ಸಿಟಿ ಕೋ – ಆಪರೇಟಿವ್ ಬ್ಯಾಂಕ್ ಲಿ. ನಿರ್ದೇಶಕರ ಚುನಾವಣೆ 2025-30 ರ ಚುನಾವಣೆಯ ಕಣದಲ್ಲಿ ಸುನೀಲ್ ಕುಮಾರ್ ಎಸ್ ( SRS ಬೋರ್ ವೇಲ್ಸ್ ಮಾಲೀಕರು )
ASHWASURYA/SHIVAMOGGA
ಸನ್ಮಾನ್ಯ ಸಹಕಾರಿ ಮತದಾರ ಬಂಧುಗಳೇ,
ಅಶ್ವಸೂರ್ಯ/ಶಿವಮೊಗ್ಗ: ತಮ್ಮೆಲ್ಲರ ಸಹಕಾರ -ಬೆಂಬಲದಿಂದ ಮೇಲ್ಕಂಡ ಬ್ಯಾಂಕಿನ ಈ ಸಾಲಿನ ಆಡಳಿತ ಮಂಡಳಿಯ ನಿರ್ದೇಶಕರ ಚುನಾವಣೆಗೆ SRS ಬೋರ್ ವೇಲ್ಸ್ ನ ಮಾಲೀಕರಾದ ಸುನೀಲ್ ಕುಮಾರ್ ಎಸ್ ಅವರು ಸ್ಪರ್ಧಿಸುತ್ತಿದ್ದಾರೆ. ಮಧ್ಯಮವರ್ಗದ ಕುಟುಂಬದಲ್ಲಿ ಹುಟ್ಟಿದ ಸುನೀಲ್ ನಿತ್ಯ ಬದುಕಿನ ಹೋರಾಟ ಮಾಡಿಕೊಂಡು ತನ್ನ ಬೆವರಿನ ಶ್ರಮದ ಫಲವಾಗಿ ಇಂದು ಉನ್ನತ ಸ್ಥಾನವನ್ನು ಮುಟ್ಟಿ ನೆಮ್ಮದಿಯ ಬದುಕು ರೂಪಿಸಿಕೊಂಡಿದ್ದಾರೆ.ಸಾಕಷ್ಟು ಹೋರಾಟದ ಹಾದಿಯಲ್ಲಿ ತನ್ನನ್ನು ಗುರುತಿಸಿಕೊಂಡು ನಗರದಲ್ಲಿ ತನ್ನದೆ ಸ್ನೇಹಿತರ ಬಳಗವನ್ನು ಬೆನ್ನಿಗಿಟ್ಟುಕೊಂಡು ಸಕ್ರಿಯರಾಗಿರುವ ಸುನೀಲ್ ಶಿವಮೊಗ್ಗದ ಪ್ರತಿಷ್ಠಿತ SRS ಬೋರ್ ವೆಲ್ಸ್ ನ ಮಾಲೀಕರಾಗಿದ್ದಾರೆ.
ಶಿವಮೊಗ್ಗ ತಾಲ್ಲೂಕಿನಾದ್ಯಂತ ಉದ್ಯಮದಲ್ಲಿ ಸಾಕಷ್ಟು ಹೆಸರು ಮಾಡಿರುವ ಸುನೀಲ್ ಕುಮಾರ್ ಎಸ್ ಸ್ನೇಹಿತರ, ಆತ್ಮೀಯರ ಒತ್ತಾಯಕ್ಕೆ ಮಣಿದು ಈ ಸಾಲಿನ ಸಿಟಿ ಕೋ ಆಪರೇಟಿವ್ ಬ್ಯಾಂಕಿನ ನಿರ್ದೇಶಕರ ಚುನಾವಣೆಯ ಕಣಕ್ಕೆ ಇಳಿಯಲು ಮುಂದಾಗಿದ್ದಾರೆ.ಈ ಸಾಲಿನ ಚುನಾವಣೆಯಲ್ಲಿ ಸ್ಪರ್ಧಾಳುಗಳ ಸಂಖ್ಯೆಯೂ ಜೋರಾಗಿಯೆ ಇದ್ದು ಶಿವಮೊಗ್ಗ ನಗರದ ಸಾಕಷ್ಟು ಯುವಕರು ಸ್ಪರ್ಧೆಗೆ ಮುಂದಾಗಿದ್ದಾರೆ.ಅದರಲ್ಲೂ ಸಾಕಷ್ಟು ವರ್ಷಗಳಿಂದ ಅದೇ ಹಳೆ ಮುಖಗಳನ್ನು ನೋಡಿ ಬೇಸತ್ತಿರುವ ಸಿಟಿ ಕೋ ಆಪರೇಟಿವ್ ಬ್ಯಾಂಕಿನ ಸದಸ್ಯರು ಈ ಬಾರಿ ಬದಲಾಣೆ ಮಾಡುವ ನಿರೀಕ್ಷೆ ಇದ್ದು ಯುವಕರಿಗೆ ಮಣೆ ಹಾಕುವ ಎಲ್ಲಾ ಸಾಧ್ಯತೆ ಇದೆ ಎನ್ನುವ ಮಾತುಗಳು ಚುನಾವಣೆಯ ಕಣದಿಂದಲೆ ಪ್ರತಿಧ್ವನಿಸುತ್ತಿದೆ.! ಈ ಹಿನ್ನೆಲೆಯಲ್ಲಿ ಸಿಟಿ ಕೋ ಆಪರೇಟಿವ್ ಬ್ಯಾಂಕ್ ಲಿ. ನ ಈ ಸಾಲಿನ ಚುನಾವಣೆ ಕೂಡ ರಂಗೇರಿದೆ. ಈ ಬಾರಿ ಸಾಕಷ್ಟು ಮಂದಿ ಸ್ಫರ್ಧಾ ಆಕಾಂಕ್ಷಿಗಳಾಗಿ ಚುನಾವಣೆಯ ಕಣದಲ್ಲಿದ್ದು ಗೆಲುವು ಕೂಡ ಸುಲಭದ ಮಾತಲ್ಲ.ಈ ಎಲ್ಲವನ್ನೂ ಗಮನದಲ್ಲಿಟ್ಟುಕೊಂಡು ಈ ಬಾರಿಯ ಚುನಾವಣೆಯಲ್ಲಿ ನಿರ್ದೇಶಕರ ಸ್ಥಾನಕ್ಕಾಗಿ ಸ್ನೇಹ ಜೀವಿ ಸುನೀಲ್ ಕುಮಾರ್ ಎಸ್.( SRS ಬೋರ್ ವೇಲ್ಸ್ ನ ಮಾಲಿಕರು) ಕೂಡ ಪ್ರಬಲ ಸ್ಪರ್ಧಿಯಾಗಿದ್ದು ಈಗಾಗಲೇ ಸಾರ್ವಜನಿಕ ಕ್ಷೇತ್ರದಲ್ಲಿ ಸಾಕಷ್ಟು ಹೆಸರು ಮಾಡಿದ್ದು. ಸೇವೆಯನ್ನೇ ಆಧಾರವಾಗಿಟ್ಟುಕೊಂಡು ಕೆಲಸ ಮಾಡುತ್ತಿದ್ದಾರೆ. ಸಹಕಾರ ಕ್ಷೇತ್ರದಲ್ಲಿಯೂ ಕೂಡ ಅಪಾರ ಅನುಭವ ಪಡೆದಿರುವ ಇವರು ಈ ಬಾರಿ ಬಿಸಿಎಂ “3ಬಿ” ವಿಭಾಗದಿಂದ ಸ್ಪರ್ಧೆಗೆ ಇಳಿದಿದ್ದಾರೆ.
ನಾಮಪತ್ರ ಸಲ್ಲಿಸಿದ ಕ್ಷಣ
ಸುನೀಲ್ ಕುಮಾರ್ ಎಸ್, ಅವರು ಈ ಹಿಂದೆ ಮುನ್ಸಿಪಲ್ ಸದಸ್ಯರಾಗಿದ್ದ ಹೆಸರಾಂತ ವ್ಯಕ್ತಿ ದಿವಂಗತ ಎಸ್ ಆರ್ ಶಿವಾಜಿ ರಾವ್ ಅವರ ಮೊಮ್ಮಗರಾಗಿದ್ದು, ಹಾಲಿ ರೋವರ್ಸ್ ಕ್ಲಬ್ ನಿರ್ದೇಶಕರಾಗಿದ್ದಾರೆ ಜೋತೆಗೆ ಸುನೀಲ್ ಕೋಟೆ ಶ್ರೀ ಮಾರಿಕಾಂಬಾ ಸಮಿತಿ ಮತ್ತು ರಾಮಣ್ಣ ಶೆಟ್ಟಿ ಪಾರ್ಕ್ ಸಮಿತಿಯ ನಿರ್ದೇಶರಾಗಿಯು ಸೇವೆಸಲ್ಲಿಸುತ್ತಿದ್ದಾರೆ. ಹೀಗೆ ಹತ್ತು ಹಲವು ಸಮಾಜಮುಖಿ ಕೆಲಸದಲ್ಲಿ ತಮ್ಮನ್ನು ತೊಡಗಿಸಿಕೊಂಡು ಕೆಲಸ ಮಾಡಿದ ಅನುಭವ ಕೂಡ ಇವರಿಗಿದೆ.ಅಷ್ಟೇ ಅಲ್ಲದೇ ಕೋಟೆ ಮಾರಿಕಾಂಬಾ ಸೇವಾ ಸಮಿತಿಯ ನಿರ್ದೇಶಕರಾಗಿ ಪ್ರತಿ ವರ್ಷವೂ ಮಾರಿಕಾಂಬಾ ಜಾತ್ರೆಯಲ್ಲಿ ತಮ್ಮದೇ ಆದ ಸೇವೆ ಸಲ್ಲಿಸುತ್ತ ಬಂದಿದ್ದಾರೆ. ಜಾತ್ರೆಯು ಅತ್ಯಂತ ಯಶಸ್ವಿಯಾಗಿ ನಡೆಯಲು ಸಮಿತಿಯ ಹಿರಿಯರ ಜೊತೆಗಿದ್ದು ಕೆಲಸ ಮಾಡಿರುವ ಹಿರಿಮೆ ಇವರದಾಗಿದೆ. ರಾಜಕೀಯವಾಗಿಯೂ ತಮ್ಮನ್ನು ಗುರುತಿಸಿಕೊಂಡು ತಮ್ಮ ವಾರ್ಡಿನ ಅಭಿವೃದ್ಧಿ ಕಾರ್ಯದಲ್ಲಿ ಜನಪ್ರತಿ ನಿಧಿಗಳ ಜೋತೆಗೆ ಕೈಜೋಡಿಸಿ ಅಭಿವೃದ್ಧಿ ಕಾರ್ಯಗಳಲ್ಲಿ ಕೈಜೋಡಿಸಿದ್ದಾರೆ.
ಸಹಕಾರಿ ಕ್ಷೇತ್ರದಲ್ಲಿಯೂ ಒಂದಷ್ಟು ಕೆಲಸ ಮಾಡುವ ಹಂಬಲದಿಂದ ಬರಲಿರುವ “ಸಿಟಿ ಕೋ ಆಪರೇಟಿವ್ ಬ್ಯಾಂಕ್”ನ ನಿರ್ದೇಶಕ ಸ್ಥಾನಕ್ಕೆ ಆಕಾಂಕ್ಷಿಯಾಗಿದ್ದು, ಈಗಾಗಲೇ ಸ್ನೇಹಿತರ ಮತ್ತು ಬೆಂಬಲಿಗರ ಜೋತೆಗೆ ತೆರಳಿ ನಾಮಪತ್ರ ಸಲ್ಲಿಸಿದ್ದಾರೆ. ಚುನಾವಣೆಯ ಕಣಕ್ಕಿಳಿದು ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡು ಮತದಾರರ ಮನೆ ಮನೆಗೆ ತೆರಳಿ ನಿಮ್ಮೆಲ್ಲರ ಸೇವೆ ಮಾಡಲು ನನಗೊಂದು ಮತ ನೀಡುವಂತೆ ಮನವಿ ಮಾಡುತ್ತಿದ್ದು ಒಂದು ಒಳ್ಳೆಯ ವಾತಾವರಣ ಸೃಷ್ಟಿ ಯಾಗಿದ್ದು ಚುನಾವಣೆಯಲ್ಲಿ ತಾವು ಗೆದ್ದು ಬಂದರೆ ಬ್ಯಾಂಕಿನ ಅಭಿವೃದ್ಧಿಯ ಕೆಲಸದಲ್ಲಿ ಉಳಿದ ಸದಸ್ಯರ ಜೋತೆಗೆ ಕೈಜೋಡಿಸುವುದಾಗಿ ತಿಳಿಸಿದ್ದಾರೆ. ಬ್ಯಾಂಕಿನ ಸದಸ್ಯರಿಗೆ ಬ್ಯಾಂಕಿನಿಂದ ಸಿಗಬೇಕಾದ ಎಲ್ಲಾ ಸೌಲಭ್ಯಗಳ ಜೋತೆಗೆ ಸಾಲ ಕೊಡಿಸುವುದು, ಉಳಿದಂತೆ ಸದಸ್ಯರ ಅಭಿವೃದ್ಧಿಗೆ ಶ್ರಮಿಸುವುದು. ಪ್ರತಿಯೊಬ್ಬ ಸದಸ್ಯರ ಜೋತೆ ಸೇರಿಕೊಂಡು ಬ್ಯಾಂಕ್ ಅನ್ನು ಪ್ರಗತಿಪಥದತ್ತ ಕೊಂಡೊಯ್ಯುವ ಬಯಕೆಯನ್ನು ಸುನೀಲ್ ಕುಮಾರ್.ಎಸ್. ಬಯಸಿದ್ದಾರೆ.
ಹೀಗಾಗಿ ಬರಲಿರುವ ಸಿಟಿ ಕೋ ಆಪರೇಟಿವ್ ಬ್ಯಾಂಕ್ ಚುನಾವಣೆಯಲ್ಲಿ ನಿರ್ದೇಶಕ ಸ್ಥಾನದ ಆಕಾಂಕ್ಷಿಯಾಗಿರುವ ಸುನೀಲ್ ಕುಮಾರ್ ಎಸ್ ಅವರನ್ನು ಸಹಕಾರಿ ಬಂಧುಗಳಾದ ಬ್ಯಾಂಕಿನ ಸರ್ವ ಸದಸ್ಯರು ತಮ್ಮ ಅಮೂಲ್ಯವಾದ ಮತ ನೀಡಿ ಸಹಕಾರಿ ಕ್ಷೇತ್ರದಲ್ಲಿಯೂ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಲು ಇವರಿಗೊಂದು ಅವಕಾಶಮಾಡಿ ಕೊಡುವುದರ ಜೊತೆಗೆ ಸಲಹೆ ಸಹಕಾರ ನೀಡಬೇಕೆಂದು ಪ್ರತಿಯೊಬ್ಬ ಸದಸ್ಯರಲ್ಲೂ ಮನವಿ ಮಾಡಿರುತ್ತಾರೆ
- ಸುನೀಲ್ ಕುಮಾರ್ ಎಸ್, SRS ಬೋರ್ ವೇಲ್ಸ್,ಮಾಲೀಕರು,ಶಿವಮೊಗ್ಗ
ಮೊ-9448024774,8971003773