
ಕರ್ನಾಟಕ ನೀರಾವರಿ ನಿಗಮ ನಿಯಮಿತ ಭದ್ರಾ ಯೋಜನಾ ವೃತ್ತದ ಬಿಆರ್ಪಿ ವ್ಯಾಪ್ತಿಯ ಕಛೇರಿಯಲ್ಲಿ ಲೋಕಾಯುಕ್ತರ ಭಲೇಗೆ ಬಿದ್ದ ಲಂಚಬಾಕ ತಿಮಿಂಗಿಲಗಳು.!

ಅಶ್ವಸೂರ್ಯ/ಭದ್ರಾವತಿ: ದೂರುದಾರರಾದ ವಿ.ರವಿ ಅವರು ಪಿಡಬ್ಲ್ಯೂಡಿ ಕ್ಲಾಸ್-02, ಗುತ್ತಿಗೆದಾರರಾಗಿ ಕೇಲಸ ಮಾಡುತ್ತಿದ್ದು.ಬಳ್ಳಾರಿ ನಗರ ವಾಸಿಯಾಗಿದ್ದಾರೆ. ಪಿಡಬ್ಲ್ಯೂಡಿ ಕ್ಲಾಸ್-02 ಗುತ್ತಿಗೆ ದಾರರಾಗಿರುವ ಇವರು ಕರ್ನಾಟಕ ನೀರಾವರಿ ನಿಗಮ ನಿಯಮಿತ ಭದ್ರಾ ಯೋಜನಾ ವೃತ್ತದ ಬಿಆರ್ಪಿ ವ್ಯಾಪ್ತಿಯ ಭದ್ರಾವತಿ ತಾಲ್ಲೂಕಿನ ಗೋಂಧಿ ಬಲದಂಡೆ ನಾಲೆಯಲ್ಲಿ ಶಿಲ್ಟ್ ತಗೆಯಲು ಇ-ಟೆಂಡರ್ ಕರೆದಿದ್ದು, ಅದರಂತೆ ದೂರುದಾರರಾದ ರವಿ ಅವರು 2023ನೇ ಸಾಲಿನ ಡಿಸೆಂಬರ್ ತಿಂಗಳಲ್ಲಿ ಇ-ಟೆಂಡರ್ ನಲ್ಲಿ ಎರಡು ಕಾಮಗಾರಿಗಳಿಗೆ ಸಂಭಂದಿಸಿದಂತೆ ಒಟ್ಟು ಮೊತ್ತ ಜಿಎಸ್ಟಿ ಸೇರಿದಂತೆ 9,16,999/-ರೂಗಳಾಗಿದ್ದು, ದೂರುದಾರರು 2023 ನೇ ಡಿಸೆಂಬರ್ ತಿಂಗಳಲ್ಲಿ ಕೆಲಸ ಪ್ರಾರಂಭಿಸಿ, 2024 ನೇ ಜನವರಿ ತಿಂಗಳಲ್ಲಿ ಶಿಲ್ಟ್ ತಗೆಯುವ ಕಾಮಗಾರಿಯನ್ನು ಕಾಮಗಾರಿ ನಿಯಮಯಂತೆ ಮುಗಿಸಿರುತ್ತಾರೆ.

ದೂರುದಾರರಾದ ರವಿ ಅವರು ಕಾಮಗಾರಿಯ ಬಿಲ್ ಅನ್ನು ಮಂಜೂರು ಮಾಡಿಕೊಡುವಂತೆ ಹಲವಾರು ಬಾರಿ ಕಛೇರಿಗೆ ಹೋಗಿ ಕೇಳಿದ್ದು, ಟೆಂಡರ್ ಹಣ ಬಿಡುಗಡೆ ಮಾಡಿರುವುದಿಲ್ಲ ಎಂದು ಕಛೇರಿಯಲ್ಲಿ ಹೇಳಿರುತ್ತಾರೆ. ದಿನಾಂಕ:-27-12-2024 ರಂದು ದೂರುದಾರರು ಡಿ.ಬಿ ಹಳ್ಳಿಯ ಕರ್ನಾಟಕ ನೀರಾವರಿ ನಿಮಗ ನಿಯಮಿತ ಕಛೇರಿಗೆ ಹೋಗಿ, ಕಛೇರಿಯಲ್ಲಿದ್ದ ಸೆಕ್ಷನ್ ಆಫೀಸರ್ ಕೊಟ್ರಪ್ಪ.ಟಿ. ರವರನ್ನು ಭೇಟಿ ಮಾಡಿ, ತನ್ನ ಕಾಮಗಾರಿಯ ಬಿಲ್ ಅನ್ನು ಮಂಜೂರು ಮಾಡುವಂತೆ ಕೇಳಿಕೊಂಡಾಗ ಕೊಟ್ರಪ್ಪರವರು ನಿನ್ನ ಬಿಲ್ ಮಂಜೂರು ಮಾಡಬೇಕಾದರೆ ನಮಗೆ ಇನ್ನೂ 1.20,000/-ರೂಗಳನ್ನು ಕೊಟ್ಟರೆ ಮಾತ್ರ ಮಾಡುತ್ತೇವೆಂದು ಇಲ್ಲದಿದ್ದರೆ ನಿನ್ನ ಕಾಮಗಾರಿಯ ಬಿಲ್ ಹಣವನ್ನು ಬಿಡುಗಡೆ ಮಾಡುವುದಿಲ್ಲವೆಂದು ಗುತ್ತಿಗೆದಾರ ರವಿ ಅವರಿಗೆ ಹೇಳಿರುತ್ತಾರೆ. ರವಿ ಅವರು ಆತ ಮಾತನಾಡಿದ್ದನ್ನು ಪಿರ್ಯಾದಿಯ ಮೊಬೈಲ್ ನಲ್ಲಿ ವಾಯ್ಸ್ ರೆಕಾರ್ಡ್ ಮಾಡಿಕೊಂಡಿರುತ್ತಾರೆ. ಪಿರ್ಯಾದಿಗೆ ಲಂಚದ ಹಣವನ್ನು ನೀಡಲು ಇಷ್ಟವಿಲ್ಲದೇ ಇದುದ್ದರಿಂದ ಕರ್ನಾಟಕ ನೀರಾವರಿ ನಿಗಮ ನಿಯಮಿತ ಭದ್ರಾ ಯೋಜನಾ ವೃತ್ತ, ಬಿಆರ್ಪಿ ವ್ಯಾಪ್ತಿಯ ಡಿ.ಬಿ. ಹಳ್ಳಿಯ ಸೆಕ್ಷನ್ ಅಫೀಸರ್ ಕೊಟ್ರಪ್ಪ ರವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂದು ಲೋಕಾಯುಕ್ತ ಕಚೇರಿಗೆ ತೆರಳಿ ದೂರು ನೀಡಿರುತ್ತಾರೆ.

ಈ ದಿವಸ ಹೊಸ ವರ್ಷದ ಆರಂಭ ದಿನವಾದ ಜನವರಿ ಒಂದರೊಂದು ಸಂಜೆ 04:30 ಸುಮಾರಿಗೆ ಆರೋಪಿ ಅಧಿಕಾರಿ ಶ್ರೀ.ಕೊಟ್ರಪ್ಪ ಸೆಕ್ಷನ್ ಆಫೀಸರ್ (ಪ್ರಬಾರ ಎ.ಇ.ಇ) ಮತ್ತು ಅವರ ಕಛೇರಿಯ ಲೈಟ್ ಮಜದೂರ್ ಶ್ರೀ.ಅರವಿಂದ್ ರವರು ದುರುದಾರ ಡಿ ರವಿ ಅವರಿಂದ 1,20,000/- ರೂಪಾಯಿ ಲಂಚದ ಹಣವನ್ನು ಅವರ ಕಛೇರಿಯಲ್ಲಿ ಸ್ವೀಕರಿಸಿದ ಸಂಧರ್ಭದಲ್ಲಿ ಸದರಿ ಆರೋಪಿ ಸರ್ಕಾರಿ ನೌಕರನನ್ನು ಲೋಕಾಯುಕ್ತರು ಟ್ರ್ಯಾಪ್ ಮಾಡಿ ತಮ್ಮ ಖೆಡ್ಡಕ್ಕೆ ಕೆಡವಿಕೊಂಡಿದ್ದಾರೆ.ಜೋತೆಗೆ ಲಂಚದ ಹಣವನ್ನು ಜಪ್ತಿ ಮಾಡಿಕೊಂಡಿದ್ದು ಅಪಾದಿತ ಸರ್ಕಾರಿ ನೌಕರನನ್ನು ತನಿಖೆ ಸಂಬಂಧ ವಶಕ್ಕೆ ಪಡೆದು ಕೊಳ್ಳಲಾಗಿದ್ದು. ಈ ಪ್ರಕರಣದ ತನಿಖೆಯನ್ನು ಶಿವಮೊಗ್ಗ ಲೋಕಾಯುಕ್ತ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ವೀರಬಸಪ್ಪ.ಎಲ್ ರವರು ಕೈಗೊಂಡಿರುತ್ತಾರೆ.
ಸದರಿ ಲೋಕಾಯುಕ್ತ ಕಾರ್ಯಚರಣೆಯಲ್ಲಿ ಮಂಜುನಾಥ ಚೌದರಿ ಎಂ.ಹೆಚ್. ಪೊಲೀಸ್ ಅಧೀಕ್ಷಕರು, ಕರ್ನಾಟಕ ಲೋಕಾಯುಕ್ತ, ಶಿವಮೊಗ್ಗ ರವರ ನೇತೃತ್ವದಲ್ಲಿ ನಡೆಸಲಾಗಿದ್ದು ಕಾರ್ಯಚರಣೆಯ ಸಮಯದಲ್ಲಿ ಕರ್ನಾಟಕ ಲೋಕಾಯುಕ್ತ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಹೆಚ್.ಎಸ್ ಸುರೇಶ್ ಮತ್ತು ಪ್ರಕಾಶ್, ಸಿಬ್ಬಂದಿಯವರಾದ ಯೋಗೇಶ್ ಸಿ.ಹೆಚ್.ಸಿ, ಟೀಕಪ್ಪ ಸಿ.ಹೆಚ್.ಸಿ, ಸುರೇಂದ್ರ ಸಿ.ಹೆಚ್.ಸಿ, ಮಂಜುನಾಥ್ ಎಂ. ಪ್ರಶಾಂತ್ ಕುಮಾರ್, ಸಿ.ಪಿ.ಸಿ, ಚೆನ್ನೇಶ್, ಸಿ.ಪಿ.ಸಿ, ಅರುಣ್ ಕುಮಾರ್ ಸಿ.ಪಿ.ಸಿ, ದೇವರಾಜ್, ಸಿ.ಪಿ.ಸಿ ಪ್ರಕಾಶ್, ಸಿ.ಪಿ.ಸಿ, ಆದರ್ಶ ಸಿ.ಪಿ.ಸಿ, ಪುಟ್ಟಮ್ಮ.ಎನ್. ಮ.ಪಿ.ಸಿ, ಅಂಜಲಿ ಮ.ಪಿ.ಸಿ ಗಂಗಾಧರ ಎ.ಪಿ.ಸಿ, ಪ್ರದೀಪ್, ಎ.ಪಿ.ಸಿ ರವರು ಹಾಜರಿದ್ದರು.



