ಶಿವಮೊಗ್ಗ ಜೆಲ್ಲೆಯ ಕೆಲವು ರೆಸಾರ್ಟ್ ಮತ್ತು ಹೋಮ್ ಸ್ಟೆ ಗಳಲ್ಲಿ ಅಕ್ರಮ ಚಟುವಟಿಕೆಗಳು ನೆಡಯುವ ಬಗ್ಗೆ ಸಾಕಷ್ಟು ಅನುಮಾನಗಳು ಸ್ಥಳೀಯರನ್ನು ಕಾಡತೋಡಗಿದೆ. ಅದರಲ್ಲೂ ಕೆಲವು ರೆಸಾರ್ಟ್ ಮತ್ತು ಹೊಮ್ ಸ್ಟೆಗಳು ಮಾತ್ರ ಶ್ರೇಷ್ಠ ಗುಣಮಟ್ಟದೊಂದಿಗೆ ಪರಿಸರಕ್ಕೂ ಒತ್ತು ಕೊಟ್ಟು ಬರುವ ಗ್ರಾಹಕರಿಗೆ ನೆಮ್ಮದಿಯ ತಾಣವಾಗಿದೆ. ಖಚಿತ ಮಾಹಿತಿ ಅಧಾರದ ಮೇಲೆ ತೀರ್ಥಹಳ್ಳಿಯ ಪೋಲಿಸರ ತಂಡ ಭಾರತಿಪುರದಲ್ಲಿರುವ ವಿಹಾಂಗಮ ರೆಸಾರ್ಟ್ ಮೇಲೆ ಡಿವೈಎಸ್ಪಿ ಗಜಾನನ ವಾಮನ ಸುತಾರ ರವರ ಮಾರ್ಗದರ್ಶನದಲ್ಲಿ ದಾಳಿಮಾಡಿದ ಪೋಲಿಸರ ತಂಡ ಅಪಾರ ಪ್ರಮಾಣದ ವಿದೇಶಿ ಮದ್ಯಾ ಕೆಲವು ಕಾಡು ಪ್ರಾಣಿಗಳಾದ ಕಾಡುಕೋಣದ ಕೊಂಬು ಜಿಂಕೆಯ ಚರ್ಮ ಮತ್ತು ಕೊಡು ಬಂದೂಕು ಮತ್ತು ಮದ್ದು ಗುಂಡುಗಳನ್ನು ವಶಪಡಿಸಿಕೊಂಡಿದ್ದಾರೆ
ವಿಹಂಗಮ ರೆಸಾರ್ಟ್ ನಲ್ಲಿ ಅಕ್ರಮ ಚಟುವಟಿಕೆ ನಡೆಯುತ್ತಿರುವ ಬಗ್ಗೆ ಖಚಿತ ಮಾಹಿತಿ ಅಧಾರದ ಮೇಲೆ ಶ್ರೀ ಗಜಾನನ ವಾಮನ ಸುತಾರ ಪೊಲೀಸ್ ಉಪಾಧೀಕ್ಷಕರು ತೀರ್ಥಹಳ್ಳಿ ಉಪ ವಿಭಾಗ ಮತ್ತು ಶ್ರೀ ಅಶ್ವತ್ ಗೌಡ ಪೋಲಿಸ್ ನಿರೀಕ್ಷಕರು ತೀರ್ಥಹಳ್ಳಿ ಪೊಲೀಸ್ ಠಾಣೆ ರವರ ನೇತೃತ್ವದ ಶ್ರೀ ಸಾಗರ್ ಅತ್ತರವಾಲ ಪೊಲೀಸ್ ಉಪನಿರೀಕ್ಷಕರು ತೀರ್ಥಹಳ್ಳಿ ಪೊಲೀಸ್ ಠಾಣೆ, ಶ್ರೀ ನವೀನ್ ಕುಮಾರ್ ಮಠಪತಿ ಪೊಲೀಸ್ ಉಪನಿರೀಕ್ಷಕರು ಮಾಳೂರು ಪೊಲೀಸ್ ಠಾಣೆ, ಶ್ರೀ ರಂಗನಾಥ ಅಂತರಗಟ್ಟಿ ಪೋಲಿಸ್ ಉಪನಿರೀಕ್ಷಕರು ಆಗುಂಬೆ ಪೊಲೀಸ್ ಠಾಣೆ ಹಾಗೂ ಮೂವತ್ತಕ್ಕೂ ಹೆಚ್ಚು ಜನ ಪೊಲೀಸ್ ಸಿಬ್ಬಂದಿಗಳನ್ನು ಒಳಗೊಂಡ ತಂಡವು ರೆಸಾರ್ಟ್ ಮೇಲೆ ದಾಳಿನಡೆಸಿ ಅಕ್ರಮವಾಗಿ ಸಂಗ್ರಹಿಸಿದ್ದ ತುಂಬಿದ ಮಧ್ಯದ ಬಾಟಲಿಗಳು, ಕಾಡುಕೋಣದ ಕೊಂಬು, ಜಿಂಕೆ ಕೊಂಬು ಮತ್ತು ಬಂದೂಕು ಜೀವಂತ ಮದ್ದು ಗುಂಡುಗಳನ್ನು ವಶಪಡಿಸಿಕೊಂಡಿದ್ದಾರೆ ಆರೋಪಿತರ ವಿರುದ್ಧ ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿ ತನಿಖೆ ಕೈಗೊಂಡಿರುತ್ತದೆ.
ಗುರು,ಕಮ್ಮರಡಿ
Voice of common man in words