ಹಾಸನ: ನಟಿ ಶೋಭಿತಾ ಮೃತದೇಹ ಸ್ವಗ್ರಾಮಕ್ಕೆ ,ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ.!
ಅಶ್ವಸೂರ್ಯ/ಹಾಸನ : ಬ್ರಹ್ಮಗಂಟು ಧಾರಾವಾಹಿ ಖ್ಯಾತಿಯ ನಟಿ ಶೋಭಿತಾ ಹೈದರಾಬಾದ್ ನಲ್ಲಿ ಆತ್ಮಹತ್ಯೆಗೆ ಶರಣಾಗಿದ್ದು, ಇಂದು ಹಾಸನದ ಹೇರೂರು ಗ್ರಾಮಕ್ಕೆ ಮೃತದೇಹ ಬಂದಿದೆ.
ಮಗಳ ಮೃತದೇಹ ನೋಡುತ್ತಿದ್ದಂತೆ ಪೋಷಕರು ಹಾಗೂ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಹೇರೂರು ಗ್ರಾಮಕ್ಕೆ ಶೋಭಿತಾ ಮೃತದೇಹ ತಲುಪಿದ್ದು, ಗ್ರಾಮದಲ್ಲಿ ಶೋಭಿತಾ ಅಂತ್ಯಸಂಸ್ಕಾರ ಕಾರ್ಯ ನೆರವೇರಲಿದೆ. ಬ್ರಹ್ಮಗಂಟು ಧಾರಾವಾಹಿ ಖ್ಯಾತಿಯ ನಟಿ ಶೋಭಿತಾ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಹೈದರಾಬಾದ್ ನಲ್ಲಿ ನಡೆದಿತ್ತು.
ಕನ್ನಡ ಕಿರುತೆರೆಯ ಖ್ಯಾತ ನಟಿಯಾಗಿದ್ದ ಶೋಭಿತಾ, ಬ್ರಹ್ಮಗಂಟು ಧಾರವಾಹಿಯಿಂದ ಜನಪ್ರಿಯತೆ ಪಡೆದಿದ್ದರು. ಸಾಕಷ್ಟು ಸಿನಿಮಾಗಳಲ್ಲೂ ಶೋಭಿತ ನಟಿಸಿದ್ದರು. ಮದುವೆ ಬಳಿಕ ಹೈದರಾಬಾದ್ ನಲ್ಲಿ ವಾಸವಾಗಿದ್ದ ಶೋಭಿತಾ, ಒಂದೆರಡು ದಿನಗಳ ಹಿಂದೆ ಇದ್ದಕ್ಕಿದ್ದಂತೆ ಆತ್ಮಹತ್ಯೆಗೆ ಶರಣಾಗಿದ್ದರು. ಶೋಭಿತಾ ಸಾವಿನ ಬಗ್ಗೆ ಪೊಲೀಸರಿಗೆ ಪೋಷಕರು ದೂರು ನೀಡಿದ್ದು, ಪೊಲೀಸರು ತನಿಖೆ ಮುಂದಾಗಿದ್ದಾರೆ.