“ಗಣಕೀಕರಣಕ್ಕೆ ಶಕ್ತಿ” “ಸಾರ್ವಜನಿಕರ ದಾಖಲೆಗಳ ದುಸ್ಥಿತಿಗೆ ಮುಕ್ತಿ”
ಅಶ್ವಸೂರ್ಯ/ಶಿವಮೊಗ್ಗ: ಇಂದು ಸೊರಬ ವಿಧಾನಸಭಾ ಮತಕ್ಷೇತ್ರ ಸೊರಬದ ತಾಲೂಕು ಕಚೇರಿಯಲ್ಲಿ ಮಾನ್ಯ ಜಿಲ್ಲಾ ಉಸ್ತುವಾರಿ ಸಚಿವರಾದ ಮಧು ಬಂಗಾರಪ್ಪನವರು “ಭೂ ಸುರಕ್ಷಾ” ಯೋಜನೆಯಡಿ ಭೂ ದಾಖಲೆಗಳ ಇ ಖಜಾನೆ ಡಿಜಿಟಲೀಕರಣ ಕೊಠಡಿಯನ್ನು ಉದ್ಘಾಟಿಸಿ ಚಾಲನೆ ನೀಡಿದರು. ಬಳಿಕ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾದರು
ರಾಜ್ಯ ಸರ್ಕಾರವು ಭೂ ದಾಖಲೆಗಳನ್ನು ಡಿಜಿಟಲೀಕರಣಗೊಳಿಸುವ ಮೂಲಕ ಅತಿ ದೊಡ್ಡ ಬದಲಾವಣೆಯನ್ನು ತಂದಿದೆ.
ಇ-ಖಜಾನೆ ವ್ಯವಸ್ಥೆಯಿಂದ ಜನ ಸಮುದಾಯಕ್ಕೆ ಬಹಳ ಅನುಕೂಲವಾಗಲಿದೆ. ರೈತರ ಹಕ್ಕುಗಳನ್ನು ಸಂರಕ್ಷಣೆ ಮಾಡಲಿದೆ.
ದಾಖಲೆಗಳು ಡಿಜಿಟಲೀಕರಣಗೊಳ್ಳುವುದರಿಂದ ಸುಲಭ ಮತ್ತು ಸುಭದ್ರವಾಗಿ ಇರಲಿವೆ. ಇ-ದಾಖಲೆಗಳನ್ನು ತಿದ್ದಲು ಕಳೆಯಲು ಅಸಾಧ್ಯ. ಅಗತ್ಯ ಸಂದರ್ಭದಲ್ಲಿ ತಂತ್ರಜ್ಞಾನ ನೆರವಿನಿಂದ ಸುಲಭವಾಗಿ ಪಡೆಯಬಹುದಾಗಿದೆ ಎಂದರು ನಂತರ ತಾಲೂಕು ಪಂಚಾಯತ್ ಕಚೇರಿಯಲ್ಲಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿ ಅಗತ್ಯ ಕ್ರಮ ಕೈಗೊಳ್ಳಲು ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಿದರು.
ಸಾಗರ ಉಪವಿಭಾಗಾಧಿಕಾರಿ ಶ್ರೀ ಯತೀಶ್, ಐ.ಎ.ಎಸ್ ಕು.ದೃಷ್ಟಿ ಜೆಸ್ವಾಲ್, ತಹಶೀಲ್ದಾರ್ ಶ್ರೀಮತಿ ಮಂಜುಳಾ ಹೆಗಡೆವಾರ್, ಇಒ ಶ್ರೀ ಪ್ರದೀಪ್ ಕುಮಾರ್, ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾದ ಶ್ರೀ ಮಂಜುನಾಥ್ ಸೇರಿದಂತೆ ಸಂಬಂಧಪಟ್ಟ ಅಧಿಕಾರಿಗಳು ಉಪಸ್ಥಿತರಿದ್ದರು.