ಕಾಪರ್ ಏಜ್’ ಸಂಸ್ಥೆಯ ಶರತ್ ಜಿ.ಎನ್. ಆತ್ಮಹತ್ಯೆಗೆ ಶರಣು!

ಕಾಪರ್ ಏಜ್’ ಸಂಸ್ಥೆಯ ಶರತ್ ಜಿ.ಎನ್. ಆತ್ಮಹತ್ಯೆಗೆ ಶರಣು!

ಅಶ್ವಸೂರ್ಯ/ದಾವಣಗೆರೆ: ನಗರದ ಎಸ್.ಎಸ್. ಬಡಾವಣೆಯ ನಿವಾಸಿ, ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರ ‘ಕಾಪರ್ ಏಜ್ ಗ್ರೂಪ್ ಆಫ್ ಇನ್‌ಸ್ಟಿಟ್ಯೂಟ್’ನ ಮಾಲೀಕ ಶರತ್‌ ಜಿ.ಎನ್‌. (35) ಶುಕ್ರವಾರ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಶರತ್‌ ಅವರಿಗೆ ಕನಸಿತ್ತು ತಾನು ಕೆಎಎಸ್, ಐಎಎಸ್‌ ಪರೀಕ್ಷೆಯಲ್ಲಿ ಗೆಲುವು ಸಾಧಿಸಿ ಉನ್ನತ ಹುದ್ದೆಯನ್ನು ಆಲಂಕರಿಸಬೆಂದು ಈ ಕಾರಣದಿಂದಲೇ ಹಲವು ಬಾರಿ ಐಎಎಸ್, ಕೆಎಎಸ್ ಪರೀಕ್ಷೆ ಬರೆದಿದ್ದರು. ಆದರೆ ಯಶಸ್ಸು ಕಾಣಲಾಗಿಲ್ಲ. ಬಳಿಕ ಸ್ವಂತ ತರಬೇತಿ ಕೇಂದ್ರ ಆರಂಭಿಸಿದ್ದರು. ಸಾವಿರಾರು ವಿದ್ಯಾರ್ಥಿಗಳಿಗೆ ತರಬೇತಿ ನೀಡುವ ಮೂಲಕ ಹೆಸರು ಗಳಿಸಿದ್ದರು. ವಿವಿಧ ಜಿಲ್ಲೆಗಳಲ್ಲಿ ಇವರ ಸಂಸ್ಥೆಯ ಶಾಖೆಗಳಿವೆ.

ಅವಿವಾಹಿತರಾಗಿದ್ದ ಶರತ್‌, ತಂದೆ – ತಾಯಿ ಕಾರ್ಯಕ್ರಮಕ್ಕೆಂದು ಹೊರಗಡೆ ಹೋಗಿದ್ದ ಸಮಯದಲ್ಲಿ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಐಎಎಸ್‌, ಐಪಿಎಸ್‌ನಲ್ಲಿ ನಿರೀಕ್ಷಿತ ಯಶಸ್ಸು ದೊರೆಯದ ಬಗ್ಗೆ ಅವರಿಗೆ ಸಾಕಷ್ಟು ಕೊರಗಿತ್ತು ಎಂದು ತಿಳಿದುಬಂದಿದೆ.

ಇದೇ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪಾಲಕರು ತಿಳಿಸಿದ್ದಾರೆ. ಮನೆಯಲ್ಲಿ ಡೆತ್‌ನೋಟ್ ಪತ್ತೆಯಾಗಿಲ್ಲ’ ಎಂದು ಪೊಲೀಸರು ತಿಳಿಸಿದ್ದಾರೆ. ಜಿಲ್ಲಾ ಆಸ್ಪತ್ರೆಯ ಶವಾಗಾರದಲ್ಲಿ ಮರಣೋತ್ತರ ಪರೀಕ್ಷೆ ನಡೆದಿದೆ.
ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಅಸಹಜ ಸಾವು ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

Optimized by Optimole
error: Content is protected !!