ದೂರು ನೀಡಲು ಬಂದ ಮಹಿಳೆ ಜೊತೆ ಮಧುಗಿರಿ ಡಿವೈಎಸ್‌ಪಿ ರಾಸಲೀಲೆ ಪ್ರಕರಣ.! ಡಿವೈಎಸ್‌ಪಿ ರಾಮಚಂದ್ರಪ್ಪ ಅರೆಸ್ಟ್.
ಅಶ್ವಸೂರ್ಯ/ತುಮಕೂರು: ಮಧುಗಿರಿ ತಾಲೂಕಿನ ಉಪವಿಭಾಗದ ಡಿವೈಎಸ್‌ಪಿ (DySP)ರಾಮಚಂದ್ರಪ್ಪನ ರಾಸಲೀಲೆ ಪ್ರಕರಣದ ತನಿಖೆ ಚುರುಕುಗೊಂಡಿದೆ. ಇದೀಗ ಆರೋಪಿ ಡಿವೈಎಸ್‌ಪಿ ರಾಮಚಂದ್ರಪ್ಪನನ್ನು ಬಂಧಿಸಲಾಗಿದೆ.ದೂರು ನೀಡಲು ಬಂದ ಮಹಿಳೆಯೊಂದಿಗೆ ಠಾಣೆಯಲ್ಲೇ ರಾಸಲೀಲೆ ನಡೆಸಿದ ಆರೋಪ ಡಿವೈಎಸ್‌ಪಿ ರಾಮಚಂದ್ರಪ್ಪ ಮೇಲಿದೆ.ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಡಿಯೋ ವೈರಲ್ (Viral Video) ಆಗುತ್ತಿದ್ದಂತೆ ರಾಮಚಂದ್ರಪ್ಪ ತಲೆಮರೆಸಿಕೊಂಡು ಓಡಿ ಹೋಗಿದ್ದ. ಆದರೆ ಸಂತ್ರಸ್ತ ಮಹಿಳೆಯಿಂದ ದೂರು ಪಡೆದು ಎಫ್ಐಆರ್ ದಾಖಲಿಸಿದ್ದ ಮಧುಗಿರಿ ಪೊಲೀಸರು, ಇದೀಗ ರಾಮಚಂದ್ರಪ್ಪನನ್ನು ಅರೆಸ್ಟ್ ಮಾಡಿದ್ದಾರೆ.
ಏನಿದು ರಾಸಲೀಲೆ ಪ್ರಕರಣ?
ತುಮಕೂರು ಜಿಲ್ಲೆಯ ಮಧುಗಿರಿ ಉಪವಿಭಾಗದ ಡಿವೈಎಸ್‌ಪಿಯಾಗಿದ್ದ ರಾಮಚಂದ್ರಪ್ಪನ ಮೇಲೆ ಠಾಣೆಯಲ್ಲೇ ರಾಸಲೀಲೆ ನಡೆಸಿದ ಆರೋಪ ಕೇಳಿ ಬಂದಿತ್ತು. ತಮ್ಮ ಕಚೇರಿಯಲ್ಲಿ ಮಹಿಳೆಯ ಜೊತೆ ರಾಸಲೀಲೆಯಲ್ಲಿ ತೊಡಗಿದ್ದ ಡಿವೈಎಸ್‌ಪಿ ಹಾಗೂ ಮಹಿಳೆ ವಿಡಿಯೋ ವೈರಲ್ ಆಗಿತ್ತು.
ದೂರು ನೀಡಲು ಬಂದಿದ್ದ ಮಹಿಳೆಯನ್ನು ಪುಸಲಾಯಿಸಿ ಡಿವೈಎಸ್‌ಪಿ ರಾಮಚಂದ್ರಪ್ಪ ಠಾಣೆಯಲ್ಲೆ ಲೈಂಗಿಕ ದೌರ್ಜನ್ಯ ನೀಡಿದ್ದ ಆರೋಪ ಕೇಳಿ ಬಂದಿತ್ತು. ತನ್ನ ಕಚೇರಿಯ ಆ್ಯಂಟಿ ಚೇಂಬರ್‌ನಲ್ಲಿ ಡಿವೈಎಸ್‌ಪಿ ರಾಮಚಂದ್ರಪ್ಪ ಈ ಕೃತ್ಯ ಎಸಗಿದ್ದ. ಮಹಿಳೆಗೆ ಲೈಂಗಿಕ ದೌರ್ಜನ್ಯ ನೀಡಿರುವ ವಿಡಿಯೋ ವೈರಲ್ ಆಗಿತ್ತು.
ತುಮಕೂರುಜಿಲ್ಲೆಯ ಮಧುಗಿರಿ ತಾಲೂಕಿನ ಮಹಿಳೆ ಜಮೀನು ವ್ಯಾಜ್ಯದ ವಿಚಾರಕ್ಕೆ ದೂರು ನೀಡಲು ಬಂದಿದ್ದಳು.ಅ ಹೊತ್ತಿಗಾಗಲೇ ಕಾಮಾಂದ ಡಿವೈಎಸ್‌ಪಿ ಆಕೆಯ ಮೇಲೆ ಕಣ್ಣು ಹಾಕಿದ್ದಾನೆ.! ಈ ವೇಳೆ ಆಕೆಯನ್ನು ಪುಸಲಾಯಿಸಿದ ಡಿವೈಎಸ್‌ಪಿ ರಾಮಚಂದ್ರಪ್ಪ ಲೈಂಗಿಕ ದೌರ್ಜನ್ಯ ನಡೆಸಿದ್ದ.
ಪವಿತ್ರ ಕಾಕೀ ತೊಟ್ಟ ನೀಚ ಡಿವೈಎಸ್‌ಪಿ ಒಬ್ಬ ತನ್ನ ಜವಾಬ್ದಾರಿಯುತ ಕರ್ತವ್ಯವನ್ನು ಮರೆತು ರಕ್ಷಣೆ ಕೊಡಬೇಕದ ಅಧಿಕಾರಿಯೆ ಮಹಿಳೆಯೊಬ್ಬಳನ್ನು ತನ್ನ ಕಾಮತೃಷೆ ತೀರಿಸಿಕೊಳ್ಳಲು ಬಳಸಿಕೊಂಡಿದ್ದು ದುರಂತವೆ ಹೌದು.!