ಶಿವಮೊಗ್ಗ: ಸಿಗಂದೂರಿನಲ್ಲಿ ತೆಪ್ಪ ಮಗುಚಿ ಮೂವರು ಯುವಕರು ನಾಪತ್ತೆ!

ಶಿವಮೊಗ್ಗ: ಸಿಗಂದೂರಿನಲ್ಲಿ ತೆಪ್ಪ ಮಗುಚಿ ಮೂವರು ಯುವಕರು ನಾಪತ್ತೆ!

ಅಶ್ವಸೂರ್ಯ/ಸಾಗರ: ಸಿಗಂದೂರು ಬಳಿ ತೆಪ್ಪ ಮಗುಚಿ ಮೂವರು ಯುವಕರು ನಾಪತ್ತೆಯಾಗಿದ್ದಾರೆ. ಐವರು ಹೊಳೆ ಊಟಕ್ಕೆ ತೆರಳಿದ್ದಾಗ ಈ ದುರ್ಘಟನೆ ಸಂಭವಿಸಿದೆ. ತೆಪ್ಪದ ಸಮತೋಲನ ತಪ್ಪಿ ಮುಳುಗಿದ್ದು, ಮೂವರು ನೀರಿನಲ್ಲಿ ಕಣ್ಮರೆಯಾಗಿದ್ದಾರೆ.

ಶಿವಮೊಗ್ಗ ಕರ್ನಾಟಕದ ಪ್ರಸಿದ್ಧ ತೀರ್ಥಕ್ಷೇತ್ರದಲ್ಲಿ ಒಂದಾದ ಸಿಗಂದೂರು ಚೌಡೇಶ್ವರಿ ಕ್ಷೇತ್ರದ ಹಿನ್ನೀರಿನಲ್ಲಿ ದುರಂತ ಸಂಭವಿಸಿದೆ. ಸಿಗಂದೂರು ನದಿಯ ನೀರಿನಲ್ಲಿ ತೆಪ್ಪ ಮುಳುಗಿ ಮೂವರು ಯುವಕರು ಕಣ್ಮರೆಯಾಗಿದ್ದಾರೆ. ಸಾಗರ ತಾಲೂಕಿನ ಚೌಡೇಶ್ವರಿ ದೇವಿಯ ಪ್ರಸಿದ್ಧ ಪುಣ್ಯಕ್ಷೇತ್ರವಾದ ಸಿಗಂದೂರಿನ ಶರಾವತಿ ಹಿನ್ನೀರಿನಲ್ಲಿ ತೆಪ್ಪ ಮುಳುಗಿ ಮೂವರು ಯುವಕರು ನಾಪತ್ತೆಯಾಗಿದ್ದಾರೆ. ಸಿಗಂದೂರು ಸಮೀಪದ ಕಳಸವಳ್ಳಿಯಲ್ಲಿ ಈ ಘಟನೆ ಸಂಭವಿಸಿದ್ದು ಕಣ್ಮರೆಯಾದ ಯುವಕರಿಗಾಗಿ ಶೋಧ ಕಾರ್ಯ ಮುಂದುವರೆದಿದೆ.!

ಹೊಳೆ ಊಟಕ್ಕೆ ಐವರು ತೆರಳಿದ್ದರು.ಮಧ್ಯಾಹ್ನ ಹೊಳೆ ಊಟ ಮುಗಿಸಿ  ಆಚೆಯ ದಡದಿಂದ ಈಚಿನ ದಡಕ್ಕೆ ತೆಪ್ಪದಲ್ಲಿ ಬರುತ್ತಿರುವಾಗ ತೆಪ್ಪ ಸಮತೋಲನ ಕಳೆದುಕೊಂಡು ಭಾಗಶಃ ಮುಳುಗಿದೆ ಎಂದು ವರದಿಯಾಗಿದೆ.
ಸಿಗಂದೂರು ಮೂಲದ 28 ವರ್ಷದ ಚೇತನ್‌ ಜೈನ್‌, ಹುಲಿದೇವರಬನದ 30 ವರ್ಷದ ಸಂದೀಪ್‌  ಹಾಗೂ ಗಿನಿವಾರದ 28 ವರ್ಷದ ರಾಜು ನದಿಯಲ್ಲಿ ಮುಳುಗಿದ್ದಾರೆ ಎನ್ನಲಾಗಿದೆ. ಈ ಮೂವರಿಗೂ ಈಜು ಬರುತ್ತಿರಲಿಲ್ಲ.

ಇವರ ಜೊತೆಗಿದ್ದ ವಿನಯ್‌ ಹಾಗೂ ಯಶವಂತ್‌ ಈಜಿ ದಡ ಸೇರಿದ್ದಾರೆ. ಕಳಸವಳ್ಳಿ ಬಳಿಯ ಶರಾವತಿ ಹಿನ್ನೀರಿನಲ್ಲಿ ಘಟನೆ ಬುಧವಾರ (ನ,13) ಮಧ್ಯಾಹ್ನ ನಡೆದಿದೆ. ಘಟನಾ ಸ್ಥಳಕ್ಕೆ ಕಾರ್ಗಲ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದು, ನಾಪತ್ತೆಯಾದ ಹುಡುಗರಿಗೆ ತೀವ್ರ ಶೋಧ ಕರ್ಯ ಮುಂದುವರೆದಿದೆ.

Leave a Reply

Your email address will not be published. Required fields are marked *

Optimized by Optimole
error: Content is protected !!