ತಮ್ಮ ಕಾರು ಗುದ್ದಿದ್ದು ಅರಿವಿಗೆ ಬರುತ್ತಿದ್ದ ಹಾಗೆ ಲಾಲ್‌ಬಾಗ್‌ ಕಾರ್ಮಿಕರನ್ನು ಮನೆಗೆ ಕರೆಯಿಸಿಕೊಂಡು ಕ್ಷಮೆ ಕೇಳಿ ದೊಡ್ಡಗುಣ ಪ್ರದರ್ಶಿಸಿದ ನಟಿ ರಚಿತಾ ರಾಮ್‌

ಕಾರ್ಮಿಕ ರಂಗಪ್ಪ ಮತ್ತು ರಚಿತಾ ರಾಮ್ ರಚ್ಚು ಮನೆಯಲ್ಲಿ

ಆಕಸ್ಮಿಕವಾಗಿ ತಮ್ಮ ಕಾರನ್ನು ಗುದ್ದಿದ ಕಾರ್ಮಿಕನನ್ನು ಮನೆಗೆ ಕರೆಯಿಸಿಕೊಂಡು ಗೌರವಿಸಿ ಕ್ಷಮೆ ಕೇಳಿದ ನಟಿ ರಚಿತಾ ರಾಮ್‌

ಸೋಮವಾರ ಲಾಲ್‌ಬಾಗ್‌ನಲ್ಲಿನ ಕಾರ್ಯಕ್ರಮ ಒಂದಕ್ಕೆ ತೆರಳುತ್ತಿದ್ದ ವೇಳೆ ಆಕಸ್ಮಿಕವಾಗಿ ಅಲ್ಲಿನ ಸ್ವಚ್ಛತಾ ಕಾರ್ಮಿಕನಿಗೆ ಕಾರು ಗುದ್ದಿದ್ದಾರೆ ಈ ಬಗ್ಗೆ ಸ್ವತಃ ರಚಿತಾ ರಾಮ್‌ ಅವರೆ ಮನನೊಂದು ಅ ಕಾರ್ಮಿಕನನ್ನು ಮನೆಗೆ ಕರೆಸಿಕೊಂಡು ಕ್ಷಮೆ ಕೇಳಿ ದೊಡ್ಡಗುಣವನ್ನು ತೋರಿಸಿದ್ದಾರೆ.

ಬೆಂಗಳೂರು ಲಾಲ್‌ಬಾಗ್‌ ಫಲಪುಷ್ಪ ಪ್ರದರ್ಶನದ ವೀಕ್ಷಣೆಗೆಂದು ತಮ್ಮ ಕಾರಿನಲ್ಲಿ ಹೋಗುವಾಗ ಆಕಸ್ಮಿಕವಾಗಿ ನಮ್ಮ ಕಾರು ಸ್ವಚ್ಛತಾ ಕಾರ್ಮಿಕನಿಗೆ ಗುದ್ದಿದೆ ಅ ಸಂಧರ್ಭದಲ್ಲಿ ಡಿಕ್ಕಿ ಹೋಡೆದದ್ದು ನನ್ನ ಗಮನಕ್ಕೆ ಬಂದಿರಲಿಲ್ಲ. ನಾವು ತೆರೆಳಿದ್ದೇವು ನಾವು ಗೊತ್ತಿಲ್ಲದೆ ಹೋಗಿದ್ದೆವು ಹೊರತು ನಾವು ಬೇಕಂತಲೇ ತಪ್ಪು ಮಾಡಿಲ್ಲ. ಗುದ್ದಿದ್ದು ನನ್ನ ಚಾಲಕನ ಅರಿವಿಗೂ ಬಂದಿಲ್ಲ. ನಮ್ಮಿಂದ ತಪ್ಪಾಗಿದ್ದರೆ ಮನಸಾರೆ ನನ್ನ ಕಡೆಯಿಂದ ಮತ್ತು ನಮ್ಮ ಕಾರಿನ ಚಾಲಕನ ಪರವಾಗಿ ಕ್ಷಮೆ ಯಾಚಿಸುತ್ತೇನೆ. ಕಾರ್ಮಿಕನ್ನು ಮನೆಗೆ ಕರೆಯಿಸಿ ಕೊಂಡು ಅಣ್ಣ ಎಂದು ಕರೆದು ಕಾರ್ಮಿಕರಿಗೆ ಮನಸ್ಸಿಂದ ಕ್ಷಮೆ ಕೇಳಿದ್ದಾರೆ ರಚ್ಚು.
ಈ ಕುರಿತು ಸ್ವತಃ ರಚಿತಾರಾಮ್‌ ವೀಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಇಂದು ಸ್ವಾತಂತ್ರ್ಯ ದಿನಾಚರಣೆಯನ್ನು ಒಬ್ಬ ಸ್ವಚ್ಛತಾ ಕಾರ್ಮಿಕರ ಕಡೆಯಿಂದ ವಿಶ್‌ ಮಾಡುತ್ತಿದ್ದೇನೆ. ಸ್ವಾತಂತ್ರ್ಯ ದಿನಾಚರಣೆ ಶುಭಾಕಾಂಕ್ಷಲು ಎಂದು ಕಾರ್ಮಿಕ ರಂಗಪ್ಪನ ಕಡೆಯಿಂದಲು ವಿಶ್ ಮಾಡಿಸಿದ್ದಾರೆ.

ನಿನ್ನೆ ಲಾಲ್‌ಬಾಗ್‌ ಕಾರ್ಯಕ್ರಮಕ್ಕೆ ಹೋದಾಗ ನಮಗೆ ಅರಿವಿಲ್ಲದೆ ಆಕಸ್ಮಿಕವಾಗಿ ಒಂದು ಘಟನೆ ನಡೆದು ಹೋಯಿತು ಈ ಘಟನೆಯಿಂದ ಮನಸ್ಸು ಬಾರವಾಗಿತ್ತು ಈ ಕಾರಣದಿಂದಲೇ ನೊಂದು ಇಂದು ನಾನು ವಿಡಯೋ ಮಾಡಿ ಕ್ಷಮೆ ಕೇಳುತ್ತಿದ್ದೇನೆ. ಈ ಬಗ್ಗೆ ನಾನು ಕಾರ್ಯಕ್ರಮಕ್ಕೆ ಹೋದಾಗ ನನ್ನ ಗಮನಕ್ಕೆ ಬಂದಿರಲಿಲ್ಲ ಅಲ್ಲಿ ನನ್ನ ಹಲವಾರು ಮೀಡಿಯಾ ಪ್ರೆಂಡ್ಸ್‌ ಇದ್ದರೂ ನನ್ನ ಗಮನಕ್ಕೆ ತರಲು ಇಲ್ಲ. ಆದರೆ ಒಟ್ಟಾರೆ ನನ್ನ ಕಡೆಯಿಂದ ತಪ್ಪಾಗಿತ್ತು ಎನ್ನುವುದು ತಿಳಿದಕೂಡಲೆ ಅವರನ್ನು ಕರೆಯಿಸಿಕೊಂಡು ಅಣ್ಣ ನಾನು ನಿಮ್ಮಲ್ಲಿ ಮನಸಾರೆ ಕ್ಷಮೆಯನ್ನು ಕೇಳುತ್ತೇನೆ. ನಮ್ಮ ಚಾಲಕನ ಕಡೆಯಿಂದಲೂ ಕ್ಷಮೆ ಕೇಳುತ್ತೇ. ಈ ವಿಚಾರವಾಗಿ ಕಾರ್ಮಿಕರಿಗೆ ನೋವುಂಟಾಗಿದ್ದರೂ ಇನ್ನೊಮ್ಮೆ ನಾನು ಕ್ಷಮೆ ಕೇಳುತ್ತೇನೆ. 
ಇನ್ನೂ ಕಾರ್ಮಿಕ ರಂಗಪ್ಪ ಅವರು ಕೂಡ ಲಾಲ್‌ಬಾಗ್‌ನಲ್ಲಿ ಕೆಲಸಕ್ಕೆ ಬಿಡುವು ಮಾಡಿಕೊಂಡು ನಮ್ಮ ಮನೆಗೆ ಬಂದಿದ್ದಾರೆ. ಅವರನ್ನು ನೇರವಾಗಿ ಭೇಟಿ ಮಾಡಿ ನಾನು ಕ್ಷಮೆ ಕೇಳುತ್ತಿದ್ದೇನೆ. 

   - ಸುಧೀರ್ ವಿಧಾತ, ಶಿವಮೊಗ್ಗ

Leave a Reply

Your email address will not be published. Required fields are marked *

Optimized by Optimole
error: Content is protected !!