ಹೊಸನಗರ|| ನಿಟ್ಟೂರು ಕೆಲವು ಪೊಲೀಸ್, ಅಧಿಕಾರಿಗಳ ನೆರಳಿನಲ್ಲಿ ಭರ್ಜರಿ ಇಸ್ಪೀಟ್ ಕೂಟ.!ನಲುಗಿ ಹೊಗಿದೆ ಕೆಚ್ಚೆದೆಯ ಶಿವಪ್ಪನಾಯಕನ ಬಿಡು.!
ಅಶ್ವಸೂರ್ಯ/ಶಿವಮೊಗ್ಗ: ಹೊಸನಗರ ತಾಲೂಕು ನಿಟ್ಟೂರು ಸಮೀಪದ ಸುಂದರ ಕೊಡಚಾದ್ರಿಯ ತಪ್ಪಲಿನಲ್ಲಿ ಅಕ್ರಮ ಇಸ್ಪೀಟ್ ದಂಧೆಯ ಕಲರವ ಮುಗಿಲು ಮುಟ್ಟಿದೆ.! ಕೊಡಚಾದ್ರಿಯ ಸುಂದರ ತಾಣ ಇಸ್ಪೀಟ್ ಮಯವಾಗಿ ಪರಿಸರವನ್ನೇ ನಾಶಮಾಡಿದೆ. ಶಿಶಿರ ರೀವರ್ ಜಂಗಲ್ ರೆಸಾರ್ಟ್ ಹೆಸರಿನಲ್ಲಿ ನೆಡೆಯುತ್ತಿರುವುದಾದರು ಎನು.? ಇದು ಶರಾವತಿ ಹಿನ್ನೀರಿನ ದಡದಲ್ಲಿ ನೆಡೆಯುತ್ತಿರುವ ಅಕ್ರಮ ಇಸ್ಪೀಟ್ ಕೂಟ.! ಈ ಇಸ್ಪೀಟ್ ಅಡ್ಡೆ ಕೂಳರು ಗ್ಯಾಂಬ್ಲರ್ ಗಳನ್ನು ಕೈಬಿಸಿ ಕರೆಯುತ್ತಿದ್ದಾರೆ..ನಿಟ್ಟೂರಿನ ಶಿಶಿರ ಜಂಗಲ್ ರೆಸಾರ್ಟ್ ನಲ್ಲಿ ಮಿತಿಮೀರಿದೆ ಇಸ್ಪೀಟ್ ದಂಧೆ, ಸ್ಥಳೀಯ ದಂಧೆಕೋರರ ಜೋತೆಗೆ ಹೊರ ಜಿಲ್ಲೆಯ ಹೊರ ರಾಜ್ಯದ ಇಸ್ಪೀಟ್ ಫಂಟರ್ ಗಳನ್ನು ಗುಡ್ಡೆಹಾಕುತ್ತಿದ್ದಾರೆ. ಶಿಶಿರ ಜಂಗಲ್ ರೆಸಾರ್ಟ್ ಹೇಳಿ ಮಾಡಿಸಿದ ಇಸ್ಪೀಟ್ ತಾಣವಾಗಿದೆ.ನಿವು ಇಸ್ಪೀಟ್ ಆಡಲು ಮುಂದಾದರೆ ಸಾಕು ನಿಮ್ಮನ್ನು ಅಡ್ಡೆಗೆ ಕರೆದೊಯ್ಯುವುದಕ್ಕೆಂದುಶಿಶಿರ ಅಕ್ರಮ ಇಸ್ಪೀಟ್ ಅಡ್ಡೆಯ ದಂಧೆಕೋರರು ಕೆಲವರನ್ನು ನೇಮಕಮಾಡಿಕೊಂಡಿದ್ದಾನೆ.! ಇಸ್ಪೀಟ್ ಅಡ್ಡೆಯ ಪ್ರತಿನಿಧಿಗಳು ನಿಮ್ಮನ್ನು ಸುರಕ್ಷಿತವಾಗಿ ಶಿಶಿರ ಇಸ್ಪೀಟ್ ನ ಜುಗಾರಿ ಅಡ್ಡಕ್ಕೆ ಕರೆದೊಯ್ಯುತ್ತಾರೆ!
ಹೌದು ಅಚ್ಚರಿ ಎನಿಸಿದರೂ ಇದು ನಿಜ. ನಿಟ್ಟೂರು ಸಮೀಪದ ಕೊಡಚಾದ್ರಿ ಸುಂದರತಾಣದಲ್ಲಿ ಬೇರು ಬಿಟ್ಟಿರುವ ಶಿಶಿರ ಜಂಗಲ್ ರೆಸಾರ್ಟ್ ನ ಅಕ್ರಮ ಇಸ್ಪೀಟ್ ದಂಧೆಯ ಅಡ್ಡೆ ಥೇಟು ಮದುವಣಗಿತ್ತಿಯ ಹಾಗೆ ಸಿಂಗರಿಸಿಕೊಂಡು ತಲೆ ಎತ್ತಿ ನಿಂತಿದೆ.! ಈ ಇಸ್ಪೀಟ್ ಅಡ್ಡೆ ವಿಶೇಷವಾಗಿ ರಾಜ್ಯ ಹೊರರಾಜ್ಯದ ಗ್ಯಾಂಬ್ಲರ್ ಗಳನ್ನು ಕೈಬೀಸಿ ಕರೆಯುತ್ತಿವೆ. ಹೀಗಾಗಿ ಕೆಚ್ಚೆದೆಯ ಶಿವಪ್ಪನಾಯಕನ ಬೀಡು ನಿಟ್ಟೂರು ಸಮೀಪದ ಕೊಡಚಾದ್ರಿಯ ಪರಿಸರದ ವ್ಯಾಪ್ತಿಯು ಎಕ್ಕ ರಾಜ ರಾಣಿಯರ ಜನ್ಮ ಭೂಮಿಯಾಗಿದೆ.! ಇಲ್ಲಿ ಪೊಲೀಸರಿಗಂತು ಅಕ್ರಮ ಇಸ್ಪೀಟ್ ಅಡ್ಡೆಯ ಮೇಲೆ ನಿಯಂತ್ರಣ ಸಾಧಿಸಲು ಸಾಧ್ಯವಿಲ್ಲ. ಕೆಲವು ಪೊಲೀಸರು ಅಧಿಕಾರಿಗಳು ಕೂಡ ಒಂದರ್ಥದಲ್ಲಿ ಫಲಾನುಭವಿಗಳು.ಇಸ್ಪೀಟ್ ಅಡ್ಡೆಗಳಿಂದ ಸಲಿಸಾಗಿ ತೀರ್ಥ ಪ್ರಸಾದದ ಸೇವೆ ಕೆಲವರಿಗೆ ಸಲಿಸಾಗಿ ಸಲ್ಲುತ್ತಿರುವುದರಿಂದ ಇವರು ಕೂಡ ಇಸ್ಪೀಟ್ ಅಡ್ಡೆಗಳ ಭಕ್ತರಾಗಿ ಬಿಟ್ಟಿದ್ದಾರೆ.! ಇಸ್ಪೀಟ್ ಅಕ್ರಮ ದಂಧೆ ಕಣ್ಣೆದುರಿಗೆ ನೆಡೆಯುತ್ತಿದ್ದರು ಅಡ್ಡೆಯ ಗರಿ ಗರಿ ನೋಟಿನ ಸರಪರ ಸದ್ದಿಗೆ ತಲೆ ಬಾಗಿ ದಾಸರಾಗಿದ್ದಾರೆ ಎನ್ನುವ ಅಸಮಾಧಾನ ಸ್ಥಳೀಯ ನಾಗರಿಕರಲ್ಲಿ ಹೆಚ್ಚುತ್ತಿದ್ದು ಪೋಲಿಸರ ಮೇಲಿನ ನಂಬಿಕೆ ದೂರವಾಗಿದೆ.
ಅಕ್ರಮ ಇಸ್ಪೀಟ್ ದಂಧೆಗೆ ಹೇಳಿ ಮಾಡಿಸಿದ ವಾತಾವರಣವೆಂದರೆ ಅದು ಕೊಡಚಾದ್ರಿಯ ಶಿಶಿರ ಜಂಗಲ್ ರೆಸಾರ್ಟ್ ಎನ್ನುವ ಮಟ್ಟಕ್ಕೆ ಕುಖ್ಯಾತಿಯನ್ನು ಹೊಂದಿದೆ. ಇಲ್ಲಿನ ಇಸ್ಪೀಟ್ ಅಡ್ಡೆಗೆ ಕೆಲವು ಪ್ರಭಾವಿ ರಾಜಕಾರಣಿಗಳು ಕಿಂಗ್‌ಪಿನ್ ಆಗಿದ್ದಾರೆ.ರಾಜ್ಯದ ಇಸ್ಪೀಟ್ ಫಂಟರ್ ಗಳ ದಂಡು ಜುಗಾರಿ ದಂಧೆಗೆ ಖ್ಯಾತಿ ಹೊಂದಿರುವ ಶಿಶಿರ ಇಸ್ಪೀಟ್ ಅಡ್ಡೆಗೆ ಎಡತಾಗುತ್ತಿದ್ದಾರೆ.ಈ ಶಿಶಿರ ಅಕ್ರಮ ಇಸ್ಪೀಟ್ ಅಡ್ಡೆಯಲ್ಲಿ ದಿನ ನಿತ್ಯ ಲಕ್ಷಾಂತರ ರೂಪಾಯಿಯ ವಹಿವಾಟು ಸದ್ದಿಲ್ಲದೆ ನಡೆದು ಹೋಗುತ್ತಿದೆ.! ಈ ಅಕ್ರಮ ಇಸ್ಪೀಟ್ ದಂಧೆಗೆ ಬ್ರೇಕ್ ಹಾಕುಲು ಯಾರಿಂದಲೂ ಸಾಧ್ಯವಿಲ್ಲ ಎನ್ನುವಂತಾಗಿದೆ.!? ಈ ದಂಧೆಯಲ್ಲಿ ಕಾಣದ ಕೈಗಳೂ ಅಡಗಿವೆ ಎಂದು ಹೇಳಲಾಗುತ್ತಿದೆ.?
ಶಿಶಿರ ಇಸ್ಪೀಟ್ ಅಡ್ಡೆಯಲ್ಲಿ ಗ್ಯಾಂಬ್ಲರ್ ಗಳನ್ನು ಗುಡ್ಡೆ ಹಾಕಲು ಇಸ್ಪೀಟ್ ಕೂಳರ ಗ್ಯಾಂಗ್ ನಿರಂತರವಾಗಿ ಟೀಮ್ ವರ್ಕ್ ಮಾಡುತ್ತಿದೆಯಂತೆ.!? ಟೀಮ್ ನ ಪ್ರತಿಯೊಬ್ಬ ದಂಧೆಕೋರ ಇಸ್ಪೀಟ್ ಅಡ್ಡೆಯ ಒಂದೊಂದು ಟೇಬಲ್ ಹಂಚಿಕೊಂಡು ಅಡ್ಡೆಯಲ್ಲಿ ಇಸ್ಪೀಟ್ ದಂಧೆಯ ದರ್ಬಾರ್ ನೆಡೆಸುತ್ತಿದ್ದಾರೆ.
ಇಸ್ಪೀಟ್ ಆಟಕ್ಕೆ ಮೀಟರ್ ಬಡ್ಡಿ ಲೆಕ್ಕದಲ್ಲಿ ಸಾವಿರಾರು ರೂಪಾಯಿ ಸಾಲ ಕೂಡ ಸಿಗೋತ್ತೆ ಎನ್ನುವ ಮಾತು ಕೇಳಿಬಂದಿದೆ.!? ಆಟದಲ್ಲಿ ಆಸಕ್ತಿ ಇದ್ದು, ಕೈಯಲ್ಲಿ ಹಣ ಇಲ್ಲದಿದ್ದರೂ ಫಂಟರ್ ಗಳು ಚಿಂತಿಸಬೇಕಿಲ್ಲ. ಆಟಕ್ಕೆ ನೂರರಿಂದ ಲಕ್ಷಾಂತರ ರೂಪಾಯಿ ವರೆಗೆ ಮೀಟರ್ ಬಡ್ಡಿ ಲೆಕ್ಕದಲ್ಲಿ ಸಾಲ ಕೊಡುವವರು ಈ ಇಸ್ಪೀಟ್ ಅಡ್ಡೆಯಲ್ಲಿ ಹಣದ ಪಿಂಡಿ ಹಿಡಿದುಕೊಂಡು ಪ್ರತಿಷ್ಠಾಪಿತರಾಗಿರುತ್ತಾರೆ. ಹೇರಳವಾಗಿ ಸಿಗುವ ಸಾಲದ ಹಣದಿಂದ ಜುಗಾರಿ ಅಡ್ಡೆಯಲ್ಲಿ ಲಕ್ಷಾಂತರ ರೂಪಾಯಿ ಬಾಜಿ ಕಟ್ಟಲಾಗುತ್ತಿದೆ.
ರಾಜ್ಯದಲ್ಲಿ ಅಕ್ರಮ ಇಸ್ಪೀಟ್ ದಂಧೆಗೆ ಸಂಪೂರ್ಣ ನಿಷೇಧವಿದ್ದರೂ ನಿಟ್ಟೂರುರಿನ ಕೊಡಚಾದ್ರಿ ತಪ್ಪಲಿನ ಶಿಶಿರ ಜಂಗಲ್ ರೆಸಾರ್ಟ್ ನಲ್ಲಿ ಅಕ್ರಮ ಇಸ್ಪೀಟ್ ಆಟಕ್ಕೆ ನಿಯಂತ್ರಣವಿಲ್ಲ. ಕೆಲವು ಪೊಲೀಸರು.ಅಧಿಕಾರಿಗಳು ಇಸ್ಪೀಟ್ ಅಡ್ಡೆಗಳಿಂದ ಬರುವ ಹಣಕ್ಕೆ ಕೈಕಟ್ಟಿ ಕುಳಿತಿದ್ದಾರೆ. ಪೋಲಿಸರಿದ್ದು ಇಲ್ಲದಂತಾಗಿ ಇಸ್ಪೀಟ್ ಕೂಳರ ವಿರುದ್ಧ ಧ್ವನಿ ಎತ್ತಲಾಗುತ್ತಿಲ್ಲ ಎನ್ನುತ್ತಿದ್ದಾರೆ ಸ್ಥಳೀಯ ಪ್ರಜ್ಞಾವಂತರು.
ಸರ್ಕಾರಿ ನೌಕರರು, ಬಡವನಿಂದ ಶ್ರೀಮಂತನ ವರೆಗೂ ಮತ್ತು ಯುವಕರಿಂದ ಹಿರಿತಲೆಗಳನ್ನೂ ಆಕರ್ಷಿಸುವ ಅಕ್ರಮ ಇಸ್ಪೀಟ್ ಅಡ್ಡೆಯನ್ನು ನಗರ ಪೋಲಿಸ್ ಠಾಣೆಯ ಕೆಲವು ಪೋಲಿಸರು ತಮ್ಮದೆ ಅಡ್ಡೆ ಎನ್ನುವಂತೆ ಪೋಷಿಸುತ್ತಿದ್ದಾರೆ. ಸುಂದರವಾದ ಪರಿಸರ ಪ್ರವಾಸಿಗರ ಸ್ವರ್ಗ ಎನಿಸಿಕೊಂಡಿರುವ ಕೊಡಚಾದ್ರಿಯ ತಪ್ಪಲು ಜೂಜು ಕೋರರ ತಾಣವಾಗಿದೆ. ದಯವಿಟ್ಟು ಶಿವಮೊಗ್ಗ ಜಿಲ್ಲೆಯ ದಕ್ಷ ರಕ್ಷಣಾಧಿಕಾರಿಯೆಂದೆ ಗುರುತಿಸಿಕೊಂಡಿರುವ ಮಿಥುನ್ ಕುಮಾರ್ ಜಿ ಕೆ, ಐಪಿಎಸ್ ಅವರು ಈ ಕೂಡಲೇ ಈ ಅಕ್ರಮ ಇಸ್ಪೀಟ್ ದಂಧೆಯನ್ನು ಮಟ್ಟಹಾಕಿ ಕೆಚ್ಚೆದೆಯ ಶಿವಪ್ಪನಾಯಕನ ಬಿಡಿನ ನೆಲದಲ್ಲಿನ ಅಕ್ರಮ ಇಸ್ಪೀಟ್ ದಂಧೆಯ ವಿರುದ್ಧ ರಣಕಹಳೆ ಮೊಳಗಿಸಬೇಕಿದೆ.
ಈ ಇಸ್ಪೀಟ್ ಅಕ್ರಮ ಆಟ ಕೇಲವು ರಾಜಕಾರಣಿಗಳು ಮತ್ತು ಮನೆಹಾಳರ ಪ್ರತಿಷ್ಠೆಯ ಆಟ ಎನಿಸಿಕೊಂಡು ಬಲವಾಗಿ ಬೇರುಬಿಟ್ಟಿದೆ. ಇಸ್ಪೀಟ್ ಆಡಲೆಂದೇ ಜಿಲ್ಲೆಯ ಹೊರ ಜಿಲ್ಲೆಯ ಹೊರ ರಾಜ್ಯದ ಇಸ್ಪೀಟ್ ಫಂಟರ್ ಗಳು ಹೊಸನಗರ ತಾಲೂಕಿನ ನಿಟ್ಟೂರು ಸಮೀಪದ ಕೊಡಚಾದ್ರಿ ತಪ್ಪಲಿನ ಶಿಶಿರ ಜಂಗಲ್ ರೆಸಾರ್ಟ್ ಗೆ ಎಡತಾಗುತ್ತಿದ್ದಾರೆ. ಹಳ್ಳಿ ಪಟ್ಟಣದ ಜೊತೆಗೆ ಕೆಲವು ಪ್ರವಾಸಿಗರ ಸೊಗಿನಲ್ಲಿ ಬರುವ ಇಸ್ಪೀಟ್ ಫಂಟರ್ ಗಳು ನಿಟ್ಟೂರಿ ಶಿಶಿರ ಜಂಗಲ್ ರೆಸಾರ್ಟ್ ಗೆ ಬಸ್ಸು,ಕಾರು,ಬೈಕ್ ಏರಿ ಬರುತ್ತಿದ್ದಾರೆ.! ಸಾಲದ್ದಕ್ಕೆ ಫಂಟರ್ ಗಳನ್ನು ಪಿಕಪ್ ಡ್ರಾಪ್ ಮಾಡಲೆಂದೆ ಈ ಇಸ್ಪೀಟ್ ಅಡ್ಡೆಯಲ್ಲಿ ವಾಹನಗಳು ಸಿದ್ಧವಿರುತ್ತದೆ. ಇವರಲ್ಲಿ ವ್ಯಾಪಾರಿಗಳು,ಸರ್ಕಾರಿ ನೌಕರರು, ಶಿಕ್ಷಕರು, ಮರಿ ರಾಜಕಾರಣಿಗಳು ಸೇರಿದಂತೆ ಇಸ್ಪೀಟ್ ಫಂಟರ್ ಗಳಳು ಈ ಇಸ್ಪೀಟ್ ಅಡ್ಡೆಯ ಪ್ಲೇಯರ್ ಗಳಾಗಿತ್ತಾರೆ. ದುಡಿದ ಲಕ್ಷಾಂತರ ರೂಪಾಯಿ ಹಣವನ್ನೇಲ್ಲ ಇಸ್ಪೀಟ್ ಫಂಟರ್ ಗಳು ಈ ಇಸ್ಪೀಟ್ ಅಡ್ಡೆಗೆ ತಂದು ಸುರಿಯುತ್ತಿದ್ದಾರೆ.! ಹಣವನ್ನು ಕಳೆದುಕೊಂಡು ಹೋಗುವವರ ಸಂಖ್ಯೆಯೆ ಹೆಚ್ಚು ಹೊರತು ಹಣ ಗೆದ್ದುಕೊಂಡು ಹೋಗುವವರನ್ನು ಬ್ಯಾಟರಿ ಹಾಕಿ ಹುಡುಕಿದರು ಸಿಗಲು ಸಾಧ್ಯವಿಲ್ಲ.! ದಿನ ಒಂದಕ್ಕೆ ಈ ಇಸ್ಪೀಟ್ ಅಡ್ಡೆಯಲ್ಲಿ ಲಕ್ಷಾಂತರ ರೂಪಾಯಿ ಬಿಕರಿ ಯಾಗುತ್ತಿದೆಯಂತೆ.!? ಪೊಲೀಸ್ ಇಲಾಖೆಯ ಸಂಪೂರ್ಣ ವೈಫಲ್ಯದ ಕಾರಣದಿಂದ ನಿಟ್ಟೂರಿನ ಈ ಶಿಶಿರ ಜಂಗಲ್ ರೆಸಾರ್ಟ್ ನಲ್ಲಿ ಇಸ್ಪೀಟ್ ಕೂಳರ ಆರ್ಭಟ ಯಾರ ಭಯವಿಲ್ಲದೆ ಎಗ್ಗಿಲ್ಲದೆ ಸಾಗಿದೆ. ಈ ಅಡ್ಡೆಯಲ್ಲಿ ಅಕ್ರಮ ಇಸ್ಪೀಟ್ ದಂಧೆ ದಿನದಿಂದ ದಿನಕ್ಕೆ ಮಿತಿ ಮೀರಿಹೋಗಿದೆ. ಇನ್ನಾದರೂ ಪೊಲೀಸ್ ಇಲಾಖೆ ಒತ್ತಡಕ್ಕೆ ಮಣಿಯದೆ ಅಕ್ರಮ ಚಟುವಟಿಕೆಗಳ ಮೇಲೆ ಕಡಿವಾಣ ಹಾಕಲಿ
ಅಕ್ರಮ ಚಟುವಟಿಕೆಗಳ ಮೇಲೆ ಮುಲಾಜಿಲ್ಲದೆ ದಾಳಿ ನಡೆಸಲಿ. ಪವಿತ್ರ ಕಾಕೀಯ ಖದರ್ ಎನೆಂದು ತೋರಿಸಲಿ.ಪ್ರತಿಷ್ಠಿತ ರಾಜಕಾರಣಿಗಳ ಹೆಸರೇಳಿಕೊಂಡು ತಮ್ಮ ಕ್ಷೇತ್ರದ ಸ್ವಾಸ್ಥ್ಯ ಹಾಳುಗೇಡುವುತ್ತಿರುವ ರಾಜಕಾರಣಿ ಸೋಗಿನ ಪುಡಿ ಜನ ನಾಯಕನೊಬ್ಬನ ಅಕ್ರಮ ಇಸ್ಪೀಟ್ ಅಡ್ಡೆಗೆ ಪೋಲಿಸ್ ಇಲಾಖೆ ಈ ತಕ್ಷಣ ರೈಡು ಬಿದ್ದು ಬೀಗ ಜಡಿಯಲಿ.ಒಟ್ಟಿನಲ್ಲಿ ಸಂಬಂಧಪಟ್ಟ ಪೋಲಿಸ್ ಅಧಿಕಾರಿಗಳು ಕೆಚ್ಚೆದೆಯ ಶಿವನಾಯಕನ ನೆಲದಲ್ಲಿ ಅಡ್ಡಕಸುಬಿ ಇಸ್ಪೀಟ್ ದಂಧೆಗೆ ಬ್ರೇಕ್ ಹಾಕಲಿ ಎನ್ನುವುದು ಸ್ಥಳೀಯ ಪ್ರಜ್ಞಾವಂತ ನಾಗರಿಕರ ಧ್ವನಿಯಾಗಿದೆ.