ಅಭಿವೃದ್ಧಿಯ ಹರಿಕಾರ ಜನಪ್ರಿಯ ಸಂಸದ ಬಿ ವೈ ರಾಘವೇಂದ್ರ ಅವರಿಗೆ ಐವತ್ತರ ವಸಂತದ ಶುಭಾಶಯಗಳು
ಶಿವಮೊಗ್ಗ ಜನಪ್ರಿಯ ಸಂಸದ ಬಿ.ವೈ.ರಾಘವೇಂದ್ರ ಅವರ ಐವತ್ತನೇ ವರ್ಷದ ಹುಟ್ಟು ಹಬ್ಬದ ಹಿನ್ನೆಲೆಯಲ್ಲಿ ಬಿವೈಆರ್ ಅಭಿಮಾನಿ ಬಳಗದಿಂದ ಶಿವಮೊಗ್ಗ ನಗರದ
ರವೀಂದ್ರನಗರದ ಶ್ರೀ ಗಣಪತಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು ಈ ವೇಳೆ ಸಂಸದ ಬಿ ವೈ ರಾಘವೇಂದ್ರ ಹಾಗೂ ಪತ್ನಿ ತೇಜಸ್ವಿನಿ ಸಹ ಪೂಜೆಯಲ್ಲಿ ಭಾಗಿಯಾಗಿದ್ದರು. ಈ ಸಂಧರ್ಭದಲ್ಲಿ
ವಿಧಾನ ಪರಿಷತ್ ಸದಸ್ಯರಾದ ಡಿ.ಎಸ್.ಅರುಣ್, ಎಸ್.ರುದ್ರೇಗೌಡರು ಹಾಗೂ ಖ್ಯಾತ ವೈದ್ಯ ಹಾಗೂ ಬಿಜೆಪಿ ಮುಖಂಡ ಧನಂಜಯ ಸರ್ಜಿ ಈ ವೇಳೆ ಉಪಸ್ಥಿತರಿದ್ದರು.ಪೂಜೆ ಬಳಿಕ ಸಂಸದರಿಗೆ ಬಿಜೆಪಿ ಮುಖಂಡರು. ಕಾರ್ಯಕರ್ತರು. ಅಭಿಮಾನಿಗಳು ಶುಭಕೋರಿದ್ದಾರೆ.
ಬಿ ವೈ ರಾಘವೇಂದ್ರ ಅವರು ನೆಡೆದು ಬಂದ ಹಾದಿ….
ಕರ್ನಾಟಕದ ಹೆಮ್ಮೆಯ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರ ಮಗನಾಗಿರುವ ಜನಪ್ರಿಯ ಸಂಸದ ಬಿ.ವೈ. ರಾಘವೇಂದ್ರ ಅವರು ತಂದೆ ಯಡಿಯೂರಪ್ಪನವರು ಕರ್ನಾಟಕ ರಾಜ್ಯ ಭಾರತೀಯ ಜನತಾ ಪಾರ್ಟಿಯ ರಾಜ್ಯ ಅಧ್ಯಕ್ಷರಾದ ಸಮಯದಲ್ಲೇ ರಾಜಕೀಯಕ್ಕೆ ಪಾದಾರ್ಪಣೆ ಮಾಡಲು ಸಜ್ಜಾಗಿದ್ದರು 2009 ರಲ್ಲಿ ಪ್ರಥಮ ಬಾರಿಗೆ ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಸಾರ್ವತ್ರಿಕ ಚುನಾವಣೆಯಲ್ಲಿ ಸ್ಪರ್ಧಿಸಿ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಸೋಲಿಲ್ಲದ ಸರದಾರ ಎಂದೆ ಬಿಂಬಿತರಾಗಿದ್ದ ಸಾರೆಕೊಪ್ಪ ಬಂಗಾರಪ್ಪನವರನ್ನು ಸೋಲಿಸಿ 15ನೇ ಲೋಕಸಭೆಯ ಸಂಸದರಾಗಿ ಎದುರಿಸಿದ ಮೊದಲ ಚುನಾವಣೆಯಲ್ಲೆ ಚುನಾಯಿತರಾದರು. 2014 ರಲ್ಲಿ ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಇವರ ತಂದೆ ಬಿ.ಎಸ್. ಯಡಿಯೂರಪ್ಪನವರು ಶಿಕಾರಿಪುರ ಕ್ಷೇತ್ರದ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಸಂಸತ್ ಚುನಾವಣೆಗೆ ಸ್ಪರ್ಧಿಸಿ ಸಂಸದರಾಗಿದ್ದರು. ಅ ಸಂಧರ್ಭದಲ್ಲಿ ರಾಘವೇಂದ್ರ ಅವರು ತಂದೆಯವರು ಲೋಕಸಭೆಯ ಸ್ಪರ್ಧೆಯ ಹಿನ್ನಲೆಯಲ್ಲಿ ತೆರವಾದ ಶಿಕಾರಿಪುರ ಕ್ಷೇತ್ರಕ್ಕೆ ನೆಡೆದ ವಿಧಾನಸಭಾ ಉಪಚುನಾವಣೆ ಸ್ಪರ್ಧಿಸಿ ಶಾಸಕರಾಗಿದ್ದರು. ನಂತರ 2018ರ ಉಪಚುನಾವಣೆಯಲ್ಲಿ ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಮತ್ತೆ ಸ್ಪರ್ಧಿಸಿದ ರಾಘವೇಂದ್ರ, ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪನವರ ಪುತ್ರ ಮಧು ಬಂಗಾರಪ್ಪ ಅವರನ್ನು ಸೋಲಿಸಿ ಮತ್ತೊಮ್ಮೆ ಸಂಸದರಾದರು. ಈ ಚುನಾವಣೆಯಲ್ಲಿ ರಾಘವೇಂದ್ರ 4,89,959 ಮತಗಳನ್ನು ಗಳಿಸಿದ್ದರು. ಶಿವಮೊಗ್ಗದ ATNCC ಕಾಲೇಜಿನಲ್ಲಿ ವ್ಯಾಸಂಗ ಮಾಡಿ ಬ್ಯುಸಿನೆಸ್ ಮ್ಯಾನೇಜಮೆಂಟ್‌ನಲ್ಲಿ ಪದವಿ ಶಿಕ್ಷಣ ಪಡೆದಿದ್ದಾರೆ. ಪದವಿ ಶಿಕ್ಷಣದ ನಂತರ ಇವರು ಸ್ಥಳೀಯ ರಾಜಕಾರಣದತ್ತ ಹೆಚ್ಚು ಗಮನ ಹರಿಸಲಾರಂಭಿಸಿದರು ತಂದೆ ಹಾದಿಯಲ್ಲಿ ರಾಜಕಾರಣದಲ್ಲಿ ಹೆಜ್ಜೆ ಹಾಕಿ ಸೊಲಿಲ್ಲದ ಸರದಾರನಾಗಿದ್ದಾರೆ. ಕ್ಷೇತ್ರದ ಉದ್ದಕ್ಕೂ ಜನಪ್ರಿಯ ನಾಯಕನಾಗಿ ಅಭಿವೃದ್ಧಿಯ ಹರಿಕಾರನಾಗಿ ಜನಮನ್ನಣೆಯನ್ನು ಗಳಿಸಿ ರಾಘವೇಂದ್ರ ಅವರು
ವಿಕಲಚೇತನರಿಗೆ ತ್ರಿ ಚಕ್ರ ವಾಹನವನ್ನು ವಿತರಿಸಿದ ಕ್ಷಣ
ಶಿವಮೊಗ್ಗ ಇತಿಹಾಸದಲ್ಲೆ ಯಾವುದೇ ಸಂಸದರು ಮಾಡಲಾಗದಂತಹ ಅಭಿವೃದ್ಧಿಯನ್ನು ಕ್ಷೇತ್ರದಲ್ಲಿ ಮಾಡಿ ತೋರಿಸಿ ಇನ್ನೂ ಮಾಡುತ್ತಲೇ ಯಾವುದೇ ಪಕ್ಷದವರು ಕೂಡ ರಾಘವೇಂದ್ರ ಅವರು ಒಬ್ಬ ಅಭಿವೃದ್ಧಿಯ ಹರಿಕಾರ ಉತ್ತಮ ಸಂಸದ ತನ್ನ ವ್ಯಾಪ್ತಿಯಲ್ಲಿ ಬರುವ ಯೋಜನೆಗಳನ್ನು ತಮ್ಮ ಕ್ಷೇತ್ರಕ್ಕೆ ತರುವಲ್ಲಿ ಹಗಲಿರುಳು ಶ್ರಮಿಸುವ ಸಂಸದರು ಎನ್ನುವುದು ಈಗಾಗಲೇ ಸಾಭಿತಾಗಿದೆ. ಈಗಾಗಲೇ ಸಾವಿರಾರು ಕೋಟಿಯ ಅನುದಾನವನ್ನು ಕ್ಷೇತ್ರದ ಅಭಿವೃದ್ಧಿಗೆ ಕೇಂದ್ರದಿಂದ ತರುವಲ್ಲಿ ಯಶಸ್ವಿಯಾಗಿದ್ದಾರೆ.
ಇನ್ನೂ ತಮ್ಮ ಲೋಕಸಭಾ ವ್ಯಾಪ್ತಿಗೆ ಬರುವ ಬೈಂದೂರು ಕ್ಷೇತ್ರವನ್ನು ಅಭಿವೃದ್ಧಿಗೊಳಿಸುವಲ್ಲಿ ರಾಘವೇಂದ್ರ ಮುಂಚೂಣಿಯಲ್ಲಿದ್ದಾರೆ ಬೈಂದೂರು ಕ್ಷೇತ್ರದಲ್ಲಿ ಕುಗ್ರಾಮದಿಂದ ಆರಂಭಗೊಂಡು ಗ್ರಾಮ ಪಂಚಾಯತಿ ತಾಲೂಕಿನ ಅಷ್ಟೂ ಮನೆ ಮನೆಗೂ ಕುಡಿಯುವ ನೀರಿನ ಯೋಜನೆಯ ಕಾರ್ಯರೂಪಕ್ಕೆ ತರುವಲ್ಲಿ ಯಶಸ್ವಿಯಾಗಿದ್ದಾರೆ. ಈಗಾಗಲೇ ಕಾಮಗಾರಿಯು ಚಾಲನೆಯಲ್ಲಿದೆ ಕುಡಿಯುವ ನೀರಿಗಾಗಿ ಪರದಾಡುತ್ತಿದ್ದ ಬೈಂದೂರಿನ ಕೇಲವು ಗ್ರಾಮದ ಜನರಲ್ಲಿ ಹರುಷ ಮೂಡಿದೆ
ಇಂತಹ ಅಭಿವೃದ್ಧಿಯ ಹರಿಕಾರ ಜನಪ್ರಿಯ ಸಂಸದರಾದ ಬಿ ವೈ ರಾಘವೇಂದ್ರ ಅವರು ಐವತ್ತರ ವಸಂತಕ್ಕೆ ಕಾಲಿಡುತ್ತಿದ್ದಾರೆ. ಈ ಸಂಧರ್ಭದಲ್ಲಿ ಇವರಿಗೆ ಪತ್ರಿಕಾ ಬಳಗದಿಂದ ಶುಭಾಹಾರೈಸುತ ಇನ್ನೊಮ್ಮೆ ಸಂಸದರಾಗಿ ಆಯ್ಕೆಯಾಗಿ ಇನ್ನಷ್ಟು ಅಭಿವೃದ್ಧಿಯ ಕೆಲಸವನ್ನು ಮಾಡುವ ಶಕ್ತಿ ದೇವರು ಇವರಿಗೆ ನೀಡುವಂತಾಗಲಿ ರಾಜ್ಯಾದ್ಯಂತ ಇವರ ಬೆಂಬಲಿಗರು ಮತ್ತು ಅಭಿಮಾನಿಗಳು ಶುಭ ಹಾರೈಸಿದ್ದಾರೆ
ಸುದೀರ್ ವಿಧಾತ, ಶಿವಮೊಗ್ಗ