Headlines

ಭಾಗ-1: ಭರ್ಜರಿ ಮಟ್ಕಾ ದಂಧೆಯಲ್ಲಿ ಮುಳುಗಿ ಹೋದ ಶಿವಮೊಗ್ಗ ನಗರ.!ರಾತ್ರಿ ಹಗಲೆನ್ನದೆ ಮಟ್ಕಾ ದಂಧೆಕೋರರು ಬಿದಿ ಬಿದಿಯಲ್ಲಿ ಪಟ್ಟಿ ಬರೆಯುತ್ತಿದ್ದಾರೆ.!ಪೊಲೀಸರ ಮೌನವೇಕೆ.?

ಭಾಗ-1: ಮಟ್ಕಾ ದಂಧೆಯಲ್ಲಿ ಮುಳುಗಿ ಹೋದ ಶಿವಮೊಗ್ಗ ನಗರ.! ರಾತ್ರಿ ಹಗಲೆನ್ನದೆ ಮಟ್ಕಾ ದಂಧೆಕೋರರು ಬಿದಿ ಬಿದಿಯಲ್ಲಿ ಪಟ್ಟಿ ಬರೆಯುತ್ತಿದ್ದಾರೆ.! ಪೊಲೀಸರ ಮೌನವೇಕೆ.?

ಅಶ್ವಸೂರ್ಯ/ಶಿವಮೊಗ್ಗ: ಶಿವಮೊಗ್ಗ ನಗರದ ನೆಮ್ಮದಿ ನರಳಿ ನರಳಿ ನೆಲಕಚ್ಚಿದೆ. ಸಂಪೂರ್ಣ ವಾತಾವರಣವೇ ಅಕ್ರಮ ಮಟ್ಕಾ ದಂಧೆಯಲ್ಲಿ ಮುಳುಗಿ ಹೋಗಿದೆ. ಅದರಲ್ಲೂ ಮಟ್ಕಾ ದಂಧೆಯ ಅಬ್ಬರ ದಿನದಿಂದ ದಿನಕ್ಕೆ ಮುಗಿಲು ಮುಟ್ಟಿದೆ.!ಮಟ್ಕಾ ಮಹಾಮಾರಿ ಕೆಲವು ಏರಿಯಾದಲ್ಲಿ ಮನೆ ಮನೆ ಹೊಕ್ಕಿದೆ.ಮನೆಯ ಯಜಮಾನ ಮತ್ತು ಮನೆಯ ಜವಬ್ದಾರಿ ಹೊತ್ತು ಬದುಕು ದೂಡಬೇಕಾದ ವಯಸ್ಸಿಗೆ ಬಂದ ಕೆಲವು ಗಂಡು ಮಕ್ಕಳು ಮಟ್ಕಾ ದಂಧೆಗೆ ಬಲಿಯಾಗುತ್ತಿದ್ದಾರೆ. ಬೆಳಿಗ್ಗೆಯಿಂದ ತಡರಾತ್ರಿ ವರೆಗೂ ನಂಬರ್ ಏಣಿಕೆಯಲ್ಲೆ ತಮ್ಮ ಜೀವನವನ್ನು ಸುಡುಗಾಡು ಮಾಡಿಕೊಂಡಿದ್ದಾರೆ. ಕೂಲಿ ನಾಲಿಮಾಡಿ ಕೈಗೆ ಸಿಕ್ಕ ಹಣವನ್ನೇಲ್ಲ ಓಸಿ ನಂಬರಿನ ಬೆನ್ನಗೆ ಬಿದ್ದು ಬಿದಿ ಪಾಲಾಗಿದ್ದಾರೆ. ಶಿವಮೊಗ್ಗ ನಗರ ಸಂಪೂರ್ಣ ಮಟ್ಕಾ ದಂಧೆಕೋರರ ಕಪಿಮುಷ್ಠಿಗೆ ಸಿಲುಕಿ.ಕೆಲವು ಮನೆಗಳ ದೀಪಾ ಅರಿದೆ.! ಓಸಿ ನಂಬಿರಿನ ಬೆನ್ನಿಗೆ ಬಿದ್ದ ಮನೆಯ ಯಜಮಾನ ಓಸಿ ಆಡಲು ಹಣಕ್ಕಾಗಿ ಇದ್ದ ಅಲ್ಪಸ್ವಲ್ಪ ಆಸ್ತಿಯನ್ನು ಇದ್ದಬದ್ದ ಬಂಗಾರವನ್ನು ಮಾರಿ ಓಸಿ ನಂಬರಿನ ಬೆನ್ನಿಗೆ ಬಿದ್ದು ಬಾರದ ಹಣದ ಆಸೆಯಲ್ಲಿ ಎಲ್ಲವನ್ನೂ ಕಳೆದುಕೊಂಡು ಬಿದಿಗೆ ಬಿಳುತ್ತಿದ್ದಾರೆ.!

ಕೆಲವರಂತು ಸಾಲಸೂಲದ ಸುಳಿಗೆ ಸಿಲುಕಿ ಸಾವಿನ ಮನೆ ಸೇರುತ್ತಿದ್ದಾರೆ! ಇನ್ನೂ ಕೆಲವು ಗಂಡುಮಕ್ಕಳು ಮಟ್ಕಾ ದಂಧೆಯ ಸುಳಿಗೆ ಸಿಲುಕಿ ಬಿದಿಗೆ ಬಿಳುತ್ತಿದ್ದಾರೆ.ಅದರಲ್ಲೂ ಶಿವಮೊಗ್ಗ ನಗರದ ಮಿಳ್ಳಘಟ್ಟ,ಅಣ್ಣಾನಗರ,ತುಂಗಾನಗರ,ಮಂಡ್ಲಿ.ಹೊಸಮನೆ,ಕಾಶಿಪುರ,ಬೊಮ್ಮನಕಟ್ಟೆ,ಅಂಗ್ಲಯ್ಯನಕೆರೆ,ಗಾಂಧಿಬಜಾರ್,ಸಿಗೆಹಟ್ಟಿ,ಆಶೋಕನಗರ, ನೇತಾಜಿ ಸರ್ಕಲ್, ದ್ರೌಪದಮ್ಮ ಸರ್ಕಲ್,ಡಬ್ಬಲ್ ರೋಡ್,ಬೈಪಾಸ್ ರಸ್ತೆ,ಗಾಡಿಕೊಪ್ಪ ಜೊತೆಗೆ ಶಿವಮೊಗ್ಗ ಗ್ರಾಮಾಂತರದಲ್ಲಿ ಓಸಿ ದಂಧೆ ಘಮಲು ಮುಗಿಲು ಮುಟ್ಟಿದೆ. ದಂಧೆಕೋಋ ಕಾರುಬಾರು ಭರ್ಜರಿಯಾಗಿದೆ.ಮಟ್ಕಾ ಮಾರಿಯ ರುದ್ರನರ್ತನಕ್ಕೆ ಅದೆಷ್ಟೋ ಮನೆಯ ದೀಪಾ ಅರಿ ಹೋಗಿದೆ.ಇದನ್ನು ಹದ್ದುಬಸ್ತಿನಲ್ಲಿ ಇಡಬೇಕಾದ ಪೋಲಿಸ್ ಇಲಾಖೆ ಸೈಲೆಂಟ್ ಆಗಿದೆ.

ಎಲ್ಲೊ ಅಲ್ಲೊಂದು ಇಲ್ಲೊಂದು ಕೇಸ್ ದಾಖಲಿಸಿದ್ದಾರೆ ಹೊರತು ಬಿಡ್ಡರ್ ಗಳ ಸಹವಾಸಕ್ಕೆ ಹೋಗುತ್ತಿಲ್ಲ. ಅದರಲ್ಲೂ ಕೆಲವು ಪೋಲಿಸರಂತು ಮಟ್ಕಾ ದಂಧೆಕೋರರ ಬೆನ್ನಗೆ ನಿಂತು ತಿಂಗಳ ಅಕ್ರಮ ಹಣಕ್ಕೆ ಪವಿತ್ರ ಖಾಕೀಗೆ ಕಲೆ ಅಂಟಿಸಿಕೊಳ್ಳುತ್ತಿದ್ದಾರೆ.ಶಿವಮೊಗ್ಗದ ಆಡಳಿತ ವ್ಯವಸ್ಥೆಯೆ ಹದಗೆಟ್ಟುಹೋಗಿದೆ ಮತದಾರ ಬೆನ್ನಿಗೆ ನಿಲ್ಲಬೇಕಾದ ಶಾಸಕರೆ ಮತದಾರ ಅಕ್ರಮ ಮಟ್ಕಾ ದಂಧೆಗೆ ಬಲಿಯಾಗಿ ಬಿದಿಗೆ ಬಿಳುತ್ತಿದ್ದರು ಕೈಕಟ್ಟಿ ಕುಳಿತಿದ್ದಾರೆ. ಮಟ್ಕಾ ದಂಧೆಯಿಂದ ಶಿವಮೊಗ್ಗದ ಸ್ವಾಸ್ಥ್ಯ ಹದಗೆಟ್ಟು ಹೋಗಿದ್ದರು ಪೋಲಿಸ್ ಇಲಾಖೆಯ ನಿರ್ಲಕ್ಷ್ಯವೇಕೆ.? ದಕ್ಷ ರಕ್ಷಣಾ ಅಧಿಕಾರಿಗಳಾದ ಮಿಥುನ್‌ ಕುಮಾರ್ ಜಿ ಕೆ, ಐಪಿಎಸ್ ಅವರು ಈಗಾಗಲೇ ಬೇರು ಬಿಟ್ಟಿರಯವ ಮಟ್ಕಾ ದಂಧೆಯನ್ನು ಮಟ್ಟಹಾಕದೆ ಹೋದರೆ ಬಡವರ ಹಣ ಮಟ್ಕಾ ಮಾಫಿಯಾದವರ ಪಾಲಾಗಿ ಅದೆಷ್ಟೋ ಮನೆಯ ದೀಪಾ ಅರಿ ಹೋಗುವುದರಲ್ಲಿ ಅನುಮಾನವಿಲ್ಲ‌.! ಕೂಡಲೇ ಸಂದೀಪನೆಂಬ ಮಟ್ಕಾ ದಂಧೆಕೋರನ ಜೋತೆ ಜೋತೆಗೆ ಜಿದ್ದಿಗೆ ಬಿದ್ದು ನಗರದ ಅಷ್ಟು ಮಟ್ಕಾ ಪಟ್ಟಿಯನ್ನು ತನಗೆ ದಕ್ಕುವಂತೆ ಮಾಡಿಕೊಂಡಿರುವ ಮಟ್ಕಾ ದೊರೆ ಶಣ್ಣುವಿನ ದಂಧೆ ಭರ್ಜರಿಯಾಗಿಯಾಗಿದೆ ….ಶಣ್ಣು ಯಾರು? ಅವನ ದಂಧೆಯ ಅಳ ಆಗಲವೇನು.? ಇವನ ಬೆನ್ನಿಗೆ ನಿಂತವರ್ಯಾರು.? ಮಟ್ಕಾ ದಂಧೆಯ ಸಂಪೂರ್ಣ ಚುಕ್ಕಾಣಿ ಹಿಡಿಯಲು ಅವನು ಮಾಡಿದ ಪ್ಲಾನ್ ಏನು? ಯಾರು ಯಾರಿಗೆ ತಲುಪುತ್ತಿದೆ ಮಂತ್ಲಿ ಮಾಮೂಲಿ. ಇವನ ಬೆನ್ನಿಗೆ ನಿಂತಿರುವ ಕೆಲವು ಮಂದಿ ಪೊಲೀಸರು ಯಾರು? ಮುಂದಿನ ಭಾಗ 2ರಲ್ಲಿ… ನಿರೀಕ್ಷಿಸಿ..
“ಮಟ್ಕಾ ದೊರೆ ಶಣ್ಣು ಮತ್ತು ಆತನ ದಂಧೆ.ಇವನ ಬೆನ್ನಿಗೆ ನಿಂತ ಕೆಲವು ಪೋಲಿಸರು”

Leave a Reply

Your email address will not be published. Required fields are marked *

Optimized by Optimole
error: Content is protected !!