ಸಿಇಎನ್ ಕ್ರೈಂ ಪೋಲಿಸರ ಭರ್ಜರಿ ಬೇಟೆ ಗಾಂಜಾ ಮಾರಾಟ ಮಾಡುತ್ತಿದ್ದ ನಾಲ್ಕು ಜನ ಆರೋಪಿಗಳ ಬಂಧನ: ಬಂಧಿಸಿದವರಲ್ಲಿ ಒಬ್ಬ ಗಡಿಪಾರದ ರೌಡಿ ಶೀಟರ್ ಮೋಟು..!

ದಾಳಿಮಾಡಿದ ಪೋಲಿಸರ ತಂಡ ಮತ್ತು ಬಂಧಿತರಾದ ಆರೋಪಿಗಳು

ಶಿವಮೊಗ್ಗ ನಗರ ಮತ್ತೆ ಗಾಂಜಾ ಅಮಲಿನಲ್ಲಿ ತೆಲುತ್ತಿದೆ, ಗಾಂಜಾ ನಶೆ ಏನ್ನುವುದು ಜಿಲ್ಲೆಯ ಕುಗ್ರಾಮದಿಂದ ಆರಂಭಗೊಂಡು ಜಿಲ್ಲಾ ಕೇಂದ್ರ ಶಿವಮೊಗ್ಗ ನಗರದ ಪಡುಸಾಲೆವರೆಗೆ ಎಲ್ಲೆಂದರಲ್ಲಿ ಬಿಕರಿಯಾಗುತ್ತಿದೆ ಅಡಕೆಯ ತೋಟದಲ್ಲೂ ಗಾಂಜಾ ಕೂಳರು ಫಸಲು ತೆಗೆಯಲು ಮುಂದಾಗಿದ್ದಾರೆ.ಅ ಮಟ್ಟದಲ್ಲಿ ಗಾಂಜಾ ದಂಧೆ ಮತ್ತು ಗಾಂಜಾ ಬೆಳೆ ಜಿಲ್ಲೆಯನ್ನು ನಶೆಯ ಗುಂಗಿನ ವ್ಯೂಹದೊಳಗೆ ಯುವಕರನ್ನು ಖೆಡ್ಡಕ್ಕೆ ಬಿಳಿಸಿಕೊಂಡಿದೆ. ಅದರಲ್ಲೂ ಗಾಂಜಾ ಪೇಡ್ಲರ್ ಗಳು ಹಣದಾಸೆಗೆ ಯುವ ಸಮೂಹವನ್ನೆ ಅದರಲ್ಲೂ ಕಾಲೇಜ್ ವಿದ್ಯಾರ್ಥಿಗಳನ್ನು ಗಾಂಜಾ ಸೇವನೆಗೆ ಟಾರ್ಗೆಟ್ ಮಾಡುತ್ತಿದ್ದಾರೆ….

ಶಿವಮೊಗ್ಗ ಸಿಇಎನ್ ಕ್ರೈಂ ಪೋಲಿಸ್ ಠಾಣೆಯ ಪೋಲಿಸ್ ನಿರೀಕ್ಷಕರಾದ ದೀಪಕ್ ಎಂ ಎಸ್

ಇತ್ತೀಚಿನ ದಿನಗಳಲ್ಲಿ ಪೋಲಿಸ್ ಇಲಾಖೆ ಜಿಲ್ಲೆಯಾದ್ಯಂತ ಎಲ್ಲೆಂದರಲ್ಲಿ ರಾತ್ರಿ ಹಗಲೆನ್ನದೆ ಗಾಂಜಾ ಪೇಡ್ಲರ್ ಗಳನ್ನು ಅಕ್ರಮವಾಗಿ ಗಾಂಜಾ ಬೆಳೆಯುವ ಖದಿಮರನ್ನು ಬಂಧಿಸಿ ಜೈಲಿಗಟ್ಟುತ್ತಿದ್ದರು ಅವರ ಸಂಖ್ಯೆ ಏನೂ ಕಡಿಮೆಯಾಗಿಲ್ಲ ಅ ಮಟ್ಟಕ್ಕೆ ಮಲೆನಾಡಿನ ಭಾಗದಲ್ಲಿ ಬೆಳೆದು ನಿಂತಿದ್ದಾರೆ…
ಈ ಹಾದಿಯಲ್ಲಿ ಸಿಇಎನ್ ಕ್ರೈಂ ಪೋಲಿಸ್ ಠಾಣೆಯ ಪೊಲೀಸ್ ನೀರಿಕ್ಷಕರಾದ ದಕ್ಷ ಅಧಿಕಾರಿ ದೀಪಕ್ ಎಂ ಎಸ್ ಅವರು ಮತ್ತು ಅವರ ತಂಡ ಜಿಲ್ಲಾ ಮಾನ್ಯ ಪೋಲಿಸ್ ಅಧೀಕ್ಷಕರಾದ ಜಿ ಕೆ ಮಿಥುನ್‌ ಕುಮಾರ್ ಐಪಿಎಸ್ ಮತ್ತು ಹೆಚ್ಚು ವರಿ ಪೋಲಿಸ್ ಅಧೀಕ್ಷಕರಾದ ಅನಿಲ್ ಕುಮಾರ್ ಭೂಮರೆಡ್ಡಿ ಅವರ ಮಾರ್ಗದರ್ಶನದಲ್ಲಿ
ಗಾಂಜಾ ಮಾರಾಟ ಮಾಡುತ್ತಿದ್ದ ನಾಲ್ಕು ಜನ ಆರೋಪಿಗಳ ಬಂಧಿಸಿದ್ದಾರೆ

ದಿನಾಂಕ 12-08-2023 ರಂದು ಶಿವಮೊಗ್ಗ ನಗರದ ಎಂ.ಆರ್.ಎಸ್‌. ನಿಂದ ಪದ್ಮನಕ್ಕೊಪ್ಪದ ಕಡೆಗೆ ಹೋಗುವ ರಸ್ತೆಯ ಹತ್ತಿರ ನಾಲ್ಕು ಜನ ಪೇಡ್ಲರ್ ಗಳು ಮಾದಕ ವಸ್ತು ಗಾಂಜಾವನ್ನು ಸಾರ್ವಜನಿಕರಿಗೆ ಮಾರಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿಯ ಅಧಾರದ ಮೇಲೆ ದೀಪಕ್, ಎಂ.ಎಸ್, ಪೊಲೀಸ್ ನಿರೀಕ್ಷಕರು, ಸಿಇಎನ್ ಕ್ರೈಂ ಪೊಲೀಸ್ ಠಾಣೆ ಶಿವಮೊಗ್ಗ, ರವರ ನೇತೃತ್ವದಲ್ಲಿ, ಸಿಬ್ಬಂಧಿಗಳಾದ ಹೆಚ್‌ಸಿ ಮರ್ದಾನ್, ಸಂದೀಪ್, ಸಮೀವುಲ್ಲಾ, ಹಾಗೂ ಸಿಪಿಸಿ ಚಿದಂಬರ್, ಫಿರ್ ದೋಸ್ ಅಹಮ್ಮದ್, ಪರಮೇಶ್ವರಪ್ಪ, ರವಿ, ಪ್ರಮೋದ್, ಜಗದೀಶ್‌ ಸಂಗಮೆಶ್‌ ಮತ್ತು ಎಹೆಚ್‌ಸಿ ಪ್ರಕಾಶನಾಯ್ಕ್ ರವರುಗಳನ್ನೊಳಗೊಂಡ ತಂಡವನ್ನು ರಚಿಸಲಾಗಿತ್ತು

ಮಾಹಿತಿ ಅಧಾರದ ಮೇಲೆ ಸದರಿ ತಂಡವು ಸ್ಥಳಕ್ಕೆ ಹೋಗಿ ದಾಳಿ ನಡೆಸಿ, ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿತರಾದ ಒಂದನೇ ಆರೋಪಿ ಪ್ರವೀಣ್ @ ಮೋಟು ಬಿನ್ ಮೂರ್ತಿ 24 ವರ್ಷ, ವಾಸ ಗೌರವ್ ಲಾಡ್ಜ್ ಹಿಂಭಾಗ ಸವಾರ್ ಲೈನ್ ರಸ್ತೆ, ಶಿವಮೊಗ್ಗ, ಎರಡನೇ ಆರೋಪಿ ವಿಶಾಲ್, ಎ @ ಡಾಲು ಬಿನ್ ವಿಶ್ವನಾಥ ಎಸ್, 25 ವರ್ಷ, ವಾಸ 06ನೇ ತಿರುವು ಹೊಸಮನೆ ಆಂಜನೇಯ ದೇವಸ್ಥಾನದ ಹತ್ತಿರ ಶಿವಮೊಗ್ಗ
ಮೂರನೇ ಆರೋಪಿ ನಿತೇಶ್ ಎಸ್.ವೈ, ಬಿನ್ ಎಸ್.ಎ ಯೋಗೇಶ್ 21 ವರ್ಷ, ವಾಸ ಕಲ್ಪತರು ಹಾಸ್ಟೆಲ್‌ ತಿಪಟೂರು ತುಮಕೂರು ಜಿಲ್ಲೆ ಮತ್ತು ನಾಲ್ಕನೇ ಆರೋಪಿ ಪ್ರೀತಂ ಕ @ ಡಿಟೋ ಬಿನ್ ಕೃಷ್ಣ, 22 ವರ್ಷ, ವಾಸ ದುರ್ಗಾ ಲೇ ಔಟ್, 01ನೇ ತಿರುವು ಗಾಡಿಕೊಪ್ಪ ಶಿವಮೊಗ, ಇವರುಗಳನ್ನು ದಸ್ತಗಿರಿ ಮಾಡಿ, ಆರೋಪಿತರಿಂದ ಅಂದಾಜು ಮೌಲ್ಯ 1,10,000/- ರೂಗಳ ಒಟ್ಟು 2 ಕೆ ಜಿ ತೂಕದ ಒಣ ಗಾಂಜಾ ಮತ್ತು ಕೃತ್ಯಕ್ಕೆ ಬಳಸಿದ ಅಂದಾಜು ಮೌಲ್ಯ 2,50,000/- ರೂಗಳ ಕೆಟಿಎಂ ಡ್ಯೂಕ್ ಬೈಕ್ ಅನ್ನು ವಶಪಡಿಸಿಕೊಂಡು ಆರೋಪಿತರ ವಿರುದ್ಧ ಶಿವಮೊಗ್ಗ, ಸಿಇಎನ್ ಕ್ರೈ ಪೊಲೀಸ್ ಠಾಣೆಯ ಗುನ್ನೆ ಸಂಖ್ಯೆ 0084/23 ಕಲಂ: 20(B)(ii) (b) NDPS ಕಾಯ್ದೆ ರೀತ್ಯಾ ಪ್ರಕರಣ ದಾಖಲಿಸಲಾಗಿರುತ್ತದೆ.

ಆರೋಪಿತರನ್ನು ವಿಚಾರಣೆಗೊಳಪಡಿಸಿದಾಗ 1ನೇ ಆರೋಪಿ ಪ್ರವೀಣ್ @ ಮೋಟು ಈತನು ರೌಡಿ ಶೀಟರ್ ಆಗಿದ್ದು ಈತನ ವಿರುದ್ಧ ಜಿಲ್ಲೆಯ ವಿವಿಧ ಪೊಲೀಸ್‌ ಠಾಣೆಗಳಲ್ಲಿ ಇತನ ಮೇಲೆ ಹತ್ತು ಪ್ರಕರಣಗಳು ದಾಖಲಾಗಿರುತ್ತವೆ ಮತ್ತು ಈತನನ್ನು ಮಾನ್ಯ ಜಿಲ್ಲಾಧಿಕಾರಿಗಳು 2024 ಏಪ್ರಿಲ್ ತಿಂಗಳವರೆಗೆ ಶಿವಮೊಗ್ಗ ಜಿಲ್ಲೆಯಿಂದ ಗಡಿಪಾರು ಮಾಡಿ ಆದೇಶ ಮಾಡಿದ್ದರು ಆದರೂ ಕೂಡ ಆದೇಶವನ್ನು ಉಲಂಘನೆ ಮಾಡಿ ಗಡಿದಾಟಿ ಬಂದು ಗಾಂಜಾ ಮಾರಾಟದಲ್ಲಿ ಭಾಗಿಯಾಗಿರುವುದು ಕಂಡುಬಂದಿದರುತ್ತದೆ ಇನ್ನೂ ಎರಡನೇಯ ಆರೋಪಿ ವಿಶಾಲ್, ವಿ @ ಡಾಲು ಈತನೂ ಸಹ ರೌಡಿಯಾಗಿದ್ದು ಈತನ ವಿರುದ್ಧ ಕೂಡ ಶಿವಮೊಗ್ಗ ನಗರದ ವಿವಿಧ ಪೊಲೀಸ್‌ ಠಾಣೆಗಳಲ್ಲಿ ಒಟ್ಟು ಐದು ಪ್ರಕರಣಗಳು ದಾಖಲಾಗಿರುತ್ತವೆ ಹಾಗೂ 4ನೇ ಆರೋಪಿ ಪ್ರೀತಂ ಕೆ @ ಡಿಟೋ ಈತನ ವಿರುದ್ಧವೂ ಕೂಡ ಶಿವಮೊಗ್ಗ ನಗರದ ತುಂಗಾನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಕಂಡುಬಂದಿರುತ್ತದೆ.

ದಕ್ಷ ಅಧಿಕಾರಿ ದೀಪಕ್ ನೆತ್ರುತ್ವದ ದಾಳಿಯಲ್ಲಿ ಭಾಗವಹಿಸಿದ ಪೊಲೀಸ್ ತಂಡದ ಉತ್ತಮ ಕಾರ್ಯಚರಣೆಯನ್ನು ಮೆಚ್ಚಿ ಮಾನ್ಯ ಪೊಲೀಸ್ ಅಧೀಕ್ಷಕರು ಶಿವಮೊಗ್ಗ ಜಿಲ್ಲೆ ರವರು ಪ್ರಶಂಸಿಸಿ ಅಭಿನಂದಿಸಿರುತ್ತಾರೆ.

ಸುಧೀರ್ ವಿಧಾತ,ಶಿವಮೊಗ್ಗ

Leave a Reply

Your email address will not be published. Required fields are marked *

Optimized by Optimole
error: Content is protected !!