ಜೋಹಾನ್ಸ್ ಬರ್ಗ್ ನಲ್ಲಿ ಕಾರ್ಯಕ್ರಮ ನಡೆಯಬೇಕಾದ ಸ್ಥಳದಲ್ಲಿ ಕೆಳಗೆ ಬಿದ್ದಿದ್ದ ಭಾರತದ ಧ್ವಜವನ್ನು ಎತ್ತಿ ಜೇಬಿನಲ್ಲಿಟ್ಟುಕೊಂಡ ಪ್ರಧಾನಿ ನರೇಂದ್ರ ಮೋದಿ

ಸ್ಟೇಜಿನ ಮೇಲೆ ಬಿದ್ದಿದ್ದ ಭಾರತದ ಧ್ವಜವನ್ನು ಎತ್ತಿಕೊಂಡ‌ ಪ್ರಧಾನಿ ನರೇಂದ್ರ ಮೋದಿ, ವಿಡಿಯೋ ವೈರಲ್…

ಜೋಹಾನ್ಸ್ ಬರ್ಗ್ ನಲ್ಲಿ ಕಾರ್ಯಕ್ರಮ ನಡೆಯಬೇಕಾದ ಸ್ಥಳದಲ್ಲಿ ಕೆಳಗೆ ಬಿದ್ದಿದ್ದ ಭಾರತದ ಧ್ವಜವನ್ನು ಎತ್ತಿ ಜೇಬಿನಲ್ಲಿಟ್ಟುಕೊಂಡ ಪ್ರಧಾನಿ ನರೇಂದ್ರ ಮೋದಿ

ಜೋಹಾನ್ಸ್ ಬರ್ಗ್ ಅಗಸ್ಟ್ 23: ಬ್ರಿಕ್ಸ್​ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಜೋಹಾನ್ಸ್​ಬರ್ಗ್​​ನಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ಸ್ಟೇಜ್ ಒಂದರ ಮೇಲೆ ಹೋಗುವಾಗ ಸ್ಟೇಜಿನ ಮೇಲೆ ಬಿದ್ದಿದ್ದ ಭಾರತದ ಬಾವುಟವನ್ನು ನೋಡಿದ ಪ್ರಧಾನಿ ನರೇಂದ್ರ ಮೋದಿ ಅವರು ಕೂಡಲೇ ಅದನ್ನು ಎತ್ತಿಕೊಂಡು ತಮ್ಮ ಜೇಬಿನಲ್ಲಿರಿಸಿಕೊಂಡ ಘಟನೆ ನಡೆದಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಬ್ರಿಕ್ಸ್​ ಶೃಂಗಸಭೆಯಲ್ಲಿ ಭಾಗವಹಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರು ಕಾರ್ಯಕ್ರಮದ ಪೋಟೋ ತೆಗೆಯಲು ಸ್ಟೇಜ್ ಮೇಲೆ ತೆರಳುತ್ತಿರುವಾಗ ಸ್ಟೇಜ್ ಮೇಲೆ ಭಾರತದ ಧ್ವಜ ಬಿದ್ದಿರುವುದನ್ನು ಗಮನಿಸಿದ್ದಾರೆ
ಕೂಡಲೇ ಅದನ್ನು ತೆಗೆದು ತಮ್ಮ ಜೇಬಿಗೆ ಇಳಿಸಿದ್ದಾರೆ. ಮೋದಿ ಜೊತೆ ಇದ್ದ ದಕ್ಷಿಣ ಆಫ್ರಿಕಾದ ಅಧ್ಯಕ್ಷ ಸಿರಿಲ್ ರಾಮಪೋಸಾ ಅವರು ಭಾರತದ ಧ್ವಜವನ್ನ ತೆಗೆದು ಸಿಬ್ಬಂದಿಗಳ ಕೈಗೆ ನೀಡಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Leave a Reply

Your email address will not be published. Required fields are marked *

Optimized by Optimole
error: Content is protected !!