10 ಲಕ್ಷ ಹಣಕ್ಕಾಗಿ ಗಂಡಂದಿರಿಗೆ ಡೀಲ್ ಇಟ್ಟ ಪಾಪಿ ಪತ್ನಿಯರು.! ಹಣಕ್ಕಾಗಿ ಹೆತ್ತ ಮಕ್ಕಳನ್ನೆ ಹೊತ್ತೊಯ್ದರು.!

10 ಲಕ್ಷ ಹಣಕ್ಕಾಗಿ ಗಂಡಂದಿರಿಗೆ ಡೀಲ್ ಇಟ್ಟ ಪಾಪಿ ಪತ್ನಿಯರು.! ಹಣಕ್ಕಾಗಿ ಹೆತ್ತ ಮಕ್ಕಳನ್ನೆ ಹೊತ್ತೊಯ್ದರು.!

ಅಶ್ವಸೂರ್ಯ/ಶಿವಮೊಗ್ಗ: ಧಾರವಾಡ ಒಂದು ವಿಲಕ್ಷಣ ಘಟನೆ ನೆಡೆದಿದೆ.! ಹತ್ತು ಲಕ್ಷ  ಹಣಕ್ಕಾಗಿ ತಮ್ಮ ಪ್ರೇಮಿಗಳ ಜೊತೆ ಸೇರಿಕೊಂಡು ತಮ್ಮ ಹೆತ್ತ ಮಕ್ಕಳನ್ನೇ ತಾವೇ ಕಿಡ್ನ್ಯಾಪ್ ಮಾಡಿದ ಪಾಪಿ ತಾಯಂದಿರು ಹಾಗೂ ಅವರ ಇಬ್ಬರು ಪ್ರೇಮಿಗಳು ಇದೀಗ ಪೊಲೀಸರ ಅತಿಥಿಯಾಗಿದ್ದಾರೆ.ಊ ಘಟನೆ ಧಾರವಾಡದಲ್ಲಿ ನಡೆದಿದೆ.

ಈ ವರದಿ ಓದಿದರೆ ನಿಮಗೂ ಅಚ್ಚರಿಯಾಗಬಹುದು ಆದರೆ ನಂಬಲೇಬೇಕಾದಂತ ಸತ್ಯ ಘಟನೆ .ಧಾರವಾಡದಲ್ಲಿ ತಮ್ಮ ಹೆತ್ತ ಮಕ್ಕಳನ್ನೇ ತಮ್ಮಪ್ರೇಮಿಗಳ ಜೊತೆಗೆ ಸೇರಿಕೊಂಡು ಕಿಡ್ನ್ಯಾಪ್ ನಾಟಕ ಮಾಡಲು ಹೋಗಿ ಇಬ್ಬರು ಪಾಪಿ ತಾಯಂದಿರು ಹಾಗೂ ಅವರಿಬ್ಬರ ಪ್ರೇಮಿಗಳನ್ನು ದಾರವಾಡ ಪೋಲಿಸರು ವಶಕ್ಕೆ ತೆಗೆದುಕೊಂಡು ವಿಚಾರಣೆಗೆ ಒಳಪಡಿಸಿದ್ದಾರೆ. ಜೊತೆಗೆ ಆರು ಮಕ್ಕಳನ್ನು ಪೊಲೀಸರು ರಕ್ಷಣೆ ಮಾಡಿದ್ದಾರೆ.
ನವೆಂಬರ್ 7 ರಂದು ಧಾರವಾಡದ ವಿದ್ಯಾಗಿರಿ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ  6 ಮಕ್ಕಳು  ಕಾಣೆಯಾಗಿದ್ದಾರೆ  ಎಂಬ ದೂರು ದಾಖಲಾಗಿತ್ತು, ಈ ಕುರಿತು ಪ್ರಕರಣ ದಾಖಲಿಸಿಕೊಂಡ ವಿದ್ಯಾಗಿರಿ  ಠಾಣೆಯ  ಇನ್ಸಪೆಕ್ಟರ್  ಸಂಗಮೇಶ್ ದಿಂಡಿಗನಾಳ ಹಾಗೂ ಧಾರವಾಡ ನಗರ ಠಾಣೆಯ ಇನ್ಸಪೆಕ್ಟರ್ ನಾಗೇಶ್ ಕಾಡದೇವರಮಠ ಅವರ ತಂಡ ತಕ್ಷಣವೇ ಕಾರ್ಯಾಚರಣೆ ಇಳಿದು ಈ ಪ್ರಕರಣವನ್ನು ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ.ಆರು ಮಕ್ಕಳು ಹಾಗೂ ಆರೋಪಿಗಳು ಬೆಂಗಳೂರಿನಲ್ಲಿ ಇರುವ ಮಾಹಿತಿ ದೊರೆತ ಕೂಡಲೆ ಕಾರ್ಯಾಚರಣೆಗೆ ಇಳಿದಾಗ ಕೆಲವು ಮಾಹಿತಿ ಆಧಾರದ ಮೇಲೆ ಈ ಪ್ರಕರಣವನ್ನು ಬೇದಿಸುವಲ್ಲಿ ಯಶಸ್ವಿಯಾಗಿದ್ದಾರೆ.

ರೇಷ್ಮಾ ಹಾಗೂ ಪ್ರಿಯಾಂಕಾ ಎಂಬ ಇಬ್ಬರು ಮಾನಗೇಡಿ ತಾಯಂದಿರು ತಮ್ಮ ಪ್ರಿಯಕರರ ಜೊತೆ ಸೇರಿಕೊಂಡು ತಮ್ಮ ಗಂಡನ ಮನೆಯವರಿಗೆ ನಿಮ್ಮ ಮಕ್ಕಳು ಬೇಕು ಅಂದ್ರೆ ನಮಗೆ 10 ಲಕ್ಷ  ಕೊಡಿ ಇಲ್ಲ ಅಂದ್ರೆ ನಿಮ್ಮ ಮಕ್ಕಳ ಕಥೆ ಅಷ್ಟೇ ಅಂತ ಬೆದರಿಕೆ ಹಾಕಿದ್ದರಂತೆ.! ಈ ಪ್ರಕರಣದ ಜಾಡು ಹಿಡಿದು ಹೊರಟ ಹುಬ್ಬಳ್ಳಿ-ಧಾರವಾಡ ಪೊಲೀಸ್ ಈ ಪ್ರಕರಣವನ್ನು ಬೇಧಿಸುವಲ್ಲಿ ಯಶಸ್ವಿಯಾಗಿದ್ದಾರೆ ಪೋಲಿಸ್ ಆಯುಕ್ತರಾದ ಎನ್.ಶಶಿಕುಮಾರ್ ತಿಳಿಸಿದ್ದಾರೆ.

ಬಂಧಿತರನ್ನು ಧಾರವಾಡದ ಜನ್ನತ್ ನಗರದ ರಶ್ಮಿ ಅಲಿಯಾಸ್ ರೇಶ್ಮಾ ದೀಪಕ್ ಸಾಂಬ್ರಾಣಿ, ಪ್ರಿಯಾಂಕ ಸಂತೋಷ ಕುಮಾರ್ ಸಾಂಬ್ರಾಣಿ, ಜಮಾದಾರ ಗಲ್ಲಿಯ ನಿವಾಸಿ ಸುನೀಲ‌ಕುಮಾರ್ ಸಿದ್ರಾಮಪ್ಪ ಕರಿಗಾರ, ಮತ್ತು ಶಿಕಾರಿಪುರ ಮೂಲದ

ಮುತ್ತುರಾಜ ಬಿ. ಬಂಗಾರಪ್ಪ  ಎಂದು ಗುರುತಿಸಲಾಗಿದೆ ಎಂದು ಅವರು ವಿವರಿಸಿದ್ದಾರೆ.
ಬಂಧಿತರನ್ನು ತನಿಖೆಗೆ ಒಳಪಡುಸಿ ಇನ್ನಷ್ಟು ಮಾಹಿತಿ ಕಲೆಹಾಕಲಾಗುತ್ತಿದೆ ಎಂದರು.

Leave a Reply

Your email address will not be published. Required fields are marked *

Optimized by Optimole
error: Content is protected !!