ಡಯಾಬಿಟಿಸ್ ಮತ್ತು ಬೊಜ್ಜು ಜೀವನ ಶೈಲಿಯ ಸಮಸ್ಯೆಗೆ “ಆಹಾರವೇ ಔಷಧಿ”: ಡಾಕ್ಟರ್ ಪ್ರೀತಮ್ ಬಿ
ಅಶ್ವಸೂರ್ಯ/ಶಿವಮೊಗ್ಗ: ನಿಮಗೆಲ್ಲ ತಿಳಿದಿರುವಂತೆ ಡಯಾಬಿಟಿಸ್ ಮತ್ತು ಬೊಜ್ಜು ಪ್ರತಿಯೊಬ್ಬ ಮನುಷ್ಯನ ಜೀವನ ಶೈಲಿಯ ಸಮಸ್ಯೆಗಳು. ಔಷಧಗಳು ಕೇವಲ ತಾತ್ಕಾಲಿಕ ಪರಿಹಾರ ಮಾತ್ರ ಜೊತೆಗೆ ಕೆಲವು ಅಡ್ಡ ಪರಿಣಾಮಗಳನ್ನು ಉಂಟು ಮಾಡುತ್ತವೆ. ಸರಿಯಾದ ಆಹಾರ ಕ್ರಮದಿಂದ ಬಹಳಷ್ಟು ಕಾಯಿಲೆಗಳನ್ನು ನಾವು ಹಿಮ್ಮೆಟ್ಟಿಸಬಹುದಾಗಿದೆ.
ಡಾಕ್ಟರ್ ಪ್ರೀತಮ್. ಬಿ
ಜೀವನ ಶೈಲಿಯನ್ನು ಉತ್ತಮ ಗೊಳಿಸಿಕೊಳ್ಳುವುದೊಂದೇ ಇದಕ್ಕೆ ಪರಿಹಾರ ಎಂಬುದು ಎಲ್ಲರಿಗೂ ತಿಳಿದಿರುವ ಸತ್ಯ . ನನ್ನ 18 ವರ್ಷಗಳ ಅನುಭವದಿಂದ ಹೇಳುವುದಾದರೆ ನಮ್ಮ ಆಹಾರ ಪದ್ಧತಿಯಲ್ಲಿ ಬದಲಾವಣೆ ಮಾಡುವುದು, ದೈಹಿಕ ಚಟುವಟಿಕೆಗಳನ್ನು ಉತ್ತಮಗೊಳಿಸಿಕೊಳ್ಳುವುದು ಹಾಗೂ ಒತ್ತಡ ರಹಿತ ಜೀವನವನ್ನು ರೂಡಿಸಿಕೊಳ್ಳುವುದು ಮಾತ್ರ ಇದಕ್ಕೆ ಪರಿಹಾರ. ಇದನ್ನೆಲ್ಲ ಗಮನದಲ್ಲಿಟ್ಟುಕೊಂಡು ಇದೆ ಅಕ್ಟೋಬರ್ 23 ನೇ ತಾರೀಕು ಬೆಳಗ್ಗೆ 10 ಗಂಟೆಗೆ ಡಾ. ಪ್ರೀತಮ್ಸ್ ಹೆಲ್ದಿ ಫುಡ್ಸ್ ಎಂಬ ಮಳಿಗೆಯನ್ನು ಬೆಂಗಳೂರಿನ ನುರಿತ ಆಹಾರ ತಯಾರಿಕರಾದ ಅರಿವು ಫುಡ್ಸ್ ಅವರ ಸಹಯೋಗದೊಂದಿಗೆ ಲೋಕಾರ್ಪಣೆ ಮಾಡುತ್ತಿದ್ದೇವೆ. ಇದರಲ್ಲಿ ನುರಿತ ವೈದ್ಯರು ಮತ್ತು ಆಹಾರ ತಜ್ಞರಿಂದ ಮಾರ್ಗದರ್ಶನ, ಆರೋಗ್ಯಕರ ಆಹಾರ ಮತ್ತು ಸಂಬಂಧಿಸಿದ ರಕ್ತಪರೀಕ್ಷೆಗಳನ್ನು ಮಾಡಿಸುವುದಾಗಿದೆ. ಅತ್ಯಂತ ಕಡಿಮೆ ವೆಚ್ಚದಲ್ಲಿ (Rs 240 for 1/2 kg )ಮಾಸಿಕ ಪ್ಯಾಕೇಜ್ ಗಳನ್ನು ಕೂಡ ಪರಿಚಯಿಸುತ್ತಿದ್ದೇವೆ. ತಾವುಗಳು ಸಮಯ ಮಾಡಿಕೊಂಡು ಬಂದು ಪ್ರಾರಂಭೋತ್ಸವದಲ್ಲಿ ಪಾಲ್ಗೊಳ್ಳಬೇಕೆಂದು ತಮ್ಮಲ್ಲಿ ಕೋರಿಕೊಳ್ಳುತ್ತೇವೆ. ತಮ್ಮ ಆಗಮನದ ನಿರೀಕ್ಷೆಯಲ್ಲಿ.
Dr Preetham.B.
Durgigudi 1st parallel road
Shimoga 577201
Ph- 8660796825