ಪುತ್ರಿ ಸೌಂದರ್ಯ ಜಯಮಾಲ ರುಷಬ್ ಕೆ ಎನ್ನುವವರ ಜೊತೆ ಹಸೆಮಣೆ ಏರಿ ಸಪ್ತಪದಿ ತುಳಿಯಲು ರೆಡಿಯಾಗಿದ್ದಾರೆ. ಆದರೆ ಇವರದ್ದು ಅರೇಂಜ್ ಮ್ಯಾರೇಜ್ ಅಥವಾ ಲವ್ ಮ್ಯಾರೇಜ್ ಎಂಬುದು ರಿವೀಲ್ ಆಗಿಲ್ಲ. ಹುಡುಗನ ವಿವರ ಕೂಡ ರಿವೀಲ್ ಆಗಿಲ್ಲ.
ಇನ್ನೂ ಸೌಂದರ್ಯ ಜಯಮಾಲಾ ಅವರ ಮದುವೆ ಫೆಬ್ರವರಿ 7 ಮತ್ತು 8ರಂದು ಜರುಗಲಿದೆ. ಈ ಮದುವೆ ಸಂಭ್ರಮದಲ್ಲಿ ರಾಜಕೀಯ ಗಣ್ಯರಿಗೆ ಹಾಗೂ ಸಿನಿಮಾ ನಟ ನಟಿಯರಿಗೆ ಆಹ್ವಾನ ನೀಡಲಾಗಿದೆ.
ಇನ್ನೂ ಸೌಂದರ್ಯ ಜಯಮಾಲಾ ಅವರು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿ ಎರಡು ವರ್ಷಗಳಲ್ಲಿ ನಾಲ್ಕು ಸಿನಿಮಾಗಳಲ್ಲಿ ನಾಯಕಿಯಾಗಿ ನಟಿಸಿದ್ದಾರೆ.
ತೆಲುಗಿನಲ್ಲಿ ಮಿಸ್ಟರ್ ಪ್ರೇಮಿಕುಡು, ಉಪೇಂದ್ರ ಜೊತೆ ಗಾಢ್ ಫಾದರ್, ಶ್ರೀನಗರ ಕಿಟ್ಟಿ ಜೊತೆ ಪಾರು ವೈಫ್ ಆಫ್ ದೇವದಾಸ್, ದುನಿಯಾ ವಿಜಯ್ ಜೊತೆ ಸಿಂಹಾದ್ರಿ, ಸಿನಿಮಾಗಳಲ್ಲಿ ಅವರು ನಟಿಸಿದ್ದರು. ಸದ್ಯ ಅವರು ಬಣ್ಣದ ಬದುಕಿನಿಂದ ದೂರವಿದ್ದಾರೆ.
ವಿಡಿಯೋ, ಚಿತ್ರ ಕೃಪೆ: ಇನ್ಸ್ಟಾಗ್ರಾಮ್