ಭಾರತ vs ನ್ಯೂಜಿಲೆಂಡ್ ಎರಡನೇ ಟೆಸ್ಟ್ ಪಂದ್ಯದ BCCI ಪಂದ್ಯ ವೀಕ್ಷಕರಾಗಿ ಶಿವಮೊಗ್ಗದ ಸದಾನಂದ ಹೆಚ್ ಎಸ್

ಭಾರತ vs. ನ್ಯೂಜಿಲೆಂಡ್‌ ಎರಡನೇ ಟೆಸ್ಟ್ ಪಂದ್ಯದ BCCI ಪಂದ್ಯ ವೀಕ್ಷಕರಾಗಿ ಶಿವಮೊಗ್ಗದ ಸದಾನಂದ ಹೆಚ್ ಎಸ್

ಅಶ್ವಸೂರ್ಯ/ಶಿವಮೊಗ್ಗ: ಆತ್ಮೀಯ ಸ್ನೇಹಿತರು ಹಿರಿಯ ಕ್ರಿಕೆಟಿಗರು ಹಾಲಿ ಕೆಎಸ್‌ಸಿಎ ಶಿವಮೊಗ್ಗ ವಲಯ ಸಂಚಾಲಕರಾದ ಶ್ರೀ ಸದಾನಂದ ಹೆಚ್.ಎಸ್. ಶಿವಮೊಗ್ಗ ಇವರನ್ನು 2024 ರ ಅಕ್ಟೋಬರ್ 24 ರಿಂದ 28 ರವರೆಗೆ ಪುಣೆಯಲ್ಲಿ ನಡೆಯಲಿರುವ ಭಾರತ ಮತ್ತು ನ್ಯೂಜಿಲೆಂಡ್ ನಡುವಿನ 2 ನೇ ಟೆಸ್ಟ್ ಪಂದ್ಯಕ್ಕೆ BCCI ಇವರನ್ನು ಪಂದ್ಯ ವೀಕ್ಷಕರನ್ನಾಗಿ ನಾಮನಿರ್ದೇಶನ ಮಾಡಿದೆ.
ಶಿವಮೊಗ್ಗ ಕ್ರಿಕೆಟ್ ಇತಿಹಾಸದಲ್ಲಿಯೇ ಮೊಟ್ಟ ಮೊದಲ ಬಾರಿಗೆ ಶಿವಮೊಗ್ಗದ ಒಬ್ಬ ಹಿರಿಯ ಕ್ರಿಕೆಟಿಗರನ್ನು ಆಯ್ಕೆ ಮಾಡಿರುವುದು ಹೆಮ್ಮೆಯ ವಿಷಯವಾಗಿದೆ. ಶಿವಮೊಗ್ಗ ವಲಯದ ಪ್ರತಿಯೊಬ್ಬ ಹಿರಿಯ ಕಿರಿಯ ಕ್ರಿಕೆಟಿಗರು ಸಂತೋಷಪಡುವಂತಾಗಿದೆ.ಈ ಒಂದು ಜವಬ್ದಾರಿಯು ಸುಮ್ಮನೆ ಹುಡುಕಿ ಬಂದದಲ್ಲ.ಸದಾನಂದ ಅವರು ತಮ್ಮ ಬದುಕನ್ನೆ‌ ಕ್ರಿಕೆಟಿಗಾಗಿ ಸವೆದವರು.!ಮಕ್ಕಳಿಗೆ ಕ್ರಿಕೆಟ್ ತರಬೇತಿಯನ್ನು ನೀಡುವುದರ ಜೋತೆಗೆ ಉತ್ತಮ ಕ್ರಿಕೆಟ್ ಆಟಗಾರರನ್ನು ಹುಟ್ಟು ಹಾಕಿದ ಹಿರಿಮೆ ಸದಾನಂದ ಅವರಿಗೆ ಸಲ್ಲುತ್ತದೆ. ಒಬ್ಬ ಕ್ರಿಕೆಟ್ ಆಟಗಾರನಾಗಿ, ತರಬೇತುದಾರನಾಗಿ. ಕ್ರಿಕೆಟ್ ಉಳಿವಿಗಾಗಿ ನಿಮ್ಮ ನಿರಂತರ ಹೋರಾಟಕ್ಕೆ ಇಂದು ವಿಶ್ವದ ನಂಬರ್ ಒನ್ ಕ್ರಿಕೆಟ್ ಸಂಸ್ಥೆಯಾದ ಬಿಸಿಸಿಐ ನಿಮ್ಮನ್ನು ಗುರುತಿಸಿ ಗೌರವಿಸಿರುವುದು ಹೆಮ್ಮೆಯ ವಿಷಯವಾಗಿದೆ. ಕ್ರಿಕೆಟಿಗಾಗಿ ನಿಮ್ಮ ಸಮರ್ಪಣೆ, ಉತ್ಸಾಹ ಮತ್ತು ಕ್ರಿಕೆಟ್‌ನ ಅಭಿವೃದ್ಧಿಯ ಕಡೆಗೆ ದಣಿವರಿಯದ ಪ್ರಯತ್ನಗಳಿಗೆ ಇಂದು ಫಲ ಸಿಕ್ಕಿದೆ.

ಸದಾನಂದ ಹೆಚ್ ಎಸ್

ಕ್ರಿಕೆಟ್ ಆಟವನ್ನು ಉತ್ತೇಜಿಸುವಲ್ಲಿ ಮತ್ತು ಕ್ರಿಕೆಟ್ ಪ್ರತಿಭೆಯನ್ನು ಪೋಷಿಸುವಲ್ಲಿ ನಿಮ್ಮ ನಿರಂತರ ಪ್ರಯತ್ನಗಳು ಕ್ರಿಕೆಟ್ ಆಟದ ಬೆಳವಣಿಗೆಗೆ ಅಪಾರ ಕೊಡುಗೆ ನೀಡಿವೆ ಮತ್ತು ಈ ನಾಮನಿರ್ದೇಶನವು ನಿಮ್ಮ ಪ್ರಾಮಾಣಿಕ ಕೆಲಸಕ್ಕೆ ಅರ್ಹವಾದ ಗೌರವ ಸಿಕ್ಕಂತಾಗಿದೆ.
ಈ ಪಾತ್ರವು ಸ್ಮರಣೀಯ ಅನುಭವವಾಗುವುದರ ಜೋತೆಗೆ ಕ್ರಿಕೆಟ್ ಭ್ರಾತೃತ್ವದಲ್ಲಿ ನಿಮ್ಮನ್ನು ಮತ್ತಷ್ಟು ಉತ್ಕೃಷ್ಟಗೊಳಿಸಿ ಬಿಸಿಸಿಐ ಅಂಗಳದಲ್ಲಿ ಹೊಸ ಅವಕಾಶಗಳು ನಿಮ್ಮನ್ನು ಹುಡುಕಿ ಬರುವಂತಾಗಲಿ ಎಂದು ಹಾರೈಸುತ್ತೇನೆ.
ಮತ್ತೊಮ್ಮೆ ನಿಮಗೆ ನಮ್ಮೆಲ್ಲರಿಂದ ಅಭಿನಂದನೆಗಳು ಮತ್ತು ನಿಮ್ಮ ಯಶಸ್ವಿ ಅಧಿಕಾರಾವಧಿಗೆ ಶುಭಾಶಯಗಳು! ಈ ರೋಮಾಂಚಕಾರಿ ಪ್ರಯಾಣವನ್ನು ಆನಂದಿಸಿ ಮತ್ತು ನಿಮ್ಮ ಪ್ರಯಾಣದ ಸಮಯದಲ್ಲಿ ಕಾಳಜಿ ವಹಿಸಿ . ಶುಭವಾಗಲಿ ಸಹೋದರ….

Leave a Reply

Your email address will not be published. Required fields are marked *

Optimized by Optimole
error: Content is protected !!