ಕಲಬುರಗಿ ಜೈಲಲ್ಲಿ ಕೈದಿಗಳ ಮಸ್ತ್ ಮಜಾ; ವಿಡಿಯೋ ವೈರಲ್.!ಜೈಲಿನ ಮೇಲೆ ಪೋಲಿಸ್ ಕಮಿಷನರ್ ದಾಳಿ.ಹಲವು ವಸ್ತು ವಶ.!
ಅಶ್ವಸೂರ್ಯ/ಶಿವಮೊಗ್ಗ: ಅಪರಾಧಿಗಳನ್ನು ಪರಿವರ್ತನೆ ಮಾಡಬೇಕಾದ ಜೈಲುಗಳೆ ಅಕ್ರಮಗಳ ಅಡ್ಡೆಯಾಗುತ್ತಿವೆ.! ಜೈಲಿನಲ್ಲಿ ಎನಿಲ್ಲ ಎನ್ನುವ ಪ್ರಶ್ನೆ ಕಾಡುತ್ತಿದೆ.ಕಾರಣ ಜೈಲಿನಲ್ಲಿರುವ ಖೈದಿಗಳಿಗೆ ಮತ್ತು ಆರೋಪಿತರಿಗೆ ಜೈಲಿನ ಹೊರಗಿನಿಂದ ಜೈಲಿನ ಒಳಗಿರುವವರು ಬಯಸಿದ್ದರಲ್ಲಿ ಹೆಚ್ಚು ಕಡಿಮೆ ಎಲ್ಲವು ಸಾಗಾಟವಾಗುತ್ತಿದೆ ಎಂದರೆ ತಪ್ಪಾಗಲಾರದು.? ಸಾಕಷ್ಟು ಬಾರಿ ರಾಜ್ಯದ ಕೆಲವು ಜೈಲಿನ ಮೇಲೆ ಪೊಲೀಸ್ ಅಧಿಕಾರಿಗಳು ದಾಳಿ ಮಾಡಿ ಹಲವು ವಸ್ತುಗಳನ್ನು ವಶಪಡಿಸಿಕೊಂಡು ಕಟ್ಟು ನಿಟ್ಟಿನ ಕ್ರಮ ಕೈಗೊಂಡರು ಮತ್ತದೆ ಮೂರು ದಿನಕ್ಕೆ ಜೈಲು ಖೈದಿಗಳ ಐಶಾರಾಮಿ ಬದುಕಿನ ಅಡ್ಡೆಯಾಗುತ್ತಿದೆ.
ಕೆಲವು ದಿನಗಳ ಹಿಂದೆ ಕಲಬುರಗಿಯ ಕೇಂದ್ರ ಕಾರಾಗೃಹದಲ್ಲಿ ಕೈದಿಗಳು ಜೈಲಿನಲ್ಲೇ ಕುಳಿತುಕೊಂಡು ಗಾಂಜಾ ಸೇದುತ್ತ ನಶೆ ಏರಿಸಿಕೊಂಡಿದ್ದಲ್ಲದೆ. ನಶೆಯ ಮತ್ತಿನಲಿ ಜೈಲಿನಿಂದ ಹೊರಗಿರುವ ತಮ್ಮ ತಮ್ಮ ಆಪ್ತರಿಗೆ, ಶಿವಮೊಗ್ಗ ಜೈಲಿನಲ್ಲಿದ್ದ ಗೆಳೆಯರಿಗೆ ಸ್ಮಾರ್ಟ್ ಫೋನ್‌ನಿಂದ ವಿಡಿಯೋ ಕಾಲ್ ಮಾಡಿ ಮಾತನಾಡಿರುವ ವಿಡಿಯೋ ವೈರಲ್ ಆಗಿದೆ.
ಇದರೊಂದಿಗೆ ಜೈಲಿನಲ್ಲಿ ಕೈದಿಗಳು ಹೈಟೆಕ್ ಜೀವನ ನಡೆಸುತ್ತಿರುವುದಲ್ಲದೇ ಅವರಿಗೆ ಬೇಕಾಗಿರುವ ಎಲ್ಲ ಐಷಾರಾಮಿ ವಸ್ತುಗಳು ಜೈಲಿನಲ್ಲಿ ದೊರೆಯುತ್ತಿರುವ ಮಾತಿಗೆ ಪುಷ್ಟಿಗೆ ನೀಡಿದೆ.
ಶಿವಮೊಗ್ಗ ಸೆಂಟ್ರಲ್ ಜೈಲ್
ಸುದ್ದಿ ತಿಳಿಯುತ್ತಿದ್ದಂತೆ ನಗರ ಪೊಲೀಸ್ ಕಮಿಷನರ್ ಡಾ| ಶರಣಪ್ಪ ಢಗೆ ಜೈಲಿನ ಮೇಲೆ ದಾಳಿ ಮಾಡಿದ್ದಾರೆ. ಜೈಲಿನಲ್ಲಿ ಗಾಂಜಾ, ಮೊಬೈಲ್ ಸೇರಿದಂತೆ ಇತರೆ ವಸ್ತುಗಳು ಹೇಗೆ ಪೂರೈಕೆ ಆಗುತ್ತಿದೆ ಎನ್ನುವುದನ್ನು ವಿಚಾರಿಸಿದ್ದಾರೆ. ಹಲವು ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಎಂದು ಮೂಲಗಳು ತಿಳಿಸಿವೆ. ಈ ಮಧ್ಯೆ ಈ ವಿಡಿಯೋ ತಮ್ಮ ಜೈಲಿನಲ್ಲಿ ಮಾಡಿದ್ದಲ್ಲ.! ಕೈದಿಗಳಾದ ವಿಶಾಲ್, ಸಾಗರ್ ಹಾಗೂ ಸೋನು ಈ ಮೂವರು ಶಿವಮೊಗ್ಗ ಜೈಲಿನಲ್ಲಿ ಈ ಹಿಂದೆ ಇದ್ದರು. ಅಲ್ಲಿ ಇದನ್ನು ವಿಡಿಯೋ ಮಾಡಿಕೊಂಡಿರಬೇಕೆಂದು ಜೈಲಿನ ಅಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ.
ಕಲಬುರಗಿ ಸೆಂಟ್ರಲ್ ಜೈಲಿನ ಮೇಲೆ ದಿಢೀರ್ ದಾಳಿ
ಕಲಬುರಗಿ ಸೆಂಟ್ರಲ್ ಜೈಲಿನಲ್ಲಿ ಕೈದಿಗಳಿಗೆ ಗಾಂಜಾ, ಮೊಬೈಲ್ ಬಳಕೆಗೆ ಅವಕಾಶ ನೀಡುವ ಮೂಲಕ ಐಶಾರಾಮಿ ಬದುಕಿಗೆ ರಾಅವಕಾಶ ಕಲ್ಪಿಸಿದ್ದ ಜೈಲಿನ ಮೇಲೆ ಪೊಲೀಸರು ದಾಳಿ ನಡೆಸಿ ಸಥ ನಾಲ್ಕು ತಾಸಿನ ದಾಳಿಯಲ್ಲಿ ಪೊಲೀಸ್ ಕಮಿಷನರ್ ಶರಣಪ್ಪ ಡಘೆ ಹಾಗೂ ಡಿಸಿಪಿ ಕನ್ನಿಕಾ ಸಿಕ್ರಿವಾಲ್ ನೇತೃತ್ವದಲ್ಲಿ ಹತ್ತು ಮಂದಿ ಪೊಲೀಸ್ ಅಧಿಕಾರಿಗಳನ್ನು ಒಳಗೊಂಡ 60ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ಕಾರ್ಯಚರಣೆಯಲ್ಲಿದ್ದರು. ಕೈದಿ ಸಾಗರ್ ಬಳಿಯಿದ್ದ ಎರಡು ಮೊಬೈಲ್ ಹಾಗೂ ಒಂದು ಕಬ್ಬಿಣದ ರಾಡು ಜೋತೆಗೆ ಬೀಡಿ , ಸಿಗರೇಟ್ , ಗುಟ್ಕಾ ಪ್ಯಾಕೆಟ್ ಗಳನ್ನು ವಶಪಡಿಸಿಕೊಳ್ಳಲಾಗಿದೆ.
ದಾಳಿಯ ಕುರಿತು ವಿವರ ನೀಡಿದ ಪೊಲೀಸ್ ಕಮಿಷನರ್ ಶರಣಪ್ಪ ಡಘೆ, ವಿಡಿಯೋ ಕರೆ ಮಾಡಿ ಮಾತನಾಡಿದ ಮೊಬೈಲ್ ಪೋನನ್ನು ಜಪ್ತಿ ಮಾಡಲಾಗಿದೆ ಎಂದರು.!
ವಿಚಾರಣಾಧೀನ ಖೈದಿಗಳಾದ ವಿನೋದ್ , ಸಾಗರ್ , ಸೋನು ಎನ್ನುವವರ ವಿಚಾರಣೆ ಮಾಡಲಾಗಿದೆ ಎಂದಿದ್ದಾರೆ.
ನಾಲ್ಕು ಗಂಟೆಗೂ ಹೆಚ್ಚಿನ ಕಾಲ ಜೈಲಿನಲ್ಲಿ ತಪಾಸಣೆ ನಡೆಸಿದ ಬಳಿಕ ಫರಹತಾಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಮುಂದಿನ ತನಿಖೆ ಕೈಗೊಳ್ಳಲಾಗಿದೆ ಎಂದು ಮಾಹಿತಿ ನೀಡಿದ್ದಾರೆ