ಶಿವಮೊಗ್ಗ ಮಹಾನಗರ ಪಾಲಿಕೆಯ 27ನೇ ವಾರ್ಡಿನ ಜನಪ್ರಿಯ ಯುವನಾಯಕ ಶಿ ಜು ಪಾಶ ನಾಳೆ ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಕಾಂಗ್ರೆಸ್ ಸೇರ್ಪಡೆ.

27ನೇ ವಾರ್ಡಿನ ಯುವನಾಯಕ ಶಿ ಜು ಪಾಶ

ಶಿವಮೊಗ್ಗ ಮಹಾನಗರ ಪಾಲಿಕೆಯ 27ನೇ ವಾರ್ಡಿನ ಜನಪ್ರಿಯ ಯುವನಾಯಕ ಶಿ ಜು ಪಾಶ ಕಾಂಗ್ರೆಸ್ ಸೇರ್ಪಡೆ

ಶ್ರೇಷ್ಠ ಸಾಹಿತಿ, ಪತ್ರಕರ್ತ,27ನೇ ವಾರ್ಡಿನ ಯುವನಾಯಕ ಶಿ ಜು ಪಾಶ ಅವರು ಹಿರಿಯ ರಾಜಕಾರಣಿ ಆಯನೂರು ಮಂಜುನಾಥ್ ಅವರೊಂದಿಗೆ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರ ಸಮ್ಮುಖದಲ್ಲಿ ನಾಳೆ ಕೆಪಿಸಿಸಿ ಕಚೇರಿಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗುತ್ತಿದ್ದಾರೆ.
ಶಿ ಜು ಪಾಶ ಅವರು ಈಗಾಗಲೇ ರಾಜಕಾರಣದಲ್ಲಿ ತಮ್ಮನ್ನು ಗುರುತಿಸಿಕೊಂಡು ಕಳೆದ ಬಾರಿಯ ಮಹಾನಗರ ಪಾಲಿಕೆಯ ಚುನಾವಣೆಯಲ್ಲಿ ಮೊದಲ ಬಾರಿಗೆ ಜೆಡಿಎಸ್ ಪಕ್ಷದಿಂದ ಸ್ಫರ್ದಿಸಿ ಹಣವಿಲ್ಲದಿದ್ದರು ಜನಬಲದಿಂದ ಕೇವಲ ಹದಿನೈದು ದಿನಗಳ ಮುನ್ನ ಚುನಾವಣೆಯ ಕಣಕ್ಕೆ ಇಳಿದು ಮೊದಲ ಸ್ಪರ್ಧೆಯಲ್ಲಿಯೆ 999 ಮತವನ್ನು ಗಳಿಸಿ ಕೆಲವು ಅಂತರದ ಮತಗಳಿಂದ ಸೋಲನ್ನು ಒಪ್ಪಿಕೊಳ್ಳುವಂತಾಗಿತ್ತು. ತಾನು ಸೋತರು ತನ್ನ ವಾರ್ಡಿನ ಜನರ ಕಷ್ಟಕ್ಕೆ ಕೈ ಜೋಡಿಸಿದ ವ್ಯಕ್ತಿ ಶಿ ಜು ಪಾಶ. ನೊಂದವರಿಗೆ ಧ್ವನಿಯಾದರು ಕಷ್ಟದಲ್ಲಿರುವವರಿಗೆ ನೆರಳಾದರು. ಅನಾರೋಗ್ಯ ಪೀಡಿತ ಆದೇಷ್ಟೊ ಕುಟುಂಬದ ರೋಗಿಗಳಿಗೆ ತನ್ನ ಮಿತ್ರ ಪಡೆಯನ್ನು ಬೆನ್ನಿಗೆ ಇಟ್ಟುಕೊಂಡು ಚಿಕಿತ್ಸೆಗೆ ಹಣ ನೀಡುವಲ್ಲೂ ಮುಂದಾದರು. ಕೊರೊನಾ ಸಂಧರ್ಭದಲ್ಲಿ ಯಾರು ಮಾಡದಂತಹ ಕಾರ್ಯವನ್ನು ಶಿ ಜು ಪಾಶ ತಮ್ಮ ವಾರ್ಡಿನಲ್ಲಿ ಮಾಡಿ ತೋರಿಸಿ ಹಸಿದ ನೂರಾರು ಕುಟುಂಬಗಳಿಗೆ ದಿನಸಿ ಕಿಟ್ ವಿತರಿಸುವ ಮೂಲಕ ಹಸಿದವರಿಗೆ‌ ಆಸರೆಯಾಗಿದ್ದರು, ಕೊರೊನಾ ಮಾರಿಯ ನಡುವೆಯು ಬಸ್ ನಿಲ್ದಾಣ ಮತ್ತು ಸಾರ್ವಜನಿಕ ಸ್ಥಳದಲ್ಲಿ ಮನೆ ಮಠವಿಲ್ಲದ ಜೀವಗಳಿಗೆ ಅನ್ನ ನೀರು ಕೊಟ್ಟು ಸೈ ಎನಿಸಿಕೊಂಡ ವ್ಯಕ್ತಿ ಶಿ ಜು ಪಾಶ. ಚಳಿಗಾಲದಲ್ಲಿ ವಯಸ್ಸಾದ ಜೀವಗಳಿಗೆ ಹೊದಿಯಲು ಕಂಬಳಿಕೊಟ್ಟು 27ನೇ ವಾರ್ಡಿನ ಹೆಮ್ಮೆಯ ಜನನಾಯಕನಾಗಿ ವಾರ್ಡಿನ ಮನೆ ಮಗನಾಗಿ ಶಿ ಜು ಪಾಶ ಜನಪ್ರಿಯತೆ ಗಳಿಸಿದ್ದಾರೆ. ವಾರ್ಡಿನ ಯಾವುದೇ ಸಮಸ್ಯೆ ಇರಲಿ ಅಲ್ಲಿ ಶಿ ಜು‌ ಪಾಶ ತನ್ನ ಕೈಯಿಂದಾಗುವ ಕೆಲಸವನ್ನು ಮಾಡುವಂತಹದ ವ್ಯಕ್ತಿತ್ವ ಒಟ್ಟಿನಲ್ಲಿ ಶಿ ಜು ಪಾಶ ನೊಂದವರಿಗೆ ಧ್ವನಿಯಾಗುವ ಮನಸ್ಸುಳ್ಳ ವ್ಯಕ್ತಿತ್ವದ ಜನನಾಯಕ ಎಂದರೆ ತಪ್ಪಾಗಲಾರದು.
ಶಿ ಜು‌ ಪಾಶ ಅವರು ತಮ್ಮ ಮುಂದಿನ ರಾಜಕಾರಣ ಮತ್ತು ಕುಂಠಿತಗೊಂಡ ವಾರ್ಡಿನ ಅಭಿವೃದ್ಧಿಯ ಹಿತದೃಷ್ಟಿಯಿಂದ ಹಿರಿಯರು ತಮ್ಮ ಬೆಂಬಲಿಗರು ಮತ್ತು ಆತ್ಮೀಯರ ಸಲಹೆ ಸಹಕಾರದೊಂದಿಗೆ ಹಿರಿಯ ರಾಜಕಾರಣಿ ಆಯನೂರು ಮಂಜುನಾಥ್ ಅವರೊಂದಿಗೆ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರ ಸಮ್ಮುಖದಲ್ಲಿ ಪಕ್ಷಕ್ಕೆ ಸೇರ್ಪಡೆಯಾಗುತ್ತಿದ್ದಾರೆ ಎಂದಿನಂತೆ ಮುಂದೆಯೂ ನನ್ನ ಬೆನ್ನಿಗಿದ್ದು ವಾರ್ಡಿನ ಸಮಸ್ಯೆಗಳಿಗೆ ಸಹಕರಿಸಬೇಕಾಗಿ 27ನೇ ವಾರ್ಡಿನ ಮತದಾರರು ಬೆಂಬಲಿಗರು ಮತ್ತು ಹಿರಿಯರಲ್ಲಿ ಮನವಿ ಮಾಡಿದ್ದಾರೆ.



ಸುಧೀರ್ ವಿಧಾತ, ಶಿವಮೊಗ್ಗ

Leave a Reply

Your email address will not be published. Required fields are marked *

Optimized by Optimole
error: Content is protected !!